Search By Date & Category

CrimeNEWSನಮ್ಮಜಿಲ್ಲೆ

ರಸ್ತೆ ಬದಿ ನಿಂತಿದ್ದ ಲಾರಿಗೆ ಟಿಪ್ಪರ್ ಡಿಕ್ಕಿ: ಟಿಪ್ಪರ್ ಕ್ಲೀನರ್ ಎಡಗೈ ಕಟ್ಟು

ವಿಜಯಪಥ ಸಮಗ್ರ ಸುದ್ದಿ

ಹನೂರು : ರಸ್ತೆ ಬದಿ ನಿಂತಿದ್ದ ಲಾರಿಗೆ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಟಿಪ್ಪರ್ ವಾಹನದ ಕ್ಲೀನರ್ ಕೈ ಕಟ್ಟಾಗಿದ್ದು, ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲು ಮಾಡಿರುವ ಘಟನೆ ಹನೂರು ಪಟ್ಟಣದ ಹೊರವಲಯದಲ್ಲಿ ನಡೆದಿದೆ.

ಪಟ್ಟಣದ ಹೊರವಲಯದ ಹುಲಸುಗುಡ್ಡೆ ಸಮೀಪ ಅವಘಡ ಸಂಭವಿಸಿದ್ದು, ಧಾರವಾಡದ ಸೆಳವಾಡಿ ಗ್ರಾಮದ ಶ್ರೀಶೈಲ್ ( 26 ) ಎಂಬುವರು ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ವ್ಯಕ್ತಿ.

ಪಟ್ಟಣದ ಜಡೇಸ್ವಾಮಿ ಎಂಬುವರಿಗೆ ಸೇರಿದ ಲಾರಿ ಮಂಡ್ಯದ ಸಕ್ಕರೆ ಕಾರ್ಖಾನೆಯಿಂದ ಸಕ್ಕರೆ ತುಂಬಿಕೊಂಡು ಬರುತ್ತಿದ್ದ ವೇಳೆ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದಾರೆ . ಈ ವೇಳೆ ಕೇಶಿಫ್ ರಸ್ತೆ ಕಾಮಗಾರಿಗೆ ಬಳಸುತ್ತಿದ್ದ ಟಿಪ್ಪರ್ ನ ಚಾಲಕ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದ್ದಾನೆ.

ಪರಿಣಾಮ ಟಿಪ್ಪರ್ ಹಾಗೂ ಲಾರಿ ಜಖಂ ಗೊಂಡಿದ್ದು ಟಿಪ್ಪರ್ ವಾಹನದ ಎಡಬದಿಯಲ್ಲಿ ಕುಳಿತಿದ್ದ ಕ್ಲೀನರ್ ಎರಡು ವಾಹನದ ಮಧ್ಯೆ ಸಿಲುಕಿಕೊಂಡಿದ್ದಾನೆ . ನಂತರ ಸಾರ್ವಜನಿಕರು ಸಹಕಾರದಿಂದ ವಾಹನದಿಂದ ರಕ್ಷಿಸಿದ್ದಾರೆ . ಆದರೂ ಸಹ ಕ್ಲೀನರ್ ನ ಎಡ ಕೈ ಕಟ್ಟಾಗಿದ್ದು ತೀವ್ರ ಗಾಯಗೊಂಡಿದ್ದಾರೆ. ತಕ್ಷಣ ಗಾಯಾಳುವನ್ನು ಹೋಲಿ ಕ್ರಾಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Leave a Reply

error: Content is protected !!