ಬಾಗಲಕೋಟೆ: ಹಾಸನದ ಅಶ್ಲೀಲ ವಿಡಿಯೋ ಪ್ರಕರಣದ ಬಗ್ಗೆ ಮಾತನಾಡದೇ ಇರುವುದು ಸೂಕ್ತ. ಈಗಾಗಲೇ ಅದು ವಾಕರಿಕೆ ಆಗುವಷ್ಟು ಸುದ್ದಿ ಆಗಿದೆ ಎಂದು ಚಲನಚಿತ್ರ ನಿರ್ದೇಶಕ ಎಸ್. ನಾರಾಯಣ್ ಹೇಳಿದ್ದಾರೆ.
ಜಿಲ್ಲೆಯ ಬೆನಕಟ್ಟಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಅವರು, ಹಾಸನದ ವಿಡಿಯೋ ಕೇಸ್ ಬಗ್ಗೆ ಈಗಾಗಲೇ ತನಿಖೆ ಆಗುತ್ತಿದೆ. ಅವರನ್ನು ಕರೆತರುವ ಪ್ರಯತ್ನ ನಡೆಯುತ್ತಿದೆ. ಅದರ ಬಗ್ಗೆ ನಾವು ಮಾತನಾಡದೇ ಇರುವುದೇ ಉತ್ತಮ. ಯಾಕೆಂದರೆ ಒಳ್ಳೆಯ ವಿಷಯಗಳನ್ನು 10 ಸಾರಿ ಮಾತನಾಡೋಣ. ಕೆಟ್ಟ ವಿಷಯಗಳನ್ನು ಮರೆತು ಬಿಡೋಣ ಎಂದು ಹೇಳಿದರು.
ಇನ್ನು ಇವೆಲ್ಲ ರಾಜ್ಯಕ್ಕೆ ಕಳಂಕ ಬರುವಂತ ವಿಚಾರಗಳು. ಇಂತಹ ಘಟನೆಗಳು ಮರುಕಳಿಸಬಾರದು. ಯಾರೂ ಕೂಡ ಇಂತಹ ಕೆಲಸಗಳನ್ನು ಮಾಡಬಾರದು ಎಂದರು.
ಇದೊಂದು ಅನಾಗರಿಕತೆ, ಅನ್ಯಾಯ ಯಾರಿಗೆ ಆದರೂ ಅದು ಅನ್ಯಾಯವೇ. ಹೆಣ್ಣು ಮಕ್ಕಳನ್ನು ದುರ್ಬಳಕೆ ಮಾಡಿಕೊಳ್ಳೋದು ಅಕ್ಷಮ್ಯ ಅಪರಾಧ. ಇನ್ನು ಈ ಗ್ಗೆ ಹೆಣ್ಣು ಮಕ್ಕಳು ಕೂಡಾ ಬಹಳ ಎಚ್ಚರಿಕೆಯಿಂದ ಇರಬೇಕು ಎಂದು ನಾರಾಯಣ್ ತಿಳಿಸಿದರು.