Search By Date & Category

NEWSನಮ್ಮರಾಜ್ಯಸಂಸ್ಕೃತಿ

ಇಂದು ರಾಮನವಮಿ ಸಂಭ್ರಮ: ಸಾಂಸ್ಕೃತಿಕ ನಗರಿ ಮೈಸೂರು ಹಿಂದೂ –ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿ

ಸಾಂಸ್ಕೃತಿಕ ನಗರಿ ಮೈಸೂರು ಹಿಂದೂ –ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾದ ರಾಮನವಮಿ.
ವಿಜಯಪಥ ಸಮಗ್ರ ಸುದ್ದಿ

ಮೈಸೂರು: ಇಂದು ರಾಮನವಮಿ ಹಬ್ಬದ ಸಂಭ್ರಮವಾಗಿದ್ದು ಸಾಂಸ್ಕೃತಿಕ ನಗರಿ ಮೈಸೂರು ಹಿಂದೂ –ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾಯಿತು.

ಇದರ ಜತೆಗೆ ಮಂಡ್ಯ, ರಾಮನಗರ, ಬೆಂಗಳೂರು, ಹಾಸನ, ಧಾರವಾಡ, ಕಲಬುರಗಿ ಸೇರಿದಂತೆ ರಾಜ್ಯದ ಮೂಲೆ ಮೂಲೆಗಳಲ್ಲೂ ರಾಮನವಮಿಯನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ.

ಬಸ್‌ ನಿಲ್ದಾಣಗಳು, ದೇವಸ್ಥಾನಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಪಾನಕ ಮಜ್ಜಿಗೆ ಹಂಚುವ ಮೂಲಕ ಭಕ್ತರು ಸಂಭರ್ಮಿಸುತ್ತಿದ್ದಾರೆ.

ಸಾಂಸ್ಕೃತಿಕ ನಗರಿ ಮೈಸೂರು ಹಿಂದೂ –ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾದ ರಾಮನವಮಿ.

ಇನ್ನು ಮೈಸೂರಿನಲ್ಲಿ ಹಿಂದೂ ಮತ್ತು ಮುಸ್ಲಿಮರು ಭಾವೈಕ್ಯತೆಯಿಂದ ಶ್ರೀ ರಾಮನವಮಿ ಆಚರಣೆ ಮಾಡಿದ್ದು, ವಿಶೇಷವಾಗಿತ್ತು.

ನಾರಾಯಣ್ ಶಾಸ್ತ್ರಿ ರಸ್ತೆಯಲ್ಲಿರುವ ಮೈಸೂರು ಜಿಲ್ಲಾ ಪೆಂಡಾಲ್ ಮಾಲೀಕರ ಸಂಘ ಆಯೋಜಿಸಿದ ರಾಮನವಮಿ ಪ್ರಯುಕ್ತ ಹಿಂದೂ ಮುಸಲ್ಮಾನ್ ಭಾವೈಕ್ಯತೆಯಿಂದ ಶ್ರೀ ರಾಮಚಂದ್ರನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಆನಂತರ ಭಕ್ತಾದಿಗಳಿಗೆ ಪಾನಕ ಮಜ್ಜಿಗೆ ಕೋಸಂಬರಿ ವಿತರಿಸಿದರು.

ಮುಸಲ್ಮಾನ್ ಬಾಂಧವರು ಭಾಗವಹಿಸಿದ್ದಕ್ಕೆ ಹಿಂದೂ ಯುವಕರು ಸಂತಸ ವ್ಯಕ್ತಪಡಿಸಿದರು. ವಿಶೇಷವಾಗಿ ಶ್ರೀ ರಾಮನ ವೇಷ ಧರಿಸಿ ಬಂದ ಸಿದ್ದಾರ್ಥ ಲೇಔಟ್ ನಿವಾಸಿ ಜೀವನ್ ಅವರು ವಿಶೇಷ ಗಮನ ಸೆಳೆದರು.

Leave a Reply

error: Content is protected !!