NEWSನಮ್ಮಜಿಲ್ಲೆನಮ್ಮರಾಜ್ಯ

KSRTC: ಶಕ್ತಿ ಯೋಜನೆ- ನಾರಿಯರಿಂದ ಅಮಾನತು ಶಿಕ್ಷೆಗೊಳಗಾದ 300ಕ್ಕೂ ಹೆಚ್ಚು ಕಂಡಕ್ಟರ್‌ಗಳು

ವಿಜಯಪಥ ಸಮಗ್ರ ಸುದ್ದಿ

ಮೈಸೂರು: ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಯಾಗಿ ಮೂರು ತಿಂಗಳು ಕಳೆದಿದ್ದು, ಈ ಯೋಜನೆಯಡಿ ಉಚಿತ ಪ್ರಯಾಣ ಜಾರಿಯಾಗುತ್ತಿದ್ದಂತೆ ಸಭೆ, ಸಮಾರಂಭ ಮತ್ತು ಪುಣ್ಯಕ್ಷೇತ್ರಗಳಿಗೆ ತೆರಳುವ ಮಹಿಳೆಯರ ಸಂಖ್ಯೆಯೂ ಹೆಚ್ಚಾಗಿದೆ.

ಇದರಿಂದ ನಿಗಮಗಳಿಗೆ ಆದಾಯ ಹೆಚ್ಚಾಗಿದೆ. ಕಳೆದ ಮೂರು ತಿಂಗಳಲ್ಲಿ ಸಾರಿಗೆಯ ನಾಲ್ಕೂ ನಿಗಮಗಳ ಬಸ್​ಗಳಲ್ಲಿ 70,73,05,946 ಮಹಿಳೆಯರು ಪ್ರಯಾಣ ಮಾಡಿದ್ದಾರೆ. ಮಹಿಳಾ ಪ್ರಯಾಣಿಕರ ಟಿಕೆಟ್​ ಮೌಲ್ಯ 1648,51,39,030 ಆಗಿದೆ. ಈ ಪರಿಯಾಗಿ ನಿಗಮಗಳಿಗೆ ಆದಾಯವೇನೋ ಹೆಚ್ಚಾಗಿದೆ ಆದರೆ ನಿರ್ವಾಹಕರಿಗೆ ತಲೆಬಿಸಿ ಶುರುವಾಗಿದ್ದು ಈಗಾಗಲೇ ನೂರಾರು ಕಂಡಕ್ಟರ್‌ಗಳು ಅಮಾನತುಗೊಂಡಿದ್ದಾರೆ.

ಹೌದು ಶಕ್ತಿ ಯೋಜನೆ ಜಾರಿಯದ ಬಳಿಕ ಮಹಿಳಾ ಪ್ರಯಾಣಿಕರ ಎಡವಟ್ಟಿನಿಂದ ಮತ್ತು ಕೆಲವೊಮ್ಮೆ ನಿರ್ವಾಹಕರ ಸ್ವಯಂಕೃತ ತಪ್ಪಿನಿಂದಲೂ ರಾಜ್ಯದಲ್ಲಿ ಇದುವರೆಗೂ ನಾಲ್ಕೂ ನಿಗಮಗಳು ಸೇರಿ 300 ಕ್ಕೂ ಹೆಚ್ಚು ನಿರ್ವಾಹಕರು ಅಮಾನತಾಗಿದ್ದಾರೆ.

ಈ ಬಗ್ಗ ನಿಗಮದ ನೌಕರರು ಮಾಹಿತಿ ನೀಡಿದ್ದು, ಸರ್ಕಾರ ಜಾರಿಗೆ ತಂದ ಈ ಉಚಿತ ಪ್ರಯಾಣದಿಂದ ಮಹಿಳೆಯರಿಗೆ ಅನುಕೂಲವಾಗಿದೆ. ಆದರೆ, ಅವರಿಗೆ ಬಸ್‌ ಹತ್ತಿದ ಮೇಲೆ ನಿರ್ವಾಹಕರ ಜತೆ ಹೇಗೆ ನಡೆದುಕೊಳ್ಳಬೇಕು ಎಂಬುದರ ಬಗ್ಗೆ ಅರಿವು ಮೂಡಿಸದೆ ಇರುವುದರಿಂದ ಕೆಲ ಮಹಿಳಾ ಪ್ರಯಾಣಿಕರು ಮಾಡಿದ ತಪ್ಪಿಗೆ ನಾವು ಅಮಾನತಿನ ಶಿಕ್ಷೆ ಅನುಭವಿಸುತ್ತಿದ್ದೇವೆ ಎಂದು ನೋವು ತೋಡಿಕೊಂಡಿದ್ದಾರೆ.

ಕಂಡಕ್ಟರ್‌ಗಳ ಅಮಾನತಿಗೆ ಕಾರಣ ಏನು: ಶಕ್ತಿ ಯೋಜನೆಯಿಂದ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿದ್ದರೂ, ಮಹಿಳೆಯರು ಟಿಕೆಟ್​ ಪಡೆದೇ ಪ್ರಯಾಣಿಸಬೇಕು. ನಿರ್ವಾಹಕರು ಮಹಿಳೆಯರಿಗೆ ಅವರು ಪ್ರಯಾಣಿಸುವ ಮಾರ್ಗದ ಟಿಕೆಟ್​ ನೀಡುತ್ತಾರೆ. ಆದರೆ ಮಹಿಳೆಯಲ್ಲಿ ಕೆಲವರು ತಾವು ಹೋಗಬೇಕಾದ ಸ್ಥಳಕ್ಕೂ ಮುನ್ನವೇ ಇಳಿದು ಹೋಗುತ್ತಾರೆ. ಇದರಿಂದ ಕಂಡಕ್ಟರ್‌ಗಳು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ.

ಇದಕ್ಕೆ ಒಂದು ನಿದರ್ಶನ ನೀಡಬೇಕು ಎಂದರೆ ಮಹಿಳೆಯೊಬ್ಬರು ಬೆಂಗಳೂರಿನಲ್ಲಿ ಕೆಎಸ್​ಆರ್​ಟಿಸಿ ಬಸ್​​ ಹತ್ತಿ ಹುಬ್ಬಳ್ಳಿಗೆ ಟಿಕೆಟ್​ ಪಡೆಯುತ್ತಾರೆ. ಆದರೆ ಅನ್ಯ ಕಾರ್ಯನಿಮ್ಮಿತ್ತ ಮಾರ್ಗ ಮಧ್ಯೆ ಅಂದರೆ ದಾವಣಗೆರೆಯಲ್ಲಿ ಇಳಿದುಬಿಡುತ್ತಾರೆ. ನಂತರ ತನಿಖಾ ಸಿಬ್ಬಂದಿ ಬಂದಾಗ ಆ ಮಹಿಳಾ ಪ್ರಯಾಣಿಕರು ಇರುವುದಿಲ್ಲ. ಇದರಿಂದ ಅನುಮಾನಗೊಂಡ ತನಿಖಾಧಿಕಾರಿಗಳು​ ನಿರ್ವಾಹಕನಿಗೆ “ನೀನು ನಿಗಮಕ್ಕೆ ತಪ್ಪು ಮಾಹಿತಿ ನೀಡುತ್ತಿದ್ದೀಯಾ” ಎಂದು ಕಾರಣ ಕೇಳಿ ಮೆಮೋ ಕೊಡುತ್ತಾರೆ. ಆ ಮೆಮೋ ಕೊಟ್ಟ 2-3 ಅಥವಾ ವಾರದ ಬಳಿಕ ಮೇಲಧಿಕಾರಿಗಳು ನಿರ್ವಾಹಕರನ್ನು ನೀವು ಕೊಟ್ಟ ಕಾರಣ ಸಮಂಜಸವಾಗಿಲ್ಲ ಎಂದು ಅಮಾನತು ಮಾಡುತ್ತಾರೆ.

ಇನ್ನು ಕೆಲವು ನಿರ್ವಾಹಕರೇ ತಮ್ಮ ಇನ್ಸೆಂಟಿವ್​ (ಪ್ರೋತ್ಸಾಹಧನ) ಆಸೆಗೆ ಸಿಲುಕಿ ಸುಳ್ಳು ಟಿಕೆಟ್​ ಹರಿಯುತ್ತಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಆದರೆ ಇದು ಈವರೆಗೂ ಸಾಬೀತಾಗಿಲ್ಲ. ಒಟ್ಟಾರೆ  ಹೀಗೆ ರಾಜ್ಯಾದ್ಯಂತ ಸಾರಿಗೆ ನಿಗಮಗಳಲ್ಲಿ ಈವರೆಗೂ 300ಕ್ಕೂ ಹೆಚ್ಚು ನಿರ್ವಾಹಕರನ್ನು ಅಮಾನತು ಮಾಡಲಾಗಿದೆ. ಈತ್ತ ಸರ್ಕಾರ ಕೂಡ ನಮಗೆ ಸುಳ್ಳು ಮಾಹಿತಿ ನೀಡುತ್ತಿದ್ದೀರಾ ಎಂದು ಆರೋಪಿಸಿ ಸಾರಿಗೆ ನಿಗಮಗಳ ಆಡಳಿತ ಮಂಡಳಿಗಳಿಗೆ ಒಂದು ತಿಂಗಳ ಹಿಂದೆಯೇ ನೋಟಿಸ್​ ನೀಡಿದೆ.

ಚಾಮರಾಜನಗರ, ಮೈಸೂರು, ತುಮಕೂರು, ಚಿಕ್ಕಮಗಳೂ ಹೀಗೆ ವಿವಿಧೆಡೆಯಲ್ಲಿ ಇದೇ ರೀತಿಯಾದ ಘಟನೆಗಳು ನಡೆದಿದ್ದು, ನಿರ್ವಾಹಕರನ್ನು ಅಮಾನತು ಮಾಡಲಾಗಿದೆ. ಹೀಗೆ ಮಹಿಳೆಯರು ಮಾರ್ಗಮಧ್ಯೆ ಬಸ್‌ಗಳನ್ನು ಇಳಿದು ಹೋಗುತ್ತಿರುವ ಬಗ್ಗೆ ವಿಜಯಪಥ ಸಮಗ್ರ ವರದಿ ಮಾಡಿದ್ದು, ಆ ವರದಿಯನ್ನು ಕೆಲ ನಿರ್ವಾಹಕರು ಇಟ್ಟುಕೊಂಡು ಮಾರ್ಗ ಮಧ್ಯೆ ಇಳಿದು ಹೋಗುವವರಿಗೆ ತಮಗೆ ಆಗುವ ಸಮಸ್ಯೆ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಮಾಡುತ್ತಿದ್ದಾರೆ.

ಇದರಿಂದ ಎಷ್ಟೋ ಮಂದಿ ಮಹಿಳೆಯರು ನಮ್ಮಿಂದ ನಿಮಗೆ ಸಮಸ್ಯೆ ಆಗುವುದು ಬೇಡ ಎಂದು ತಾವು ಟಿಕೆಟ್‌ ಪಡೆದಿರುವ ಸ್ಥಳವನ್ನು ತಲುಪುತ್ತಿದ್ದಾರೆ ಎಂದು ಶಿವಮೊಗ್ಗದ ನಿರ್ವಾಹಕರೊಬ್ಬರು ವಿಜಯಪಥಕ್ಕೆ ಅಭಿನಂದನೆ ತಿಳಿಸಿದ್ದಾರೆ.

Leave a Reply

error: Content is protected !!
LATEST
NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು