Please assign a menu to the primary menu location under menu

NEWSಆರೋಗ್ಯನಮ್ಮಜಿಲ್ಲೆ

5ವರ್ಷದೊಳಗಿನ ಮಕ್ಕಳಿಗೆ PCV ಲಸಿಕೆ ಹಾಕಿಸಿ: ಸುರಳ್ಕರ್ ವಿಕಾಸ್ ಕಿಶೋರ್

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ನ್ಯುಮೋಕೋಕಲ್ ಕಾಂಜುಗೇಟ್ ಲಸಿಕೆ (PCV)ಯನ್ನು 5 ವರ್ಷ ದೊಳಗಿನ ಮಕ್ಕಳಿಗೆ ಹಾಕಿಸಲು ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್ ಮನವಿ ಮಾಡಿದ್ದಾರೆ.

ನ್ಯುಮೋನಿಯಾ ಲಸಿಕೆ ಸಂಬಂಧಿಸಿದಂತೆ ಆರೋಗ್ಯ ಅಧಿಕಾರಿಗಳ ಜತೆ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದ ಅಡಿಯಲ್ಲಿ ಮಕ್ಕಳಿಗೆ ನ್ಯುಮೋನಿಯಾ ಹರಡದಂತೆ ಪಾಲಿಕೆ ಆರೋಗ್ಯ ಇಲಾಖೆಯ ವತಿಯಿಂದ ನ್ಯುಮೋಕೋಕಲ್ ಕಾಂಜುಗೇಟ್ ಲಸಿಕೆ(PCV)ಯನ್ನು 5 ವರ್ಷದೊಳಗಿನ ಮಕ್ಕಳಿಗೆ ಉಚಿತವಾಗಿ ನೀಡಲಾಗುತ್ತಿದೆ ಎಂದು ತಿಳಿಸಿದರು.

ನ್ಯುಮೋನಿಯಾ ಎಂದರೇನು?: ಇದು ಶ್ವಾಸಕೋಶದ ಸೋಂಕು, ಶ್ವಾಸಕೋಶದಲ್ಲಿನ ಗಾಳಿಯ ಚೀಲಗಳಿಗೆ ಹರಡಿ ಸೋಂಕಿನ ದ್ರವದಿಂದ ಶ್ವಾಸಕೋಶವನ್ನು ಬಲಹೀನಗೊಳಿಸುತ್ತದೆ. ನ್ಯುಮೋನಿಯಾ ಸೋಂಕು ಎರಡು ಶ್ವಾಸಕೋಶಗಳಿಗೂ ಹರಡಬಹುದು. ಸರಿಯಾದ ಸಮಯಕ್ಕೆ ಸರಿಯಾದ ಆರೈಕೆಯಿಂದ ಸೋಂಕು ತಗುಲಿದ ಮಗುವನ್ನು ರಕ್ಷಿಸಬಹುದು ಎಂದು ತಿಳಿಸಿದರು.

ನ್ಯುಮೋನಿಯಾ ರೋಗದ ಲಕ್ಷಣಗಳು: 1. ಕೆಮ್ಮು ಮತ್ತು ನೆಗಡಿ. 2. ತೀವ್ರ ಜ್ವರ. 3. ಉಸಿರಾಟದ ತೊಂದರೆ, ಉಸಿರಾಟದ ಸಮಯದಲ್ಲಿ ಪಕ್ಕೆ ಅಥವಾ ಎದೆಯ ಸೆಳೆತ. 4. ತೀವ್ರ ಉಸಿರಾಟ.

  1. ಹಸಿವು ಇಲ್ಲದಿರುವುದು, ಆಹಾರ ಸೇವನೆ ಕಷ್ಟಕರವಾಗುವುದು. 6. ಸುಸ್ತು. 7. ಫಿಟ್ಸ್ ಬರುವುದು. 8. ಕೆಮ್ಮು ಮತ್ತು ಹಳದಿ / ರಕ್ತದ ಕಫ ಬರುವುದು ಈ ಎಲ್ಲ ಲಕ್ಷಣಗಳು ಕಾಣಿಸಿಕೊಂಡಲ್ಲಿ ಹತ್ತಿರದ ಸರ್ಕಾರಿ ವೈದ್ಯರನ್ನು ಭೇಟಿ ಮಾಡಬೇಕು ಎಂದು ಸಲಹೆ ನೀಡಿದರು.

ತಡೆಗಟ್ಟುವ ಸರಳ ಪರಿಹಾರಗಳು: 1. ಮಗುವಿಗೆ ಮೊದಲ 6 ತಿಂಗಳು ಸಂಪೂರ್ಣವಾಗಿ ಎದೆಹಾಲು ನೀಡುವುದು. 2. ವಿಶೇಷವಾಗಿ 6 ತಿಂಗಳಿನಿಂದ 2 ವರ್ಷದೊಳಗಿನ ಮಕ್ಕಳಿಗೆ ಉತ್ತಮ ಪೋಷಣೆ ನೀಡುವುದು.3. ಸುರಕ್ಷಿತ ಕುಡಿಯುವ ನೀರು ಮತ್ತು ಉತ್ತಮ ನೈರ್ಮಲ್ಯ.

  1. ಸಾಬೂನು ಬಳಸಿ ಕೈಗಳನ್ನು ಶುಚಿಗೊಳಿಸುವುದು. 5. ಮಗುವಿಗೆ ಸಮಯಕ್ಕೆ ಸರಿಯಾಗಿ ಚುಚ್ಚುಮದ್ದು ಹಾಕಿಸುವುದು. 6. ಮನೆಯೊಳಗೆ ಉತ್ತಮ ಗಾಳಿ ಬೆಳಕಿನ ವ್ಯವಸ್ಥೆ. 5 ವರ್ಷದೊಳಗಿನ ಮಕ್ಕಳಿಗೆ ತಪ್ಪದೇ ನ್ಯುಮೋಕೋಕಲ್ ಕಾಂಜುಗೇಟ್ ಲಸಿಕೆ ಹಾಕಿಸಬೇಕು.

Leave a Reply

error: Content is protected !!
LATEST
ಪತ್ನಿ ಅಕ್ರಮ ಸಂಬಂಧದಿಂದ ಪತಿ ಆತ್ಮಹತ್ಯೆ ಪ್ರಕರಣ: ಹೆಂಡತಿಗೆ ಶಿಕ್ಷಿಸಲಾಗದು - ಹೈ ಕೋರ್ಟ್ ತೀರ್ಪು ತುಮಕೂರು: ಗೋವಾಗೆ ಹೋಗುತ್ತಿದ್ದ ಬಸ್ ಪಲ್ಟಿ: ಮೂವರು ಮಹಿಳೆಯರು ಮೃತ ಮೈಸೂರು-ಮಂಡ್ಯ: ಮಳೆ ಹೆಚ್ಚಾಗಿರುವ ಹಿನ್ನೆಲೆ ಶಾಲೆಗಳಿಗೆ ರಜೆ- ಡಿಸಿಗಳ ಆದೇಶ ದೆಹಲಿ: ರೈತರು ಉಪವಾಸ ಸತ್ಯಾಗ್ರಹ ಬೆಂಬಲಿಸಿ ಡಿ.6ರಿಂದ ಬೆಂಗಳೂರಿನಲ್ಲೂ ಸತ್ಯಾಗ್ರಹ: ಕುರುಬೂರು ಶಾಂತಕುಮಾರ್ ರಾಜ್ಯದಲ್ಲಿ ವರುಣನ ಅಬ್ಬರ: ಹಲವು ಜಿಲ್ಲೆಗಳ ಶಾಲಾ- ಕಾಲೇಜುಗಳಿಗೆ ನಾಳೆ ರಜೆ ಕನ್ನಡ ಕಿರುತೆರೆಯ ಬ್ರಹ್ಮಗಂಟು ಸೀರಿಯಲ್ ಖ್ಯಾತಿಯ ಶೋಭಿತಾ ಶಿವಣ್ಣ ಆತ್ಮಹತ್ಯೆ KSRTC: 1308 ನೌಕರರ ವರ್ಗಾವಣೆ- ಆಕ್ಷೇಪಣೆ ಸಲ್ಲಿಸಲು ಡಿ.4ರವರೆಗೂ ಅವಕಾಶ ಸಾರಿಗೆ ನೌಕರರ ಬೇಡಿಕೆ ಅರ್ಥ ಮಾಡಿಕೊಳ್ಳಿ: ಜಂಟಿ ಕ್ರಿಯಾ ಸಮಿತಿಗೆ ನೌಕರನ ಒತ್ತಾಯ ಬಿಬಿಎಂಪಿ: 13 ಕೆರೆಗಳ ಒತ್ತುವರಿ ತೆರವು- ₹242.5 ಕೋಟಿ ಮೌಲ್ಯದ 7 ಎಕರೆ ಪ್ರದೇಶ ವಶ -ಪ್ರೀತಿ ಗೆಹ್ಲೋಟ್ ಫೆಂಗಲ್ ಚಂಡಮಾರುತದ ಪರಿಣಾಮ ಎಲ್ಲಾ ಅಧಿಕಾರಿಗಳು ಮುಂಜಾಗ್ರತಾ ಕ್ರಮ ವಹಿಸಲು ಸೂಚನೆ: ತುಷಾರ್ ಗಿರಿನಾಥ್