ಬೆಂಗಳೂರು: ಡಿಸೇಲ್, ಅಕ್ಕಿ, ಬಟ್ಟೆಗೆ ಜಾಸ್ತಿ ಆದ್ರೆ ದುಡ್ಡು ಕೊಡ್ತೀರಾ.. ಮಟನ್ 100 ರೂ. ಇದ್ದದ್ದು 500 ರೂ. ಆದ್ರೆ ತಗೋತೀರ ಆದರೆ, ಅದೇ ಒಂದು ಸರ್ಕಾರ ಏನಾದರೊಂದು ತೀರ್ಮಾನ ತೆಗೆದುಕೊಂಡರೆ ಈ ರೀತಿ ಮಾತಾಡುತ್ತೀರ. ಇದು ಸರಿನಾ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಪ್ರಶ್ನಿಸಿದ್ದಾರೆ.
ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಬಸ್ ಪ್ರಯಾಣದ ಟಿಕೆಟ್ ದರವನ್ನು ಶೇ.15ರಷ್ಟು ಏರಿಕೆ ಮಾಡಿ ಅದು ಇದೇ ಜ.5ರಿಂದ ಜಾರಿಗೆ ಬರುವುದಕ್ಕೆ ತೀರ್ಮಾನಿಸಲಾಗಿದೆ. ಹೀಗಾಗಿ ಬಸ್ ಟಿಕೆಟ್ ದರ ಏರಿಸಿರುವುದಕ್ಕೆ ವಿಪಕ್ಷದವರು ವಿರೋಧ ವ್ಯಕ್ತಪಡಿಸುತ್ತಿರುವುದಕ್ಕೆ ಈ ರೀತಿ ಪ್ರತಿಕ್ರಿಯಿಸಿದ್ದಾರೆ ಕೃಷಿ ಸಚಿವರು.
ಬಸ್ ಟಿಕೆಟ್ ದರ ಏರಿಕೆ ಕುರಿತು ಬೆಂಗಳೂರಿನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಕ್ತಿ ಯೋಜನೆಗೂ ಟಿಕೆಟ್ ದರ ಏರಿಕೆಗೂ ಏನು ಸಂಬಂಧ. ಇದಕ್ಕೂ ಅದಕ್ಕೂ ಯಾವುದೇ ಸಂಬಂಧ ಇಲ್ಲ. ದರ ಪರಿಷ್ಕರಣೆ ಆಗಿ 5-10 ವರ್ಷ ಆಗಿದೆ ಹೀಗಾಗಿ ದರ ಏರಿಕೆ ಮಾಡುವುದು ಈಗಿನ ಕಾಲಘಟಕ್ಕೆ ಅವಶ್ಯ ಎಂದು ಹೇಳಿದರು.
ಇನ್ನು ನೀವು ಡೀಸೆಲ್, ಅಕ್ಕಿ, ಬಟ್ಟೆಗೆ ಜಾಸ್ತಿ ಆದ್ರೆ ದುಡ್ಡು ಕೊಡ್ತೀರಾ.. ಮಟನ್ 100 ರೂಪಾಯಿ ಇದ್ದದ್ದು, 500 ರೂಪಾಯಿ ಆದ್ರೂ ತಗೋತೀರ, ಬೇಳೆ, ಎಣ್ಣೆ ತಗೋತೀರ.. ಹಾಗೆ ಸರ್ಕಾರ ಒಂದು ಸಂಸ್ಥೆಗೆ ಎಷ್ಟು ಅಂತ ಸಹಾಯಧನ ಕೊಡೋಕೆ ಆಗುತ್ತೆ ಎಂದು ಪ್ರಶ್ನಿಸಿದರು.
ಆಂಧ್ರ, ಕೇರಳ, ತೆಲಂಗಾಣದಲ್ಲಿ ನಮಗಿಂತಲೂ ಹೆಚ್ಚಾಗಿ ಏರಿಕೆ ಮಾಡಿ ಮಾಡಿದ್ದಾರೆ. ಆದ್ರೆ ನಮ್ಮಲ್ಲಿ 5-10 ವರ್ಷಗಳಿಂದ ಪರಿಷ್ಕರಣೆ ಆಗಿಲ್ಲ. ಅಲ್ಲದೇ 7ನೇ ವೇತನ ಆಯೋಗದಲ್ಲಿ ನೌಕರರಿಗೆ ವೇತನ ಹೆಚ್ಚಳ ಮಾಡಲಾಗಿದೆ. ಹೀಗೆ ಮಾಡಿದಾಗ, ಸಂಸ್ಥೆ ಚೆನ್ನಾಗಿ ನಡೆಯಬೇಕು ಅಂದ್ರೆ, ಗ್ರಾಮೀಣ ಪ್ರದೇಶಕ್ಕೆ ಸೇವೆ ಒದಗಿಸಬೇಕು.
ಸಂಸ್ಥೆಗೆ ಮೂಲ ಸೌಕರ್ಯ ಕೊಡಬೇಕು ಅಂದ್ರೆ ದರ ಏರಿಕೆ ಅನಿವಾರ್ಯ. 2-3 ವರ್ಷಕ್ಕೊಮ್ಮೆ ಹೆಚ್ಚಳ ಮಾಡಬೇಕು ಎಂದು ಸಚಿವರು ಹೇಳಿದರು.
ಆದರೆ ಕೃಷಿ ಸಚಿವರಿಗೆ ಸಾರಿಗೆ ನೌಕರರಿಗೆ ಇನ್ನೂ 7ನೇ ವೇತನ ಆಯೋಗದಲ್ಲಿ ವೇತನ ಹೆಚ್ಚಳ ಮಾಡಿಲ್ಲ ಅದೇ ರೀತಿ ಆಗಬೇಕು ಎಂಬ ಬೇಡಿಕೆ ಇಟ್ಟು ನೌಕರರು ಕಳೆದ 5 ವರ್ಷದಿಂದಲೂ ಹೋರಾಟ ಮನವಿ ಮಾಡುತ್ತಲೇ ಬಂದಿದ್ದಾರೆ ಎಂಬುವುದು ತಿಳಿಯದಿರುವುದು ಮಾತ್ರ ವಿಪರ್ಯಾಸ.
ಏನೆ ಇರಲಿ ತಮ್ಮ ಬಾಯಲ್ಲಿ ಬಂದಂತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರಿಗೆ 7ನೇ ವೇತನ ಆಯೋಗದಲ್ಲಿ ವೇತನ ಹೆಚ್ಚಳ ಮಾಡುವುದಕ್ಕೆ ನೀವು ನಿಮ್ಮ ಸರ್ಕಾರಕ್ಕೆ ಸಲಹೆ ಕೊಡಬೇಕು ಅದೂ ಕೂಡ ಇದೇ ಸಂಕ್ರಾಂತಿ ಬಳಿಕ ಹೆಚ್ಚಳ ಮಾಡುವ ಬಗ್ಗೆ ಸಾರಿಗೆ ಸಚಿವರು ಹೇಳಿದ್ದಾರೆ. ಆಗಲಾದರೂ ಹೆಚ್ಚಳ ಮಾಡುವುದಕ್ಕೆ ಸಲಹೆ ಕೊಡಿ ಎಂದು ಸಮಸ್ತ ನೌಕರರು ಮನವಿ ಮಾಡಿದ್ದಾರೆ.