NEWSನಮ್ಮಜಿಲ್ಲೆ

ರಾಜಕಾಲುವೆ ಒತ್ತುವರಿ ತೆರವಿಗೆ ತಹಸೀಲ್ದಾರ್‌ಗಳು ತುರ್ತು ಆದೇಶ ಹೊರಡಿಸಿ: ತುಷಾರ್ ಗಿರಿನಾಥ್

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ನಗರದ ತಗ್ಗು ಮತ್ತು ಸೂಕ್ಷ್ಮ ಪ್ರದೇಶಗಳಲ್ಲಿ ಮಳೆಯಿಂದ ಪ್ರವಾಹವನ್ನು ತಡೆಗಟ್ಟಬೇಕಾಗಿರುವ ಸ್ಥಳಗಳಲ್ಲಿ ಒತ್ತುವರಿ ಕಂಡುಬಂದಲ್ಲಿ ಭೂ ಮಾಪಕರು ಆದ್ಯತೆಯ ಮೇರೆಗೆ ಸರ್ವೆ ಕಾರ್ಯ ಕೈಗೊಂಡು ಅಂತಹ ಪ್ರಕರಣಗಳಿಗೆ ತಹಸೀಲ್ದಾರ್‌ಗಳು ತುರ್ತಾಗಿ ಒತ್ತುವರಿ ತೆರವು ಆದೇಶವನ್ನು ಹೊರಡಿಸಲು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸೂಚನೆ ನೀಡಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಗೆ ಸಂಬಂಧಿಸಿದಂತೆ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಭೂ ಮಾಪನ ಕಾರ್ಯವನ್ನು ಶಿಸ್ತಿನಿಂದ ಹಾಗೂ ಗ್ರಾಮ ನಕ್ಷೆ ಮತ್ತು ಟಿಪ್ಪಣಿಗಳ ಅನ್ವಯ ಯಾವುದೇ ವ್ಯತ್ಯಾಸವನ್ನು ಮಾಡದೆ ಸಂಬಂಧಪಟ್ಟ ಭೂ ಮಾಪಕರು ನಕ್ಷೆಯನ್ನು ಸಿದ್ಧಪಡಿಸಿ ತಹಶೀಲ್ದಾರ್ ರವರು ಆದೇಶವನ್ನು ಜಾರಿಮಾಡಿ ಆರ್.ಫಿ.ಎ.ಡಿ ಅಂಚೆಯ ಮುಖಾಂತರ ಸಹ ಸ್ವೀಕೃತಿಯನ್ನು ಪಡೆಯಲು ನಿರ್ದೇಶನ ನೀಡಿದರು.

ಬೆಂಗಳೂರು ಉತ್ತರ ತಾಲೂಕು ಯಲಹಂಕ ವಿಧಾನಸಭಾ ಕ್ಷೇತ್ರ ಸಂಬಂಧಿಸಿದಂತೆ 86 ಸರ್ವೆ ನಂಬರ್‌ಗಳಲ್ಲಿ ಒತ್ತುವರಿಗಳು ಇದ್ದು, ಅವುಗಳಲ್ಲಿ 86 ಸರ್ವೆ ನಂಬರ್‌ಗಳಲ್ಲಿ ಭೂ ಮಾಪನ ಮಾಡಲಾಗಿದೆ. ಈ ಪೈಕಿ ತಹಶಿಲ್ದಾರ್‌ರವರು 60 ಸರ್ವೆ ನಂಬರ್‌ಗಳಿಗೆ ಒತ್ತುವರಿ ತೆರವು ಆದೇಶಗಳನ್ನು ಹೊರಡಿಸಿದ್ದು, ಸಂಬಂಧಪಟ್ಟ ಪಾಲಿಕೆಯ ಅಧಿಕಾರಿಗಳು ನೋಟೀಸ್ ಜಾರಿಮಾಡಿದ ಒತ್ತುವರಿಗಳನ್ನು ಕೂಡಲೆ ತೆರವುಗೊಳಿಸಲು ಸೂಚಿಸಿದರು. ಜೊತೆಗೆ ಉಳಿದ 26 ಸರ್ವೆ ನಂಬರ್‌ಗಳಿಗೆ ಫೆ. 10 ರೊಳಗಾಗಿ ಒತ್ತುವರಿ ಆದೇಶಗಳನ್ನು ಹೊರಡಿಸಲು ನಿರ್ದೇಶಿಸಿದರು.

ಮಹದೇವಪುರ ವಲಯಕ್ಕೆ ಸಂಬಂಧಿಸಿದಂತೆ, ಹಾಲಿ 130 ಸರ್ವೆ ನಂಬರ್‌ಗಳಲ್ಲಿ ಒತ್ತುವರಿಗಳಿದ್ದು, ಹೊಸದಾಗಿ 159ಸರ್ವೆ ನಂಬರ್‌ಗಳಲ್ಲಿ ಒತ್ತುವರಿಗಳು ಗುರುತಿಸಲಾಗಿದೆ. ಈ ಪೈಕಿ ಒಟ್ಟು 289 ಸರ್ವೆ ನಂಬರ್‌ಗಳಲ್ಲಿ ಒತ್ತುವರಿ ಇರುವುದು ಕಂಡುಬಂದಿರುತ್ತದೆ. ಇವುಗಲ್ಲಿ ಇಲ್ಲಿಯವರೆಗೆ 81 ಸಂಖ್ಯೆಯ ಸರ್ವೇ ನಂಬರ್ ಗಳಲ್ಲಿ ಎಲ್ಲಾ ಒತ್ತುವರಿಯನ್ನು ತೆರವುಗೊಳಿಸಲಾಗಿರುತ್ತದೆ.

ಅದರಲ್ಲಿ 157 ಸರ್ವೆ ನಂಬರ್‌ಗಳನ್ನು ಭೂ ಮಾಪನ ಮಾಡಲಾಗಿದ್ದು, ತಹಸೀಲ್ದಾರ್‌ ಅವರು 131 ಸರ್ವೆ ನಂಬರ್‌ಗಳಿಗೆ ಒತ್ತುವರಿ ತೆರವು ಆದೇಶಗಳನ್ನು ಹೊರಡಿಸಲಾಗಿದೆ. ಸಂಬಂಧ ಪಟ್ಟ ಅಧಿಕಾರಿಗಳು ನೋಟೀಸ್ ಜಾರಿಮಾಡಿದ ಒತ್ತುವರಿಗಳನ್ನು ಕೂಡಲೆ ತೆರವುಗೊಳಿಸಲು ಸೂಚಿಸಿದರು. ಜೊತೆಗೆ ಉಳಿದ 146(62 ಪ್ರಕರಣಗಳು ಉಚ್ಛನ್ಯಾಯಾಲಯದಲ್ಲಿ ದಾಖಲಾಗಿರುತ್ತದೆ) ಸರ್ವೆ ನಂಬರ್‌ಗಳ ಒತ್ತುವರಿ ಆದೇಶಗಳನ್ನು ಸಂಬಂಧಪಟ್ಟ ತಹಸೀಲ್ದಾರ್ ಅವರು ಆದ್ಯತೆಯ ಮೇರೆಗೆ ಆದೇಶವನ್ನು ಹೊರಡಿಸಲು ನಿರ್ದೇಶಿಸಿದರು.

ಬೊಮ್ಮನಹಳ್ಳಿ ವಲಯಕ್ಕೆ ಸಂಬಂಧಿಸಿದಂತೆ, ಹಾಲಿ 9 ಸರ್ವೆ ನಂಬರ್‌ಗಳಲ್ಲಿ ಒತ್ತುವರಿಗಳಿದ್ದು, ಇದರ ಪೈಕಿ 8 ಸರ್ವೆ ನಂಬರ್‌ಗಳನ್ನು ಭೂ ಮಾಪನ ಮಾಡಲಾಗಿದೆ. ತಹಶಿಲ್ದಾರ್‌ರವರು 1 ಸರ್ವೆ ನಂಬರ್‌ಗೆ ಒತ್ತುವರಿ ತೆರವು ಆದೇಶಗಳನ್ನು ನೀಡಿರುತ್ತಾರೆ. ಆರ್.ಆರ್.ನಗರ ವಲಯಕ್ಕೆ ಸಂಬಂಧಿಸಿದಂತೆ, ಹಾಲಿ 35 ಸರ್ವೆ ನಂಬರ್‌ಗಳಲ್ಲಿ ಒತ್ತುವರಿಗಳಿದ್ದು, ಈ ಪೈಕಿ 32 ಸರ್ವೆ ನಂಬರ್‌ಗಳನ್ನು ಭೂ ಮಾಪನ ಮಾಡಲಾಗಿದೆ. ತಹಸೀಲ್ದಾರ್‌ ಅವರು 3 ಸರ್ವೆ ನಂಬರ್‌ಗಳಿಗೆ ಒತ್ತುವರಿ ತೆರವು ಆದೇಶಗಳನ್ನು ನೀಡಿದ್ದು, 2 ಒತ್ತವರಿಗಳನ್ನು ತೆರವುಗೊಳಿಸಲಾಗಿದೆ. ಉಳಿದ 32 ಸರ್ವೆ ನಂಬರ್‌ಗಳ ಒತ್ತುವರಿಗಳಿಗೆ ಫೆ. 10 ರೊಳಗಾಗಿ ಆದೇಶವನ್ನು ಹೊರಡಿಸಲು ನಿರ್ದೇಶಿಸಿದರು.

ದಾಸರಹಳ್ಳಿ ವಲಯದಲ್ಲಿ 124 ಸರ್ವೆ ನಂಬರ್, ಪಶ್ಚಿಮ ವಲಯದಲ್ಲಿ 6 ಸರ್ವೆ ನಂಬರ್, ಪೂರ್ವ ವಲಯದಲ್ಲಿ 90 ಸರ್ವೆ ನಂಬರ್‌ಗಳಲ್ಲಿ ಭೂ ಮಾಪನ ಮಾಡಲಾಗಿದ್ದು, ಅವುಗಳ ಒತ್ತುವರಿ ತೆರವು ಆದೇಶವನ್ನು ದಿನಾಂಕ: 15-02-2023 ರೊಳಗೆ ತಹಸೀಲ್ದಾರ್ ಅವರು ಆದೇಶವನ್ನು ಹೊರಡಿಸಲು ಸೂಚಿಸಿದರು.

ಸಭೆಯಲ್ಲಿ ಸರ್ವೇ ಸ್ಟೇಟ್ಮೆಂಟ್ ಮತ್ತು ಲ್ಯಾಂಡ್ ರೆಕಾರ್ಡ್ಸ್ ಆಯುಕ್ತ ಮುನೀಶ್ ಮೌದ್ಗಿಲ್, ವಿಶೇಷ ಆಯುಕ್ತ ಡಾ. ತ್ರಿಲೋಕ್ ಚಂದ್ರ, ಪಿ.ಎನ್.ರವೀಂದ್ರ, ರೆಡ್ಡಿ ಶಂಕರ ಬಾಬು, ಡಾ. ಹರೀಶ್ ಕುಮಾರ್, ಪ್ರೀತಿ ಗೆಹ್ಲೋಟ್, ಉಪ ಆಯುಕ್ತ ರಾಹುಲ್ ಶರಣಪ್ಪ ಸಂಕನೂರ್, ಎಲ್ಲ ವಲಯ ಜಂಟಿ ಆಯುಕ್ತರು, ರಾಜಕಾಲುವೆ ವಿಭಾಗದ ಮುಖ್ಯ ಅಭಿಯಂತರ ಬಸವರಾಜ್ ಕಬಾಡೆ, ಎಲ್ಲ ವಲಯ ಮುಖ್ಯ ಅಭಿಯಂತರರು, ಕಾರ್ಯಪಾಲಕ ಅಭಿಯಂತರರು ಹಾಗೂ ಇನ್ನಿತರ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

error: Content is protected !!
LATEST
KSRTC ಬಸ್‌ ರಿಪೇರಿ ಮಾಡಿದ ಖರ್ಚಿನ ಬಿಲ್‌ನಲ್ಲಿ ಸ್ಕ್ರಾಪ್‌ನ ಹಣ ತೋರಿಸದೆ ಗುಳುಂ: ಕ್ರಮಕ್ಕಾಗಿ ಎಂಡಿಗೆ ದೂರು 160 ಕ್ಯಾಬಿನೆಟ್ ಸೆಕ್ರೆಟರಿಯೇಟ್, ಡೆಪ್ಯೂಟಿ ಫೀಲ್ಡ್ ಆಫೀಸರ್ ಹುದ್ದೆಗಳಿಗೆ ಕೂಡಲೇ ಅರ್ಜಿ ಹಾಕಿ ಮುನಿರತ್ನಗೆ ಜಾಮೀನು ಮಂಜೂರು ಮಾಡಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಹೋರಾಟ ಪಂಜಾಬ್, ಹರಿಯಾಣ ರೈತರದಷ್ಟೇ ಎಂಬಂತೆ ಬಿಂಬಿಸುವ ಸುಪ್ರೀಂ ಆದೇಶ ಪುನರ್ ಪರಿಶೀಲಿಸಿ: ಕುರುಬೂರ್‌ ಶಾಂತಕುಮಾರ್ KSRTC ಅಧಿಕಾರಿಗಳು-ನೌಕರರಲ್ಲಿ, ನೌಕರರು-ನೌಕರರಲ್ಲೇ ಒಗ್ಗಟ್ಟಿಲ್ಲಕ್ಕೆ ಈ ಸ್ಥಿತಿ: NWKRTC ನಿಗಮದ ಅಧ್ಯಕ್ಷ ಭರಮಗೌಡ KSRTC ನೌಕರರ ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿ ಬೇಗ ಕೊಟ್ಟರೆ ನನಗೂ ಸಮಾಧಾನ: ಸಚಿವ ರಾಮಲಿಂಗಾ ರೆಡ್ಡಿ KSRTC-ನಮ್ಮ ಸರ್ಕಾರ ಸರಿ ಸಮಾನ ವೇತನ ಕೊಡುತ್ತದೆ ನೆಮ್ಮದಿಯಾಗಿರಿ: ಕಾಂಗ್ರೆಸ್‌ ಪ್ರಣಾಳಿಕೆ ಸಮಿತಿ ಉಪಾಧ್ಯಕ್ಷ ರಾಧಾಕೃ... KSRTC: ಅಗ್ರಿಮೆಂಟ್‌ ಎಂಬ ಸೆಟಲ್‌ಮೆಂಟ್‌ ಭೂತವನ್ನು ಬುಡಸಮೇತ ಕಿತ್ತೊಗೆಯಬೇಕು - ವಕೀಲ ನಟರಾಜ ಶರ್ಮಾ ವೇತನ ಸಂಬಂಧ 4ವರ್ಷಕ್ಕೊಮ್ಮೆ ಆಗುವ ಅಗ್ರಿಮೆಂಟ್‌ ಬೇಡ ಕೊಟ್ಟ ಭರವಸೆ ಈಡೇರಿಸಿ: ಸಾರಿಗೆ ಸಚಿವರಿಗೆ ಚಂದ್ರು ಒತ್ತಾಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ 247 ಹುದ್ದೆಗಳಿಗೆ ಅರ್ಜಿ ಆಹ್ವಾನ: 3 ವರ್ಷ ವಯಸ್ಸಿನ ಸಡಿಲಿಕೆ, ಡಿಗ್ರಿ ಅರ್ಹತೆ