NEWSಬೆಂಗಳೂರುಶಿಕ್ಷಣ

ನಾಳೆಯಿಂದ ಬಿಬಿಎಂಪಿ ಶಾಲಾ, ಕಾಲೇಜು ಪ್ರಾರಂಭ- ಪ್ರವೇಶಕ್ಕೆ ಮುಕ್ತ ಅವಕಾಶ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: 2025-26ನೇ ಶೈಕ್ಷಣಿಕ ಸಾಲಿನಲ್ಲಿ ವ್ಯಾಸಂಗ ಬಯಸುವ ವಿದ್ಯಾರ್ಥಿಗಳು ಬಿಬಿಎಂಪಿ ಶಾಲೆ- ಕಾಲೇಜುಗಳಿಗೆ ಪ್ರವೇಶ ಪಡೆದು ಬಿಬಿಎಂಪಿ ಶಿಕ್ಷಣಕ್ಕೆ ನೀಡುವ ಸೌಲಭ್ಯಗಳ ಸದುಪಯೋಗಪಡಿಸಿಕೊಳ್ಳಿ ಎಂದು ಶಿಕ್ಷಣ ವಿಭಾಗದ ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್ ಮನವಿ ಮಾಡಿದ್ದಾರೆ.

ಬಿಬಿಎಂಪಿ ಒಡೆತನದ ಶಿಶುವಿಹಾರ, ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು, ಪದವಿ ಹಾಗೂ ಸ್ನಾತಕೋತ್ತರ ಪದವಿ ಕಾಲೇಜುಗಳು ಮೇ 29ರಿಂದ ಪ್ರಾರಂಭವಾಗುತ್ತಿವೆ.

2025-26 ನೇ ಶೈಕ್ಷಣಿಕ ಸಾಲಿನ ವಿವಿಧ ತರಗತಿಗಳ ವಿದ್ಯಾಭ್ಯಾಸಕ್ಕಾಗಿ ಈಗಾಗಲೇ ಪ್ರವೇಶಾತಿಗಳು ಪ್ರಾರಂಭವಾಗಿದ್ದು, 20ನೇ ಜೂನ್ 2025 ರವರೆಗೆ ನಡೆಯಲಿದೆ. ಆಸಕ್ತ ವಿದ್ಯಾರ್ಥಿಗಳು ತಮ್ಮ ಹತ್ತಿರದ ಪಾಲಿಕೆಯ ಶಾಲಾ, ಕಾಲೇಜುಗಳಲ್ಲಿ ಪ್ರವೇಶಾತಿ ಪಡೆಯಿರಿ ಎಂದು ತಿಳಿಸಿದ್ದಾರೆ.

ಬಿಬಿಎಂಪಿ ಶಾಲಾ, ಕಾಲೇಜುಗಳಲ್ಲಿ ಪ್ರವೇಶಾತಿ ಪಡೆಯುವ ವಿದ್ಯಾರ್ಥಿಗಳಿಗೆ ಉಚಿತವಾಗಿ ದೊರಕುವ ಸೌಲಭ್ಯಗಳು: ನೋಟ್ ಪುಸ್ತಕಗಳು, ಪಠ್ಯ ಪುಸ್ತಕಗಳು, ಸಮವಸ್ತ್ರಗಳು, ಶೂ ಮತ್ತು ಕಾಲುಚೀಲ, ಬ್ಯಾಗ್ ಗಳು, ಸ್ವೇಟರ್‌ಗಳು.

* ಮಧ್ಯಾಹ್ನದ ಬಿಸಿಯೂಟ (ಶಿಶುವಿಹಾರ, ಪದವಿ ಪೂರ್ವ ಕಾಲೇಜು, ಪದವಿ ಹಾಗೂ ಸ್ನಾತಕೋತ್ತರ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ) ಬಿಸಿ ಹಾಲು, ಮೊಟ್ಟೆ, ಬಾಳೆಹಣ್ಣು ಹಾಗೂ ಚಿಕ್ಕಿ (ಶಿಶುವಿಹಾರ ಶಾಲಾ ಮಕ್ಕಳಿಗೆ) * ಮಕ್ಕಳ ಆಟಿಕೆಗಳು (ಶಿಶುವಿಹಾರ ಶಾಲಾ ಮಕ್ಕಳಿಗೆ), ಆಸೀನರಾಗಲು ಮ್ಯಾಟ್‌ಗಳು (ಶಿಶುವಿಹಾರ ಶಾಲಾ ಮಕ್ಕಳಿಗೆ).

* ಉನ್ನತ ಶಿಕ್ಷಣ ಒದಗಿಸಲು ಸ್ಮಾರ್ಟ್ ತರಗತಿ ಮೂಲಕ ಶಿಕ್ಷಣದ ವ್ಯವಸ್ಥೆ, ಗಣಕಯಂತ್ರ ತರಬೇತಿ (ಕಂಪ್ಯೂಟರ್ ಲ್ಯಾಬ್). * ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ ಶುದ್ಧ ಕುಡಿಯುವ ನೀರಿನ ಸೌಲಭ್ಯ. * ಎಸ್.ಎಸ್.ಎಲ್.ಸಿ ಯಲ್ಲಿ ಅತ್ಯುನ್ನತ ಶ್ರೇಣಿ (ಶೇ. 85%) ಪಡೆದ ವಿದ್ಯಾರ್ಥಿಗಳಿಗೆ ತಲಾ 25,000 ರೂ. ಪ್ರೋತ್ಸಾಹ ಧನ ನೀಡುವುದು.

* ದ್ವಿತೀಯ ಪಿ.ಯು.ಸಿ. ಯಲ್ಲಿ ಅತ್ಯುನ್ನತ ಶ್ರೇಣಿ (ಶೇ. 85%) ಪಡೆದ ವಿದ್ಯಾರ್ಥಿಗಳಿಗೆ ತಲಾ 35,000 ರೂ.ಗಳ ಪ್ರೋತ್ಸಾಹ ಧನ ನೀಡುವುದು. ಸಾರ್ವಜನಿಕರು ತಮ್ಮ ಮಕ್ಕಳಿಗೆ ಬಿಬಿಎಂಪಿ ಶಾಲೆ/ಕಾಲೇಜುಗಳಿಗೆ ಪ್ರವೇಶ ಪಡೆದುಕೊಂಡು ಬಿಬಿಎಂಪಿಯು ಶಿಕ್ಷಣಕ್ಕೆ ನೀಡುತ್ತಿರುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಲು ಕೋರಿದ್ದಾರೆ.

Megha
the authorMegha

Leave a Reply

error: Content is protected !!