NEWSನಮ್ಮಜಿಲ್ಲೆನಮ್ಮರಾಜ್ಯ

KSRTC ಬಸ್‌ಗಳ ಟೈಯರ್‌ಗಳಲ್ಲಿ ಮೇಲೆದ್ದು ಬರುತ್ತಿವೆ ತಂತಿಗಳು – ಎಲ್ಲಿ ಹೋಗುತ್ತಿವೆ ಬಿಡಿಭಾಗಗಳು!?

ವಿಜಯಪಥ ಸಮಗ್ರ ಸುದ್ದಿ

ಚಾಮರಾಜನಗರ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಚಾಮರಾಜನಗರ ವಿಭಾಗದ ಕೊಳ್ಳೇಗಾಲ, ಗುಂಡ್ಲುಪೇಟೆ ಮತ್ತು ಚಾಮರಾಜನಗರ ಈ ಮೂರು ಘಟಕಗಳಲೂ ಬಹುತೇಕ ಬಸ್‌ಗಳಲ್ಲಿ ತಂತಿ ಕಾಣಿಸುತ್ತಿರುವ ಟೈರ್‌ಗಳೆ ಇವೆ. ಈ ಬಸ್‌ಗಳನ್ನು ಲಾಂಗ್‌ರೂಟ್‌, ಬೆಟ್ಟಗುಡ್ಡಗಳ ಮಾರ್ಗಗಳಲ್ಲಿ ಓಡಿಸುವುದಕ್ಕೆ ಬಿಡುತ್ತಿದ್ದು ಭಾರಿ ಪ್ರಮಾಣದಲ್ಲಿ ಅನಾಹುತವಾದರೆ ಯಾರು ಹೊಣೆಯಾಗುತ್ತಾರೆ ಎಂದು ಚಾಲನಾ ಸಿಬ್ಬಂದಿ ಅಳಲು ತೋಡಿಕೊಳ್ಳುತ್ತಿದ್ದಾರೆ.

ಘಟಕ ಮಟ್ಟದ ಅಧಿಕಾರಿಗಳು ಮೇಲಧಿಕಾರಿಗಳ ಆದೇಶ ಪಾಲನೆ ಮಾಡುವ ದೃಷ್ಟಿಯಿಂದ ಎಂದು ಹೇಳುತ್ತಿದ್ದಾರೆ. ಇನ್ನು ಪ್ರತಿ ತಿಂಗಳು ಚಾಮರಾಜನಗರ ವಿಬಾಗದಲ್ಲಿರುವ ಮೂರು ಘಟಕಗಳಿಗೂ 30 ಟೈಯರ್‌ಗಳನ್ನು ಕೊಡುತ್ತಿದ್ದಾರೆ. ಆದರೆ ಪ್ರತಿ ಘಟಕಗಳಲ್ಲೂ ತಲಾ ಸುಮಾರು 150 ಬಸ್‌ಗಳಿದ್ದು, ಬಹುತೇಕ ಎಲ್ಲ ಬಸ್‌ಗಳ ಟೈಯರ್‌ಗಳು ಸವೆದು ಹೋಗಿವೆ. ಹೀಗಿರುವಾ 30 ಟೈಯರ್‌ಗಳು ಸಾಲುತ್ತಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

ಇನ್ನು ಈ ರೀತಿ ತಂತಿ ಕಾಣಿಸುತ್ತಿರುವ ಟೈರ್‌ಗಳಿರುವ ಬಸ್‌ ಕನಿಷ್ಠ 35-45 ಕಿಮೀ ವೇಗವಾಗಿ ಚಲಿಸಿದರೂ ಬೆಟ್ಟಪ್ರದೇಶದಲ್ಲಿ ಯಾವರೀತಿಯ ಅನಾಹುತ ಸಂಭವಿಸುತ್ತದೋ ಎಂಬುದನ್ನು ಊಹಿಸಿಕೊಳ್ಳಲಿಕ್ಕೂ ಅಸಾಧ್ಯ. ಆದರೂ ಅದ್ಯಾವ ಭಂಡ ಧೈರ್ಯದ ಮೇಲೆ ಕೇಂದ್ರ ಕಚೇರಿಯಲ್ಲಿ ಕುಳಿತಿರುವ ಅಧಿಕಾರಿಗಳು ಈ ಬಸ್‌ಗಳ ಕಾರ್ಯಾಚರಣೆ ಮಾಡೋದಕ್ಕೆ ಸೂಚನೆ ನೀಡುತ್ತಿದ್ದಾರೋ ಗೊತ್ತಿಲ್ಲ.

ನೋಡಿ ಮೊನ್ನೆಯಷ್ಟೆ ವಿಭಾಗದ ಬಸ್ಸೊಂದು ಮಲೈ ಮಹದೇಶ್ವರ ಬೆಟ್ಟಕ್ಕೆ ಮಾರ್ಗಚರಣೆಗಾಗಿ ತಂತಿ ಕಾಣಿಸುತ್ತಿರುವ ಟೈರ್‌ಅನ್ನು ಮುಂದಿನ ಭಾಗದಲ್ಲಿ ಅಳವಡಿಸಿ ಕಳುಹಿಸಿ ಕೊಟ್ಟಿದ್ದರು, ಈ ರೀತಿ ಬೇಜವಾಬ್ದಾರಿ – ನಿರ್ಲಕ್ಷ್ಯತನದಿಂದ ಮಾರ್ಗಚರಣೆಗೆ ಕಳುಹಿಸಿ ಕೊಟ್ಟಿರುವ  ತಪ್ಪಿತಸ್ಥ ಅಧಿಕಾರಿಗಳು -ಸಿಬ್ಬಂದಿಗಳ ವಿರುದ್ಧ ಯಾರು ಕ್ರಮ ಜರುಗಿಸಬೇಕು. ಕಾರಣ ಮೇಲಧಿಕಾರಿಗಳ ಬೇಜವಾಬ್ದಾರಿಯಿಂದಲೇ ಈ ರೀತಿ ತಂತಿ ಕಾಣುವ ಟೈಯರ್‌ಗಳ ಬಸ್‌ಗಳನ್ನು ಕಾರ್ಯಾಚರಣೆ ಮಾಡಬೇಕಿದೆ.

ಸಾರ್ವಜನಿಕರು ಕೂಡ ಇಂಥ ನಿರ್ಲಕ್ಷ್ಯತನದ ಅಧಿಕಾರಿಗಳ ವಿರುದ್ಧ ಸೂಕ್ತ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದು, ಇದಿಷ್ಟೇ ಅಲ್ಲ ಇತ್ತೀಚೆಗೆ ಕೊಳ್ಳೇಗಾಲ ಘಟಕದಲ್ಲಿ ಇದೇ ರೀತಿಯ ಟೈರ್ ಅಳವಡಿಸಿ ಮಾರ್ಗಚರಣೆಗೆ ಕಳುಹಿಸಿದ ಸಂದರ್ಭದಲ್ಲಿ ಟೈರ್ ಬರ್ಸ್ಟ್ ಆಗಿ ಓರ್ವ ಮಹಿಳೆಯ ಕಾಲು ತುಂಡಾಗಿತ್ತು. ಆ ನೆನಪು ಇನ್ನೂ ಮಾಸಿಲ್ಲ. ಈ ನಡುವೆಯೇ ಮತ್ತೆ ಇಂಥ ಟೈರ್‌ಗಳ ಅಳವಡಿಕೆ ಮುಂದುವರಿಯುತ್ತಿದೆ.

ಹಿಂದೆ ನಡೆದಿದ್ದ ಆ ಪ್ರಕರಣದಲ್ಲಿ ಚಾಲಕನ ನಿರ್ಲಕ್ಷ್ಯವೇ ಟೈರ್ ಬರ್ಸ್ಟ್ ಆಗಿ ಓರ್ವ ಮಹಿಳೆಯ ಕಾಲು ತುಂಡಾಗಲು ಕಾರಣ ಎಂದು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ರೀತಿಯಾಗಿ ಖಾಲಿ ಬಸ್‌ಗಳು ಓಡಲು ಸಾಧ್ಯವಾಗದಂತಹ ಟೈರ್‌ಗಳನ್ನು ಅಳವಡಿಸಿ ಅನಾಹುತವಾದರೆ ಆ ತಪ್ಪನ್ನು ಚಾಲಕರ ಮೇಲೆ ಹೊರಿಸಿ ಅಧಿಕಾರಿಗಳು ಕೈತೊಳೆದುಕೊಳ್ಳುತ್ತಿದ್ದಾರೆ.

ಬಸ್‌ಗಳಲ್ಲಿ ಟೈರ್‌ ಸವೆದು ಹೋದಾಗ ಹೊಸ ಟೈರ್‌ ಅಳವಡಿಸುವುಕ್ಕೆ ನಿಗಮದಲ್ಲಿ ಸವಲತ್ತುಗಳಿಲ್ಲವೇ? ಅಥವಾ ಬಿಡಿ ಭಾಗಗಳ ಖರೀದಿಸುವ ನೆಪದಲ್ಲಿ ಆ ಹಣವನ್ನು ಇವರು ತಮ್ಮ ಜೇಬಿಗೆ ಇಳಿಸಿಕೊಂಡು ತಪ್ಪು ಲೆಕ್ಕ ತೋರಿಸಿ ಯಾಮಾರಿಸುತ್ತಿದ್ದಾರೆಯೇ? ಈ ಬಗ್ಗೆ ಸಾರಿಗೆ ಸಚಿವರೇ ಖುದ್ದು ವಿಚಾರಣೆ ನಡೆಸಿದರೆ ಸತ್ಯಾಸತ್ಯತೆ ಹೊರಬರಲಿದೆ ಎಂದು ನೌಕರರು ಮನವಿ ಮಾಡಿದ್ದಾರೆ.

ಇನ್ನು ಬಸ್‌ನ ಈ ಟೈರ್‌ ಸಿಡಿದರೆ ಅದರ ಎಲ್ಲ ಖರ್ಚನ್ನು ಚಾಲಕನ ವೇತನದಲ್ಲಿ ಕಡಿತಮಾಡುತ್ತಾರೆ ಈ ಮಹಾನುಭವ ಅಧಿಕಾರಿಗಳು. ಇನ್ನು ಈ ರೀತಿ ನಿಗಮದಲ್ಲಿ ನಿಯವಿದೆಯೇ ಎಂದು ಪ್ರಶ್ನಿಸಿದರೆ ಅಂಥ ನೌಕರರನ್ನು 300-400 ಕಿಮಿ ದೂರದ ಯಾವುದೋ ಒಂದು ಘಟಕಕ್ಕೆ ವರ್ಗಾವಣೆ ಮಾಡಿ ಭ್ರಷ್ಟಾಚಾರವನ್ನು ಮುಚ್ಚಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ ಕೆಲ ಅಧಿಕಾರಿಗಳು.

ಬಸ್‌ನ ಒಂದು ಕಿಟಕಿಯ ಗ್ಲಾಸ್‌ ಒಡೆದರೂ ಅದರ ನಷ್ಟವನ್ನು ಚಾಲಕರೇ ಭರಿಸಬೇಕಿದೆ. ಇನ್ನು ಬಿಸಿಲಿಗೆ ಬಸ್‌ನ ಗ್ಲಾಸ್‌ಗಳು ಏರ್‌ಬರ್ಸ್ಟ್‌ (Air burst) ಆದರು ಅದಕ್ಕೆ ಚಾಲಕರನ್ನೇ ಹೊಣೆ ಮಾಡಲಾಗುತ್ತಿದೆ. ಈ ಬಗ್ಗೆ ಈವರೆಗೂ ಯಾವುದೇ ಸಂಘಟನೆಗಳು ಚಕಾರವೆತ್ತಿಲ್ಲ. ಆದರೆ ನಿತ್ಯ ಒಂದಲ್ಲ ಒಂದುಕಡೆ ನೌಕರರು ಈ ತಮ್ಮದಲ್ಲದ ತಪ್ಪಿನ ಸಮಸ್ಯೆಗೆ  ಸಿಲುಕಿಕೊಂಡು ಈಗಲು ತಮ್ಮ ವೇತನದ ಹಣವನ್ನು ಈ ರೀತಿ ಕಟ್ಟುತ್ತಿದ್ದಾರೆ.

ಫ್ಯಾನ್‌ ಅಥವಾ ಎಸಿ ಕಚೇರಿಯಲ್ಲಿ ಕುಳಿತು ಅರಾಮಾಗಿ ನೌಕರರಿಗೆ ದಂಡ ಹಾಕುತ್ತಿರುವ ಕೆಲ ಭ್ರಷ್ಟ ಅಧಿಕಾರಿಗಳು ಬಿಡಿಭಾಗಗಳ ಖರೀದಿಗೆ ಬರುವ ಹಣವನ್ನು ಕಳ್ಳಲೆಕ್ಕ ತೋರಿಸಿ ಎಂಜಾಯ್‌ ಮಾಡುತ್ತಿದ್ದಾರೆ. ಇದಕ್ಕೆ ನಿಗಮಗಳ ಆಡಳಿತ ಮಂಡಳಿ ಮತ್ತು ಎಂಡಿಗಳನ್ನೇ ಹೊಣೆಗಾರರನ್ನಾಗಿ ಮಾಡಬೇಕು. ಚಾಲಕರಿಂದ ಅನ್ಯಾಯವಾಗಿ ವಸೂಲಿ ಮಾಡಿರುವ ಹಣವನ್ನು ವಾಪಸ್‌ ಕೊಡಿಸಬೇಕು. ಅಲ್ಲದೆ ಈ ರೀತಿ ಮುಂದೆ ವಸೂಲಿ ಮಾಡದಂತೆ ಭ್ರಷ್ಟ ಅಧಿಕಾರಿಗಳಿಗೆ ಎಚ್ಚರಿಕೆ ನೀಡಲು ಎಂಡಿಯನ್ನೇ ಹೊಣೆಗಾರರನ್ನಾಗಿ ಮಾಡಬೇಕು ಆಗ ಅಧಿಕಾರಿಗಳ ವಿರುದ್ಧ ಎಂಡಿ ಸೂಕ್ತ ಕ್ರಮ ಕೈಗೊಳ್ಳುತ್ತಾರೆ ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ.

Leave a Reply

error: Content is protected !!
LATEST
KSRTC ಬಸ್‌ ರಿಪೇರಿ ಮಾಡಿದ ಖರ್ಚಿನ ಬಿಲ್‌ನಲ್ಲಿ ಸ್ಕ್ರಾಪ್‌ನ ಹಣ ತೋರಿಸದೆ ಗುಳುಂ: ಕ್ರಮಕ್ಕಾಗಿ ಎಂಡಿಗೆ ದೂರು 160 ಕ್ಯಾಬಿನೆಟ್ ಸೆಕ್ರೆಟರಿಯೇಟ್, ಡೆಪ್ಯೂಟಿ ಫೀಲ್ಡ್ ಆಫೀಸರ್ ಹುದ್ದೆಗಳಿಗೆ ಕೂಡಲೇ ಅರ್ಜಿ ಹಾಕಿ ಮುನಿರತ್ನಗೆ ಜಾಮೀನು ಮಂಜೂರು ಮಾಡಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಹೋರಾಟ ಪಂಜಾಬ್, ಹರಿಯಾಣ ರೈತರದಷ್ಟೇ ಎಂಬಂತೆ ಬಿಂಬಿಸುವ ಸುಪ್ರೀಂ ಆದೇಶ ಪುನರ್ ಪರಿಶೀಲಿಸಿ: ಕುರುಬೂರ್‌ ಶಾಂತಕುಮಾರ್ KSRTC ಅಧಿಕಾರಿಗಳು-ನೌಕರರಲ್ಲಿ, ನೌಕರರು-ನೌಕರರಲ್ಲೇ ಒಗ್ಗಟ್ಟಿಲ್ಲಕ್ಕೆ ಈ ಸ್ಥಿತಿ: NWKRTC ನಿಗಮದ ಅಧ್ಯಕ್ಷ ಭರಮಗೌಡ KSRTC ನೌಕರರ ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿ ಬೇಗ ಕೊಟ್ಟರೆ ನನಗೂ ಸಮಾಧಾನ: ಸಚಿವ ರಾಮಲಿಂಗಾ ರೆಡ್ಡಿ KSRTC-ನಮ್ಮ ಸರ್ಕಾರ ಸರಿ ಸಮಾನ ವೇತನ ಕೊಡುತ್ತದೆ ನೆಮ್ಮದಿಯಾಗಿರಿ: ಕಾಂಗ್ರೆಸ್‌ ಪ್ರಣಾಳಿಕೆ ಸಮಿತಿ ಉಪಾಧ್ಯಕ್ಷ ರಾಧಾಕೃ... KSRTC: ಅಗ್ರಿಮೆಂಟ್‌ ಎಂಬ ಸೆಟಲ್‌ಮೆಂಟ್‌ ಭೂತವನ್ನು ಬುಡಸಮೇತ ಕಿತ್ತೊಗೆಯಬೇಕು - ವಕೀಲ ನಟರಾಜ ಶರ್ಮಾ ವೇತನ ಸಂಬಂಧ 4ವರ್ಷಕ್ಕೊಮ್ಮೆ ಆಗುವ ಅಗ್ರಿಮೆಂಟ್‌ ಬೇಡ ಕೊಟ್ಟ ಭರವಸೆ ಈಡೇರಿಸಿ: ಸಾರಿಗೆ ಸಚಿವರಿಗೆ ಚಂದ್ರು ಒತ್ತಾಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ 247 ಹುದ್ದೆಗಳಿಗೆ ಅರ್ಜಿ ಆಹ್ವಾನ: 3 ವರ್ಷ ವಯಸ್ಸಿನ ಸಡಿಲಿಕೆ, ಡಿಗ್ರಿ ಅರ್ಹತೆ