NEWSಆರೋಗ್ಯನಮ್ಮರಾಜ್ಯಲೇಖನಗಳು

ಗರ್ಭಾವಸ್ಥೆ ಸಮಯದಲ್ಲಿ ಮಿಲನ ಸರಿಯೋ ತಪ್ಪೋ- ವೈದ್ಯರ ಸಲಹೆ ಏನು?

ವಿಜಯಪಥ ಸಮಗ್ರ ಸುದ್ದಿ

ಲೈಂಗಿಕ ತೃಪ್ತಿಗಾಗಿ ಗಂಡ ಅಥವಾ ಹೆಂಡತಿ ಮನಸ್ಸು ಮಾಡಿದರೆ ಯಾವುದೇ ಸಮಯದಲ್ಲಿ ಒಂದಾಗಬಹುದು. ಆದರೆ ಗರ್ಭಾವಸ್ಥೆಯ ಸಮಯದಲ್ಲಿ ಮಹಿಳೆ ಸ್ವಲ್ಪ ಎಚ್ಚರದಿಂದ ಇರಬೇಕು. ಕೇವಲ ಅನಾರೋಗ್ಯಕರ ವಾತಾವರಣ ಮತ್ತು ಅತ್ಯಂತ ಸೂಕ್ಷ್ಮವಾದ ಸಮಯ ಇದಾಗಿರುವುದರಿಂದ ತನ್ನ ಸಂಗಾತಿಯ ಜೊತೆ ಬೆರೆಯಲು ಕೆಲವೊಂದು ಆರೋಗ್ಯದ ವಿಚಾರ ಅಡ್ಡ ಬರಬಹುದು.

ಆದರೆ ಈ ಸಮಯದಲ್ಲಿ ಸ್ವಲ್ಪ ಆಲೋಚನೆ ಮಾಡಿ ಸಂಪೂರ್ಣ ಲೈಂಗಿಕ ತೃಪ್ತಿಗಾಗಿ ಈ ಕೆಳಗಿನ ಕೆಲವೊಂದು ಮುನ್ನೆಚ್ಚರಿಕಾ ಕ್ರಮಗಳನ್ನು ಮೊದಲೇ ತೆಗೆದುಕೊಂಡರೆ ನಿಮ್ಮ ಸಂಗಾತಿಗೆ ಹಾಗೂ ನಿಮ್ಮ ಆರೋಗ್ಯಕ್ಕೆ ಯಾವುದೇ ತೊಂದರೆ ಆಗುವುದಿಲ್ಲ. ಇದಕ್ಕಾಗಿ ತಜ್ಞ ವೈದ್ಯರ ಸಲಹೆ ಏನು ಎಂದು ನೋಡುವುದಾದರೆ…

​ಸಂಭೋಗದಲ್ಲಿ ಸರಳತೆ ಇರಲಿ: ಕೆಲವು ಸಂಗಾತಿಗಳಿಗೆ ತಾವು ವಿವಿಧ ಭಂಗಿಯಲ್ಲಿ ಲೈಂಗಿಕ ಕ್ರಿಯೆಯನ್ನು ನಡೆಸಬೇಕೆಂಬ ಬಯಕೆ ಇರುತ್ತದೆ. ಆದರೆ ಗರ್ಭಾವಸ್ಥೆಯಲ್ಲಿ ತುಂಬಾ ಎಚ್ಚರದಿಂದ ಇರಬೇಕು. ಗರ್ಭಿಣಿ ಮಹಿಳೆಗೆ ಬಹಳಷ್ಟು ಸೂಕ್ಷ್ಮ ಸಮಯ ಇದಾಗಿರುವುದರಿಂದ ಕೇವಲ ದೇಹದ ತೃಪ್ತಿಗಾಗಿ ಬಗೆ ಬಗೆಯ ಲೈಂಗಿಕ ಭಂಗಿಗಳನ್ನು ಪ್ರಯತ್ನಿಸಲು ಹೋಗಿ ಆರೋಗ್ಯಕ್ಕೆ ತೊಂದರೆ ತಂದುಕೊಳ್ಳಬಾರದು. ಹಾಗಾಗಿ ಸಂಭೋಗದಲ್ಲಿ ವೈಭೋಗ ಬೇಡ. ಕೇವಲ ನಿಮ್ಮ ದೇಹಕ್ಕೆ ಆರಾಮದಾಯಕ ಎನಿಸುವ ಭಂಗಿಗಳನ್ನು ಮಾತ್ರ ಪ್ರಯತ್ನಿಸಿ ಲೈಂಗಿಕ ತೃಪ್ತಿ ಕಂಡುಕೊಳ್ಳಿ.

​ಬೆಳಗಿನ ಜಾವ ಲೈಂಗಿಕ ಕ್ರಿಯೆ ಬೇಡವೇ ಬೇಡ!: ಗರ್ಭಿಣಿ ಮಹಿಳೆಯರಿಗೆ ಬೆಳಗಿನ ಸಮಯದಲ್ಲಿ ಆರೋಗ್ಯ ಸರಿ ಇರುವುದಿಲ್ಲ. ಕೇವಲ ವಾಕರಿಕೆ ವಾಂತಿ ಮತ್ತು ಆರೋಗ್ಯದ ಅಸ್ವಸ್ಥತೆ ಜೊತೆಗೆ ದೇಹದ ಆಯಾಸ ಕೂಡ ಇರುತ್ತದೆ. ಹೀಗಾಗಿ ಬೆಳಗಿನ ಸಂದರ್ಭದಲ್ಲಿ ಅಪ್ಪಿತಪ್ಪಿಯೂ ಲೈಂಗಿಕ ಕ್ರಿಯೆ ನಡೆಸಬೇಡಿ. ಇದರಿಂದ ಆರೋಗ್ಯದಲ್ಲಿ ಏನಾದರೂ ಏರುಪೇರಾದರೆ ಇಡೀ ದಿನ ಸಮಸ್ಯೆ ಎದುರಿಸಬೇಕಾಗುತ್ತದೆ. So ನೀವು ಇಡೀ ದಿನ ಖುಷಿಯಾಗಿದ್ದು ನಿಮ್ಮ ಸಂಭೋಗದ ಸಮಯವನ್ನು ಸಂಜೆ ಅಥವಾ ರಾತ್ರಿ ಸಮಯಕ್ಕೆ ಮೀಸಲಿಡಿ.

​ಯೋನಿಯ ಡಿಸ್ಚಾರ್ಜ್ ಮಾಮೂಲಿ: ಗರ್ಭಿಣಿ ಮಹಿಳೆಯರಿಗೆ ಗರ್ಭಾವಸ್ಥೆಯ ಸಮಯದಲ್ಲಿ ನಿಮ್ಮ ಯೋನಿಯ ಭಾಗದಲ್ಲಿ ಸಾಕಷ್ಟು ದ್ರವ ಬಿಡುಗಡೆ ಆಗುತ್ತಿರುತ್ತದೆ. ಇದು ಸ್ವಲ್ಪ ಕಿರಿಕಿರಿ ಉಂಟುಮಾಡಬಹುದು. ಅದೇ ರೀತಿ ವಿಪರೀತ ಒಣಗುವಿಕೆ ಸಹ ಕೆಲವು ಮಹಿಳೆಯರಿಗೆ ಕಂಡುಬರಬಹುದು. ಒಂದು ವೇಳೆ ಮಹಿಳೆಯರಿಗೆ ಹೀಗಾದರೆ ಈ ಸಮಯದಲ್ಲಿ ಲೈಂಗಿಕ ಕ್ರಿಯೆ ನಡೆಸುವುದು ತುಂಬಾ ಅಪಾಯಕಾರಿ ಎಂದು ತೋರುತ್ತದೆ. ಈ ಸಮಯದಲ್ಲಿ ಕೇವಲ ನಿಮ್ಮ ಸಂಗಾತಿಯ ಜೊತೆ ರೋಮ್ಯಾನ್ಸ್ ಮಾತ್ರ ಇರುವುದು ಒಳ್ಳೆಯದು.

​ಯೋನಿ ಊದಿಕೊಂಡಂತೆ ಇರುವುದು:  ಹೌದು ಗರ್ಭಾವಸ್ಥೆಯ ಸಮಯದಲ್ಲಿ ಗರ್ಭಿಣಿ ಮಹಿಳೆಯರಿಗೆ ತಮ್ಮ ಯೋನಿಯ ಭಾಗ ಊದಿಕೊಂಡಂತೆ ಇದ್ದು, ಅದು ತಮ್ಮ ಸಂಗಾತಿಗೆ ಆಕರ್ಷಕವಾಗಿ ಕಾಣದೆ ಬೇಸರ ತರಿಸಬಹುದು. ಹಾಗಾಗಿ ಈ ಸಮಯದಲ್ಲಿ ಕೆಲವೊಂದು ಭಂಗಿಯಲ್ಲಿ ಲೈಂಗಿಕ ಕ್ರಿಯೆ ಸರಿಯಲ್ಲ. ಹಾಗಾಗಿ ಲೈಂಗಿಕ ಅಸ್ವಸ್ಥತೆಯನ್ನು ದೂರ ಮಾಡಿಕೊಳ್ಳಲು ಕೇವಲ ದೇಹಕ್ಕೆ ಆರಾಮದಾಯಕವಾದ ಭಂಗಿಗಳನ್ನು ಮಾತ್ರ ಪ್ರಯತ್ನಿಸುವುದು ಒಳ್ಳೆಯದು.

​ಗಾಢವಾದ ಪರಿಮಳಭರಿತ ಸುಗಂಧ ದ್ರವ್ಯ ಆರೋಗ್ಯಕ್ಕೆ ಹಾನಿಕರ: ಗರ್ಭಾವಸ್ಥೆಯ ಸಮಯದಲ್ಲಿ ಮಹಿಳೆಯರ ದೇಹದಿಂದ ಕೆಲವೊಂದು ದ್ರವಗಳು ಬಿಡುಗಡೆಯಾಗುವುದರಿಂದ ದೇಹ ದುರ್ವಾಸನೆಯಿಂದ ಕೂಡಿರುತ್ತದೆ. ಹಾಗಾಗಿ ಇದನ್ನು ಹೋಗಲಾಡಿಸಿಕೊಳ್ಳಲು ಬಳಸಲಾಗುವ ಸೆಂಟ್ ಅನಾರೋಗ್ಯಕರ ಅನುಭವವನ್ನು ಉಂಟು ಮಾಡಬಹುದು.

ಮೊದಲೇ ಬೆಳಗಿನ ಸಮಯದಲ್ಲಿ ಆರೋಗ್ಯದ ಅಸ್ವಸ್ಥತೆಯಿಂದ ಬಳಲುವ ಗರ್ಭಿಣಿ ಮಹಿಳೆಗೆ ಇದೊಂದು ಹೆಚ್ಚಿನ ಹೊರೆ ಎನಿಸಬಹುದು. ಜೊತೆಗೆ ನಿಮ್ಮ ಸಂಗಾತಿಗೂ ನಿಮ್ಮ ಮೇಲೆ ಇದರಿಂದ ಬೇಸರ ಎನಿಸಬಹುದು. ಹಾಗಾಗಿ ಸಾಧ್ಯವಾದಷ್ಟು ನೈಸರ್ಗಿಕ ಎಣ್ಣೆಗಳನ್ನು ಮಾತ್ರ ಬಳಕೆ ಮಾಡಿ. ವಿಶೇಷವಾಗಿ ನೀವು ಲೈಂಗಿಕ ಕ್ರಿಯೆಗೆ ತೊಡಗುವಾಗ ಬಳಕೆ ಮಾಡಿದರೆ ಒಳ್ಳೆಯದು.

ಇನ್ನು ಈ ಎಲ್ಲವನ್ನು ಗಮನದಲ್ಲಿಟ್ಟುಕೊಂಡು ಗರ್ಭಾವಸ್ಥೆಯ ಸಮಯದಲ್ಲಿ ಮಿಲನವಾಗುವ ದಂಪತಿಗಳು ಸೇರುವುದಕ್ಕೂ ಮೊದಲು ವೈದ್ಯರಿಂದ ಸಲಹೆ ಪಡೆದುಕೊಳ್ಳುವುದು ಒಳ್ಳೆಯದು. ಕಾರಣ ಮುಂದಾಗುವ ತೊಂದರೆಯನ್ನು ತಪ್ಪಿಸುವ ಜತೆಗೆ ಗರ್ಭಿಣಿಯರ ಆರೋಗ್ಯ ಕಾಪಾಡಿಕೊಳ್ಳುವುದು ಮುಖ್ಯವಾಗಿರುತ್ತದೆ.

Leave a Reply

error: Content is protected !!
LATEST
KSRTC : ಗಣಪತಿ ಪ್ರತಿಷ್ಠಾಪಿಸಿದ್ದರಿಂದ ಡಿಪೋ ಮುಂದೆ ಚಾಲಕ ರವಿ ಪಾರ್ಥಿವ ಶರೀರ ಇಡಲಾತ್ತು, ಪ್ರಮಾದವಾಗಿಲ್ಲ- ಡಿಎಂ ಸಮ... 10 ವರ್ಷದ ಆಧಾರ್‌ ನವೀಕರಣಕ್ಕೆ ಡೆಡ್‌ಲೈನ್‌ ಫಿಕ್ಸ್‌: ನಾಳೆ ಅಂತಿಮ ಗಡುವು- ಬಳಿಕ ದಂಡ ನಾಗಮಂಗಲ ಕೋಮುಗಲಭೆ ಪ್ರಕರಣ: ಇನ್ಸ್‌ಪೆಕ್ಟರ್ ಅಶೋಕ್ ಕುಮಾರ್ ಅಮಾನತು KSRTC ಸಿಬ್ಬಂದಿಯಿಂದಲೇ ಡಿಸಿಗೆ ಇರಿಯಲು ಯತ್ನ- ಕೈ ಅಡ್ಡಹಾಕಿ ಪ್ರಾಣಾಪಾಯದಿಂದ ಪಾರಾದ ಜಗದೀಶ್ ಕುಮಾರ್‌ "ARM" ಸಿನಿಮಾ ಇಂದು ಪ್ರಪಂಚದಾದ್ಯಂತ ಐದು ಭಾಷೆಗಳಲ್ಲಿ ಬಿಡುಗಡೆ ಸೆ.14ರಂದು ಸಾರಿಗೆ ಸಿಬ್ಬಂದಿಗಳಿಗೆ ಔಷಧೀಯ ಸಸ್ಯಗಳ  ಉಚಿತ ವಿತರಣೆ: ಅಧಿಕಾರಿಗಳು ಭಾಗಿ ಟೊವಿನೋ ಥಾಮಸ್ ಸಿನಿಮಾ ವಿತರಿಸಲಿದೆ ಹೊಂಬಾಳೆ ಫಿಲ್ಮ್! ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್‌ ಬಂಧನ ಅವಧಿ ಮತ್ತೆ ಒಂದು ದಿನ ವಿಸ್ತರಣೆ KSRTC ಚಿಕ್ಕಮಗಳೂರು: ಘಟಕದ ಗೇಟ್‌ ಬಳಿ ತ್ಯಾಜ್ಯಗಳ ನಡುವೆ ಚಾಲಕನ ಪಾರ್ಥಿವ ಶರೀರವಿಟ್ಟು ಅಂತಿಮ ದರ್ಶನಕ್ಕೆ ವ್ಯವಸ್ಥೆ-... ವಾಲ್ಮೀಕಿ ಹಗರಣ: ಬಳ್ಳಾರಿಯಿಂದ ಬಿಜೆಪಿ ಪಾದಯಾತ್ರೆ - ಛಲವಾದಿ ನಾರಾಯಣಸ್ವಾಮಿ