BMTC: ಮುಂದಿನ ವರ್ಷದಿಂದ ನಿರ್ವಾಹಕರ ಮುಂಬಡ್ತಿ ಜೇಷ್ಠತಾ ಪಟ್ಟಿಯಲ್ಲಿ ನಿಧನ, ವಜಾ, ನಿವೃತ್ತರ ಹೆಸರು ಸೇರ್ಪಡೆ ಆಗಲ್ಲ- ಸಿಪಿಎಂ
ಈವರೆಗೂ ಸಂಸ್ಥೆಯ ನೌಕರರಿಗೆ ಬಡ್ತಿ ನೀಡುವ ಜೇಷ್ಠತಾ ಪಟ್ಟಿಯಲ್ಲಿ ಮರಣ ಹೊಂದಿದವರು, ರಾಜೀನಾಮೆ ನೀಡಿದವರು, ಸ್ವಯಂ ನಿವೃತ್ತಿಗೊಂಡವರು ಹಾಗೂ ವಜಾಗೊಂಡವರ ಹೆಸರನ್ನು ಸೇರಿಸಲಾಗುತ್ತಿತ್ತು. ಈ ಸಂಬಂಧ ಸಂಸ್ಥೆಯ 22ನೇ ಘಟಕದ ನೌಕರ ಮಂಜುನಾಥ್ ಎಂಬುವುದು 16-02-2026ರಂದು ಅರ್ಜಿ ಸಲ್ಲಿಸಿದ್ದರು.

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ನಿರ್ವಾಹಕರಿಗೆ ಬಡ್ತಿ ನೀಡುವ ಜೇಷ್ಠತಾ ಪಟ್ಟಿಯಲ್ಲಿ ಮರಣ ಹೊಂದಿದವರು, ರಾಜೀನಾಮೆ ನೀಡಿದವರು, ಸ್ವಯಂ ನಿವೃತ್ತಿಗೊಂಡವರು ಹಾಗೂ ವಜಾಗೊಂಡವರ ಹೆಸರು ಮುಂದಿನ ವರ್ಷದಿಂದ ಬರುವುದಿಲ್ಲ ಬಸಲಿಗೆ ಅರ್ಹರ ಹೆಸರನ್ನು ಮಾತ್ರ ಜೇಷ್ಠತಾ ಪಟ್ಟಿಯಲ್ಲಿ ಪ್ರಕಟಿಸಲಾಗುವುದು ಎಂದು ನಿಗಮದ ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರಾದ ವಿದ್ಯಾ ತಿಳಿಸಿದ್ದಾರೆ.
ಈವರೆಗೂ ಸಂಸ್ಥೆಯ ನೌಕರರಿಗೆ ಬಡ್ತಿ ನೀಡುವ ಜೇಷ್ಠತಾ ಪಟ್ಟಿಯಲ್ಲಿ ಮರಣ ಹೊಂದಿದವರು, ರಾಜೀನಾಮೆ ನೀಡಿದವರು, ಸ್ವಯಂ ನಿವೃತ್ತಿಗೊಂಡವರು ಹಾಗೂ ವಜಾಗೊಂಡವರ ಹೆಸರನ್ನು ಸೇರಿಸಲಾಗುತ್ತಿತ್ತು. ಈ ಸಂಬಂಧ ಸಂಸ್ಥೆಯ 22ನೇ ಘಟಕದ ನೌಕರ ಮಂಜುನಾಥ್ ಎಂಬುವುದು 16-02-2026ರಂದು ಅರ್ಜಿ ಸಲ್ಲಿಸಿ ಈ ಬಗ್ಗೆ ಪ್ರಶ್ನಿಸಿದ್ದರು.
ಅವರ ಮನವಿಯನ್ನು ಮಾನ್ಯ ಮಾಡಿರುವ ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು ಈ ವಿಷಯಕ್ಕೆ ಸಂಬಂಧಿಸಿದಂತೆ, ನಿರ್ವಾಹಕ ವಿ.ಮಂಜುನಾಥ ಅವರ ಮನವಿಯನ್ನು ಪರಿಶೀಲಿಸಿದ ಬಳಿಕ ಈ ನಿರ್ಧಾರವನ್ನು ತೆಗೆದುಕೊಂಡಿರುವುದಾಗಿ ಜೂನ್ 18ರಂದು ಹಿಂಬರಹ ನೀಡಿದ್ದಾರೆ.
ಈವರೆಗೂ ನಿರ್ವಾಹಕರ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಸಂಸ್ಥೆಯ ಸೇವಾ ನಿಯಮಗಳು ಹಾಗೂ ಮುಂಬಡ್ತಿಗೆ ಸಂಬಂಧಿಸಿದ ಸುತ್ತೋಲೆಗಳಿಗೆ ವಿರುದ್ಧವಾಗಿ ಹಲವು ಗಂಭೀರ ಅಸಂಬದ್ದ ದೋಷಗಳು ಕಂಡುಬಂದಿವೆ ಎಂಬುದನ್ನು ಪತ್ತೆಹಚ್ಚಿದ್ದಾರೆ.
ಹೀಗಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಕಾಯ್ದೆಗಳ ಪ್ರಕಾರ ನೈಸರ್ಗಿಕ ನ್ಯಾಯದಡಿ ಅಂತಿಮ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸುವಂತೆ ನಿರ್ವಾಹಕ ಮಂಜುನಾಥ್ ಕೋರಿದ್ದರು.
ಅವರು ಮನವಿಯಲ್ಲಿ ಕೋರಿರುವಂತೆ ವಜಾಗೊಂಡ ನೌಕರರು ಮುಂದೆ ನ್ಯಾಯಾಲಯದ ಆದೇಶದಂತೆ ಮರುನೇಮಕಗೊಳ್ಳುವ ಅವಕಾಶಗಳಿದ್ದು, ಆ ಸಂಧರ್ಭದಲ್ಲಿ ಅವರ ಜೇಷ್ಠತೆಯನ್ನು ಪರಿಗಣಿಸುವ ಸಲುವಾಗಿ ಜೇಷ್ಠತಾ ಪಟ್ಟಿಯಲ್ಲಿ ಅವರ ಹೆಸರನ್ನು ಮುಂದುವರೆಸಲಾಗಿದೆ.
ಮುಂದುವರಿದು ಪ್ರಸ್ತುತ ಪ್ರಕಟಿಸಲಾಗಿರುವ 01-01-2026ರ ಜೇಷ್ಠತಾ ಪಟ್ಟಿಯಲ್ಲಿ 01-1-2025 ರಿಂದ 31-12-2025ರ ಅವಧಿಯಲ್ಲಿ ನಿವೃತ್ತಿ, ಮರಣ, ರಾಜೀನಾಮೆ, ಸ್ವಯಂ ನಿವೃತ್ತಿ ಕಾರಣಗಳಿಂದ ಸೇವೆಯಿಂದ ವಿಮುಕ್ತಿಗೊಂಡ ನೌಕರರಿಗೆ ಸಂಬಂಧಿಸಿದಂತೆ ಮಾತ್ರ ದಾಖಲಾತಿಯ ಸಲುವಾಗಿ ಷರಾ ದಾಖಲಿಸಲಾಗಿದ್ದು, ಮುಂದಿನ ವರ್ಷದ ಈ ಜೇಷ್ಠತಾ ಪಟ್ಟಿಯ ಪ್ರಕಟಣೆಯ ಸಂದರ್ಭದಲ್ಲಿ ಇವರ ಹೆಸರನ್ನು ಕೈ ಬಿಡಲಾಗುವುದು ಎಂದು ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರಾದ ವಿದ್ಯಾ ತಿಳಿಸಿದ್ದಾರೆ.
ಇನ್ನು ಈಗ ಅಂದರೆ 01-01-2026ರ ಜೇಷ್ಠತಾ ಪಟ್ಟಿಯಲ್ಲಿ ಸಂಸ್ಥೆಯಲ್ಲಿ ನಿರ್ವಾಹಕರ ಜೇಷ್ಠತಾ ಪಟ್ಟಿಯನ್ನು ಆ ಹುದ್ದೆಯ ಆಯ್ಕೆ ಪಟ್ಟಿ ಕ್ರಮಾಂಕದಂತೆ ಸಿದ್ಧಪಡಿಸಲಾಗಿದ್ದು, ಅದರಂತೆ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸಲಾಗಿದ್ದು ಇದು ಕ್ರಮಬದ್ಧವಾಗಿದೆ ಎಂದು ತಿಳಿಸಿದ್ದಾರೆ.
ಇದು ಕ್ರಮಬದ್ಧವಾಗಿದೆ ಇಲ್ಲ ಎಂದು ಹೇಳುತ್ತಿಲ್ಲ ಆದರೆ, ಜೇಷ್ಠತಾ ಪಟ್ಟಿಯಲ್ಲಿ ನಿಧನಹೊಂದಿದವರು, ವಜಾಗೊಂಡವರು, ಸ್ವಯಂ ನಿವೃತ್ತಿ ಹೊಂದಿದವರು ಹೀಗೆ ಬೇಡದವರ ಹೆಸರನ್ನು ಸೇರಿಸಿ ಜೇಷ್ಠತಾ ಪಟ್ಟಿ ಪ್ರಕಟಿಸುವುದರಿಂದ ಅರ್ಹ ನೌಕರರಲ್ಲಿ ಗೊಂದವಾಗುತ್ತಿದೆ. ಅಲ್ಲದೆ ನ್ಯಾಯಯುತವಾಗಿ ಸಿಗಬೇಕಿರುವ ಮುಂಬಡ್ತಿ ಕೈ ತಪ್ಪುವ ಸಾಧ್ಯತೆ ಹೆಚ್ಚಿದೆ ಎಂಬುವುದು ಸ್ಪಷ್ಟವಾಗಿ ಕಾಣುತ್ತಿದೆ.
ಈ ಎಲ್ಲ ಕಾರಣಗಳಿಂದ ಸದ್ಯಕ್ಕೆ ನಿರ್ವಾಹಕ ಮಂಜುನಾಥ್ ಅವರು ಕೋರಿರುವಂತೆ ಮುಂದಿನ ವರ್ಷದಿಂದ ಈ ಗೊಂದಲಗಳಿಗೆ ತೆರೆ ಎಳೆಯಲಾಗುವುದು ಎಂದು ನಿಗಮದ ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು ತಿಳಿಸಿರುವುದು ನೌಕರರಲ್ಲಿ ಖುಷಿ ತಂದಿದೆ.
ಇನ್ನು ಮುಖ್ಯವಾಗಿ ಹೇಳಬೇಕು ಎಂದರೆ ಈ ಬಗ್ಗೆ ಸಂಘಟನೆಗಳ ಮುಖಂಡರು ಧ್ವನಿ ಎತ್ತಬೇಕಿತ್ತು. ಆದರೆ, ಅವರ ತಲೆಗೆ ಇದೆಲ್ಲ ಬರುವುದಿಲ್ಲ ಅವರಿಗೆ ಬರುವುದು ಬೇರೆ ವಿಷಯಗಳು ಮಾತ್ರ ಎಂದು ನೌಕರರು ಅಸಮಾಧಾನವನ್ನು ಹೊರಹಾಕಿದ್ದು, ನಿರ್ವಾಹಕ ಮಂಜುನಾಥ್ ಅವರು ಮನವಿಗೆ ಅಭಿನಂದನೆ ಸಲ್ಲಿಸಿದ್ದಾರೆ.







