Search By Date & Category

NEWSನಮ್ಮರಾಜ್ಯರಾಜಕೀಯ

 ಮೋದಿ ಪಾದಿ ಯಾವ್ದೂ ಇಲ್ಲ, ನಾನೇ ಸಿಂಗಲ್ ಆರ್ಮಿ: ಬಿಜೆಪಿ ಶಾಸಕ ಶಿವರಾಜ್ ಪಾಟೀಲ್  

ವಿಜಯಪಥ ಸಮಗ್ರ ಸುದ್ದಿ

ರಾಯಚೂರು: ನಗರ ಬಿಜೆಪಿ ಶಾಸಕ ಶಿವರಾಜ್ ಪಾಟೀಲ್ ಅವರದ್ದು ಎನ್ನಲಾದ ಆಡಿಯೋ ವೈರಲ್ ಆಗಿದ್ದು, ಮೋದಿನೂ ಇಲ್ಲ ಪಾದಿನೂ ಇಲ್ಲ ಯಾವ್ದೂ ಇಲ್ಲ, ನಾನೇ ಸಿಂಗಲ್ ಆರ್ಮಿ, ನಾನೇ ಮೋದಿ, ನಾನೇ ಟ್ರಂಪ್ ಎಂದು ಹೇಳಿರುವ ವಿಡಿಯೋ ವೈರಲ್‌ ಆಗಿದೆ.

ಶಿವರಾಜ್ ಪಾಟೀಲ್ ಮಾತನಾಡಿದ್ದಾರೆ ಎನ್ನಲಾದ ಒಟ್ಟು 3 ನಿಮಿಷ 19 ಸೆಕೆಂಡ್ ಗಳ ಫೋನ್ ಸಂಭಾಷಣೆಯ ಆಡಿಯೋ ಇದಾಗಿದೆ. ಹಾಗಾದರೇ ಬಿಜೆಪಿ ಶಾಸಕ ಶಿವರಾಜ್ ಪಾಟೀಲ್  ಮಾತನಾಡಿರುವ ಆಡಿಯೋನಲ್ಲಿ ಏನಿದೆ ಗೊತ್ತೆ..?

ಈ ಹಿಂದೆ ರಾಯಚೂರನ್ನು ತೆಲಂಗಾಣಕ್ಕೆ ಸೇರಿಸಿ ಎಂದು ಹೇಳಿ ವಿವಾದ ಸೃಷ್ಟಿಸಿದ್ದ ಶಾಸಕರು ಮತ್ತೊಮ್ಮೆ ವಿವಾದಾತ್ಮಕ ಮಾತುಗಳ ಮೂಲಕ ಸುದ್ದಿಯಲ್ಲಿದ್ದಾರೆ.

ನಾನೇ ಮೋದಿ ನಾನೇ ದೇವರು. ಯಾವ ಮೋದಿ ಇಲ್ಲಾ ಪಾದಿ ಇಲ್ಲ. ನಾನು ಯಾರನ್ನೂ ಕೇರ್ ಮಾಡಲ್ಲ. ಸಿಂಗಲ್ ಮ್ಯಾನ್ ಆರ್ಮಿ ನಾನು. ಪ್ರಧಾನಮಂತ್ರಿ ನರೇಂದ್ರ ಮೋದಿಯನ್ನೂ ಕೂಡ ನಾನು ಕೇರ್ ಮಾಡಲ್ಲ ಎಂದಿರುವ ಶಿವರಾಜ್ ಪಾಟೀಲ್ ಸಂಭಾಷಣೆ ಆಡಿಯೋ ವೈರಲ್ ಆಗಿದೆ.

ಏಮ್ಸ್ ಹೋರಾಟಗಾರ ಅಶೋಕ್ ಕುಮಾರ್ ಜೈನ್ ಜತೆ ಮಾತನಾಡಿದ್ದ ಆಡಿಯೋ ನಾಲ್ಕೂವರೆ ವರ್ಷದ ಬಳಿಕ ಈಗ ವೈರಲ್ ಆಗಿದ್ದು, ಸೋತರೂ ಚಿಂತೆಯಿಲ್ಲ, ಗೆದ್ದರೂ ಚಿಂತೆಯಿಲ್ಲ, ಎದ್ದರೂ ಚಿಂತೆಯಿಲ್ಲಾ ಮಲ್ಕೊಂಡರೂ ಚಿಂತೆಯಿಲ್ಲ ನನಗೆ.

ಚಿಂತೆಯಿಲ್ಲದಿರುವ ಮನುಷ್ಯ ನಾನು. ನಾನೇ ದೇವರು ಎಲ್ಲರೂ ನನ್ನ ಕಾಲಿಗೆ ನಮಸ್ಕಾರ ಮಾಡಬೇಕು. ನಾನು ಯಾರನ್ನೂ ಕೇರ್ ಮಾಡಲ್ಲ ಎಂದಿದ್ದಾರೆ.

ನನಗೆ ಯಾವ ರೈಟ್ ಇಲ್ಲ ಲೆಫ್ಟ್ ಇಲ್ಲ. ಸಿಂಗಲ್ ಮ್ಯಾನ್ ಆರ್ಮಿ ನಾನು. ನನ್ನ ಕೈ, ನನ್ನ ಕಾಲು, ಯಾವ ಮೋದಿ ಇಲ್ಲ, ಅವನ್ಯಾರು ಟ್ರಂಪ್ ಇಲ್ಲ. ಯಾವ ಬದನೆಕಾಯಿ ಸಹ ಕೇಳಂಗಿಲ್ಲ.  ನಾನು ದೇವರು ಇದ್ದಂಗೆ, ಅದಕ್ಕೆ ನಮ್ಮ ಹುಡುಗರಿಗೆ ದಿನಾಲೂ ನನ್ನ ಕಾಲಿಗೆ ನಮಸ್ಕಾರ ಮಾಡ್ರಿ ಅಂತ ಹೇಳ್ತಿನಿ.. ಶಿವರಾಜ್ ಪಾಟೀಲ್ ದೈವ ಬರೆಸಿಕೊಳ್ಳಲ್ಲ.. ನಾನೇ ದೈವ ಬರಿತೀನಿ ಎಂದು ಮಾತುಗಳನ್ನಾಡಿದ್ದಾರೆ

ಆಡಿಯೋ ವೈರಲ್ ಆಗಿರುವುದು ಬಿಜೆಪಿ ಪಾಳಯದಲ್ಲಿ ಇರುಸುಮುರುಸಿಗೆ ಕಾರಣವಾಗಿದೆ.

Leave a Reply

error: Content is protected !!