NEWSದೇಶ-ವಿದೇಶ

ಪ್ರಧಾನಿ ನಿವಾಸಕ್ಕೆ ನುಗ್ಗಿದ ಕಿಡಿಗೇಡಿಗಳು – ಸೀರೆ, ಒಳ ಉಡುಪುಗಳನ್ನೂ ಬಿಡದ ಕಾಮುಕರು

ವಿಜಯಪಥ ಸಮಗ್ರ ಸುದ್ದಿ

ಢಾಕಾ: ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್‌ ಹಸೀನಾ ಮನೆಯನ್ನ ಕಿಡಿಗೇಡಿಗಳು ಗುಡಿಸಿ ಗುಂಡಾಂತರ ಮಾಡಿದ್ದಾರೆ. ಇಡೀ ಪ್ಯಾಲೆಸ್‌ ಅನ್ನು ಲೂಟಿ ಮಾಡಿರೋ ಪುಂಡರು ಹುಚ್ಚಾಟ ಮೆರೆದಿದ್ದಾರೆ. ಸಿಕ್ಕ, ಸಿಕ್ಕದನ್ನು ತಿಂದು ತೇಗಿರೋ ಯುವಕರ ಅಟ್ಟಹಾಸ ಕೇವಲ ಲೂಟಿಗೆ ಮುಗಿದಿಲ್ಲ.

ಹೌದು! ಬಾಂಗ್ಲಾದೇಶದಲ್ಲಿ ಉಂಟಾಗಿರುವ ಅರಾಜಕತೆ ವೇಳೆ ನಿರ್ಗಮಿತ ಪ್ರಧಾನಿ ಶೇಕ್ ಹಸೀನಾ ಅವರ ಗಾನಾಭವನ ನಿವಾಸಕ್ಕೆ ನುಗ್ಗಿದ್ದ ಪ್ರತಿಭಟನಾಕಾರರು ಸಿಕ್ಕಿದ್ದನ್ನೂ ದೋಚಿದ್ದಲ್ಲದೇ ಸೀರೆ, ಒಳಉಡುಪುಗಳನ್ನೂ ಹೊತ್ತೊಕೊಂಡು ಹೋಗಿದ್ದಾರೆ.

ಬಾಂಗ್ಲಾದೇಶದ ಪ್ರಧಾನಮಂತ್ರಿ ಶೇಖ್ ಹಸೀನಾ ರಾಜೀನಾಮೆ ನೀಡಿ, ದೇಶ ಬಿಟ್ಟು ಪರಾರಿಯಾಗುತ್ತಿದ್ದಂತೆ ನಿರ್ಗಮಿತ ಪ್ರಧಾನಿ ಶೇಕ್ ಹಸೀನಾ ಅವರ ಗಾನಾಭವನ ನಿವಾಸಕ್ಕೆ ನುಗ್ಗಿದ್ದ ಪ್ರತಿಭಟನಾಕಾರರು ಸಿಕ್ಕಿದ್ದನ್ನೂ ದೋಚಿದ್ದಲ್ಲದೇ ಸೀರೆ, ಒಳ ಉಡುಪುಗಳನ್ನೂ ಹೊತ್ತೊಕೊಂಡು ಹೋಗಿದ್ದಾರೆ.

ಪ್ರತಿಭಟನಾಕಾರರು ಶೇಖ್ ಹಸೀನಾ ಅವರ ಸೀರೆ, ಒಳ ಉಡುಪನ್ನೂ ಕದ್ದು, ಅದರ ಜತೆ ಸೆಲ್ಫೀ ಕ್ಲಿಕ್ಕಿಸಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಇದರ ಜತೆಗೆ ಸೋಫಾ, ಅಡುಗೆಮನೆಯಿಂದ ಹಸಿ ಮೀನು, ಕೋಳಿ, ಬಾತುಕೋಳಿ ಕದ್ದು, ಅಲ್ಲಿದ್ದ ಊಟ ಮಾಡಿ, ಶೇಖ್ ಹಸೀನಾ ಅವರ ಬೆಡ್ ರೂಂ ನಲ್ಲಿ ಮಲಗಿ ಮಜಾ ಮಾಡಿದ್ದಾರೆ.

ಶೇಖ್ ಹಸೀನಾ ರಾಜೀನಾಮೆ ನೀಡುವ ಮುನ್ನ ಬಾಂಗ್ಲಾದೇಶದ ಬಂಗಬಂಧು ಸ್ಮಾರಕ ವಸ್ತುಸಂಗ್ರಹಾಲಯ ಎಂದೂ ಕರೆಯಲ್ಪಡುವ ಬಂಗಬಂಧು ಭವನ್ ಸೇರಿದಂತೆ ಢಾಕಾದ ಹಲವಾರು ಪ್ರಮುಖ ಸ್ಥಳಗಳಿಗೆ ಪ್ರತಿಭಟನಾಕಾರರು ಬೆಂಕಿ ಹಚ್ಚಿದ್ದಾರೆ.

ಜನರು ಶೇಖ್ ಹಸೀನಾ ಅವರ ಕುಟುಂಬದ ಪೂರ್ವಜರ ಮನೆಯಾಗಿ ಪರಿವರ್ತನೆಗೊಂಡ ವಸ್ತುಸಂಗ್ರಹಾಲಯವನ್ನು ಧ್ವಂಸಗೊಳಿಸಿದೆ. ಅಲ್ಲಿ ಆಕೆಯ ತಂದೆಯ ಪ್ರತಿಮೆಯನ್ನು ಧ್ವಂಸಗೊಳಿಸಿದ್ದಾರೆ. ಹಾಗೆಯೇ ದೇಶದ ಮುಖ್ಯ ನ್ಯಾಯಾಧೀಶರ ಮನೆ ಮತ್ತು ರಾಜಧಾನಿಯಾದ ಢಾಕಾದಲ್ಲಿರುವ ಶೇಖ್ ಹಸೀನಾ ಅವರ ಬಂಗಲೆಯ ಮೇಲೂ ದಾಳಿ ನಡೆಸಿ, ವಸ್ತುಗಳನ್ನು ದೋಚಿಕೊಂಡು ಹೋಗಿದ್ದಾರೆ.

ಕೆಲವರು ಸೀರೆಯನ್ನು ದೋಚಿ ಅವುಗಳನ್ನು ಉಟ್ಟುಕೊಂಡು ಸಂಭ್ರಮಿಸುತ್ತಾ ಸಾಗಿದ್ದಾರೆ.ಇನ್ನೂ ಕೆಲವರು ಶೇಕ್ ಹಸೀನಾ ಅವರ ಒಳಉಡುಪುಗಳನ್ನೂ ದೋಚಿ ಅವುಗಳನ್ನು ಪ್ರದರ್ಶಿಸುತ್ತಾ ವಿಜೃಂಭಿಸಿದ್ದಾರೆ. ಗಾನಾಭವನದ ಕೊಳದಲ್ಲಿ ಈಜಾಡಿ, ನಿವಾಸದಿಂದ ಸೋಫಾ, ಕುರ್ಚಿ, ಹೂಕುಂಡಗಳನ್ನು ತೆಗೆದುಕೊಂಡು ಹೋಗಿದ್ದಾರೆ.

ಶೇಖ್ ಹಸೀನಾ ರಾಜೀನಾಮೆಯನ್ನು ಸೋಮವಾರ ಢಾಕಾದಲ್ಲಿ ಸಾವಿರಾರು ಜನರು ಬೀದಿಗಿಳಿದು ಸಂಭ್ರಮಿಸಿದರು. ಬಾಂಗ್ಲಾ ರಾಜಧಾನಿ ಢಾಕಾದಲ್ಲಿರುವ ಶೇಖ್ ಹಸೀನಾ ಅವರ ನಿವಾಸ ‘ಗಾನಭಬನ್’ಗೆ ಬೀದಿಗಳಲ್ಲಿ ಹರ್ಷೋದ್ಗಾರದ ದೃಶ್ಯಗಳ ನಡುವೆ ಸಾವಿರಾರು ಜನರು ಮುತ್ತಿಗೆ ಹಾಕಿದರು. ಶೇಖ್ ಹಸೀನಾ ಅವರ ನಿವಾಸವಾದ ಗಣಭವನ್‌ನಿಂದ ಕೋಳಿ, ಮೀನು, ತರಕಾರಿಗಳು ಮತ್ತು ಪೀಠೋಪಕರಣಗಳನ್ನು ಜನರು ತೆಗೆದುಕೊಂಡು ಹೋಗುತ್ತಿದ್ದಾರೆ.

Leave a Reply

error: Content is protected !!
LATEST
KSRTC ಬಸ್‌ ರಿಪೇರಿ ಮಾಡಿದ ಖರ್ಚಿನ ಬಿಲ್‌ನಲ್ಲಿ ಸ್ಕ್ರಾಪ್‌ನ ಹಣ ತೋರಿಸದೆ ಗುಳುಂ: ಕ್ರಮಕ್ಕಾಗಿ ಎಂಡಿಗೆ ದೂರು 160 ಕ್ಯಾಬಿನೆಟ್ ಸೆಕ್ರೆಟರಿಯೇಟ್, ಡೆಪ್ಯೂಟಿ ಫೀಲ್ಡ್ ಆಫೀಸರ್ ಹುದ್ದೆಗಳಿಗೆ ಕೂಡಲೇ ಅರ್ಜಿ ಹಾಕಿ ಮುನಿರತ್ನಗೆ ಜಾಮೀನು ಮಂಜೂರು ಮಾಡಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಹೋರಾಟ ಪಂಜಾಬ್, ಹರಿಯಾಣ ರೈತರದಷ್ಟೇ ಎಂಬಂತೆ ಬಿಂಬಿಸುವ ಸುಪ್ರೀಂ ಆದೇಶ ಪುನರ್ ಪರಿಶೀಲಿಸಿ: ಕುರುಬೂರ್‌ ಶಾಂತಕುಮಾರ್ KSRTC ಅಧಿಕಾರಿಗಳು-ನೌಕರರಲ್ಲಿ, ನೌಕರರು-ನೌಕರರಲ್ಲೇ ಒಗ್ಗಟ್ಟಿಲ್ಲಕ್ಕೆ ಈ ಸ್ಥಿತಿ: NWKRTC ನಿಗಮದ ಅಧ್ಯಕ್ಷ ಭರಮಗೌಡ KSRTC ನೌಕರರ ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿ ಬೇಗ ಕೊಟ್ಟರೆ ನನಗೂ ಸಮಾಧಾನ: ಸಚಿವ ರಾಮಲಿಂಗಾ ರೆಡ್ಡಿ KSRTC-ನಮ್ಮ ಸರ್ಕಾರ ಸರಿ ಸಮಾನ ವೇತನ ಕೊಡುತ್ತದೆ ನೆಮ್ಮದಿಯಾಗಿರಿ: ಕಾಂಗ್ರೆಸ್‌ ಪ್ರಣಾಳಿಕೆ ಸಮಿತಿ ಉಪಾಧ್ಯಕ್ಷ ರಾಧಾಕೃ... KSRTC: ಅಗ್ರಿಮೆಂಟ್‌ ಎಂಬ ಸೆಟಲ್‌ಮೆಂಟ್‌ ಭೂತವನ್ನು ಬುಡಸಮೇತ ಕಿತ್ತೊಗೆಯಬೇಕು - ವಕೀಲ ನಟರಾಜ ಶರ್ಮಾ ವೇತನ ಸಂಬಂಧ 4ವರ್ಷಕ್ಕೊಮ್ಮೆ ಆಗುವ ಅಗ್ರಿಮೆಂಟ್‌ ಬೇಡ ಕೊಟ್ಟ ಭರವಸೆ ಈಡೇರಿಸಿ: ಸಾರಿಗೆ ಸಚಿವರಿಗೆ ಚಂದ್ರು ಒತ್ತಾಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ 247 ಹುದ್ದೆಗಳಿಗೆ ಅರ್ಜಿ ಆಹ್ವಾನ: 3 ವರ್ಷ ವಯಸ್ಸಿನ ಸಡಿಲಿಕೆ, ಡಿಗ್ರಿ ಅರ್ಹತೆ