NEWS

ಸಾಧಕರ ಜಯಂತಿ ಪ್ರಚಾರಕ್ಕಷ್ಟೇ ಸಿಮೀತವಾಗಬಾರದು : ರೈತರತ್ನ ಕುರುಬೂರ್‌ ಶಾಂತಕುಮಾರ್‌

ವಿಜಯಪಥ ಸಮಗ್ರ ಸುದ್ದಿ

ಮೈಸೂರು: ಸಾಧಕರ ಜಯಂತಿ ಆಚರಣೆ ಪ್ರಚಾರದ ಕಾರ್ಯಾವಾಗಬಾರದು. ಸಾಧಕರ ಚಿಂತನೆಗಳು ಕಾರ್ಯರೂಪಕ್ಕೆ ಬರಬೇಕು ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ, ರೈತರತ್ನ ಕುರುಬೂರ್ ಶಾಂತಕುಮಾರ್ ಹೇಳಿದ್ದಾರೆ.

ನಗರದಲ್ಲಿ ವಿಶ್ವಗುರು ಬಸವಣ್ಣ ಜಯಂತಿ ಅಂಗವಾಗಿ ಸಂಘದಿಂದ ಆಯೋಜಿಸಿದ್ದ ಕಾಯಕ ಶ್ರೇಷ್ಠ ಪ್ರಶಸ್ತಿ ಪುರಸ್ಕಾರ ಸಮಾರಂಭವನ್ನು ವಿಶ್ವಗುರು ಬಸವಣ್ಣನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ವಚನಗಳನ್ನು ಹಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಸಮಾಜಕ್ಕೆ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸುವ ಜನರೇ ಕಣ್ಮರೆಯಾಗುತ್ತಿದ್ದಾರೆ. ನಮ್ಮ ಸಂಘಟನೆಯಿಂದ ಗೌರವಿಸುತ್ತಿರುವ ಕಾಯಕ ಶ್ರೇಷ್ಠ ಪುರಸ್ಕೃತರು ಆದರ್ಶಗಳನ್ನು ಇಟ್ಟುಕೊಂಡು ವೃತ್ತಿಯಲ್ಲಿ ತೊಡಗಿದ್ದಾರೆ. ಇದು ನಮಗೆ ಮೆಚ್ಚುಗೆ ಸಂಗತಿಯಾಗಿದೆ ಎಂದರು.

ಇನ್ನು ಸಮಾಜ ಸುಧಾರಕರ ಹೆಸರಿನಲ್ಲಿ ಹಲವಾರು ಜಯಂತಿಗಳು ನಡೆಯುತ್ತವೆ. ಆದರೆ ಅಂತಹ ಮಹನೀಯರ ಆದರ್ಶಗಳು ಮಾಯವಾಗಿವೆ, ಇದು ದುರ್ದೈವದ ಸಂಗತಿ. 12ನೇ ಶತಮಾನದಲ್ಲಿ ಬಸವಣ್ಣನವರು ಸಾಮಾಜಿಕವಾಗಿ ಆರ್ಥಿಕವಾಗಿ ಹಿಂದುಳಿದ ತುಳಿತಕ್ಕೆ ಒಳಗಾದ ಸಮುದಾಯಗಳನ್ನು ಗುರುತಿಸಿ ಸಮಾನತೆಗಾಗಿ ಮೀಸಲಾತಿ ನೀಡಿದರು ಇಂದು ಅದೇ ಮೀಸಲಾತಿ ಮತಗಳಿಕೆ ಅಸ್ತ್ರವಾಗಿದೆ. ಜತೆಗೆ ಇದು ಕೆಲವೇ ಕುಟುಂಬಗಳ ಸೊತ್ತಾಗಿದೆ ಇದು ನ್ಯಾಯವಲ್ಲ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ನಿವೃತ್ತ ಅರ್ಥಶಾಸ್ತ್ರ ಪ್ರಾಧ್ಯಾಪಕ ಡಾ.ಎಂ.ಜಿ. ಬಸವರಾಜ್, ರೈತರು ಬೆಳೆ ಪದ್ಧತಿ ಬದಲು ಸಮಗ್ರ ಕೃಷಿಯಲ್ಲಿ ಸಹಕಾರಿ ಬೇಸಾಯದ ಮೂಲಕ ಬದಲಾವಣೆ ಕಾಣಲು ಸಾಧ್ಯವಿದೆ ಎಂದರು.

ಇನ್ನು ರಸಗೊಬ್ಬರ ಹೇಗೆ ಉದಯವಾಯಿತು ಎಂದರೆ ಜರ್ಮನಿಯ ಮೊದಲ ಮಾಹಾಯುದ್ಧದಲ್ಲಿ ವಿರೋಧಿ ಸೈನಿಕರನ್ನು ಬಗ್ಗು ಬಡಿಯಲು ವಿಷಾನಿಲ ಕಂಡುಹಿಡಿದು ಪ್ರಯೋಗಿಸಲಾಯಿತು. ಈ ವೇಳೆ ಲಕ್ಷಾಂತರ ಸೈನಿಕರು ಆಹುತಿಯಾದರೂ. ನಂತರದ ವರ್ಷಗಳಲ್ಲಿ ಅದೇ ಜಾಗದಲ್ಲಿ ಹುಲುಸಾದ ಬೆಳೆ ಬೆಳೆದಿತ್ತು. ಅದನ್ನು ಕಂಡು ಸಂಶೋಧಕರು ಚಿಂತನೆ ನಡೆಸಿ ಆಹಾರ ಉತ್ಪಾದನೆ ಹೆಚ್ಚಿಸಲು ರಸಗೊಬ್ಬರ ಕಂಡುಹಿಡಿದರು ಎಂದು ತಿಳಿಸಿದರು.

ನೋಡಿ ಕೆಟ್ಟ ಉದ್ದೇಶದಿಂದ ಕಂಡು ಹಿಡಿದ ಸಂಶೋಧನೆ ರಸಗೊಬ್ಬರವಾಗಿ ಮಾರ್ಪಾಡಾಯಿತು ಅಂದರೆ ರಸಗೊಬ್ಬರ ಎಂಬುವುದು ವಿಷ ಆದ್ದರಿಂದ ರೈತರು ಈ ರಸಗೊಬ್ಬರ ಬಳಕೆಯನ್ನು ಅಂತ ಹಂತವಾಗಿ ನಿಲ್ಲಿಸಿ ಸಾವಯುವ ಕೃಷಿಗೆ ಒತ್ತುನೀಡಬೇಕು ಎಂದು ಸಲಹೆ ನೀಡಿದರು.

ಸಮಾರಂಭದಲ್ಲಿ ಕಾಯಕ ಶ್ರೇಷ್ಠ ಪುರಸ್ಕಾರ ಸ್ವೀಕರಿಸಿ ಮಾತನಾಡಿದ ಕನ್ನಡ ಪ್ರಭ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ಅಂಶಿ ಪ್ರಸನ್ನ ಕುಮಾರ್, ಬಸವಣ್ಣನವರು ಘೋಷಣೆ ಮಾಡಿದ ಕಾಯಕವೇ ಕೈಲಾಸ ಸಂದೇಶ ವಿಶ್ವಕ್ಕೆ ಮಾದರಿ ಬಸವಣ್ಣನವರ ತತ್ವ ಆದರ್ಶಗಳನ್ನು ಪರಿಣಾಮಕಾರಿಯಾಗಿ ಸಂಘಟನೆಗಳು ಜನರಿಗೆ ತಿಳಿಸಬೇಕು ಎಂದು ಕರೆ ನೀಡಿದರು.

ಕೊರೊನಾ ಕಾಲದಲ್ಲಿ ರೈತರು ಸುಮ್ಮನಾಗಿ ಮನೆಯಲ್ಲಿದ್ದರೆ ಆಹಾರ ಎಲ್ಲಿ ಸಿಗುತ್ತಿತ್ತು. ದೇಶದ ಸೈನಿಕರ ಮತ್ತು ರೈತರನ್ನು ಪ್ರತಿಯೊಬ್ಬರೂ ಗೌರವಿಸಬೇಕು. ಹಳ್ಳಿಗಳು ವೃದ್ಧಾಶ್ರಮವಾಗಬಾರದು, ಆಧುನಿಕ ತಂತ್ರಜ್ಞಾನಗಳ ಮೂಲಕ ಪ್ರಗತಿಶೀಲವಾಗಿ ಮುಂದುವರಿಯಬೇಕು ಎಂದರು.

ಕಾಯಕ ಶ್ರೇಷ್ಠ ಪುರಸ್ಕಾರ ಸ್ವೀಕರಿಸಿದ ಜೆಎಸ್ಎಸ್ ಆಸ್ಪತ್ರೆಯ ಹೃದಯ ಶಸ್ತ್ರ ಚಿಕಿತ್ಸಕ ಡಾ.ಶ್ಯಾಮ್ ಪ್ರಸಾದ್ ಶೆಟ್ಟಿ ಮಾತನಾಡಿ, ಬಸವಣ್ಣನವರ ಆದರ್ಶಗಳ ಹಿನ್ನೆಲೆಯಲ್ಲಿ ಸೇವೆ ಎಂಬ ಕಾಯಕ ಪ್ರಾಮಾಣಿಕವಾಗಿ ಶ್ರದ್ಧೆಯಿಂದ ಮಾಡುವ ಮೂಲಕ ಸಂತೋಷ ಕಾಣುತಿದ್ದೇನೆ ನನ್ನನ್ನ ಗುರುತಿಸಿ ಗೌರವಿಸಿರುವುದು ಮತ್ತಷ್ಟು ಸಂತೋಷ ಉಂಟು ಮಾಡಿದೆ ಎಂದರು.

ಪ್ರಗತಿಪರ ರೈತರಾದ ರಾಜಶೇಖರ್, ಕೃಷಿಕ ಕುಮಾರ್, ಕೃಷಿ ಕಾರ್ಮಿಕ ಮಹಿಳೆ ವಾಜಮಂಗಲದ ಸಾಕಮ್ಮ ಅವರಿಗೆ ಕಾಯಕ ಶ್ರೇಷ್ಠ ನೀಡಿ ಪುರಸ್ಕರಿಸುವ ಜತೆಗೆ ಹಣ್ಣಿನ ಗಿಡಗಳನ್ನು ನೆನಪಿನ ಕೊಡುಗೆಯಾಗಿ ನೀಡಿ ಹಸಿರು ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಲಾಯಿತು.

ವಿಶ್ವ ಫೌಂಡೇಶನ್ ವಚನಕುಮಾರ ಸ್ವಾಮಿ ಕಾರ್ಯಕ್ರಮ ನಿರೂಪಣೆ ಮಾಡಿದರೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬರಡನಪುರ ನಾಗರಾಜ್ ಸ್ವಾಗತಿಸಿ ಅತ್ತಹಳ್ಳಿ ದೇವರಾಜ್ ವಂದನಾರ್ಪಣೆ ಮಾಡಿದರು.

Vijayapatha - ವಿಜಯಪಥ

1 Comment

  • ರೈತರತ್ನ ಅಂತೆ ಯಾರು ಕೊಟ್ರು ನಿಮಗೆ ಈ ಬಿರುದನ್ನು ಶಾಂತಕುಮಾರ sir.. ಮೊದಲು ನಿಮ್ಮ ಜಮೀನಿನಲ್ಲಿ ಸಾವಯವ ಕೃಷಿ ಮಾಡ್ತಿದಿರ ತಿಳಿಸಿ

Leave a Reply

error: Content is protected !!
LATEST
KSRTC ಬಸ್‌ -ಕಾರು ನಡುವೆ ಅಪಘಾತ: ಅನಾರೋಗ್ಯದ ನಡುವೆ ಕಾರು ಚಲಾಯಿಸಿದ ಪತಿ ಮೃತ- ಪ್ರಣಾಪಾಯದಿಂದ ಪತ್ನಿ ಪಾರು 600ರಿಂದ 800 ಮಂದಿ ಅಧಿಕಾರಿಗಳಿಗಾಗಿ 1.07 ಲಕ್ಷ ನೌಕರರಿಗೆ ಅನ್ಯಾಯ ಮಾಡಲು ಹೊರಟಿರುವುದು ನ್ಯಾಯವೇ? KSRTC ನಾಲ್ಕೂ ನಿಗಮಗಳ ಸಾರಿಗೆ ನೌಕರರಿಗೆ ಸಮಾನ ವೇತನ ಲಾಭವೋ-ನಷ್ಟವೋ..!?? ಹರಿಯಾಣದಲ್ಲಿ ಸಮಾವೇಶ: ಎಂಎಸ್‌ಪಿ ಖಾತ್ರಿ ಕಾನೂನು ಜಾರಿಗೆ ಅನ್ನದಾತರ ಪಟ್ಟು ಪ್ರಜಾಪ್ರಭುತ್ವದ ಉಳಿವಿಗಾಗಿ ಮಾನವ ಸರಪಳಿ : ಉಸ್ತುವಾರಿ ಸಚಿವ ಮುನಿಯಪ್ಪ BMTC ಅಧಿಕಾರಿಗಳ ವಾಹನಗಳಿಗೂ ಖಾಸಗಿ ಚಾಲಕರ ನೇಮಕಕ್ಕೆ ಟೆಂಡರ್‌ ಕರೆದ ಸಂಸ್ಥೆ KSRTC ಮಡಿಕೇರಿ: ವೇತನ ಬಿಡುಗಡೆ ಆಗ್ರಹಿಸಿ ಪ್ರತಿಭಟನೆಗೆ ಇಳಿದ ಗುತ್ತಿಗೆ ಚಾಲಕರು KSRTC ನೌಕರರ ನಂಬಿಸಲು ಹೋದ ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳಿಂದಲೇ ಅವರ ಊಸರವಳ್ಳಿ ಬಣ್ಣ ಬಯಲು..! KSRTC : ಗಣಪತಿ ಪ್ರತಿಷ್ಠಾಪಿಸಿದ್ದರಿಂದ ಡಿಪೋ ಮುಂದೆ ಚಾಲಕ ರವಿ ಪಾರ್ಥಿವ ಶರೀರ ಇಡಲಾತ್ತು, ಪ್ರಮಾದವಾಗಿಲ್ಲ- ಡಿಎಂ ಸಮ... 10 ವರ್ಷದ ಆಧಾರ್‌ ನವೀಕರಣಕ್ಕೆ ಡೆಡ್‌ಲೈನ್‌ ಫಿಕ್ಸ್‌: ನಾಳೆ ಅಂತಿಮ ಗಡುವು- ಬಳಿಕ ದಂಡ