NEWSದೇಶ-ವಿದೇಶ

ನೋಯ್ಡಾದ 40 ಅಂತಸ್ತುಗಳ ಅವಳಿ ಕಟ್ಟ ಡ ನೆಲಸಮಕ್ಕೆ ಸುಪ್ರೀಂ ಕೋರ್ಟ್ ಆದೇಶ

ವಿಜಯಪಥ ಸಮಗ್ರ ಸುದ್ದಿ

ನ್ಯೂಡೆಲ್ಲಿ:  ನೋಯ್ಡಾದಲ್ಲಿ ಸೂಪರ್ಟೆಕ್ ಲಿಮಿಟೆಡ್ ನಿರ್ಮಿಸಿರುವ 40 ಅಂತಸ್ತುಗಳ ಅವಳಿ  ಕಟ್ಟಡಗಳಿಗೆ ಸಂಬಂಧಿಸಿದ ಬೈಲಾಗಳನ್ನು ಉಲ್ಲಂಘಿಸಿರುವ ಕಾರಣ ಮೂರು ತಿಂಗಳ ಒಳಗಾಗಿ ಆ 40 ಅಂತಸ್ತುಗಳ ಕಟ್ಟಡಗಳನ್ನು ನೆಲಸಮಗೊಳಿಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ.

ಅವಳಿ ಕಟ್ಟ ಡಗಳ ನಿರ್ಮಾಣದಿಂದಾಗಿ ಕಿರುಕುಳ ಅನುಭವಿಸಿದ್ದಕ್ಕಾಗಿ ರೆಸಿಡೆಂಟ್ಸ್ ವೆಲ್ಫೇರ್ ಅಸೋಸಿಯೇಶನ್‌ಗೆ 2 ಕೋಟಿ ರೂ. ಪಾವತಿಸಬೇಕು. ಇನ್ನು ಈ ಕಟ್ಟ ಡಗಳಲ್ಲಿ ಮನೆಗಳನ್ನು ಖರೀದಿಸಿರುವವರಿಗೆ, ಮನೆ ಬುಕಿಂಗ್ ವೇಳೆ ಅವರು ನೀಡಿದ್ದ ಮೊತ್ತವನ್ನು ವಾರ್ಷಿಕ ಶೇ.12ರ ಬಡ್ಡಿಯೊಂದಿಗೆ ಮರುಪಾವತಿಸಬೇಕು ಎಂದೂ ಸುಪ್ರೀಂ ಕೋರ್ಟ್ ಆದೇಶಿಸಿದೆ.

ಅರ್ಜಿಯ ವಿಚಾರಣೆ ನಡೆಸಿದ ನ್ಯಾ ಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್ ಹಾಗೂ ಎಂ.ಆರ್.ಶಾ ಅವರಿರುವ ನ್ಯಾ ಯಪೀಠ, ‘ಅವಳಿ ಕಟ್ಟ ಡಗಳನ್ನು ನೆಲಸಮಗೊಳಿಸುವಂತೆ 2014ರ ಏಪ್ರಿಲ್ 1ರಂದು ಅಲಹಾಬಾದ್ ಹೈಕೋರ್ಟ್ ನೀಡಿರುವ ತೀರ್ಪು ಸರಿಯಾಗಿದೆ. ಈ ತೀರ್ಪಿನಲ್ಲಿ ಮಧ್ಯ ಪ್ರವೇಶಿಸುವ ಅಗತ್ಯ ವಿಲ್ಲ ಎಂದು ಹೇಳಿದೆ.

ಸೂಕ್ತ ಏಜೆನ್ಸಿ ಹಾಗೂ ನೋಯ್ಡಾ ಪ್ರಾಧಿಕಾರದ ಮೇಲ್ವಿ ಚಾರಣೆಯಲ್ಲಿ ಕಟ್ಟ ಡಗಳ ನೆಲಸಮ ಕಾರ್ಯ ನಡೆಯಬೇಕು. ಈ ಕಾರ್ಯಕ್ಕೆ ತಗುಲುವ ಎಲ್ಲ ವೆಚ್ಚ ವನ್ನು ಸೂಪರ್ಟೆಕ್  ಭರಿಸಬೇಕು ಎಂದು ನ್ಯಾ ಯಪೀಠ ಆದೇಶದಲ್ಲಿ ತಿಳಿಸಿದೆ.

ದೇಶದ ಮಹಾನಗರಗಳಲ್ಲಿ ನಿಯಮಗಳನ್ನು ಉಲ್ಲಂ ಘಿಸಿ ಕಟ್ಟ ಡಗಳನ್ನು ನಿರ್ಮಾಣಮಾಡುತ್ತಿರುವುದು ಇತ್ತೀ ಚಿನ ದಿನಗಳಲ್ಲಿ ಹೆಚ್ಚು ತ್ತಿದೆ. ಇಂಥ ನಿರ್ಮಾಣಗಳಲ್ಲಿ ಸಂಬಂಧಿಸಿದ ಪ್ರಾಧಿಕಾರಗಳು ಸಹ ಶಾಮೀಲಾಗಿರುವುದು ಕಂಡುಬಂದಿದೆ. ಇಂಥ ವಿಷಯಗಳಲ್ಲಿ ಕಠಿಣ ಕ್ರಮ ಕೈಗೊಳ್ಳು ವುದು ಅಗತ್ಯ ಎಂದೂ ನ್ಯಾ ಯಪೀಠ ಹೇಳಿದೆ.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು