Search By Date & Category

CrimeNEWSನಮ್ಮಜಿಲ್ಲೆ

ಸರ್ಕಾರಿ ಬಸ್‌ಅನ್ನೇ ಕದ್ದ ಕಳ್ಳರು – ಹುಡುಕಾಟಕ್ಕೆ ಪೊಲೀಸ್‌ ತಂಡಗಳ ರಚನೆ

ವಿಜಯಪಥ ಸಮಗ್ರ ಸುದ್ದಿ

ಕಲಬುರಗಿ: ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಕೆಕೆಆರ್‌ಟಿಸಿ ಬಸ್ ಕಳ್ಳರು ನಸುಕಿನ ಜಾವ 3-30ರ ಸುಮಾರಿಗೆ ಕದ್ದಿರುವ ಘಟನೆ ಚಿಂಚೋಳಿ ಬಸ್ ನಿಲ್ದಾಣದಲ್ಲಿ ನಡೆದಿದೆ.

ಬೀದರ್ ಘಟಕ -2ಕ್ಕೆ ಸೇರಿದ ಬಸ್ ಇದಾಗಿದೆ. (KA 38 F 971) ಬಸ್ ಕಳವಾಗಿದೆ ಎಂದು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ. ಮಿರಿಯಾಣ ಮಾರ್ಗವಾಗಿ ತಾಂಡೂರ ಮೂಲಕ ತೆಲಂಗಾಣದ ಕಡೆ ತೆಗೆದುಕೊಂಡು ಹೋಗಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ.

ಇತ್ತ ಕಳುವಾಗಿರುವ ಬಸ್‌ ಹುಡುಕಾಟಕ್ಕೆ ಪೊಲೀಸರ ಎರಡು ವಿಶೇಷ ತಂಡಗಳನ್ನು ರಚನೆ ಮಾಡಿದ್ದು, ಈಗಾಗಲೇ ಆ ಎರಡೂ ತಂಡಗಳು ತೆಲಂಗಾಣದ ಪ್ರದೇಶಗಳಲ್ಲಿ ಹುಡುಕಾಟ ನಡೆಸುತ್ತಿವೆ.

ಕಳವು ಪ್ರಕರಣ ಸಂಬಂಧ ಚಿಂಚೋಳಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

Leave a Reply

error: Content is protected !!