Please assign a menu to the primary menu location under menu

NEWSನಮ್ಮಜಿಲ್ಲೆನಮ್ಮರಾಜ್ಯ

ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್ಯಾತೆ ಏಕೆ?

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಅಧಿಕಾರಿಗಳು-ನೌಕರರಿಗೆ ಸರ್ಕಾರಿ ನೌಕರರಿಗೆ ಸರಿ ಸಮಾನ ವೇತನ ಕೊಡುವ ಸಂಬಂಧ ಕಳೆದ 2020ಕ್ಕೂ ಹಿಂದೆಯೇ ಅಂದಿನ ಸರ್ಕಾರ ನಿರ್ಧರಿಸಿತ್ತು. ಆದರೆ, ಅಂದಿನ ಬಿಜೆಪಿ ಸರ್ಕಾರದ ಮತ್ತು ನಿಗಮ ಮಂಡಳಿಗಳ ದಾರಿ ತಪ್ಪಿಸಿ ಇಲ್ಲ ಅಗ್ರಿಮೆಂಟ್‌ ಮಾಡಿದರೆ ನಿಮಗೆ ಈ ರೀತಿ ಲಾಭವಾಗುತ್ತದೆ ಎಂದು ಕಿವಿವೂದಿ ಮುಖ್ಯಮಂತ್ರಿಗಳು ಮತ್ತು ಸಾರಿಗೆ ಸಚಿವರ ದಾರಿ ತಪ್ಪಿಸಿದ್ದರು ಕೆಲ ಸಂಘಟನೆಗಳ ಮುಖಂಡರು.

ಸರ್ಕಾರದ ಪ್ರತಿನಿಧಿಯಾಗಿ ಅಂದಿನ ಸಾರಿಗೆ ಸಚಿವರೇ ನಿಮ್ಮನ್ನು ಸರ್ಕಾರಿ ನೌಕರರಾಗಿ ಪರಿಗಣಿಸಲು ಸಾಧ್ಯವಿಲ್ಲ. ಆದರೆ, ವೇತನ ಆಯೋಗದಂತೆ ವೇತನ ನೀಡುವ ಮೂಲಕ ನಿಮಗೆ ಸರ್ಕಾರಿ ನೌಕರರಿಗೆ ಸರಿ ಸಮಾನ ವೇತನ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದ್ದರು.

ಆದರೆ, ಆ ಭರವಸೆಯನ್ನು ಅಂದಿನ ಸರ್ಕಾರ ಈಡೇರಿಸಲೇ ಇಲ್ಲ. ಈಗ ಸರ್ಕಾರ ಬದಲಾಗಿದ್ದು ರಾಜ್ಯದಲ್ಲಿ ಇರುವ ಕಾಂಗ್ರೆಸ್‌ ಸರ್ಕಾರ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಕೊಡುವುದಾಗಿ ಘೋಷಣೆ ಮಾಡಿದೆ. ಆದರೆ ಈಗಲೂ ಕೂಡ ಕೆಲ ಮುಖಂಡರು ಅದಕ್ಕೆ ಅಡ್ಡಗಾಲು ಹಾಕುತ್ತಿದ್ದಾರೆ.

ಈಗ ವೇತನ ಆಯೋಗದಂತೆ ನಮಗೆ ಸರಿ ಸಮಾನ ವೇತನ ಬೇಕೇಬೇಕು ಎಂದು ಸಮಸ್ತ ಸಾರಿಗೆ ಅಧಿಕಾರಿಗಳು- ನೌಕರರು ಈಗಾಗಲೇ ಸಂಬಂಧಟ್ಟ ಸಚಿವರು ಅಧಿಕಾರಿಗಳಿಗೆ ಲಿಖಿತವಾಗಿ ಮನವಿ ಸಲ್ಲಿಸಿದ್ದಾರೆ. ಆದರೆ, ಅಳವಡಿಸುವುದಕ್ಕೆ ಅಡ್ಡಗಾಲು ಹಾಕುತ್ತಿರುವ ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳು ಈವರೆಗೂ ಅಧಿಕಾರಿಗಳು- ನೌಕರರ ಅಭಿಪ್ರಾಯವನ್ನೇ ಸಂಗ್ರಹಿಸಿಲ್ಲ. ಹೀಗಾಗಿ ಸರ್ಕಾರ ಕೂಡ ಅವರ ಬೇಡಿಕೆಗೆ ಸ್ಪಂದಿಸುತ್ತಿಲ್ಲ.

ಇನ್ನು ಅದನ್ನೂ ಬಿಡಿ ವೇತನ ಆಯೋಗ ಮಾದರಿ ಬೇಡ ಅಗ್ರಿಮೆಂಟ್‌ ಮೂಲಕವೇ ನಾವು ಸರ್ಕಾರಿ ನೌಕರರಿಗೆ ಸರಿ ಸಮಾನ ವೇತನವನ್ನು ನಿಮಗೆ ಕೊಡಿಸಿಯೇ ತೀರುತ್ತೇವೆ ಇದಕ್ಕೆ ನಾವು ಬದ್ಧ ಎಂದು ಹೇಳುವುದಕ್ಕೆ ಯಾರಾದರೂ ಜಂಟಿ ಮುಖಂಡರು ಮುಂದೆ ಬರುತ್ತಾರೆಯೇ? ಇಲ್ಲ ಅವರು ಶೇ.25ರಷ್ಟು ವೇತನ ಹೆಚ್ಚಳ ಮಾಡಲು ಶಿಫಾರಸು ಮಾಡಿರುವುದಾಗಿದೆ ಮೀಡಿಯಾಗಳ ಮುಂದೆ ಹೇಳಿಕೆ ನೀಡುತ್ತಿದ್ದಾರೆ ಅಷ್ಟೆ.

ಅಂದರೆ ಈ ಜಂಟಿ ಮುಖಂಡರಿಗೆ ಸಾರಿಗೆ ಅಧಿಕಾರಿಗಳು-ನೌಕರರು ಒಳ್ಳೆ ವೇತನ ಪಡೆಯುವುದು ಸ್ವಲ್ಪವೂ ಇಷ್ಟವಿಲ್ಲ. ಏಕೆಂದರೆ ನೌಕರರು ಒಳ್ಳೆ ವೇತನ ಪಡೆದರೆ ನಮ್ಮ ಸಂಘಟನೆಗಳ ಜತೆ ಸೇರುವುದಿಲ್ಲ ಜತೆಗೆ ಅಧಿಕಾರಿಗಳು – ನೌಕರರಲ್ಲಿ ಒಳ್ಳೆಯ ಬಾಂಧವ್ಯ ವೃದ್ಧಿಯಾಗಿ ಸರ್ಕಾರದ ಮಟ್ಟದಲ್ಲಿ ಅವರೇ ಮಾತನಾಡಿಕೊಂಡು ಸಮಸ್ಯೆಗಳನ್ನು ಬಗೆಹರಿಸಿಕೊಂಡು ಬಿಡುತ್ತಾರೆ. ಇನ್ನು ಮುಖ್ಯವಾಗಿ ಪಿಎಫ್‌ ಟ್ರಸ್ಟ್‌ನಲ್ಲೂ ನಾವು ಕಟ್ಟಿಯಾಡಿಸುವುದಕ್ಕೆ ಸಾಧ್ಯವುಲ್ಲ ಎಂಬ ಭಯ.

ಇಂಥವರ ಮಾತಿನಲ್ಲಿರುವ ವಿಷವನ್ನು ಅರಿಯದ ಮುಗ್ದ ಸಾರಿಗೆ ನೌಕರರು ಇವರನ್ನು ನಂಬಿ ಸರ್ಕಾರಿ ನೌಕರರಿಗಿಂತ ಹೆಚ್ಚು ವೇತನ ಪಡೆಯುತ್ತಿದ್ದವರು ಈಗ ಅವರಿಗಿಂತ ಶೇ.32-41ರಷ್ಟು ಕಡಿಮೆ ಪಡೆಯುವ ಹಂತಕ್ಕೆ ಬಂದು ನಿಂತಿದ್ದಾರೆ. ಇಷ್ಟೆಲ್ಲ ನೌಕರರಿಗೆ ಮೋಸ ಮಾಡಿರುವುದು ಗೊತ್ತಿದ್ದರೂ ಕೂಡ ಈಗಲೂ ನಾವು ನೌಕರರ ಪರ ಇದ್ದೇವೆ ಸರ್ಕಾರಕ್ಕೆ ಬಿಸಿ ಮುಟ್ಟಿಸುತ್ತೇವೆ ಎಂದು ನಂಬಿಸುವ ನಾಟಕವಾಡುತ್ತಿದ್ದಾರೆ ಈ ಜಂಟಿ ಕ್ರಿಯಾ ಸಮಿತಿಯ ಪದಾಧಿಕಾರಿಗಳು.

ಇನ್ನು ಸರಿ ಸಮಾನ ವೇತನ ಕೊಡಿಸುವುದಕ್ಕೆ ನಮ್ಮ ಕೈಯಲ್ಲಿ ಆಗುವುದಿಲ್ಲ ಆದರೆ ಅದಕ್ಕಿಂತ ಹೆಚ್ಚಿಗೆ ಕೊಡಿಸುವ ನಿಟ್ಟಿನಲ್ಲಿ ನಮ್ಮ ಹೋರಾಟ ನಡೆಯಲಿದೆ ಎಂದು ಹೇಳುತ್ತಿದ್ದಾರೆ. ಆದರೆ ಅಧಿಕಾರಿಗಳು-ನೌಕರರು ಮಾತ್ರ ನಮಗೆ ನೀವು ಹೆಚ್ಚು ವೇತನ ಕೊಡಿಸುವುದು ಬೇಡಸ್ವಾಮಿ ಸರಿ ಸಮಾನ ವೇತನ ಕೊಡಿಸಿ ಸಾಕು ಎಂದು ಹೇಳಿದ್ದಾರೆ.

ಆದರೆ, ಆ ನೌಕರರ ಬೇಡಿಕೆಯನ್ನು ಕೇಳಿಸಿಕೊಳ್ಳದೆ ಮಧ್ಯೆಮಧ್ಯೆ ಮೂಗುತೂರಿಸಿಕೊಂಡು ಬರುತ್ತಿದ್ದಾರೆ ಈ ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳು. ಇದು ಅಧಿಕಾರಿಗಳಿಗೆ-ನೌಕರರಿಗೆ ಸ್ವಲ್ಪವು ಇಷ್ಟವಾಗುತ್ತಿಲ್ಲ. ಜತೆಗೆ ಈಗ ಬಹುತೇಕ ಅಧಿಕಾರಿಗಳಿಗೂ ಕೂಡ ಅವರು ಹಿಂದೆ ಮಾಡಿದ ತಪ್ಪಿನ ಅರಿವಾಗಿದ್ದು ಮತ್ತದೆ ತಪ್ಪು ಮಾಡುವುದಕ್ಕೆ ಸಿದ್ದರಿಲ್ಲ ಎಂದು ಹೇಳುತ್ತಿದ್ದಾರೆ.

ಈ ನಡುವೆ ಅಧಿಕಾರಿಗಳು ಬರದಿದ್ದರೆ ನಾವು ಯಾವುದೇ ಕಾರಣಕ್ಕೂ ಹೋರಾಟಕ್ಕೆ ಇಳಿಯಬಾರದು ಎಂಬ ತಿಳಿವಳಿಕೆಯೂ ಬಹುತೇಕ ನೌಕರರಿಗೆ ಬಂದಿದೆ. ಆದ್ದರಿಂದ ನಿಮ್ಮ ತಂತ್ರ ಕುತಂತ್ರ ಈಗ ನಡೆಯುವುದಿಲ್ಲ. ನೀವು ಡಿ.9ಕ್ಕೆ ಕರೆ ಕೊಡಲು ಹೊರಟಿರುವುದನ್ನು ನೌಕರರು ಕೇಳಿಸಿಕೊಳ್ಳುವುದಕ್ಕೂ ಸಿದ್ಧರಿಲ್ಲ.

ಇನ್ನು ನಿಮ್ಮ ಹೋರಾಟ ಸತ್ಯವಾಗಿದ್ದರೆ ಅದನ್ನು ಅಧಿಕಾರಿಗಳು ನೌಕರರಿಗೆ ತಿಳಿಸಿ ನಂತರ ಅವರ ಬೆಂಬಲದಿಂದ ಮುನ್ನುಗ್ಗಿ ಅದನ್ನು ಬಿಟ್ಟು ತಮ್ಮ ತಮ್ಮ ಸಂಘಟನೆಗಳ ಉಳಿವಿಗಾಗಿ ಅಧಿಕಾರಿಗಳು – ನೌಕರರನ್ನು ಆರ್ಥಿಕವಾಗಿ ದಿವಾಳಿ ಮಾಡಲು ಹೊರಟಿದ್ದೀರಲ್ಲ ನಿಮಗೆ ಏನು ಹೇಳಬೇಕು.

ನೋಡಿ ಪ್ರಸ್ತುತ ಕಂಡಕ್ಟರ್‌ ಆಗಿರುವವರು ಶೇ.72ಕ್ಕೂ ಹೆಚ್ಚು ಅಂಕ ಪಡೆದವರು, ಉತ್ತಮ, ಅತ್ಯುತ್ತಮ ಅಂಕಪಡೆದು ಬಂದವರು. ಜತೆಗೆ ಪದವಿ, ಸ್ನಾತಕೋತ್ತರ ಪದವಿ ಪಡೆದಿರುವವರು ಇದ್ದಾರೆ. ಈಗ ಯಾರು ಹೆಬ್ಬೆಟ್ಟುಗಳಿಲ್ಲ ಅವರನ್ನು ನೀವು ಯಾಮಾರಿಸುವುದಕ್ಕೆ ಅಷ್ಟು ಸುಲಭವು ಈಗ ಇಲ್ಲ. ಆದ್ದರಿಂದ ಅಧಿಕಾರಿಗಳು ನೌಕರರಿಗೆ ಒಳ್ಳೆಯದನ್ನು ಮಾಡುವ ಮನಸ್ಸಿದ್ದರೆ ಮುಂದೆ ಬನ್ನಿ ಇಲ್ಲ ಅವರಪಾಡಿಗೆ ಅವರನ್ನು ಬಿಡಿ. ಇದು ಸಮಸ್ತ ಸಾರಿಗೆ ಅಧಿಕಾರಿಗಳು, ನೌಕರರ ಆಗ್ರಹ.

1 Comment

  • ಒಂದು ವೇಳೆ ಸರಿಸಮಾನ ವೇತನ ಮಾಡಿಬಿಟ್ಟರೆ ಈ ಮುದಿ ಗೂಬೆಗಳಿಗೆ ಸರ್ಕಾರದ ಹತ್ತಿರ ಚೌಕಶಿ ಮಾಡೋಕ್ಕೆ ಏನಿರುತ್ತೆ, ಮೊದಲೇ ಇವರು ನಿರುದ್ಯೋಗಿಗಳು, ತಮ್ಮನ್ನು ನಂಬಿರುವ ನೌಕರರಿಗೆ ಅನ್ಯಾಯ ಆದರೂ ಪರವಾಗಿಲ್ಲ ಇವರು ಚಾಲ್ತಿಯಲ್ಲಿ ಇರಬೇಕು ಅಷ್ಟೆ

Leave a Reply

error: Content is protected !!
LATEST
ಪತ್ನಿ ಅಕ್ರಮ ಸಂಬಂಧದಿಂದ ಪತಿ ಆತ್ಮಹತ್ಯೆ ಪ್ರಕರಣ: ಹೆಂಡತಿಗೆ ಶಿಕ್ಷಿಸಲಾಗದು - ಹೈ ಕೋರ್ಟ್ ತೀರ್ಪು ತುಮಕೂರು: ಗೋವಾಗೆ ಹೋಗುತ್ತಿದ್ದ ಬಸ್ ಪಲ್ಟಿ: ಮೂವರು ಮಹಿಳೆಯರು ಮೃತ ಮೈಸೂರು-ಮಂಡ್ಯ: ಮಳೆ ಹೆಚ್ಚಾಗಿರುವ ಹಿನ್ನೆಲೆ ಶಾಲೆಗಳಿಗೆ ರಜೆ- ಡಿಸಿಗಳ ಆದೇಶ ದೆಹಲಿ: ರೈತರು ಉಪವಾಸ ಸತ್ಯಾಗ್ರಹ ಬೆಂಬಲಿಸಿ ಡಿ.6ರಿಂದ ಬೆಂಗಳೂರಿನಲ್ಲೂ ಸತ್ಯಾಗ್ರಹ: ಕುರುಬೂರು ಶಾಂತಕುಮಾರ್ ರಾಜ್ಯದಲ್ಲಿ ವರುಣನ ಅಬ್ಬರ: ಹಲವು ಜಿಲ್ಲೆಗಳ ಶಾಲಾ- ಕಾಲೇಜುಗಳಿಗೆ ನಾಳೆ ರಜೆ ಕನ್ನಡ ಕಿರುತೆರೆಯ ಬ್ರಹ್ಮಗಂಟು ಸೀರಿಯಲ್ ಖ್ಯಾತಿಯ ಶೋಭಿತಾ ಶಿವಣ್ಣ ಆತ್ಮಹತ್ಯೆ KSRTC: 1308 ನೌಕರರ ವರ್ಗಾವಣೆ- ಆಕ್ಷೇಪಣೆ ಸಲ್ಲಿಸಲು ಡಿ.4ರವರೆಗೂ ಅವಕಾಶ ಸಾರಿಗೆ ನೌಕರರ ಬೇಡಿಕೆ ಅರ್ಥ ಮಾಡಿಕೊಳ್ಳಿ: ಜಂಟಿ ಕ್ರಿಯಾ ಸಮಿತಿಗೆ ನೌಕರನ ಒತ್ತಾಯ ಬಿಬಿಎಂಪಿ: 13 ಕೆರೆಗಳ ಒತ್ತುವರಿ ತೆರವು- ₹242.5 ಕೋಟಿ ಮೌಲ್ಯದ 7 ಎಕರೆ ಪ್ರದೇಶ ವಶ -ಪ್ರೀತಿ ಗೆಹ್ಲೋಟ್ ಫೆಂಗಲ್ ಚಂಡಮಾರುತದ ಪರಿಣಾಮ ಎಲ್ಲಾ ಅಧಿಕಾರಿಗಳು ಮುಂಜಾಗ್ರತಾ ಕ್ರಮ ವಹಿಸಲು ಸೂಚನೆ: ತುಷಾರ್ ಗಿರಿನಾಥ್