ಗೃಹಲಕ್ಷ್ಮಿ ಹಣ ಪಡೆಯಲು 5 ರೂ.ಪಾವತಿಸಿ ಬಯೋಮೆಟ್ರಿಕ್ ನೀಡುವುದು ಕಡ್ಡಾಯ: 20 ದಿನದೊಳಗೆ ಬಯೋಮೆಟ್ರಿಕ್ ಜಾರಿ
ಬಯೋಮೆಟ್ರಿಕ್ ಜತೆಗೆ ಗೃಹಲಕ್ಷ್ಮಿ ಸೊಸೈಟಿಗೆ ಸದಸ್ಯತ್ವವನ್ನ ಕೂಡ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಾಡಿಕೊಳ್ಳುತ್ತಿದೆ. ಈ ಸದಸ್ಯತ್ವ ಬಯಸುವ ಫಲಾನುಭವಿಗಳು 1,250 ರೂ. ಪಾವತಿ ಮಾಡಬೇಕು. ಒಂದು ವೇಳೆ ಗೃಹಲಕ್ಷ್ಮಿ ಸೊಸೈಟಿ ಸದಸ್ಯತ್ವ ಬೇಡ ಎಂದಾದರೆ ಬಯೋಮೆಟ್ರಿಕ್ ಅಷ್ಟೇ ಮಾಡಿಸಿಕೊಳ್ಳಬಹುದು.

ಬೆಂಗಳೂರು: ಮೃತ ಮಹಿಳೆಯರ ಹೆಸರಿನಲ್ಲಿ ಗೃಹಲಕ್ಷ್ಮಿ ಹಣ ಪಡೆಯುವ ಮೂಲಕ ದುರುಪಯೋಗ ಮಾಡಿಕೊಳ್ಳುತ್ತಿರುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಸಿದ್ದತೆ ನಡೆಸಿದ್ದು, ಬಯೋಮೆಟ್ರಿಕ್ ಜಾರಿಗೆ ತರಲು ಸರ್ಕಾರ ನಿರ್ಧರಿಸಿ ಮುಂದಿನ ತಿಂಗಳಿನಿಂದ ಬಯೋಮೆಟ್ರಿಕ್ ಜಾರಿಗೆ ಬರಲಿದೆ.
ಇನ್ನು ಈ ಬಯೋಮೆಟ್ರಿಕ್‌ಗೆ ಗೃಹಲಕ್ಷ್ಮಿ ಫಲಾನುಭವಿಗಳು ಶುಲ್ಕ ಪಾವತಿ ಮಾಡಬೇಕಿದೆ. ಬಯೋಮೆಟ್ರಿಕ್ ಆಗದೇ ಇದ್ದರೆ 2 ಸಾವಿರ ರೂ. ಅಮೌಂಟ್ ಬರುವುದಿಲ್ಲ. ಹೀಗಾಗಿ ಬಯೋಮೆಟ್ರಿಕ್ ಮಾಡಿಸಿಕೊಳ್ಳಲು ಪ್ರತಿ ಫಲಾನುಭವಿಯೂ 5 ರೂ. ಶುಲ್ಕ ಪಾವತಿಮಾಡಬೇಕಿದೆ.
ಬಯೋಮೆಟ್ರಿಕ್ ಜತೆಗೆ ಗೃಹಲಕ್ಷ್ಮಿ ಸೊಸೈಟಿಗೆ ಸದಸ್ಯತ್ವವನ್ನ ಕೂಡ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಾಡಿಕೊಳ್ಳುತ್ತಿದೆ. ಈ ಸದಸ್ಯತ್ವ ಬಯಸುವ ಫಲಾನುಭವಿಗಳು 1,250 ರೂ. ಪಾವತಿ ಮಾಡಬೇಕು. ಒಂದು ವೇಳೆ ಗೃಹಲಕ್ಷ್ಮಿ ಸೊಸೈಟಿ ಸದಸ್ಯತ್ವ ಬೇಡ ಎಂದಾದರೆ ಬಯೋಮೆಟ್ರಿಕ್ ಅಷ್ಟೇ ಮಾಡಿಸಿಕೊಳ್ಳಬಹುದು. ಇದಕ್ಕೂ ಅವಕಾಶವಿದೆ.
ಇನ್ನು ಬರುವ ತಿಂಗಳಿನಿಂದ ಜಾರಿಗೆ ಬರಲಿದ್ದು, ಈ ತಿಂಗಳೇ ಸಿದ್ಧತೆ ಮಾಡಿಕೊಳ್ಳುತ್ತಿದೆ. ಹೀಗಾಗಿ ಈಗಾಗಲೇ ಗೃಹಲಕ್ಷ್ಮಿ ಬಯೋಮೆಟ್ರಿಕ್‌ಗಾಗಿ ಆಪ್ ಸಿದ್ಧಪಡಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.
ಬಯೋಮೆಟ್ರಿಕ್ ಮಾಡಿಸೋದು ಎಲ್ಲಿ ಹೇಗೆ?: ಗೃಹಲಕ್ಷ್ಮಿ ದುರಪಯೋಗ ತಡೆಗೆ ಬಯೋಮೆಟ್ರಿಕ್ ಜಾರಿ ಮಾಡುತ್ತಿದ್ದು, ಇದನ್ನು ಬೆಂಗಳೂರಿನಲ್ಲಿ ವಾಸವಾಗಿರುವವರು ಬೆಂಗಳೂರು ಒನ್‌ನಲ್ಲಿ ಮಾಡಿಸಬಹುದು. ಇನ್ನು ಗ್ತಾಮಾಂತ ಪ್ರದೇಶದಲ್ಲಿ ವಾಸವಾಗಿರುವ ಗೃಹಿಣಿಯರು ಗ್ರಾಮ ಒನ್‌ಗಳಲ್ಲಿ ಬಯೋಮೆಟ್ರಿಕ್ ಮಾಡಿಕೊಳ್ಳುವುದಕ್ಕೆ ಅವಕಾಶ ನೀಡುವ ಸಾಧ್ಯತೆ ಇದೆ.
ಇನ್ನು ಇದು ಒನ್ ಟೈಂ ಬಯೋಮೆಟ್ರಿಕ್ ಆಗಿದ್ದು, ಇದನ್ನು ಒಮ್ಮೆ ಬಯೋಮೆಟ್ರಿಕ್ ನೀಡಿದರೆ ವ್ಯಕ್ತಿಯ ಖಚಿತತೆಯಿಂದ 2 ಸಾವಿರ ರೂಪಾಯಿಯನ್ನು ಗೃಹಲಕ್ಷ್ಮಿಯರ ಬ್ಯಾಂಕ್ ಖಾತೆಗೆ ನೇರವಾಗಿ ಪಾವತಿ ಮಾಡಲಾಗುವುದು.
ಗ್ರಾಮ ಒನ್, ಬೆಂಗಳೂರು ಒನ್, ಸೇವಾಸಿಂಧು ಕೇಂದ್ರಗಳಿಗೆ ತೆರಳಿ ಬಯೋಮೆಟ್ರಿಕ್ ನೀಡಬೇಕು. ಗೃಹಲಕ್ಷ್ಮಿ ಬಯೋಮೆಟ್ರಿಕ್‌ಗೆ 5 ರೂ. ಶುಲ್ಕವನ್ನು ಮಹಿಳಾ ಇಲಾಖೆ ನಿಗದಿ ಮಾಡಲಿದ್ದು ಅದನ್ನು ಫಲಾನುಭವಿಗಳೇ ಪಾವತಿ ಮಾಡಬೇಕಿದೆ.
ಇನ್ನು ಈ ಬಯೋಮೆಟ್ರಿಕ್‌ಗೆ ಫಲಾನುಭವಿಗಳು ಆಧಾರ್ ಕಾರ್ಡ್ ಮತ್ತು ಪಡಿತರ ಚೀಟಿಯನ್ನು ಕಡ್ಡಾಯವಾಗಿ ತೆಗೆದುಕೊಂಡು ಹೋಗಬೇಕು ಎಂದು ಸದ್ಯದ ಮಾಹಿತಿ ಲಭ್ಯವಾಗಿದೆ.
Related









