CRIMENEWSVideosನಮ್ಮರಾಜ್ಯ

KSRTC ದೊಡ್ಡಬಳ್ಳಾಪುರ ಘಟಕದ ಚಾಲಕ ಕಂ ನಿರ್ವಾಹಕನಿಗೆ ₹15 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟ ನೌಕರ ಸುರೇಶ್‌ ಬಾಬು, ಮತ್ತೊಬ್ಬ ಸಿಬ್ಬಂದಿ ಕಿರುಕುಳ: ಆರೋಪ

ವಿಜಯಪಥ ಸಮಗ್ರ ಸುದ್ದಿ

ದೊಡ್ಡಬಳ್ಳಾಪುರ: KSRTC ದೊಡ್ಡಬಳ್ಳಾಪುರ ಘಟಕದ ಚಾಲಕ ಕಂ ನಿರ್ವಾಹಕ ಹನುಮಂತರಾಯ ಜಳಕಿ ಎಂಬುವರಿಗೆ ಡೀಸೆಲ್‌ ವಿಭಾಗದ ನೌಕರ ಸುರೇಶ್‌ ಬಾಬು ಮತ್ತು ಇನ್ನೊಬ್ಬ ಸಿಬ್ಬಂದಿ ಲಂಚಕ್ಕೆ ಬೇಡಿಕೆ ಇಟ್ಟು ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಅಲ್ಲದೆ ಈ ಸಂಬಂಧ ಹನುಮಂತರಾಯ ಜಳಕಿ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಮುಂದಾಗಿದ್ದರು. ಈ ವಿಷಯ ತಿಳದ ಕೂಡಲೇ ಘಟಕ ವ್ಯವಸ್ಥಾಪಕರು ಸ್ಥಳಕ್ಕೆ ಹೋಗಿ ಆತನ ರಕ್ಷಣೆ ಮಾಡಿ ಬಳಿಕ ಅವರ ಮನೆಯವರೆಗೂ ಹೋಗಿ ಬಿಟ್ಟು ಬಂದಿದ್ದಾರೆ.

ಇದು ಕಳೆದ ಶನಿವಾರ ಅಂದರೆ ಜೂನ್‌ 21ರ ಸಂಜೆ ಘಟನೆ ನಡೆದಿತ್ತು. ಪಾಪ ಘಟಕ ವ್ಯವಸ್ಥಾಪಕರು ರಾತ್ರಿ 9 ಗಂಟೆವರೆಗೂ ಆತನಿಗೆ ಬುದ್ದಿ ಹೇಳಿ ಮನೆ ತನಕ ಹೋಗಿ ಬಿಟ್ಟು ಬಂದಿದ್ದಾರೆ. ಈ ವೇಳೆ ಹನುಮಂತರಾಯ ಜಳಕಿಯ ಪತ್ನಿಗೂ ಈತನಿಗೆ ಬುದ್ದಿ ಹೇಳಿ ಮದ್ಯಪಾನವನ್ನು ಬಿಡುವಂತೆ ನೋಡಿಕೊಳ್ಳಿ ಎಂದು ಸಲಹೆ ನೀಡಿ ಬಂದಿದ್ದಾರೆ.

ಈ ನಡುವೆ ಘಟಕದ ಡೀಸೆಲ್‌ ವಿಭಾಗದಲ್ಲಿ ಡ್ಯೂಟಿ ಮಾಡುತ್ತಿರುವ ಕಿರಾತಕ ಸುರೇಶ್‌ ಬಾಬು ಎಂಬಾತ ನನಗೆ ಭಾರಿ ಕಿರುಕುಳ ಕೊಡುತ್ತಿದ್ದಾನೆ ಈತನ ಜತೆಗೆ ಒಬ್ಬ ಸಂಚಾರ ಸಿಬ್ಬಂದಿಕೂಡ ಸೇರಿಕೊಂಡಿದ್ದು, ಈಗಾಗಲೇ ನಾನು 5 ಸಾವಿರ ರೂಪಾಯಿ ಲಂಚಕೊಟ್ಟಿದ್ದೇನೆ.

ಇಷ್ಟಾದರೂ ಮತ್ತೆ ನಿನಗೆ ಕೆಲಸ ಕಾಯಂ ಆಗಿರುವ ಪ್ರಮಾಣಪತ್ರ ಕೊಡಬೇಕಾದರೆ ನೀನು 15 ಸಾವಿರ ರೂಪಾಯಿಯನ್ನು ಕೊಡಬೇಕು ಎಂದು ಪೀಡಿಸಿದ್ದಾನೆ. ಅದನ್ನು ಕೊಡದೆ ಇರುವುದಕ್ಕೆ ಈಗ ನನ್ನನ್ನು ದೊಡ್ಡಬಳ್ಳಾಪುರ ಘಟಕದಿಂದ ವರ್ಗಾವಣೆ ಮಾಡಿಸಿದ್ದಾನೆ ಎಂಬ ಆರೋಪವನ್ನು ಹನುಮಂತರಾಯ ಜಳಕಿ ಮಾಡಿದ್ದಾರೆ.

ಈ ನಡುವೆ ದೊಡ್ಡಬಳ್ಳಾಪುರ ಘಟಕದ ಘಟಕ ವ್ಯವಸ್ಥಾಪಕ ವೆಂಕಟ ರಾಘವ್‌ ಅವರು ತುಂಬ ಒಳ್ಳೆಯವರು ಅವರಿಂದ ನನಗೆ ಯಾವುದೇ ಕಿರುಕುಳವಾಗಿಲ್ಲ. ಆದರೆ ಈ ಸುರೇಶ್‌ ಬಾಬು ಮತ್ತೊಬ್ಬ ಸಿಬ್ಬಂದಿ ಸೇರಿಕೊಂಡು ನನಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಎಲ್ಲ ಆರೋಪಗಳನ್ನು ಮಾಡಿ ಜತೆಗೆ ಫೋನ್‌ನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಿಡಿಯೋ ಮಾಡಿ ರೈಲಿಗೆ ತಲೆ ಕೊಡುವುದಕ್ಕೆ ಜೂನ್‌ 21ರಂದು ಹೋಗಿದ್ದರು. ಸದ್ಯ ಡಿಎಂ ವೆಂಕಟ ರಾಘವ್‌ ಅವರು ಹೋಗಿ ಜೀವ ಉಳಿಸಿದ್ದಾರೆ.

ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಿಜಯಪಥ ಕಚೇರಿಗೆ ಫೋನ್‌ ನಂಬರ್‌ಗೆ ಚಾಲಕ ಜಳಕಿ ವಾಟ್ಸ್‌ಆಪ್‌ ಮಾಡಿದ್ದರೂ ಅದನ್ನು ನೋಡಿದ ಕೂಡಲೇ ಸಂಪಾದಕರು ಡಿಎಂ ಅವರಿಗೆ ಫೋನ್‌ ಕರೆ ಮಾಡಿ ಮಾಹಿತಿ ನೀಡಿದ್ದರು. ಬಳಿಕ ಡಿಎಂ ಅವರು ಎಲ್ಲವು ತಕ್ಕ ಮಟ್ಟಿಗೆ ಸರಿಯಾಗಿದೆ ನಾವು ಅವರ ಮನೆಯವರೆಗೂ ಹೋಗಿ ಬಿಟ್ಟು ಬಂದಿದ್ದೇವೆ ಎಂದು ತಿಳಿಸಿದ್ದರು.

ಆದರೆ ಇಂದು ಮತ್ತೆ ಚಾಲಕ ಕಂ ನಿರ್ವಾಹಕ ಜಲಕಿಗೆ ಈ ಸುರೇಶ್‌ ಬಾಬು ಮತ್ತೊಬ್ಬ ಸಿಬ್ಬಂದಿ ಕಿರುಕುಳ ಕೊಡುತ್ತಿದ್ದಾರೆ ಎಂದು ವಿಡಿಯೋ ಮಾಡಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ಹೀಗಾಗಿ ಈ ಬಗ್ಗೆ ಸಂಬಂಧಟ್ಟ ಮೇಲಧಿಕಾರಿಗಳು ಚಾಲಕ ಕಂ ನಿರ್ವಾಹಕನಿಗೆ ಆಗುತ್ತಿರುವ ಕಿರುಕುಳನ್ನು ತಪ್ಪಿಸಬೇಕು ಜತೆಗೆ ಕಿರುಕುಳ ನೀಡುತ್ತಿರುವ ನೌಕರರ ಸಿಬ್ಬಂದಿಯನ್ನು ಕೂಡಲೆ ಅಮಾನತು ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

Megha
the authorMegha

Leave a Reply

error: Content is protected !!