Search By Date & Category

CrimeNEWSನಮ್ಮರಾಜ್ಯ

ಮತ್ತೊಂದು ಹಂತ ತಲುಪಿದ ಐಪಿಎಸ್ ಅಧಿಕಾರಿ ಡಿ.ರೂಪಾ – ಐಎಎಸ್​ ಅಧಿಕಾರಿ ರೋಹಿಣಿ ಸಿಂಧೂರಿ ನಡುವಿನ ಜಟಾಪಟಿ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಐಪಿಎಸ್ ಅಧಿಕಾರಿ ಡಿ ರೂಪಾ ಹಾಗೂ ಐಎಎಸ್​ ಅಧಿಕಾರಿ ರೋಹಿಣಿ ಸಿಂಧೂರಿ ನಡುವಿನ ಜಟಾಪಟಿ ಈಗ ಮತ್ತೊಂದು ಹಂತ ತಲುಪುತ್ತಿದೆ. ನಿನ್ನೆ ಇಬ್ಬರ ನಡುವಿನ ಕಲಹದ ವೇಳೆ ದಿ.ಡಿ.ಕೆ. ರವಿ ಅವರ ಹೆಸರು ಪ್ರಸ್ತಾಪವಾಗಿತ್ತು.

ಡಿ.ಕೆ.ರವಿ ಹೆಸರು ಪ್ರಸ್ತಾಪವಾಗುತಿದ್ದಂತೆ ಅವರ ಪತ್ನಿ ಕುಸುಮಾ ಹಣುಮಂತರಾಯಪ್ಪ ಪ್ರತಿಕ್ರಿಯಿಸಿ, ಕರ್ಮ ರಿಟರ್ನ್ಸ್ ಎಂದಿದ್ದರು. ಇದೀಗ ರೋಹಿಣಿ ಸಿಂಧೂರಿ ಪತಿ ಸುಧೀರ್ ರೆಡ್ಡಿ ಪತ್ನಿಯ ಬಗ್ಗೆ ಗಂಭೀರ ಆರೋಪ ಮಾಡಿ, ಖಾಸಗಿ ಫೋಟೋಗಳನ್ನು ಬಿಡುಗಡೆ ಮಾಡಿರುವ ರೂಪಾ ಅವರ ವಿರುದ್ಧ ಕೆಂಡಮಂಡಲರಾಗಿದ್ದಾರೆ.

ನನ್ನ ಪತ್ನಿ ರೋಹಿಣಿ ಸಿಂಧೂರಿಗೆ ಯಾವುದೇ ಪ್ರಚಾರ ಬೇಡ. ಅವರು ಯಾವುದೇ ಸಾಮಾಜಿಕ ಜಾಲತಾಣಗಳನ್ನೂ ಸಹ ಬಳಕೆ ಮಾಡುತ್ತಿಲ್ಲ. ನಾನು ಆಂಧ್ರ ಪ್ರದೇಶದವನೂ ಅಲ್ಲ. ಕರ್ನಾಟಕದಲ್ಲಿಯೇ ಹುಟ್ಟಿ ಬೆಳೆದಿರುವ ಕನ್ನಡಿಗ. ಪತ್ನಿಯ ಫೋಟೋಗಳು ರೂಪಾ ಅವರಿಗೆ ಸಿಕ್ಕಿದ್ದು ಹೇಗೆ. ಈ ರೂಪಾ ಅನ್ನೋರು ಯಾರು ಎಂದು ಪ್ರಶ್ನೆ ಮಾಡಿದ್ದಾರೆ.

ರೋಹಿಣಿ ಸಿಂಧೂರಿ ಪತಿ ಸುಧೀರ್ ರೆಡ್ಡಿ.

ಇನ್ನು ನಾನು ಯಾವತ್ತೂ ಮಾಧ್ಯಮದ ಮುಂದೆ ಬಂದವನಲ್ಲ. ನನಗೆ ತೀರಾ ಪರ್ಸನಲ್ ಇರೋದ್ರಿಂದ ಬಂದು ಹೇಳಿದ್ದೇನೆ. ರೂಪಾ ಅವರಿಗೆ 10 ವರ್ಷ ಜೂನಿಯರ್ ಆಗಿರುವ ರೋಹಿಣಿ ಸಿಂಧೂರಿ ಒಳ್ಳೆಯ ಹೆಸರು ಮಾಡಿದ್ದಾಳೆ ಎಂಬ ಹೊಟ್ಟೆಕಿಚ್ಚು ಇರಬಹುದು ಎಂದು ವಾಗ್ದಾಳಿ ನಡೆಸಿದರು.

ನಮ್ಮ ಕುಟುಂಬದ ಬಗ್ಗೆ ಅನಗತ್ಯವಾಗಿ ಮಾತನಾಡುತ್ತಿರುವ ರೂಪಾ ವಿರುದ್ಧ ದೂರು ನೀಡುತ್ತೇನೆ. ರೋಹಿಣಿ ಸಿಂಧೂರಿ ಒಳ್ಳೆಯ ಕೆಲಸ ಮಾಡುತ್ತಿರುವುದರಿಂದ ಸಹಜವಾಗಿ ರಾಜ್ಯದಲ್ಲಿ ಅವರಿಗೆ ಒಳ್ಳೆಯ ಹೆಸರು ಇದೆ. ಆದರೆ ಅವರ ಹೆಸರಿಗೆ ಮಸಿ ಬಳೆಯುವ ಕೆಲಸಗಳು ನಡೆಯುತ್ತಿವೆ. ರೋಹಿಣಿ ಸಿಂಧೂರಿ ಯಾರಿಗೆ ಫೋಟೋ ಕಳುಹಿಸಿದ್ದಾರೆ ಎಂಬುದನ್ನು ರೂಪಾ ಅವರು ಹೇಳಲಿ ಎಂದು ಸುಧೀರ್ ರೆಡ್ಡಿ ಸವಾಲು ಹಾಕಿದ್ದಾರೆ.

ರೂಪಾ ಅವರ ಪರ್ಸನಲ್ ಅಜೆಂಡಾ ಏನು ಎಂಬುವುದು ಗೊತ್ತಾಗಬೇಕು. ಸಿಂಧೂರಿ ಬಗ್ಗೆ ಯಾಕೆ ಮಾತನಾಡ್ತಿದ್ದಾರೆ. ರೂಪಾ ಅವರಿಗೆ ಮಾನಸಿಕ ಸಮಸ್ಯೆ ಇರಬಹುದು. ಮೂರು ಜನ ಐಎಎಸ್ ಅಧಿಕಾರಿಗಳು ಯಾರು ಅನ್ನೋದನ್ನು ರೂಪಾ ಸ್ಪಷ್ಟಪಡಿಸಬೇಕು. ಔಟ್ ಆಫ್ ಕಾಂಟಾಕ್ಟ್ ಫೋಟೋ ಯಾಕೆ ತೆಗೆದು ವೈರಲ್ ಮಾಡಿದ್ದಾರೆ. ನಾವು ಯಾರಿಗೂ ಶೇರ್ ಮಾಡಿಲ್ಲ, ಇವರಿಗೆ ಹೇಗೆ ಸಿಕ್ಕಿವೆ ಎಂದು ಕಿಡಿಕಾರಿದ್ದಾರೆ.

ಡಿಕೆ ರವಿ ಅವರು ನಮ್ಮ ಜತೆಯಲ್ಲಿಲ್ಲ. ಹಾಗಾಗಿ ಅವರ ಬಗ್ಗೆ ಮಾತನಾಡಬಾರದು. ತಂದೆ 2011 ನಲ್ಲಿ ಜಮೀನು ಖರೀದಿ ಮಾಡಿದ್ದಾರೆ. 2016 ನಲ್ಲಿ ಕಾಂಪೌಂಡ್ ಹಾಕೋಕೆ ಹೋಗಿದ್ದೇವೆ. ಅವರ ನಂತರ ನಮ್ಮ ತಾಯಿಗೆ ಟ್ರಾನ್ಸಫರ್ ಆಗಬೇಕಿದೆ. ಈ ಹಿನ್ನೆಲೆ ನಾನು ದಾಖಲೆಗಳ ವರ್ಗಾವಣೆಗಾಗಿ ಓಡಾಡಿದ್ದೇನೆ. ಆದರೆ ನಾನು ರೋಹಿಣಿ ಸಿಂಧೂರಿ ಗಂಡ ಅಂತ ಹೇಳಿ ಎಲ್ಲೂ ನಾವೂ ದುರ್ಬಳಕೆ ಮಾಡಿಲ್ಲ ಎಂದು ಹೇಳಿದರು.

ಇನ್ನು ಡಿಎನ್ಎ ಕ್ಲಿನಿಕ್ ಅವರ ಸಿಸ್ಟರ್ ಬಳಿ ಹೇರ್ ಕಟ್ ಮಾಡ್ಸಿರೂ ಪೋಟೊ ವೈರಲ್ ಮಾಡಿದ್ದಾರೆ. ನಮ್ಮ ತಂದೆ ಇಲ್ಲಿ ನೂರಾರು ಎಕರೆ ಲೇಔಟ್ ಮಾಡಿದ್ದಾರೆ. ನಮ್ಮ ಫ್ಯಾಮಿಲಿ ಐಬಿಎಂನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಮನೆ ನಿರ್ಮಾಣದ ಆರೋಪಕ್ಕೆ ಉತ್ತರ ನೀಡಿದರು.

Leave a Reply

error: Content is protected !!