NEWSನಮ್ಮರಾಜ್ಯಶಿಕ್ಷಣ

ಇಂದು ಹೊರಬೀಳಬೇಕಿದ್ದ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಮುಂದೂಡಿಕೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು : ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶ ಇಂದು (ಏ.7) ಮಂಗಳವಾರ ಬಿಡುಗಡೆಯಾಗಬೇಕಿತ್ತು. ಆದರೆ, ಅನಿವಾರ್ಯ ಕಾರಣಗಳಿಂದ ಮುಂದೂಡಲಾಗಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ತಿಳಿಸಿದೆ.

ರಾಜ್ಯದ ದಾವಣಗೆರೆ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ನಡೆಯುತ್ತಿರುವ ಉಪಚುನಾವಣೆ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆ ಇರುವುದರಿಂದ ಫಲಿತಾಂಶ ಪ್ರಕಟಿಸಲು ತಾಂತ್ರಿಕ ಅಡಚಣೆ ಉಂಟಾಗಿದೆ ಎಂದು ಮಂಡಳಿ ಹೇಳಿದೆ.

ಇನ್ನು ಚುನಾವಣಾ ಆಯೋಗದಿಂದ ಅಧಿಕೃತ ಅನುಮತಿ ಪಡೆಯುವ ಪ್ರಕ್ರಿಯೆಯಲ್ಲಿ ವಿಳಂಬವಾಗಿರುವುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಿರೀಕ್ಷಿತ ಫಲಿತಾಂಶ ಪ್ರಕಟಣೆಯ ಹೊಸ ದಿನಾಂಕವನ್ನು ಮಂಡಳಿ ಶೀಘ್ರದಲ್ಲೇ ಅಧಿಕೃತವಾಗಿ ಪ್ರಕಟಿಸಲಿದ್ದು, ಮೂಲಗಳ ಪ್ರಕಾರ, ಫಲಿತಾಂಶ ಪ್ರಕಟಿಸಲು ಆಯೋಗವು ಈಗಾಗಲೇ ಸಕಾರಾತ್ಮಕವಾಗಿ ಸ್ಪಂದಿಸಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ನಾಳೆಯೇ ಅಂದರೆ ಏಪ್ರಿಲ್ 8ರಂದು ಫಲಿತಾಂಶ ಹೊರಬೀಳುವ ಸಾಧ್ಯತೆಯಿದೆ.

ಇಂದು ಸಂಜೆಯೊಳಗೆ ಮಂಡಳಿಯು ಮುಂದಿನ ದಿನಾಂಕದ ಬಗ್ಗೆ ಸ್ಪಷ್ಟನೆ ನೀಡುವ ನಿರೀಕ್ಷೆಯಿದೆ. ಕಳೆದ ವರ್ಷಕ್ಕಿಂತ ಈ ಬಾರಿ ಬೇಗನೆ ಫಲಿತಾಂಶ ನೀಡಲು ಶಿಕ್ಷಣ ಇಲಾಖೆ ಸಜ್ಜಾಗಿತ್ತು. ಆದರೆ ಉಪಚುನಾವಣೆ ಇರುವುದರಿಂದ ವಿದ್ಯಾರ್ಥಿಗಳು ಮತ್ತು ಪೋಷಕರು ಒಂದೆರಡು ದಿನ ಕಾಯುವುದು ಅನಿವಾರ್ಯವಾಗಿದೆ.

Megha
the authorMegha

Leave a Reply

error: Content is protected !!
Latest news
ಸಾರಿಗೆ ನೌಕರರ ಬೇಡಿಕೆ ಈಡೇರಿಕೆಗೆ ಆಗ್ರಹ- ನಾಲ್ಕನೇ ದಿನಕ್ಕೆ ಕಾಲಿಟ್ಟ ಪಾದಯಾತ್ರೆ: ಇಂದು ಶಿರಾದಲ್ಲಿ ವಾಸ್ತವ್ಯ ಸಾರಿಗೆ ನೌಕರರ ಒಕ್ಕೂಟದ ಪಾದಯಾತ್ರೆಗೆ ಸಂಪೂರ್ಣ ಬೆಂಬಲ: ಮಹಾಮಂಡಳದ ಅಧ್ಯಕ್ಷ ಆರ್‌.ಪಿ.ಕೊಪರ್ಡೆ ನಡದು ಹೋಗುತ್ತಿರುವ ನಮ್ಮ ನೌಕರರಿಗೆ ಕೃತಜ್ಞತೆ ಸಲ್ಲಿಸಿ: ಸಾರಿಗೆ ನೌಕರ ಮನವಿ ಸಾರಿಗೆ ನೌಕರರ 2ನೇ ದಿನದ ಪಾದಯಾತ್ರೆ: 30 ಕಿಮೀ ನಡಿಗೆ ಯಶಸ್ವಿ- ಹಿರಿಯೂರಿನಲ್ಲಿ ವಾಸ್ತವ್ಯ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟ- ಯಾವ ಜಿಲ್ಲೆಗೆ ಯಾವ ಸ್ಥಾನ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶ: ಶೇ.84ರಷ್ಟು ವಿದ್ಯಾರ್ಥಿಗಳು ಪಾಸ್‌ ಮೊದಲ ದಿನದ ಸಾರಿಗೆ ನೌಕರರ ಪಾದಯಾತ್ರೆ ಯಶಸ್ವಿ, ನಾಳೆ ಬೆಳಗ್ಗೆ 6 ಗಂಟೆಯಿಂದ ಮುಂದುವರಿಕೆ KSRTC: ಇಂದು ಸಾರಿಗೆ ಸಚಿವರ ಭೇಟಿಯಾದ ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳು KSRTC: ಸಾರಿಗೆ ನೌಕರರ ಪಾದಯಾತ್ರೆ ಯಶಸ್ವಿಗಾಗಿ ಬೇರೆ ಸಂಘಟನೆಗಳೂ ಸಾಥ್‌! ಆಟೋ ಗ್ಯಾಸ್ ಕೊರತೆ - ವದಂತಿಗಳಿಗೆ ಕಿವಿಗೊಡಬೇಡಿ - ಸಾರ್ವಜನಿಕರಿಗೆ ಕರೆ