NEWSನಮ್ಮಜಿಲ್ಲೆನಮ್ಮರಾಜ್ಯ

EPS ಪಿಂಚಣಿದಾರರ 100ನೇ ಮಾಸಿಕ, ಶತದಿನೋತ್ಸವದಲ್ಲಿ ಮುಸ್ಸಂಜೆಯ ತರುಣರ ಸಂಭ್ರಮ

ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ, ಚಿಕ್ಕಬಳ್ಳಾಪುರ ಕೆಎಸ್ಆರ್‌ಟಿಸಿ ನಿವೃತ್ತ ನೌಕರರ ಟ್ರಸ್ಟ್ ವತಿಯಿಂದ ಮೇ 3ರಂದು ಆಯೋಜಿಸಿದ್ದ ಮಾಸಿಕ ಸಭೆಗೆ ಇಳಿ ವಯಸ್ಸಿನಲ್ಲಿಯೂ ತಮ್ಮ ಆರೋಗ್ಯವನ್ನು ಲೆಕ್ಕಿಸದೆ ನೂರಾರು ಇಪಿಎಸ್ ನಿವೃತ್ತರು ಆಗಮಿಸಿದ್ದು ವಿಶೇಷವಾಗಿತ್ತು. ಒಂದು ಸಂಘಟನೆಯನ್ನು ಇಷ್ಟೊಂದು ದೀರ್ಘ ಕಾಲದವರೆಗೆ ಮುನ್ನಡೆಸುವುದು ಸಾಮಾನ್ಯ ಸಂಗತಿಯಲ್ಲ. ಇದಕ್ಕೆ ಸದಸ್ಯರ ಬದ್ಧತೆ, ದೃಢಸಂಕಲ್ಪ, ಆತ್ಮಸ್ಥೈರ್ಯ, ಏನೇ ಆಗಲಿ ಸಾಧಿಸುವ ಛಲ, ಇವೇ ಮೂಲಾಧಾರ ಎಂದರೆ ತಪ್ಪಾಗಲಾರದು.

ಲಾಲ್ ಬಾಗ್ ಆವರಣದಲ್ಲಿ ಇಪಿಎಸ್-95, ಬಿಎಂಟಿಸಿ ಹಾಗೂ ಕೆಎಸ್ಆರ್ಟಿಸಿ, ನಿವೃತ್ತ ನೌಕರರ ಸಂಫದ ವತಿಯಿಂದ ಆಯೋಜಿಸಿದ್ದ, 100ನೇ ಮಾಸಿಕ ಸಭೆಯಲ್ಲಿ ಭಾಗವಹಿಸಿದ್ದ ಹಿರಿಯರು.
ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಇಪಿಎಸ್-95, ಬಿಎಂಟಿಸಿ ಹಾಗೂ ಕೆಎಸ್ಆರ್‌ಟಿಸಿ ನಿವೃತ್ತ ನೌಕರರ ಸಂಘದ ಶತದಿನೋತ್ಸವದ ಮಾಸಿಕ ಸಭೆ ಲಾಲ್‌ಬಾಗ್ ಆವರಣದಲ್ಲಿ ಸರಳ ಹಾಗೂ ಸಂಭ್ರಮದಿಂದ ಜರುಗಿತು.

ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ, ಚಿಕ್ಕಬಳ್ಳಾಪುರ ಕೆಎಸ್ಆರ್‌ಟಿಸಿ ನಿವೃತ್ತ ನೌಕರರ ಟ್ರಸ್ಟ್ ವತಿಯಿಂದ ಮೇ 3ರಂದು ಆಯೋಜಿಸಿದ್ದ ಮಾಸಿಕ ಸಭೆಗೆ ಇಳಿ ವಯಸ್ಸಿನಲ್ಲಿಯೂ ತಮ್ಮ ಆರೋಗ್ಯವನ್ನು ಲೆಕ್ಕಿಸದೆ ನೂರಾರು ಇಪಿಎಸ್ ನಿವೃತ್ತರು ಆಗಮಿಸಿದ್ದು ವಿಶೇಷವಾಗಿತ್ತು. ಒಂದು ಸಂಘಟನೆಯನ್ನು ಇಷ್ಟೊಂದು ದೀರ್ಘ ಕಾಲದವರೆಗೆ ಮುನ್ನಡೆಸುವುದು ಸಾಮಾನ್ಯ ಸಂಗತಿಯಲ್ಲ. ಇದಕ್ಕೆ ಸದಸ್ಯರ ಬದ್ಧತೆ, ದೃಢಸಂಕಲ್ಪ, ಆತ್ಮಸ್ಥೈರ್ಯ, ಏನೇ ಆಗಲಿ ಸಾಧಿಸುವ ಛಲ, ಇವೇ ಮೂಲಾಧಾರ ಎಂದರೆ ತಪ್ಪಾಗಲಾರದು.

ಸಂಘಟನೆಯು ತನ್ನ ಸುದೀರ್ಘ ಪಯಣದಲ್ಲಿ ಎದುರಾದ ಕಠಿಣ ಪರಿಸ್ಥಿತಿಯನ್ನು ಮೆಟ್ಟಿ ನಿಂತು, ಭೌತಿಕವಾಗಿ ಮಾಧ್ಯಮ ಹಾಗೂ ಸುದ್ದಿ ವಾಹಿನಿಗಳ ಮೂಲಕ ನಿವೃತ್ತರ ಹೋರಾಟವನ್ನು ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಕೀರ್ತಿ ಎಲ್ಲ ಸದಸ್ಯರಿಗೂ ಸೇರುತ್ತದೆ ಸಭೆಯಲ್ಲಿ ಮುಖಂಡರು ತಿಳಿಸಿದರು.

ಇನ್ನು ಈ ಶತದಿನೋತ್ಸವ ಮಾಸಿಕ ಸಭೆಯಲ್ಲಿ ಭಾಗಿಯಾಗಿದ್ದ ಸದಸ್ಯರೆಲ್ಲರಿಗೆ ಸಿಹಿ ನೀಡಿ ಸಂಭ್ರಮಿಸಲಾಯಿತು. ನಾಡಿನ ಅಭಿವೃದ್ಧಿಗೆ ಸ್ವಾಭಿಮಾನಿ ಸಂಸ್ಥೆಯ ನೌಕರರು ನಿರ್ವಹಿಸಿದ ಪಾತ್ರದ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಸಂಕಷ್ಟಗಳ ನಡುವೆಯು ಸದಸ್ಯರು ಲೋಕಾಭಿಮಾನವಾಗಿ ತಮ್ಮ ಅನುಭವದ ವಿಚಾರಧಾರೆಯನ್ನು ಮೆಲುಕು ಹಾಕುತ್ತಾ, ಉಭಯ ಕುಶಲೊಪರಿ ವಿಚಾರಿಸುತ್ತಾ, ಕೆಲವೊಮ್ಮೆ ನಗೆ ಗಡಲಿನಲ್ಲಿ ಮಿಂದೇಳುತ್ತಿದ್ದರು.

ಈ ನಿರ್ಲಿಪ್ತ ಇಪಿಎಫ್ಒ ಅಧಿಕಾರಿಗಳ ನಡೆ, ಕೇಂದ್ರ ಸರ್ಕಾರದ ವಿಳಂಬ ನೀತಿಯ ಬಗ್ಗೆ ಸದಸ್ಯರು ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಾ, ತಕ್ಕ ಪಾಠ ಕಲಿಸುವ ದಿನ ಬರಲಿ ಎಂದು ಪಿಸುಗುಟ್ಟುತ್ತಿದ್ದರು. ಏನೇ ಆಗಲಿ, ನಮ್ಮ ಬೇಡಿಕೆ ತಾರ್ಕಿಕ ಅಂತ್ಯ ಮುಟ್ಟುವವರೆಗೂ ಹೋರಾಟವನ್ನು ಮುಂದುವರಿಸೋಣ ಎಂಬ ದೃಢ ನಿರ್ಣಯವನ್ನು ಸಭೆಯಲ್ಲಿ ಕೈಗೊಳ್ಳಲಾಗಿತು.

ಸಂಘದ ಖಜಾಂಚಿ ಡೋಳಪ್ಪನವರು ಸಂಘಟನೆಯ ಕುರಿತು ಪ್ರಾಸ್ತಾವಿಕ ಭಾಷಣದೊಂದಿಗೆ ಸಭೆಗೆ ಚಾಲನೆ ನೀಡಿದರು. ಚಿಕ್ಕಬಳ್ಳಾಪುರ ಕೆಎಸ್ಆರ್‌ಟಿಸಿ ನಿವೃತ್ತ ನೌಕರರ ಟ್ರಸ್ಟ್ ಅಧ್ಯಕ್ಷ ಬ್ರಹ್ಮಚಾರಿ ಮಾತನಾಡಿ, ನಮ್ಮ ಹೋರಾಟ ಅಂತಿಮ ಘಟ್ಟ ತಲುಪಿದ್ದು, ಸದಸ್ಯರು ನಿರಾಶರಾಗುವುದು ಬೇಡ ಎಂದು ಆತ್ಮಸ್ಥೈರ್ಯ ತುಂಬಿದರು.

ಸಂಘದ ಪದಾಧಿಕಾರಿ ನಾಗರಾಜು ಹಾಗೂ ಸದಸ್ಯ ವಸಂತರಾಜು ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ನಿರ್ವಹಣೆಯನ್ನು ಸಂಘದ ಪದಾಧಿಕಾರಿಗಳಾದ ಶಂಕರ್ ಕುಮಾರ್, ಆರ್.ರಂಗನಾಥ್, ಆರ್.ಮನೋಹರ್, ರುಕ್ಮಿಶ್ ಹಾಗೂ ಕೃಷ್ಣಮೂರ್ತಿ ಕೆ. ಅವರು ಯಶಸ್ವಿಯಾಗಿ ನಡೆಸಿ ಕೊಟ್ಟಿದ್ದು, ಅರ್ಥಪೂರ್ಣ ಚರ್ಚೆಯೊಂದಿಗೆ, ಮಾಸಿಕ ಸಭೆ ಪೂರ್ಣಗೊಂಡಿತು.

Megha
the authorMegha

Leave a Reply

error: Content is protected !!
Latest news
ಇಂದು ರಾತ್ರಿ 8.30ರಿಂದ 9.30ರವರೆಗೆ KSRTC ಎಂಡಿ ಅಕ್ರಮ್‌ ಪಾಷರ ಭೇಟಿ ಮಾಡಿ ಗೌಪ್ಯ ಸಭೆ ನಡೆಸಿದ ಜಂಟಿ ಮುಖಂಡರು! ಸಾರಿಗೆ ಕಾರ್ಮಿಕರ ಜಂಟಿ ಕ್ರಿಯಾ ಸಮಿತಿ ಕರೆ ಕೊಟ್ಟಿದ್ದ ಮುಷ್ಕರದಿಂದ ಹಿಂದೆ ಸರಿದ KSRTC ಪ.ಜಾ.-ಪ.ಪಂ ನೌಕರರ ಸಂಘ ಗುಡುಗು ಸಿಡಿಲಿನ ಆರ್ಭಟ: ಮನೆ ಮುಂದೆ ನಿಂತಿದ್ದ ಶಿಕ್ಷಕ ಹೃದಯಾಘಾತಕ್ಕೆ ಬಲಿ ಕೇರಳದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ವಿ.ಡಿ.ಸತೀಶನ್ ಇಂದು ಕೇರಳದ ನೂತನ ಸಿಎಂಆಗಿ ವಿ.ಡಿ. ಸತೀಶನ್‌ ಪ್ರಮಾಣ ವಚನ ಸ್ವೀಕಾರ KSRTC ಜಂಟಿ ಸಮಿತಿ ಒಳೊಪ್ಪಂದ ಬಯಲು; 2.5 ಕೋಟಿ ರೂ.ಗೆ ಸೇಲಾದರ ನೀಚರು, ನೌಕರರ ದಾರಿತಪ್ಪಿಸುತ್ತಿರುವುದರ ಹಿಂದಿನ ಮರ್ಮ... ವಿಜಯಪಥ ವರದಿ ಪರಿಣಾಮ: ಎಚ್ಚೆತ್ತ BMTC ಅಧಿಕಾರಿಗಳು- ಆದೇಶದ ದಿನಾಂಕಕ್ಕಿಂತ ಮೂರು ದಿನ ಮುಂಚಿತವಾಗಿಯೇ ನೌಕರರಿಗೆ 11 ತ... ಸಾರಿಗೆ ನೌಕರರಿಗೆ ಸೆಡ್ಡು ಹೊಡೆಯಲು ಸರ್ಕಾರ ತಂತ್ರ: ಬಸ್ ಸಂಚಾರ ನಿಲ್ಲಿಸಿ ಮುಷ್ಕರಕ್ಕೆ ಮುಂದಾಗಿರುವ ನೌಕರರಿಗೆ ಶಾಕ್ ... KSRTC: ಸರ್ಕಾರದ ಸಾಧನ ಸಮಾವೇಶದಲ್ಲಿ ಕಪ್ಪು ಬಾವುಟ, ಕಪ್ಪು ಪಟ್ಟಿ ಧರಿಸಿ ಸಾರಿಗೆ ನೌಕರರ ಪ್ರತಿಭಟನೆ !? BMTC ನೌಕರರಿಗೆ ಮೇ 19ರಂದು 11 ತಿಂಗಳ ಹಿಂಬಾಕಿ ಪಾವತಿಗೆ ಕ್ರಮ- ಎಂಡಿ ಆದೇಶಕ್ಕೂ ಕಿಮ್ಮತ್ತಿಲ್ಲದರ ಪರಿಣಾಮ ಈ ವಿಳಂಬ!