₹5 ಸಾವಿರ ಕೊಟ್ಟರೆ ಕೆಲಸಕ್ಕೆ ವಾಪಸ್ ಬರುತ್ತೀಯೆ ನೋಡು: ವಜಾಗೊಂಡ ನೌಕರರ ಸುಲಿಗೆಗೆ ನಿಂತರೆ ಸಾರಿಗೆ ಸಂಘಟನೆಯೊಂದರ ಮುಖಂಡರು..?

- 2021ರ ಮುಷ್ಕರದ ವೇಳೆ ವಜಾಗೊಂಡಿರುವ ಯಾರು ಕೂಡ ಹಣ ಕೊಡಬೇಡಿ
- ನಿಮ್ಮ ಎಲ್ಲ ಕೇಸ್ಗಳು ಅತೀ ಶೀಘ್ರದಲ್ಲೇ ಇತ್ಯರ್ಥವಾಗಲಿವೆ
- ಸುಳ್ಳು ಹೇಳಿ ನಿಮ್ಮಿಂದ ಹಣ ಪೀಕಲು ಬರುತ್ತಿದ್ದಾರೆ ಹುಷಾರ್
ಬೆಂಗಳೂರು: 2021ರ ಸಾರಿಗೆ ಮುಷ್ಕರದ ಸಮಯದಲ್ಲಿ ಸಾರಿಗೆ ನೌಕರರು ಮತ್ತು ಅವರ ಕುಟುಂಬ ಸದಸ್ಯರ ಮೇಲೆ ದಾಖಲಿಸಿರುವ ನೂರಕ್ಕೂ ಹೆಚ್ಚು ಪೊಲೀಸ್ ಕೇಸ್ಗಳು ಇತ್ಯರ್ಥವಾಗುವ ಹಂತ ತಲುಪಿವೆ. ಇನ್ನು ಈ ನಡುವೆ ಈ ಕೇಸ್ ವಾಪಸ್ ಪಡೆಯಲು ಅಧಿಕಾರಿಗಳಿಗೆ ಹೇಳುತ್ತೇವೆ. ಆದರೆ ಅವರಿಗೆ 5 ಸಾವಿರ ರೂ. ಲಂಚ ಕೊಡಬೇಕು ಎಂದು ಸಾರಿಗೆ ಸಂಸ್ಥೆಯ ಸಂಘಟನೆಯೊಂದರ ಪದಾಧಿಕಾರಿಗಳು ಪೊಲೀಸ್ ಕೇಸ್ ದಾಖಲಾಗಿರುವ ನೌಕರರ ಬೆನ್ನುಬಿದ್ದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಅಂದರೆ, 2021ರ ಸಾರಿಗೆ ಮುಷ್ಕರದ ಸಮಯದಲ್ಲಿ ಬಸ್ ಚಾಲನೆ ಮಾಡಿದ ನೌಕರರಿಗೆ ಮುಷ್ಕರದ ಸಮಯದಲ್ಲಿ ಬಸ್ ಏಕೆ ಓಡಿಸುತ್ತಿದ್ದೀಯ ಎಂದು ಕೇಳಿದ ಕಾರಣ ಬಿಎಂಟಿಸಿ ಆಡಳಿತ ಮಂಡಳಿ ಫೋನ್ ಮಾಡಿರುವವರ ವಿರುದ್ಧ ಪೊಲೀಸ್ ಕೇಸನ್ನು ದಾಖಲಿಸಿ ಕೆಲಸದಿಂದ ವಜಾ ಮಾಡಿದೆ.
ಈ ಆಡಳಿತ ಮಂಡಳಿ ದಾಖಲಿಸಿರುವ ಪೊಲೀಸ್ ಕೇಸ್ಗಳನ್ನು ಹಿಂಪಡೆಯಲು ಸರ್ಕಾರಕ್ಕೆ ಸಲ್ಲಿಸಿರುವ ಮನವಿಯಲ್ಲಿ 98 ಕೇಸುಗಳು ಇದ್ದು, ಈ ಕೇಸ್ಗಳನ್ನು ಈಗಾಗಲೇ ಸರ್ಕಾರದ ಮಟ್ಟದಲ್ಲಿ ಹಿಂಪಡೆಯುವ ಬಗ್ಗೆ ಅಂತಿಮಘಟ್ಟ ತಲುಪಿದ್ದು ಅತೀ ಶೀಘ್ರದಲ್ಲೇ ಈ ಎಲ್ಲ ಕೇಸ್ಗಳನ್ನು ಆಡಳಿತ ಮಂಡಳಿ ಹಿಂಪಡೆಯಲಿದೆ. ಹೀಗಾಗಿ ಇದನ್ನು ತಿಳಿದ ಸಾರಿಗೆ ನೌಕರರ ಸಂಘಟನೆಯೊಂದರ ಮುಖಂಡರು ವಜಾಗೊಂಡಿರುವ ನೌಕರರಿಗೆ ಫೋನ್ ಮಾಡಿ ಲಂಚಕೊಟ್ಟರೆ ನಿಮ್ಮ ಕೇಸ್ ವಾಪಸ್ ಪಡೆಯುತ್ತಾರೆ ಇಲ್ಲದಿದ್ದರೆ ಕಷ್ಟವಾಗುತ್ತದೆ ಎಂದು ಹೆದರಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ವಜಾಗೊಳಿಸಿರುವುದರ ವಿರುದ್ಧ ನ್ಯಾಯಾಲಯದಲ್ಲಿ ಕೇಸ್ ನಡೆಸುತ್ತಿರುವ ನೌಕರರೊಬ್ಬರಿಗೆ ಸಂಘಟನೆಯ ಮುಖಂಡನೊಬ್ಬ ಫೋನ್ ಮಾಡಿ ಸರ್ಕಾರದಿಂದ ಕೇಸು ಹಿಂಪಡೆಯಲು ಅಧಿಕಾರಿಗಳಿಗೆ 5 ಸಾವಿರ ರೂ. ಲಂಚ ಕೊಡಬೇಕು. ಮೊದಲಿಗೆ 3000 ರೂ. ಕೊಡು ಕೇಸು ವಾಪಸ್ ಪಡೆದ ನಂತರ ಉಳಿದ 2,000 ಕೊಡುವೆಯಂತೆ ಎಂದು ಹೇಳಿದ್ದಾನೆ.
ಅದಕ್ಕೆ ನೌಕರ ನಾನು ಫೋನ್ ಪೇ ಮಾಡುತ್ತೇನೆ ಎಂದರೆ ಬೇಡ ಬೇಡ ನಗದನ್ನುತಂದು ಕೊಡು ಎಂದು ಹೇಳಿದ್ದಾನೆ. ಕಾರಣ ಫೋನ್ ಪೇ ಗೂಗಲ್ ಪೇ ಆದರೆ ದಾಖಲೆಗಳು ಸೃಷ್ಟಿಯಾಗುತ್ತವೆ. ಅವುಗಳನ್ನು ಹಿಡಿದುಕೊಂಡು ಕೇಸ್ ಹಾಕಿದರೆ ನಾವು ಸಿಕ್ಕಿಕೊಳ್ಳುತ್ತೇವೆ ಎಂಬ ಭಯ. ಇನ್ನು ವಜಾಗೊಂಡ ಈ ನೌಕರ ತನ್ನ ಅಸಹಾಯಕತೆ ಮತ್ತು ತಾನು ಕಷ್ಟದಲ್ಲಿ ಇದ್ದೇನೆ ಎಂದರೂ ಮಾನವೀಯತೆ ಇಲ್ಲದೆ ಹಣಕ್ಕಾಗಿ ಪೀಡಿಸುತ್ತಿದ್ದಾರೆ ಮಹಾನ್ ಸಂಘಟನೆಯ ನಾಯಕರೆಸಿನಿಕೊಂಡಿರುವ ಭ್ರಷ್ಟರು.
ಇದಿಷ್ಟೆ ಅಲ್ಲ ಈ ಸಂಘಟನೆಯಲ್ಲಿರುವ ಗೋಮುಖವ್ಯಾಘ್ರಗಳು ಅಧಿಕಾರಿಗಳು ಹಾಗೂ ಕೆಲ ಸಿಬ್ಬಂದಿಗಳನ್ನು ಹೆದರಿಸಿ ಸುಲಿಗೆ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಇನ್ನು ಸಾರಿಗೆ ಸಂಸ್ಥೆಯ ಸೊಸೈಟಿಗಳಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಅದನ್ನು ಬಯಲಿಗೆ ಎಳೆಯುತ್ತೇವೆ ಎಂದು ಹೆದರಿಸಿ ಸುಲಿಗೆ ಮಾಡುವುದು. ಸೊಸೈಟಿಗಳ ಚುನಾವಣೆಗಳಲ್ಲಿ ಬಂದು ಅಪಪ್ರಚಾರ ಮಾಡಿ ನಿಮ್ಮನ್ನು ಗೆಲ್ಲಿಸುತ್ತೇವೆ ಎಂದು ಹಣ ಮಾಡುವುದು.
ಮುಷ್ಕರದ ಸಮಯದಲ್ಲಿ ವಜಾಗೊಂಡು ಪುನರ್ ನೇಮಕಗೊಂಡ ತರಬೇತಿ ಮತ್ತು ಪ್ರೊಬೇಷನರಿ ನೌಕರರಿಗೆ ಅವರಿಗೆ ಬೇಕಾದ ಘಟಕಗಳನ್ನು ಹಾಕಿಸಿ ಕೊಡುತ್ತೇವೆ ಎಂದು ನೌಕರರಿಂದ ಹಣ ಸುಲಿಗೆ ಮಾಡಿರುವುದು. (ಈ ಬಗ್ಗೆ ಈ ಹಿಂದೆ ಕೇಂದ್ರ ಕಚೇರಿಗೆ ದೂರು ನೀಡಲಾಗಿದೆ). ಭ್ರಷ್ಟಾಚಾರ ಬಯಲಿಗೆ ಯಲ್ಲಿಯುತ್ತೇವೆ ಎಂದು ಸಾರಿಗೆ ಸಂಸ್ಥೆಯ ಹಿರಿಯ ಅಧಿಕಾರಿಗಳಿಂದ ಸುಲಿಗೆ ಮಾಡುತ್ತಿರುವುದು.
ಇತ್ತೀಚೆಗೆ ಕೆಎಸ್ಆರ್ಟಿಸಿ ನಿಗಮದ ಒಂದು ವಿಭಾಗದ ನಿಯಂತ್ರಣಾಧಿಕಾರಿಗೆ ಬೆದರಿಕೆ ಹಾಕಿ ಸುಮಾರು 50 ಸಾವಿರ ರೂ.ಗಳನ್ನು ಸುಲಿಗೆ ಮಾಡಿರುವುದು. ಒಂದು ಘಟಕದ ಎಟಿಎಸ್ ಒಬ್ಬರನ್ನು ವರ್ಗಾವಣೆ ಮಾಡಿಸುತ್ತೇವೆ ಎಂದು ನೌಕರರಿಂದಲೇ ಸುಲಿಗೆ ಮಾಡಿರುವುದು. ಒಂದು ನಿಗಮದಿಂದ ಮತ್ತೊಂದು ನಿರ್ಗಮಕ್ಕೆ ಮುಂಬಡ್ತಿಯಾಗಿ ಹೋಗುವ ಅಧಿಕಾರಿಗಳಿಂದ ಅವರ ಭ್ರಷ್ಟಾಚಾರವನ್ನು ಬಯಲಿಗೆ ತರುತ್ತೇವೆ ಎಂದು ಹೆದರಿಸಿ ಸುಲಿಗೆ ಮಾಡುತ್ತಿರುವುದು.
ಇನ್ನು ಪ್ರಮುಖವಾಗಿ ಅನುಕಂಪದ ಉದ್ಯೋಗ ಪಡೆಯಲು ಬರುವ ಮೃತಪಟ್ಟ ನೌಕರರ ಕುಟುಂಬ ಸದಸ್ಯರಿಂದಲೂ ಸುಲಿಗೆ ಮಾಡುತ್ತಿದ್ದಾರೆ. ಅಲ್ಲದೆ ಬೇರೆ ಸಂಘಟನೆಗಳು ಭ್ರಷ್ಟಾಚಾರ ಮಾಡುತ್ತಿವೆ ಎಂದು ಕಿಡಿಕಾರುವ ಇವರು ಕೆಲಸದಿಂದ ವಜಾಗೊಂಡಿದ್ದರೂ ಐಶಾರಾಮಿ ಜೀವನ ನಡೆಸುತ್ತಿದ್ದಾರೆ ಎಂದರೆ ಇವರಿಗೆ ಹಣ ಎಲ್ಲಿಂದ ಬರುತ್ತಿದೆ ಎಂಬ ಬಗ್ಗೆ ಯೋಚನೆ ಮಾಡಬೇಕಿದೆ.
ಇನ್ನು ಸಾರಿಗೆ ನಿಗಮವೊಂದರಲ್ಲಿ ಕೆಲವು ಗೌಪ್ಯ ಮಾಹಿತಿಗಳನ್ನು ಕದ್ದು ಸಂಬಂಧಪಟ್ಟ ನೌಕರರು ಮತ್ತು ಅಧಿಕಾರಿಗಳಿಂದ ಸುಲಿಗೆ ಮಾಡಿರುವ ವಿಚಾರ ಆಡಳಿತ ಮಂಡಳಿಗೆ ತಿಳಿದ ಬಳಿಕ ಮೇಲಧಿಕಾರಿಗಳು ಭ್ರಷ್ಟರಿಗೆ ಲಂಚಕೊಟ್ಟ ಅಧಿಕಾರಿಯೊಬ್ಬರನ್ನು ಹಲವು ತಿಂಗಳವರೆಗೆ ಆ ಹುದ್ದೆಯಿಂದ ಬೇರೆ ಕಡೆಗೆ ವರ್ಗಾವಣೆ ಮಾಡಿರುವುದು ಕೂಡ ಗುಟ್ಟಾಗೇನು ಉಳಿದಿಲ್ಲ.
ಹೀಗಾಗಿ ನೌಕರರೇ ಮತ್ತೆ ಈ ನಾಯಕರೆನಿಸಿಕೊಂಡ ಕಿಡಿಗೇಡಿಗಳು ನೌಕರರಿಗೆ ಅನ್ಯಾಯವಾಗುತ್ತಿದೆ ನೌಕರರು ತುಂಬಾ ಕಷ್ಟ ಪಡುತ್ತಿದ್ದಾರೆ ಅವರಿಗೆ ಜೀವನ ನಡೆಸುವುದೇ ಕಷ್ಟವಾಗುತ್ತಿದೆ ಎಂದು ಹೈಡ್ರಾಮಾ ಮಾಡಿಕೊಂಡು ಮೊಸಳೆ ಕಣ್ಣೀರು ಸುರಿಸಿ ನಿಮ್ಮನೇ ಪ್ರಚೋದನೆ ಮಾಡಿ ಹಳ್ಳಕ್ಕೆ ತಳ್ಳುವ ಹುನ್ನಾರವನ್ನು ಮಾಡುತ್ತಿದ್ದಾರೆ. ಹೀಗಾಗಿ ಇಂಥ ಸಂಘಟನೆಗಳ ಬಗ್ಗೆ ಹಾಗೂ ಇಂಥ ಡೋಂಗಿ ನಾಯಕರ ಬಗ್ಗೆ ಹುಷಾರಾಗಿರಿ. ನಾಳೆ ದಿನ ನೀವು ಇವರ ಮಾತು ನಂಬಿ ಬೀದಿಗಿಳಿದರೆ ನಿಮಗೇ ತೊಂದರೆ. ಈ ತೊಂದರೆ ಹಾಗೂ ಸಮಸ್ಯೆ ನಿವಾರಣೆ ಮಾಡುವ ನೆಪದಲ್ಲಿ ನಿಮ್ಮನ್ನು ಮತ್ತೆ ಸುಲಿಗೆ ಮಾಡಲು ಬರುತ್ತಾರೆ ಜೋಪಾನ.
Related

You Might Also Like
ಪ್ರಣವ್ ಮೊಹಾಂತಿ ಅವರ ಕೇಂದ್ರ ಸೇವೆಗೆ ಕಳುಹಿಸುವ ಬಗ್ಗೆ ಸರ್ಕಾರ ತೀರ್ಮಾನಿಸಿಲ್ಲ: ಗೃಹ ಸಚಿವ ಡಾ. ಜಿ.ಪರಮೇಶ್ವರ ಸ್ಪಷ್ಟನೆ
ಬೆಂಗಳೂರು: ಕೇಂದ್ರ ಸರ್ಕಾರದ ಡೆಪ್ಯೂಟೇಷನ್ ಪಟ್ಟಿಯಲ್ಲಿ ಎಸ್ಐಟಿ ಮುಖ್ಯಸ್ಥರಾಗಿರುವ ಪೊಲೀಸ್ ಮಹಾನಿರ್ದೇಶಕ ಪ್ರಣವ್ ಮೊಹಾಂತಿ ಅವರ ಹೆಸರಿದ್ದು, ಅವರನ್ನು ಕೇಂದ್ರ ಸೇವೆಗೆ ಕಳುಹಿಸುವ ಬಗ್ಗೆ ರಾಜ್ಯ ಸರ್ಕಾರ...
ಅತ್ತ ದರಿ ಇತ್ತ ಪುಲಿ ಎತ್ತ ಹೋಗಲಿ ಎಂಬ ಸ್ಥಿತಿಯಲ್ಲಿ ಸಾರಿಗೆ ನೌಕರರು
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಜಂಟಿ ಕ್ರಿಯಾ ಸಮಿತಿ ಕರೆ ಕೊಟ್ಟಿರುವ ಮುಷ್ಕರಕ್ಕೆ ಹೋಗಲು ಬಹುತೇಕ ನೌಕರರು ಸಿದ್ಧರಿದ್ದಾರೆ. ಆದರೆ, ನಾವು ಡ್ಯೂಟಿ...
KSRTC: ಮುಷ್ಕರಕ್ಕೆ ಹೋದರೆ ಹುಷಾರ್ – ಸಾರಿಗೆ ನೌಕರರಿಗೆ ಅಧಿಕಾರಿಗಳ ಎಚ್ಚರಿಕೆ!
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಜಂಟಿ ಕ್ರಿಯಾ ಸಮಿತಿ ಕರೆ ಕೊಟ್ಟಿರುವ ಮುಷ್ಕರಕ್ಕೆ ಹೋಗದಂತೆ ಈಗಾಗಲೇ ಅಧಿಕಾರಿಗಳು ನೌಕರರಿಗೆ ಎಚ್ಚರಿಕೆ ಕೊಡುತ್ತಿದ್ದಾರೆ. ನಾಲ್ಕೂ...
ಆ.5ರಿಂದ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಅಂಗವಾಗಿ ಒಂದು ದಿನದ ಸಾಮೂಹಿಕ ಉಪವಾಸ ಸತ್ಯಾಗ್ರಹ ಆರಂಭ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರಿಗೆ ಬರಬೇಕಾಗದ 38 ತಿಂಗಳ ಹಿಂಬಾಕಿಯನ್ನು ಸರ್ಕಾರ ಕೂಡಲೇ ಬಿಡುಗಡೆ ಮಾಡಬೇಕು ಹಾಗೂ 2024ರ ಜನವರಿ 1ರಿಂದ...
EPS Pensioners Protest: ಅಧಿವೇಶನ ಮುಗಿಯುವುದರೊಳಗೆ ಬೇಡಿಕೆ ಈಡೇರದಿದ್ದರೆ ಉಗ್ರ ಹೋರಾಟ: ನಂಜುಂಡೇಗೌಡ ಎಚ್ಚರಿಕೆ
ಬೆಂಗಳೂರು: ಇದೇ ಜುಲೈ 21ರಿಂದ ಪಾರ್ಲಿಮೆಂಟ್ ಅಧಿವೇಶನ ಪ್ರಾರಂಭವಾಗಿದ್ದು, ಈ ಅಧಿವೇಶನ ಮುಗಿಯುವುದರೊಳಗೆ ನಮ್ಮ ಬೇಡಿಕೆಗಳನ್ನು ಈಡೇರಿಸದೆ ಹೊದಲ್ಲಿ ನಾವು ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಬಿಎಂಟಿಸಿ...
ಸಮಾನ ವೇತನಕ್ಕೆ ಆಗ್ರಹಿಸಿ ಅನಿರ್ದಿಷ್ಟಾವಧಿ ಉಪವಾಸ ಧರಣಿ ಸತ್ಯಾಗ್ರಹ ಮಾಡುತ್ತಿದ್ದ ಸಾರಿಗೆ ನೌಕರರ ಮುಖಂಡರ ಬಂಧನ
ಸಾರಿಗೆ ನೌಕರರ ಹೋರಾಟ ಹತ್ತಿಕ್ಕಿದ ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಕೊಟ್ಟ ಭರವಸೆ ಈಡೇರಿಸುವ ಬದಲಿಗೆ ದೌರ್ಜನ್ಯ ಎಸಗಿದ ಕಾಂಗ್ರೆಸ್ ಸರ್ಕಾರ ಬೆಂಗಳೂರು: ಸಮಾನ ವೇತನ,...
ರೈತರು ಮರ ಕಟಾವು ಮಾಡುವ ನಿಯಮ ಸರಳಗೊಳಿಸಿ: ಅತ್ತಹಳ್ಳಿ ದೇವರಾಜ್ ಒತ್ತಾಯ
ಮೈಸೂರು: ರೈತರು ತಮ್ಮ ಜಮೀನಿನಲ್ಲಿ ಇರುವ ಮರ ಕಟಾವು ಮಾಡಿ ಸಾಗಾಣಿಕೆ ಮಾಡಿಕೊಳ್ಳುವ ನಿಯಮ ಸರಳೀಕರಣ ಗೊಳಿಸಿಲು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಕ್ರಮ ಕೈಗೊಳ್ಳಬೇಕು...
ವಿಜಯಪುರ: ಕಲುಷಿತ ನೀರು ಕುಡಿದ 30ಕ್ಕೂ ಹೆಚ್ಚು ಮಂದಿ ಅಸ್ವಸ್ಥ: ಗ್ರಾಮದಲ್ಲೇ ಬೀಡುಬಿಟ್ಟ ವೈದ್ಯರ ತಂಡ
ವಿಜಯಪುರ: ಕಲುಷಿತ ನೀರು ಕುಡಿದ 30ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿರುವ ಘಟನೆ ಜಿಲ್ಲೆಯ ನಿಡಗುಂದಿ ತಾಲೂಕಿನ ಬ್ಯಾಲಿಹಾಳದಲ್ಲಿ ನಡೆದಿದೆ. ಗ್ರಾಮಕ್ಕೆ ಗ್ರಾಮ ಪಚಾಯಿತಿಯಿಂದ ಸರಬರಾಜು ಮಾಡಿರುವ ನೀರು...
KSRTC ನಾಲ್ಕೂ ನಿಗಮಗಳ ಸಾರಿಗೆ ನೌಕರರ ವೇತನ ಹೆಚ್ಚಳಕ್ಕೆ ಆಗ್ರಹಿಸಿ ಅನಿರ್ದಿಷ್ಟಾವಧಿ ಉಪವಾಸ-ಧರಣಿ ಸತ್ಯಾಗ್ರಹ ಆರಂಭ
ಬೆಂಗಳೂರು: ಸಾರಿಗೆ ನೌಕರರಿಗೆ ಸರಿ ಸಮಾನ ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಸಂಘಟನೆಗಳ ಒಕ್ಕೂಟ ಇಂದಿನಿಂದ (ಜು.29)...