NEWSನಮ್ಮಜಿಲ್ಲೆನಮ್ಮರಾಜ್ಯ

ಆಗಸ್ಟ್‌.11ರಂದು KSRTC 4 ಸಾರಿಗೆ ನಿಗಮಗಳ SC, ST ನೌಕರರ ಸಭೆ- ಒಗ್ಗಟ್ಟಿಗಾಗಿ ಮುಕ್ತ ಚರ್ಚೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ನೌಕರರ ಸಭೆಯನ್ನು  ಇದೇ ಆ.11ರಂದು ಕರೆಯಲಾಗಿದೆ ಎಂದು KSRTC ನೌಕರರ ಕುಟುಂಬ ಕ್ಷೇಮಾಭಿವೃದ್ಧಿ ಸಂಘದ ಬಿಎಂಟಿಸಿ ಅಧ್ಯಕ್ಷ ರುದ್ದೇಶ್‌ ಎಸ್‌. ನಾಯಕ್‌ ತಿಳಿಸಿದ್ದಾರೆ.

ಇದೇ ಆ.11ರಂದು ಮಧ್ಯಾಹ್ನ 3ಗಂಟೆಗೆ ಬೆಂಗಳೂರಿನ ಜೈಬೀಮ್ ನಗರದ ಪೂರ್ಣಿಮ ಟಾಕೀಸ್ ಎದುರುಗಡೆ ನಂ.16, ಜೆ.ಸಿ.ರೋಡ್,1ನೇ ಕ್ರಾಸ್, ನ್ಯೂ ಮಿಷನ್ ರೋಡ್‌ನಲ್ಲಿ ಇರುವ ಜೈಜೀಮ್ ಭವನದಲ್ಲಿ ಆಯೋಜಿಸಿಲಾಗಿದೆ.

ಸಭೆಯಲ್ಲಿ ನಾಲ್ಕೂ ನಿಗಮಗಳ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಂಘಟನೆಗಳ ಮುಖಂಡರು ಉಪಸ್ಥಿತರಿರಲಿದ್ದು, ಈ ಸಭೆಯ ಸಂಪೂರ್ಣ ಉಸ್ತುವಾರಿಯನ್ನು ದೊಡ್ಡಪ್ಪ ಎಚ್‌. ನರಕಲದಿನ್ನಿ ಹಾಗೂ ನಿಂಗಪ್ಪ ತಡಿಬಿಡಿ ಅವರು ವಹಿಸಿದ್ದಾರೆ  ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇನ್ನು KSRTC, BMTC, NWKRTC ಮತ್ತು KKRTC ರಾಜ್ಯ, ವಲಯ, ವಿಭಾಗೀಯ, ಘಟಕ ಸಮಿತಿಯ ನಾಲ್ಕೂ ನಿಗಮಗಳ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ನೌಕರರು ತಪ್ಪದೇ ಸಕಾಲಕ್ಕೆ ಆಗಮಿಸಿ ಮುಕ್ತವಾಗಿ ಚ್ರಚೆ ಮಾಡುವ ಮೂಲಕ  ಸಭೆಯ ಕಾರ್ಯ ಕಲಾಪಗಳನ್ನು ಯಶಸ್ವಿಗೊಳಿಸಿಕೊಡಬೇಕೆಂದು ಈ ಮೂಲಕ ಮನವಿ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಅಲ್ಲದೆ  ಬಹುದಿನಗಳ ನಂತರ “ಬಹುಜನರಲ್ಲಿ” ಕ್ರಾಂತಿಕಾರಿ ಅಲೆ ಎದ್ದಿದ್ದು, ಸಾರಿಗೆ ನಿಗಮಗಳ ಎಲ್ಲ ಎಸ್ಸಿ-ಎಸ್ಟಿ ನೌಕರರು ತಮ್ಮ ವೈಯಕ್ತಿಕ ಸಂಘಗಳ ಭೇದ ಭಾವ ಮರೆತು ಎಲ್ಲರೂ ಒಂದೇ ವೇದಿಕೆಗೆ ಆಗಮಿಸಿ ಒಂದೇ ಸಂಘಟನೆಯಲ್ಲಿ ಮುಂದುವರಿಯಲು ನಿರ್ಧರಿಸಿರುವುದು ನಿಜಕ್ಕೂ ಬಾಬಾ ಸಾಹೇಬರಿಗೆ ಕೊಡುವ ಗೌರವ ಅಂತಾನೆ ನಾನು ಭಾವಿಸುತ್ತೇನೆ  ಎಂದು ತಿಳಿಸಿದ್ದಾರೆ.

Leave a Reply

error: Content is protected !!
LATEST
KSRTC ಬಸ್‌ ರಿಪೇರಿ ಮಾಡಿದ ಖರ್ಚಿನ ಬಿಲ್‌ನಲ್ಲಿ ಸ್ಕ್ರಾಪ್‌ನ ಹಣ ತೋರಿಸದೆ ಗುಳುಂ: ಕ್ರಮಕ್ಕಾಗಿ ಎಂಡಿಗೆ ದೂರು 160 ಕ್ಯಾಬಿನೆಟ್ ಸೆಕ್ರೆಟರಿಯೇಟ್, ಡೆಪ್ಯೂಟಿ ಫೀಲ್ಡ್ ಆಫೀಸರ್ ಹುದ್ದೆಗಳಿಗೆ ಕೂಡಲೇ ಅರ್ಜಿ ಹಾಕಿ ಮುನಿರತ್ನಗೆ ಜಾಮೀನು ಮಂಜೂರು ಮಾಡಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಹೋರಾಟ ಪಂಜಾಬ್, ಹರಿಯಾಣ ರೈತರದಷ್ಟೇ ಎಂಬಂತೆ ಬಿಂಬಿಸುವ ಸುಪ್ರೀಂ ಆದೇಶ ಪುನರ್ ಪರಿಶೀಲಿಸಿ: ಕುರುಬೂರ್‌ ಶಾಂತಕುಮಾರ್ KSRTC ಅಧಿಕಾರಿಗಳು-ನೌಕರರಲ್ಲಿ, ನೌಕರರು-ನೌಕರರಲ್ಲೇ ಒಗ್ಗಟ್ಟಿಲ್ಲಕ್ಕೆ ಈ ಸ್ಥಿತಿ: NWKRTC ನಿಗಮದ ಅಧ್ಯಕ್ಷ ಭರಮಗೌಡ KSRTC ನೌಕರರ ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿ ಬೇಗ ಕೊಟ್ಟರೆ ನನಗೂ ಸಮಾಧಾನ: ಸಚಿವ ರಾಮಲಿಂಗಾ ರೆಡ್ಡಿ KSRTC-ನಮ್ಮ ಸರ್ಕಾರ ಸರಿ ಸಮಾನ ವೇತನ ಕೊಡುತ್ತದೆ ನೆಮ್ಮದಿಯಾಗಿರಿ: ಕಾಂಗ್ರೆಸ್‌ ಪ್ರಣಾಳಿಕೆ ಸಮಿತಿ ಉಪಾಧ್ಯಕ್ಷ ರಾಧಾಕೃ... KSRTC: ಅಗ್ರಿಮೆಂಟ್‌ ಎಂಬ ಸೆಟಲ್‌ಮೆಂಟ್‌ ಭೂತವನ್ನು ಬುಡಸಮೇತ ಕಿತ್ತೊಗೆಯಬೇಕು - ವಕೀಲ ನಟರಾಜ ಶರ್ಮಾ ವೇತನ ಸಂಬಂಧ 4ವರ್ಷಕ್ಕೊಮ್ಮೆ ಆಗುವ ಅಗ್ರಿಮೆಂಟ್‌ ಬೇಡ ಕೊಟ್ಟ ಭರವಸೆ ಈಡೇರಿಸಿ: ಸಾರಿಗೆ ಸಚಿವರಿಗೆ ಚಂದ್ರು ಒತ್ತಾಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ 247 ಹುದ್ದೆಗಳಿಗೆ ಅರ್ಜಿ ಆಹ್ವಾನ: 3 ವರ್ಷ ವಯಸ್ಸಿನ ಸಡಿಲಿಕೆ, ಡಿಗ್ರಿ ಅರ್ಹತೆ