NEWSದೇಶ-ವಿದೇಶನಮ್ಮರಾಜ್ಯ

ಉಕ್ಕು ಸ್ಥಾವರ ದುರಂತ: ಮೃತರ ಕುಟುಂಬಕ್ಕೆ 25 ಲಕ್ಷ ರೂ. ಗಾಯಗೊಂಡವರಿಗೆ 10 ಲಕ್ಷ ರೂ. ಪರಿಹಾರ: ಕೇಂದ್ರ ಸಚಿವ ಎಚ್‌ಡಿಕೆ

ಮೃತಪಟ್ಟ ಕಾರ್ಮಿಕರ ಕುಟುಂಬಗಳಿಗೆ ₹25 ಲಕ್ಷ ಹಾಗೂ ಗಾಯಾಳುಗಳಿಗೆ ₹10 ಲಕ್ಷ ಪರಿಹಾರ ನೀಡುವುದಾಗಿ ಸ್ಥಳದಲ್ಲೇ ಘೋಷಣೆ ಮಾಡಿದರು. ಅಲ್ಲದೆ, ಮೃತ ಕಾರ್ಮಿಕರ ಪ್ರತಿ ಕುಟುಂಬದ ಅರ್ಹ ಸದಸ್ಯರಿಗೆ ಕಾರ್ಖಾನೆಯಲ್ಲಿ ಉದ್ಯೋಗವನ್ನೂ ನೀಡಲಾಗುವುದು. ಗಾಯಗೊಂಡವರ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಕಾರ್ಖಾನೆ ಭರಿಸುತ್ತದೆ ಹಾಗೂ ಮೃತ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವನ್ನು ನೀಡಲಾಗುವುದು

ವಿಜಯಪಥ ಸಮಗ್ರ ಸುದ್ದಿ

ವಿಶಾಖಪಟ್ಟಣ: ಉಕ್ಕು ಸ್ಥಾವರದಲ್ಲಿ (RINL) ಭಾರೀ ಪ್ರಮಾಣದ ಕರಗಿದ ಲೋಹ ಹರಿದು ಹೊತ್ತಿಕೊಂಡ ಬೆಂಕಿಯ ಕೆನ್ನಾಲಿಗೆಗೆ ಸಿಲು ಸಜೀವ ದಹನಗೊಂಡ 8 ಮಂದಿ ಕಾರ್ಮಿಕರ ಕುಟುಂಬಕ್ಕೆ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿ ತಲಾ 25 ಲಕ್ಷ ರೂ. ಹಾಗೂ ಗಾಯಗೊಂಡವರಿಗೆ 10 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದಾರೆ.

ದುರಂತ ಸಂಭವಿಸಿದ ವಿಶಾಖಪಟ್ಟಣದ ರಾಷ್ಟ್ರೀಯ ಉಕ್ಕು ಸ್ಥಾವರಕ್ಕೆ (RINL) ಧಾವಿಸಿ ಬಂದು ಅವಘಡ ಸಂಭವಿಸಿದ ಸ್ಥಳವನ್ನು ವಿಸ್ತೃತವಾಗಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಕಾರ್ಖಾನೆಯ ಆಡಳಿತ ಮಂಡಳಿಯಿಂದ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡರು.

ಮೃತಪಟ್ಟ ಕಾರ್ಮಿಕರ ಕುಟುಂಬಗಳಿಗೆ ₹25 ಲಕ್ಷ ಹಾಗೂ ಗಾಯಾಳುಗಳಿಗೆ ₹10 ಲಕ್ಷ ಪರಿಹಾರ ನೀಡುವುದಾಗಿ ಸ್ಥಳದಲ್ಲೇ ಘೋಷಣೆ ಮಾಡಿದರು. ಅಲ್ಲದೆ, ಮೃತ ಕಾರ್ಮಿಕರ ಪ್ರತಿ ಕುಟುಂಬದ ಅರ್ಹ ಸದಸ್ಯರಿಗೆ ಕಾರ್ಖಾನೆಯಲ್ಲಿ ಉದ್ಯೋಗವನ್ನೂ ನೀಡಲಾಗುವುದು. ಗಾಯಗೊಂಡವರ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಕಾರ್ಖಾನೆ ಭರಿಸುತ್ತದೆ ಹಾಗೂ ಮೃತ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವನ್ನು ನೀಡಲಾಗುವುದು ಎಂದು ತಿಳಿಸಿದರು.

ಈ ದುರ್ಘಟನೆ ಬಗ್ಗೆ ನನಗೆ ತೀವ್ರ ಆಘಾತ ಉಂಟಾಗಿದೆ. ನೊಂದ ಕುಟುಂಬಗಳಿಗೆ ನನ್ನ ಸಂತಾಪಗಳು. ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ಪ್ರಾರ್ಥಿಸುತ್ತೇನೆ ಎಂದರು.

ಸೋಮವಾರ (ಜೂ.8) ರಾತ್ರಿ ವಿಶಾಖಪಟ್ಟಣದ (Visakhapatnam) ಉಕ್ಕು ಸ್ಥಾವರದಲ್ಲಿ ಟನ್‌ಗಳಷ್ಟು ಕರಗಿದ ಲೋಹವಿದ್ದ ದೊಡ್ಡ ಗಾತ್ರದ ಬಕೆಟ್ ಉರುಳಿ ಬಿದ್ದಿದೆ. ಇದರಿಂದ ಸ್ಥಾವರದ ಉಕ್ಕಿನ ಕರಗುವ ಕೇಂದ್ರ ಸಂಖ್ಯೆ 1ರಲ್ಲಿ ದೊಡ್ಡ ಪ್ರಮಾಣದ ಬೆಂಕಿ ಹೊತ್ತಿಕೊಂಡಿದ್ದು, ಪರಿಣಾಮ ಕಾರ್ಮಿಕರು ಸಾವನಪ್ಪಿದ್ದಾರೆ. ಈಗಾಗಲೇ ದುರಂತದ ಕಾರಣವನ್ನು ಪತ್ತೆ ಹಚ್ಚಲು ತನಿಖೆಗೆ ಆದೇಶಿಸಿದ್ದಾರೆ ಎಚ್‌ಡಿಕೆ.

ಈಗಾಗಲೇ ಪ್ರಧಾನ ಮಂತ್ರಿ ಮೋದಿಯವರು ರಾಷ್ಟ್ರೀಯ ಪರಿಹಾರ ನಿಧಿಯಿಂದ ಮೃತರ ಕುಟುಂಬಸ್ಥರಿಗೆ 2 ಲಕ್ಷ ರೂ. ಹಾಗೂ ಗಾಯಾಳುಗಳಿಗೆ 50 ಸಾವಿರ ರೂ. ಪರಿಹಾರ ಘೋಷಿಸಿದ್ದಾರೆ.

ಆಗಿದ್ದೇನು?: ಟನ್‌ಗಳಷ್ಟು ಕರಗಿದ ಲೋಹವಿದ್ದ ದೊಡ್ಡ ಗಾತ್ರದ ಬಕೆಟ್ ಉರುಳಿ ಬಿದ್ದಿದೆ. ಕರಗಿದ ಉಕ್ಕು ಕೆಳಗೆ ಬೀಳುವ ಕೆಲವೇ ಕ್ಷಣಗಳ ಮೊದಲು ಸ್ಫೋಟ ಸಂಭವಿಸಿದೆ. ಇದರಿಂದ ಸ್ಥಾವರದ ಉಕ್ಕಿನ ಕರಗುವ ಕೇಂದ್ರ ಸಂಖ್ಯೆ 1 ರಲ್ಲಿ ದೊಡ್ಡ ಪ್ರಮಾಣದ ಬೆಂಕಿ ಹೊತ್ತಿಕೊಂಡಿದೆ. ಪರಿಣಾಮ ಕಾರ್ಮಿಕರು ಸಜೀವ ದಹನಗೊಂಡಿದ್ದಾರೆ. ಅಲ್ಲದೆ ಈ ಘಟನೆಯಲ್ಲಿ ಹಲವರಿಗೆ ತೀವ್ರ ಸುಟ್ಟ ಗಾಯಗಳಾಗಿದ್ದು, ಅವರನ್ನು ವಿವಿಧ ಆಸ್ಪತ್ರೆಗಳಿಗೆ ಸಾಗಿಸಲಾಗಿದೆ. ಕನಿಷ್ಠ ಆರು ಕಾರ್ಮಿಕರು ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ.

ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಈ ಅವಘಡದ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ಜಿಲ್ಲಾಧಿಕಾರಿ ಮತ್ತು ಪೊಲೀಸ್ ಆಯುಕ್ತರೊಂದಿಗೆ ಮಾತನಾಡಿ, ಸಂತ್ರಸ್ತರ ಕುಟುಂಬಗಳಿಗೆ ಸಹಾಯ ಮಾಡುವಂತೆ ನಿರ್ದೇಶಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಮತ್ತು ವೈಎಸ್‌ಆರ್‌ಸಿಪಿ ಅಧ್ಯಕ್ಷ ವೈ.ಎಸ್ ಜಗನ್ ಮೋಹನ್ ರೆಡ್ಡಿಯವರು ಕೂಡ ಘಟನೆಯ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಸಮಗ್ರ ತನಿಖೆಗೆ ಒತ್ತಾಯಿಸಿದ್ದು, ಹೊಣೆಗಾರರಾಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಇನ್ನು ಎಲ್ಲ ಕೈಗಾರಿಕಾ ಸಂಸ್ಥೆಗಳಲ್ಲಿ ಕಾರ್ಮಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಭವಿಷ್ಯದಲ್ಲಿ ಇಂತಹ ದುರಂತಗಳನ್ನು ತಪ್ಪಿಸಲು ಸುರಕ್ಷತಾ ಮಾನದಂಡಗಳು ಮತ್ತು ತಡೆಗಟ್ಟುವ ಕ್ರಮಗಳನ್ನು ಅನುಷ್ಠಾನಗೊಳಿಸುವಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು ಎಂದು ಹೇಳಿದರು. ಇನ್ನು 2012ರ ಜೂನ್‌ನಲ್ಲಿ ಸಹ ಉಕ್ಕು ಕರಗಿಸುವ ಘಟಕ ಸಂಖ್ಯೆ 3ರಲ್ಲಿ ಹೊಸದಾದ ಆಮ್ಲಜನಕ ಸ್ಥಾವರ ಸ್ಫೋಟಗೊಂಡು 16 ಕಾರ್ಮಿಕರು ಸಾವನ್ನಪ್ಪಿದ್ದರು. ಅಧಿಕಾರಿಗಳು ಆಮ್ಲಜನಕ ಸ್ಥಾವರದ ಪ್ರಾಯೋಗಿಕ ಪರೀಕ್ಷೆ ನಡೆಸುತ್ತಿದ್ದಾಗ ಸ್ಫೋಟ ಸಂಭವಿಸಿತ್ತು.

Deva
the authorDeva

Leave a Reply

error: Content is protected !!
Latest news
ಕೆ.ಆರ್.ಮಾರುಕಟ್ಟೇಲಿ ಅಗ್ನಿ ಅವಘಡ ತಡೆಗೆ ಫೈರ್ ಆಡಿಟ್: ಮುಖ್ಯ ಆಯುಕ್ತ ಮಹೇಶ್ವರ್ ರಾವ್ KSRTC ಫ್ರೀ ಬಸ್‌ಪಾಸ್‌ ಈ ತಿಂಗಳು ಸಿಗುವುದು ಡೌಟ್‌- ನಿತ್ಯ ಹಣಕೊಟ್ಟು ಓಡಾಡುತ್ತಿರುವ ವಿದ್ಯಾರ್ಥಿಗಳ ಗೋಳು ಕೇಳುವವರು... ಉಕ್ಕು ಸ್ಥಾವರ ದುರಂತ: ಮೃತರ ಕುಟುಂಬಕ್ಕೆ 25 ಲಕ್ಷ ರೂ. ಗಾಯಗೊಂಡವರಿಗೆ 10 ಲಕ್ಷ ರೂ. ಪರಿಹಾರ: ಕೇಂದ್ರ ಸಚಿವ ಎಚ್‌ಡಿಕ... ಗೃಹಲಕ್ಷ್ಮಿ ಹಣ ಪಡೆಯಲು 5 ರೂ.ಪಾವತಿಸಿ ಬಯೋಮೆಟ್ರಿಕ್ ನೀಡುವುದು ಕಡ್ಡಾಯ: 20 ದಿನದೊಳಗೆ ಬಯೋಮೆಟ್ರಿಕ್ ಜಾರಿ 3,991 ಪೊಲೀಸ್‌ ಕಾನ್‌ಸ್ಟೆಬಲ್‌ (ಸಿವಿಲ್‌) ಹುದ್ದೆಗೆ ಅರ್ಜಿ ಆಹ್ವಾನ- ಕೊನೇದಿನ ಜು.3 ಡಿಸಿಎಂ ಸೇರಿ 13 ಸಚಿವರಿಗೆ ವಿಧಾನಸೌಧ, ವಿಕಾಸಸೌಧದಲ್ಲಿ ಕಚೇರಿ ಹಂಚಿಕೆ ಮಾಡಿ ಆಡಳಿತ ಸುಧಾರಣೆ ಇಲಾಖೆ ಆದೇಶ ಇದುವರೆಗೂ ನಡೆಸಿರುವ ಹೋರಾಟ ವ್ಯರ್ಥವಾಗಲು ಬಿಡುವುದಿಲ್ಲ: ಕೇಂದ್ರ ಸರ್ಕಾರದ ವಿರುದ್ಧ EPS ನಿವೃತ್ತರು ಆಕ್ರೋಶ ರಾತ್ರಿ ಘಟಕದ ಹೊರಗೆ ರಸ್ತೆ ಬದಿ ನಿಲ್ಲಿಸಿದ್ದ KSRTC ಬಸ್‌ ಕದ್ದು ಅಪಘಾತ ಎಸಗಿ 1.5 ಕಿಮೀ ದೂರದಲ್ಲಿ ಬಿಟ್ಟು ಪರಾರಿಯಾ... KSRTC ಬಸ್ – ಲಾರಿ ನಡುವೆ ಭೀಕರ ಅಪಘಾತ- ಸಣ್ಣಪುಟ್ಟ ಗಾಯದೊಂದಿಗೆ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು KKRTC: ಜೂ.14ರೊಳಗೆ ಡ್ಯೂಟಿ ರೋಟಾ ಬ್ಲಾಕ್ ಪ್ರದರ್ಶಿಸಿ, ಜೂ.18ರೊಳಗೆ ಜೇಷ್ಠತಾ ಪಟ್ಟಿ ಅಂತಿಮಗೊಳಿಸಿ-ಡಿಸಿಗಳಿಗೆ ಸೂಚನ...