ಹನೂರು: ವ್ಯಕ್ತಿಯೋರ್ವ ಮಹಿಳೆ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ತಾನು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಮಲೆಮಹದೇಶ್ವರಬೆಟ್ಟದ ಒಡಸಲನತ್ತ ಬಳಿ ನಡೆದಿದೆ.
ತಮಿಳುನಾಡು ಮೂಲದ ಮುನಿರಾಜು (40) ಎಂಬಾತ ನಾಗಮಲೆಯ ನಿವಾಸಿ ಲಕ್ಷ್ಮೀ (35) ಎಂಬುವರ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ತಾನು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಘಟನೆಗೆ ಕಾರಣ ಏನೂ ಎಂಬುಂದು ತಿಳಿದು ಬಂದಿಲ್ಲ. ಆದರೆ, ಮುನಿರಾಜು ಹಾಗೂ ಲಕ್ಷ್ಮೀ ಇಬ್ಬರಿಗೂ ಅಕ್ರಮ ಸಂಬಂಧ ಇತ್ತು ಎಂಬ ಶಂಕೆ ವ್ಯಕ್ತವಾಗಿದ್ದು, ತನಿಖೆಯಿಂದಷ್ಟೇ ಕಾರಣ ತಿಳಿಯಬೇಕಿದೆ.
ನಾಗಮಲೆಯ ನಿವಾಸಿಯಾಗಿರುವ ಲಕ್ಷ್ಮೀಗೆ ಈಗಾಗಲೇ ಮದುವೆಯಾಗಿದೆ ಎಂದು ತಿಳಿದು ಬಂದಿದೆ. ಘಟನೆ ಲಕ್ಷ್ಮೀಯ ನಿವಾಸದ ಬಳಿಯೇ ನಡೆದಿದೆ. ಮಂಗಳವಾರ ಘಟನೆ ನಡೆದಿದ್ದು ಬುಧವಾರ ಬೆಳಕಿಗೆ ಬಂದಿದೆ.
ವಿಷಯ ತಿಳಿದು ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು, ಎಎಸ್ಪಿ ಸುದೇಶ್, ಮಲೆಮಹದೇಶ್ವರಬೆಟ್ಟ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.