Please assign a menu to the primary menu location under menu

NEWSನಮ್ಮಜಿಲ್ಲೆನಮ್ಮರಾಜ್ಯ

BMTC- ಅನ್ಯ ಭಾಷೆ ಆಧಾರ್‌ಕಾರ್ಡ್‌ ವಿಳಾಸ ಕರ್ನಾಟಕದಾಗಿದ್ದಲ್ಲಿ ಮಾನ್ಯ ಮಾಡಿ: ಸಿಟಿಎಂ ಆದೇಶ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಶಕ್ತಿ ಯೋಜನೆಯಡಿ ಅನ್ಯ ಭಾಷೆಯ ಆಧಾರ್‌ಕಾರ್ಡ್‌ನ ವಿಳಾಸವು ಕರ್ನಾಟಕದಾಗಿದ್ದಲ್ಲಿ ಮಾನ್ಯ ಮಾಡಬೇಕು ಎಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ನೌಕರರಿಗೆ ಮುಖ್ಯ ಸಂಚಾರಿ ವ್ಯವಸ್ಥಾಪಕರು ಸೂಚನೆ ನೀಡಿದ್ದಾರೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ದೇಶದ ನಾಗರಿಕರು ಆಧಾರ್ ಕಾರ್ಡ್‌ನ್ನು ದೇಶಾದ್ಯಂತ ಯಾವುದೇ ರಾಜ್ಯದಲ್ಲಿ ಪಡೆಯಲು ಅವಕಾಶವಿದ್ದು, ಯಾವ ರಾಜ್ಯದಲ್ಲಿ ಆಧಾ‌ರ್ ಕಾರ್ಡ್ ಅನ್ನು ಪಡೆಯುತ್ತಾರೋ ಆ ರಾಜ್ಯದ ಅಧಿಕೃತ ಭಾಷೆ ಮತ್ತು ಅಂಗ್ಲ ಭಾಷೆ (ದ್ವಿಭಾಷೆ/Bilingual )ಯಲ್ಲಿ ಆಧಾ‌ರ್ ಕಾರ್ಡ್ ಮುದ್ರಣವಾಗುತ್ತದೆ.

ಆದ್ದರಿಂದ ಕನ್ನಡ ಹೊರತುಪಡಿಸಿ ಅನ್ಯ ಭಾಷೆಯ ಮುದ್ರಿತ (ದ್ವಿಭಾಷೆ/Bilingual) ಆಧಾರ್‌ ಕಾರ್ಡ್‌ಗಳಲ್ಲಿನ ಆಂಗ್ಲ ಭಾಷೆಯಲ್ಲಿರುವ ವಿಳಾಸವನ್ನು ಪರಿಶೀಲಿಸಿ ವಿಳಾಸವು ಕರ್ನಾಟಕ ರಾಜ್ಯದಾಗಿದ್ದಲ್ಲಿ ಆ ಆಧಾರ್‌ಕಾರ್ಡ್ ಅನ್ನು ಮಾನ್ಯ ಮಾಡಿ, ಶಕ್ತಿ ಯೋಜನೆಯಡಿಯಲ್ಲಿ ಉಚಿತ ಚೀಟಿ ವಿತರಣೆ ಮಾಡಲು ತಿಳಿಸಲಾಗಿದೆ.

ಆದಾಗ್ಯೂ, ಚಾಲನಾ ಸಿಬ್ಬಂದಿಗಳು ಅನ್ಯ ಭಾಷೆಯ ಆಧಾರ್‌ಕಾರ್ಡ್ನ ವಿಳಾಸವು ಕರ್ನಾಟಕದಾಗಿದ್ದರೂ ಮಾನ್ಯ ಮಾಡದೇ ಇರುವ ಬಗ್ಗೆ ದೂರುಗಳನ್ನು ಸ್ವೀಕರಿಸಲಾಗುತ್ತಿದೆ. ಆದ್ದರಿಂದ ಈ ಸುತ್ತೋಲೆಯಲ್ಲಿನ ವಿಷಯದ ಬಗ್ಗೆ ಎಲ್ಲ ಚಾಲನಾ ಸಿಬ್ಬಂದಿಗಳಿಗೆ ತಿಳಿವಳಿಕೆ ನೀಡಿ, ಇಂತಹ ದೂರುಗಳಿಗೆ ಅವಕಾಶ ನೀಡದಂತೆ ಕರ್ತವ್ಯ ನಿರ್ವಹಿಸಲು ಸೂಚನೆ ನೀಡಬೇಕು ಎಂದು ಸಂಬಂಧಪಟ್ಟ ಡಿಸಿ, ಡಿಎಂಗಳಿಗೆ ತಿಳಿಸಲಾಗಿದೆ.

ಅಲ್ಲದೆ ಎಲ್ಲ ಘಟಕಗಳ ಸೂಚನಾ ಫಲಕಗಳಲ್ಲಿ ಸುತ್ತೋಲೆಯ ಪ್ರತಿಯನ್ನು ಅಳವಡಿಸಲು ಕ್ರಮ ಕೈಗೊಳ್ಳಬೇಕು ಎಂದು ನಿಗಮದ ಮುಖ್ಯ ಸಂಚಾರಿ ವ್ಯವಸ್ಥಾಪಕರು ತಿಳಿಸಿದ್ದಾರೆ.

Leave a Reply

error: Content is protected !!
LATEST
ಹಾವೇರಿ: ಸರ್ಕಾರಿ ಬಸ್ ಹತ್ತಲು ಹೋದ ವೃದ್ಧೆ ಕಾಲುಗಳ ಮೇಲೆ ಹಿಂಬದಿ ಚಕ್ರ ಹರಿದು ಕಾಲುಗಳು ಕಟ್‌ KSRTC ಮಡಿಕೇರಿ: ಸಹೋದ್ಯೋಗಿ ಕಂಡಕ್ಟರ್‌ ಕೊಲ್ಲುವ ಬೆದರಿಕೆ ಹಾಕಿ ಗಾಳಿಯಲ್ಲಿ ಗುಂಡ್ಹಾರಿಸಿದ ಡ್ರೈವರ್‌ ಬಂಧನ KKRTC ರಾಯಚೂರು: ಲಿಂಗಸುಗೂರು ಘಟಕ ವ್ಯವಸ್ಥಾಪಕ, ಡಿಸಿ ಅಮಾನತಿಗೆ ಕರವೇ ಆಗ್ರಹ ಮೈಸೂರು: ಸಾಲದ ಸುಳಿಗೆ ಸಿಲುಕಿದ KSRTC ಕಂಡಕ್ಟ‌ರ್: ನಾಲೆಗೆ ಹಾರಿ ಆತ್ಮಹತ್ಯೆ ಎಸ್‌.ಎಂ.ಕೃಷ್ಣ ಇನ್ನಿಲ್ಲ- ಪ್ರೇಮ ಕೃಷ್ಣಗೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮುಶೋಕ ಸಂದೇಶ ಮಾಜಿ ಸಿಎಂ ಎಸ್.ಎಂ.ಕೃಷ್ಣ ನಿಧನಕ್ಕೆ ಸಿಎಂ, ಮಾಜಿ ಸಿಎಂಗಳು ಸೇರಿ ಅನೇಕ ಗಣ್ಯರ ಸಂತಾಪ ಮಾಜಿ ಸಿಎಂ SMK ನಿಧನ: ನಾಳೆ ಶಾಲಾ- ಕಾಲೇಜು, ಕಚೇರಿಗಳಿಗೆ ರಜೆ ಘೋಷಣೆ ಅಕ್ರಮ ಪಡಿತರ ವಿರುದ್ಧ ವಿಶೇಷ ಕಾರ್ಯಾಚರಣೆ: ಆಹಾರ ಸಚಿವ ಮುನಿಯಪ್ಪ KSRTC ನಿವೃತ್ತ ನೌಕರರಿಗೆ ಫ್ರೀ ಪಾಸ್‌ ಕೊಡಿ: ಹಣ ಕಟ್ಟಿದ ಮೇಲೆ ಪಾಸ್‌ ನೀಡುವುದು ಸಲ್ಲ BMTC- ಅನ್ಯ ಭಾಷೆ ಆಧಾರ್‌ಕಾರ್ಡ್‌ ವಿಳಾಸ ಕರ್ನಾಟಕದಾಗಿದ್ದಲ್ಲಿ ಮಾನ್ಯ ಮಾಡಿ: ಸಿಟಿಎಂ ಆದೇಶ