KSRTC: ಡೀಸೆಲ್ ಕಳ್ಳತನ ಪತ್ತಹಚ್ಚಿ ಸಂಸ್ಥೆಗೆ ವರ್ಷಕ್ಕೆ ₹15.30ಕೋಟಿ ಉಳಿಸಿದ ಪಾಂಡವಪುರ ಘಟಕದ ಸಿಬ್ಬಂದಿ ಫಾರೂಕ್ ಖಾನ್..!
ಇದು ವಿಜಯಪಥದಲ್ಲಿ ಮಾತ್ರ
ಮಂಡ್ಯ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಪ್ರತಿದಿನ ಕಳವಾಗುತ್ತಿದ್ದ 5 ಸಾವಿರ ಲೀಟರ್ ಡೀಸೆಲ್ ಪತ್ತೆಹಚ್ಚುವ ಮೂಲಕ ಸಂಸ್ಥೆಗೆ ಪ್ರತಿದಿನ ಲಾಸ್ ಆಗುತ್ತಿದ್ದ ಅಂದಾಜು ₹4,25,000 ಉಳಿಸುವಲ್ಲಿ ಸಂಸ್ಥೆಯ ಮಂಡ್ಯ ವಿಭಾಗದ ಪಾಂಡವಪುರ ಘಟಕದ ಸಿಬ್ಬಂದಿ ಮಹತ್ವದ ಕಾರ್ಯ ಮಾಡಿದ್ದಾರೆ.
KSRTC ಮಂಡ್ಯ ವಿಭಾಗದ ಪಾಂಡವಪುರ ಘಟಕದಲ್ಲಿ ಕಿರಿಯ ಸಹಾಯಕರಾಗಿರುವ ಫಾರೂಕ್ ಖಾನ್ ಅವರು ಕಳ್ಳತನವನ್ನು ಪತ್ತೆಹಚ್ಚಿ ಸಂಸ್ಥೆಯಿಂದ ಪ್ರತಿದಿನ ಸೋರಿಕೆಯಾಗುತ್ತಿದ್ದ 4.25 ಲಕ್ಷ ರೂಪಾಯಿಯನ್ನು ಉಳಿಸಿದ ನಿಷ್ಠಾವಂತ ಸಿಬ್ಬಂದಿಯಾಗಿದ್ದಾರೆ.
ಡೀಸೆಲ್ ಕಳವು ಪತ್ತೆಹಚ್ಚಿದ್ದು ಹೇಗೆ?: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ 86 ಘಟಗಳಿಗೆ ಹಾಗೂ ಇತರರೆ ಸಹೋದರ ಸಂಸ್ಥೆಗಳಿಗೆ ಇಂಧನವನ್ನು ಪುರೈಸಲು HPCL ಕಂಪನಿಯೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಹೀಗೆ ಒಂದು ದಿನಕ್ಕೆ ಸರಿಸುಮಾರು ಸಂಸ್ಥೆಗೆ 6ಲಕ್ಷ ಲೀಟರ್ ಡೀಸಲ್ ಬೇಕಾಗುತ್ತದೆ. ಅದಕ್ಕೆ ಈ ಕಂಪನಿಯಿಂದ ಹಾಸನ/ ಬೆಂಗಳೂರು/ ಮಂಗಳೂರು/ ಹುಬ್ಬಳ್ಳಿ ಟರ್ಮಿನಲ್ ನಿಂದ ದಿನಕ್ಕೆ ಅಂದಾಜು 150 ಟ್ರಕ್ ಲೋಡ್ ಮಾಡಲಾಗುತ್ತದೆ.
ಹೀಗಿರುವಾಗ ಇದೇ ಮೇ 13-2025ರಂದು ಹಾಸನ ಟರ್ಮಿನಲ್ನಿಂದ ಮಂಡ್ಯ ವಿಭಾಗದ ಪಾಂಡವಪುರ ಘಟಕಕ್ಕೆ 20,000 ಲೀಟರ್ ಡೀಸೆಲ್ ಪುರೈಸಲು TN02 BH3039 ವಾಹನ ಬಂದಿದೆ. ಡೀಸೆಲ್ ಅನ್ನು ಅನ್ಲೋಡ್ ಮಾಡುವ ಸಂದರ್ಭದಲ್ಲಿ ಸುಮಾರು 130 ಲೀಟರ್ ಡೀಸಲ್ ಕಡಿಮೆ ಇಂಧನ ಟ್ಯಾಂಕ್ನಲ್ಲಿ ತಂದಿರುವುದನ್ನು ಆದೇ ಘಟಕದಲ್ಲಿ (ಪಾಂಡವಪುರ) ಕಿರಿಯ ಸಹಾಯಕರಾಗಿ ಕಾರ್ಯ ನಿರ್ವಹಿಸುತ್ತಿರುವ ಫಾರೂಕ್ ಖಾನ್ ಅವರು ಪರಿಶೀಲಿಸಿದರು.
ನಂತರ ಅವರು ಟ್ಯಾಂಕರ್ ಚಾಲಕನನ್ನು ಗಧರಿಸಿ ಸೂಕ್ಷ್ಮವಾಗಿ ಪರಿಶೀಲಿಸಲು ವಾಹನವನ್ನು ರಾಂಪಿಗೆ ಹಾಕಿ ಅಲ್ಲಿ ಪರಿಶೀಲಿಸಿದಾಗ 4ನೇ ಕಂಪಾಟ್ಮೆಂಟ್ ಡೆಲಿವರಿ ಪೈಪ್ಗೆ ಒಂದು flexible pipe ಅಳವಡಿಸಿ, ಡೀಸಲ್ ಟ್ಯಾಂಕಿನ ಒಳಭಾಗದಿಂದ ಅದೆ ಟ್ಯಾಂಕರ್ ವಾಹನದ ಡೀಸೆಲ್ ಟ್ಯಾಂಕಿಗೆ ಅಕ್ರಮವಾಗಿ ಡೀಸಲ್ ತುಂಬಿಸಿಕೊಳ್ಳುವ ಸಂಪರ್ಕ ಕಲ್ಪಿಸಿಕೊಂಡಿರುವುದನ್ನು ಪತ್ತಹಚ್ಚಿದರು.
ಹೀಗೆ ಅಕ್ರಮವಾಗಿ ಡೀಸಲ್ ತುಂಬಿಸಿಕೊಳ್ಳುವುದಕ್ಕೆ ಮತ್ತೊಂದು ಸಂಪರ್ಕ ಕಲ್ಪಿಸಿಕೊಂಡಿರುವ ಬಗ್ಗೆ ಇನ್ನಷ್ಟು ಆಳವಾಗಿ ಪರಿಶೀಲಿಸಲು ತೂಕ ಮತ್ತು ಮೌಲ್ಯಮಾಪನ ಇಲಾಖೆಗೆ ದೂರು ಸಲ್ಲಿಸಿದರು. ಇದಾದ ನಂತರ ಮೌಲ್ಯಮಾಪನ ಇಲಾಖೆ ಅಧಿಕಾರಿಗಳ ತಂಡ ಘಟಕಕ್ಕೆ ಭೇಟಿ ನೀಡಿ ವಾಹನವನ್ನು ವಶಪಡಿಸಿಕೊಂಡು ಈ ಅಕ್ರಮ ಕಳ್ಳತನವನ್ನು ಆ ಟ್ಯಾಂಕರ್ ಅವರು ಮಾಡುತಿದ್ದ ಬಗ್ಗೆ ಖಾತ್ರಿಪಡಿಸಿದರು.

ಅಂದರೆ ಹೀಗೆ ಒಂದು ದಿನಕ್ಕೆ ಸುಮಾರು 45-50 ಲೋಡ್ ಟ್ಯಾಂಕರ್ ಹಾಸನ ಟರ್ಮಿನಲ್ ನಿಂದ ಸಂಸ್ಥೆಗೆ ಇಂಧನ ಪೂರೈಸಲಾಗುತ್ತಿದೆ. ಒಂದು ವಾಹನಕ್ಕೆ ಕನಿಷ್ಠ ಆ ಚಾಲಕರು100 ಲೀಟರ್ ಕಳ್ಳತನ ಮಾಡಿದರೂ 50×100= 5000 ಲೀಟರ್ ಕಳವು ಮಾಡುತ್ತಾರೆ. ಈ 5000 ಲೀಟರ್ಗೆ ₹85 ರಂತೆ ಲೆಕ್ಕಮಾಡಿದರೂ ಕೂಡ ₹4,25,000 ಸಂಸ್ಥೆಗೆ ಒಂದು ದಿನಕ್ಕೆ ನಷ್ಟ ಆಗುತ್ತಿತ್ತು.
ಕಿರಿಯ ಸಹಾಯಕ ಫಾರೂಕ್ ಖಾನ್ ಈ ಅಕ್ರಮ ಜಾಲವನ್ನು ಕಂಡುಹಿಡಿದರು. ಇದಾದ ಬಳಿಕ ಸಂಸ್ಥೆಯ ಎಲ್ಲ ಘಟಗಳು ಈ ಬಗ್ಗೆ ಪರಿಶೀಲನೆ ಮಾಡುತ್ತಿದ್ದಾರೆ. ಈನ್ನು ಈ ಟ್ಯಾಂಕರನ್ನು ಘಟಕದಲ್ಲಿಯೇ ಜಪ್ತಿ ಮಾಡಿ ಪ್ರಕರಣ ದಾಖಲಿಸಲಾಗಿದೆ.
ಮಾಹಿತಿ ಪ್ರಕಾರ ಈ ಟ್ಯಾಂಕರ್ ಚಾಲಕ ಈ ಪ್ರಕರಣವನ್ನು ಮುಚ್ಚಿಹಾಕಲು ಮೈ*ಲ್ ಅಧ್ಯಕ್ಷರು, ಇತರ ರಾಜಕಾರಣಿಗಳಿಂದ ದೂರವಾಣಿ ಮೂಲಕ ಒತ್ತಡ ತಂದಿದ್ದು ಅಲ್ಲದೆ ₹5ಲಕ್ಷ ಆಮೀಷ ಒಡ್ಡಿ ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನ ಮಾಡಿದ್ದನು. ಆದರೆ ಫಾರೂಕ್ ಖಾನ್ ಯಾವ ಒತ್ತಡ ಅಥವಾ ಆಮೀಷಕ್ಕೆ ಮಣಿಯದೆ ಅದನ್ನು ತಳ್ಳಿಹಾಕಿ ಪ್ರಕರಣವನ್ನು ಶತಾಯಗತಾಯ ಬಿಗಿ ಮಾಡಿ ದೂರು ದಾಖಲಿಸಿದ್ದಾರೆ.
ಇಂತಹ ಅಭೂತಪೂರ್ವ ನಿಸ್ವಾರ್ಥ ಸೇವೆ ಸಲ್ಲಿಸುವ ಮೂಲಕ ಸಂಸ್ಥೆಗೆ ದಿನಕ್ಕೆ 4.25 ಲಕ್ಷ ರೂ.ಗಳು ಎಂದರೂ ತಿಂಗಳಿಗೆ 1,27,50,000 ರೂಪಾಯಿ ಅಂದರೆ ವರ್ಷಕ್ಕೆ 15,30,00000 ರೂಪಾಯಿಯನ್ನು ಉಳಿಸಿರುವ ಇಂಥವರನ್ನು ಗುರಿತಸಬೇಕಾಗಿದೆ. ಜತೆಗೆ ಇಂಥವರನ್ನು ಪ್ರೋತ್ಸಾಹಿಸಿ ಸಂಸ್ಥೆಯನ್ನು ಉಳಿಸೋಣಾ ಬೆಳೆಸೋಣ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಇತರ ನೌಕರರಿಗೂ ಕರೆ ನೀಡಬೇಕು ಎಂಬುವುದು ವಿಜಯಪಥದ ಕಳಕಳಿಯ ಮನವಿ.
ಭಾರಿ ನೋವಿನ ಸಂಗತಿ- ಎಂದರೆ ಮೇ 13ರಂದು ಪ್ರಕರಣ ನಡೆದಿದ್ದು ಕೋಟಿ ಕೋಟಿ ರೂ.ಗಳನ್ನು ಸಂಸ್ಥೆಗೆ ಉಳಿಸಿದ್ದಾರೆ ಎಂದು ಈವರೆಗೂ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿಗಳಾಗಲಿ ಅಥವಾ ಸಂಬಂಧಪಟ್ಟ ಇತರೆ ಯಾವುದೇ ಅಧಿಕಾರಿಗಳಾಗಲಿ ಫಾರೂಕ್ ಅವರಿಗೆ ಒಂದು ಅಭಿನಂದನೆ ತಿಳಿಸದಿರುವುದು ಭಾರಿ ನೋವಿನ ಸಂಗತಿ.
Related


You Might Also Like
ಅಕ್ರಮ ಆನ್ಲೈನ್ ಬೆಟ್ಟಿಂಗ್ನಲ್ಲಿ 2,000 ಕೋಟಿ ರೂ. ಲಾಭಗಳಿದ ಶಾಸಕ ವೀರೇಂದ್ರ ಪಪ್ಪಿ: ಇಡಿ ದಾಳಿ ವೇಳೆ ಬಯಲು!
ಚಿತ್ರದುರ್ಗ: ಜನಪ್ರತಿನಿಧಿಗಳು ಎಂದರೆ ಸಾಮಾನ್ಯ ಜನರಿಗೆ ಮಾದರಿಯಾಗಿರಬೇಕು. ಆದರೆ ಚಿತ್ರದುರ್ಗ ಕಾಂಗ್ರೆಸ್ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಅಕ್ರಮ ಆನ್ಲೈನ್ ಬೆಟ್ಟಿಂಗ್ನಲ್ಲಿ ಅಲ್ಪಾವಧಿಯಲ್ಲಿಯೇ 2,000 ಕೋಟಿ ರೂ. ಲಾಭಗಳಿಸಿದ್ದಾರೆಂಬುವುದು...
ನಾಗರಿಕರಿಗೆ ತ್ವರಿತವಾಗಿ ಸ್ಪಂದಿಸಿ: 5 ನಗರ ಪಾಲಿಕೆಗಳ ಆಯುಕ್ತರಿಗೆ ತುಷಾರ್ ಗಿರಿನಾಥ್ ಸೂಚನೆ
ಬೆಂಗಳೂರು: ಜಿಬಿಎ ವ್ಯಾಪ್ತಿಯಲ್ಲಿ ಪ್ರಮುಖವಾಗಿ ಎಲ್ಲ ವಿಭಾಗಗಳ ಕುರಿತು ಸಮಗ್ರ ಪರಿಚಯ ಹಾಗೂ ವಿಶೇಷವಾಗಿ 3 ವಿಷಯಗಳಾದ ರಸ್ತೆ ಗುಂಡಿ, ಬೀದಿ ದೀಪ ಹಾಗೂ ಕಸದ ಸಮಸ್ಯೆ...
ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಿ, ಜನರು ಸುಳ್ಳು ದೂರು ದಾಖಲಿಸಬೇಡಿ: ಉಪ ಲೋಕಾಯುಕ್ತ ನ್ಯಾಯಮೂರ್ತಿ ವೀರಪ್ಪ
ಬೆಂಗಳೂರು ಗ್ರಾಮಾಂತರ: ಸಾರ್ವಜನಿಕರು ಲೋಕಾಯುಕ್ತ ಹಾಗೂ ಇನ್ನಿತರೆ ನ್ಯಾಯಾಲಯಗಳಲ್ಲಿ ಸುಳ್ಳು ಕೇಸ್ ದಾಖಲಿಸಬೇಡಿ, ಸುಳ್ಳು ಕೇಸ್ ಎಂದು ಸಾಬೀತಾದರೆ ಅರ್ಜಿದಾರರು ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ, ಜತೆಗೆ ನಿಜವಾದ...
ಜಿಬಿಎ-ಗುಂಡಿ ಮುಕ್ತ ರಸ್ತೆ, ಬ್ಲಾಕ್ ಸ್ಪಾಟ್ ರಹಿತ, ಮುಕ್ತ ಪಾದಚಾರಿ ಮಾರ್ಗ ನಿರ್ಮಾಣಕ್ಕೆ ಕಠಿಣ ಕ್ರಮ: ರಾಜೇಂದ್ರ ಚೋಳನ್
ಬೆಂಗಳೂರು: ಬೆಂಗಳೂರು ಕೇಂದ್ರ ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಸಾರ್ವಜನಿಕ ಸಂಚಾರ, ಸುರಕ್ಷತೆ ಮತ್ತು ಮೂಲಭೂತ ಸೌಕರ್ಯಗಳನ್ನು ಉತ್ತಮಗೊಳಿಸುವ ಉದ್ದೇಶದಿಂದ ಗುಂಡಿ ಮುಕ್ತ ರಸ್ತೆ, ಬ್ಲಾಕ್ ಸ್ಪಾಟ್ ರಹಿತ...
ಆ.5ರ ಮುಷ್ಕರ ದಿನದ ಚಾಲಕ, ನಿರ್ವಾಹಕರ ವೇತನ ಕಡಿತ- ಇದು ನ್ಯಾಯಸಮ್ಮತವೇ?
ಬೆಂಗಳೂರು: ಕಳೆದ 2021ರ ಏಪ್ರಿಲ್ನಲ್ಲಿ ನಡೆದಂತಹ ಸಾರಿಗೆ ಮುಷ್ಕರದ ಅವಧಿಯಲ್ಲಿ ಬಹಳಷ್ಟು ಸಾರಿಗೆ ನೌಕರರ ವಿರುದ್ಧ ವಜಾ, ವರ್ಗಾವಣೆ, ಅಮಾನತು ಹಾಗೂ ಪೊಲೀಸ್ ಪ್ರಕರಣಗಳು ದಾಖಲಿಸಲಾಗಿತ್ತು. ಈ...
ಮೈಸೂರು: ದಸರಾ ಉದ್ಘಾಟನೆಗೆ ಬೂಕರ್ ಪ್ರಶಸ್ತಿ ವಿಜೇತ ಸಾಹಿತಿ ಬಾನು ಮುಷ್ತಾಕ್ಗೆ ಜಿಲ್ಲಾಡಳಿತದಿಂದ ಅಧಿಕೃತ ಆಹ್ವಾನ
ಮೈಸೂರು: ನಾಡಹಬ್ಬ ದಸರಾ ಉದ್ಘಾಟಕರಾಗಿ ಆಯ್ಕೆಯಾಗಿರುವ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ವಿಜೇತರಾದ ಸಾಹಿತಿ ಬಾನು ಮುಷ್ತಾಕ್ ಅವರನ್ನು ಸರ್ಕಾರದ ಪರವಾಗಿ ಮೈಸೂರು ಜಿಲ್ಲಾಡಳಿತದ ವತಿಯಿಂದ ಅಧಿಕೃತವಾಗಿ ಬುಧವಾರ...
ಯುವನಿಧಿ ಫಲಾನುಭವಿಗಳಿಗೆ ಕೌಶಲ್ಯ ತರಬೇತಿ ನೀಡಿ: ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಬಸವರಾಜು ಸೂಚನೆ
ಬೆಂಗಳೂರು ಗ್ರಾಮಾಂತರ: ಯುವನಿಧಿ ಯೋಜನೆಯಡಿ ಪದವೀಧರರು ಮತ್ತು ಡಿಪ್ಲೊಮಾ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ, ಫಲಾನುಭವಿಗಳ ಆಸಕ್ತಿ ಮತ್ತು ಅವರ ಸಾಮರ್ಥ್ಯಕ್ಕೆ ತಕ್ಕಂತೆ ಕೌಶಲ್ಯ ತರಬೇತಿ ನೀಡಲು ಕ್ರಮ...
ಜಿಬಿಎ: ನೂತನ ಪಾಲಿಕೆ ಕಚೇರಿಗಳ ನಿರ್ಮಾಣಕ್ಕೆ ನ.1 ರಂದು ಭೂಮಿಪೂಜೆ: ಉಪಮುಖ್ಯಮಂತ್ರಿ ಶಿವಕುಮಾರ್
ಐದು ಪಾಲಿಕೆಗಳಿಗೆ 300 ಕೋಟಿ ರೂ. ಅನುದಾನ ಹಂಚಿಕೆ ಬೆಂಗಳೂರು: “ಐದು ಪಾಲಿಕೆಗಳ ನೂತನ ಕಚೇರಿಗೆ ಭೂಮಿಪೂಜೆಯನ್ನು ನವೆಂಬರ್ 1 ರಂದು ನೆರವೇರಿಸಲಾಗುವುದು. ಎಲ್ಲ ಪಾಲಿಕೆಗಳ ಗಡಿ...