NEWSನಮ್ಮಜಿಲ್ಲೆನಮ್ಮರಾಜ್ಯ

KSRTC ಕಡೂರು: ಘಟಕದಲ್ಲೊಬ್ಬಳು ಟಾರ್ಚರ್‌ ಟಿಸಿ- ನೌಕರರಿಗೆ ಮಾನಸಿಕ ಕಿರುಕುಳ- ರಜೆ ಬದಲು ಗೈರು ತೋರಿಸುವ ನಟ ಭಯಂಕರಿ!

ಈ ಲೇಡಿ ಸಂಚಾರ ನಿಯಂತ್ರಕಿ ಬೇರೆ ಯಾರು ಅಲ್ಲ ಡಿ.ಪಿ. ಮಂಜುಳ ಎಂಬಾಕೆ. ಈಕೆ ಒಬ್ಬ ನಿರ್ವಾಹಕಿಯಾಗಿ ಸೇವೆ ಸಲ್ಲಿಸಿದ ಅನುಭವವು ಇದೆ. ಆದರೆ, ಈಗ ಬಡ್ತಿ ಸಿಕ್ಕ ಕೂಡಲೇ ಒಬ್ಬ ದೊಡ್ಡ ಅಧಿಕಾರಿಯಾಗಿ ಬಿಟ್ಟಿದ್ದೇನೆ ಎಂಬ ಅಹಂಕಾರ ನೆತ್ತಿಗೇರಿ ತನ್ನ ಸಹೋದ್ಯೋಗಿಗಳನ್ನೇ ಭಾರಿ ಕೀಳಾಗಿ ಕಾಣುವ ಜತೆಗೆ ಇನ್ನಿಲ್ಲದಂತಹ ಕಿರುಕುಳ ನೀಡುತ್ತಿದ್ದಾಳಂತೆ.

ವಿಜಯಪಥ ಸಮಗ್ರ ಸುದ್ದಿ

ಕಡೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಚಿಕ್ಕಮಗಳೂರು ವಿಭಾಗದ ಕಡೂರು ಘಟಕದಲ್ಲಿ ಚಾಲನಾ ಸಿಬ್ಬಂದಿಗೆ ಕಿರುಕುಳ ಕೊಡುವುದಕ್ಕಾಗಿಯೇ ಒಬ್ಬಳು ಕಿರಾತಕಿ ಇದ್ದಾಳೆ ಎಂದರೆ ನೀವು ನಂಬಲೇಬೇಕು. ಘಟಕದಲ್ಲಿರೋ ಈ ಟಾರ್ಚರ್‌ ಟಿಸಿ ನೌಕರರನ್ನು ಮಾನಸಿಕ ಹಿಂಸಿಸುವುದರಲ್ಲಿ ನಂಬರ್‌ ಒನ್‌ ಲೇಡಿ. ಅಲ್ಲದೆ ನೌಕರರು ಅವರ ನ್ಯಾಯಯುತವಾದ ರಜೆ ಪಡೆಯುವುದಕ್ಕೂ ಬಿಡದೆ ಮೂಗು ತೂರಿಸಿ ಗೈರು ಹಾಜರಿ ತೋರಿಸಿ ಬಳಿಕ ನಟನೆ ಮಾಡುವ ನಟ ಭಯಂಕರಿ ಈಕೆ!

ಹೌದು! ಈಕೆ ಡಿಪೋನಲ್ಲಿ ಸಂಚಾರ ನಿಯಂತ್ರಕಿಯಾಗಿದ್ದು ನೌಕರರಿಗೆ ಇನ್ನಿಲ್ಲದ ಕಿರುಕುಳ ಕೊಡುತ್ತಿದ್ದಾಳೆ ಎಂಬ ಆರೋಪ ಕೇಳಿ ಬಂದಿದೆ. ಅಲ್ಲದೆ ಈಕೆಯ ಕಿರುಕುಳ ತಾಳಲಾರದೆ 70ಕ್ಕೂ ಹೆಚ್ಚು ನೌಕರರು ಮೇಲಧಿಕಾರಿಗಳಿಗೆ ಲಿಖಿತವಾಗಿ ದೂರು ಸಲ್ಲಿಸಿ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಮನವಿಕೂಡ ಮಾಡಿದ್ದಾರೆ.

ಆದರೆ, ಈಕೆಯ ವಿರುದ್ಧ ಈವರೆಗೂ ಮೇಲಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಅಂದರೆ ಈ ನಿಗಮದಲ್ಲಿ ಬೇಜವಾಬ್ದಾರಿಯ ಅಧಿಕಾರಿಗಳೇ ಹೆಚ್ಚಾಗಿದ್ದಾರೆ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ನೋಡಿ ನೌಕರರು ತಿಂಗಳಿಗೆ ಸಂಸ್ಥೆಯ ನಿಯಮದಡಿ 2 ರಜೆ ಪಡೆಯುವುದಕ್ಕೆ ಅವಕಾಶವಿದೆ. ಆದರೆ ಈ ಕಿರಾತಕಿ ನೌಕರರಿಗೆ ರಜೆ ಕೊಡುವುದನ್ನು ರದ್ದು ಮಾಡಿಸಿ ಡ್ಯೂಟಿಗೆ ಬರಬೇಕು ಎಂದು ತಾಕೀತು ಮಾಡುತ್ತಾಳಂತೆ.

ಈ ಲೇಡಿ ಸಂಚಾರ ನಿಯಂತ್ರಕಿ ಬೇರೆ ಯಾರು ಅಲ್ಲ ಡಿ.ಪಿ. ಮಂಜುಳ ಎಂಬಾಕೆ. ಈಕೆ ಒಬ್ಬ ನಿರ್ವಾಹಕಿಯಾಗಿ ಸೇವೆ ಸಲ್ಲಿಸಿದ ಅನುಭವವು ಇದೆ. ಆದರೆ, ಈಗ ಬಡ್ತಿ ಸಿಕ್ಕ ಕೂಡಲೇ ಒಬ್ಬ ದೊಡ್ಡ ಅಧಿಕಾರಿಯಾಗಿ ಬಿಟ್ಟಿದ್ದೇನೆ ಎಂಬ ಅಹಂಕಾರ ನೆತ್ತಿಗೇರಿ ತನ್ನ ಸಹೋದ್ಯೋಗಿಗಳನ್ನೇ ಭಾರಿ ಕೀಳಾಗಿ ಕಾಣುವ ಜತೆಗೆ ಇನ್ನಿಲ್ಲದಂತಹ ಕಿರುಕುಳ ನೀಡುತ್ತಿದ್ದಾಳಂತೆ.

ಈ ಕಡೂರು ಘಟಕದಲ್ಲಿ ಸಂಚಾರ ನಿಯಂತ್ರಕಿಯಾಗಿರುವ ಡಿ.ಪಿ. ಮಂಜುಳ ಈ ಮೊದಲೇ ಹೇಳಿದಂತೆ ಸುಮಾರು ಹತ್ತು ವರ್ಷಗಳ ಹಿಂದೆ ನಿರ್ವಾಹಕಿಯಾಗಿ ಕರ್ತವ್ಯ ನಿರ್ವಯಸುತ್ತಿದ್ದು, ನಂತರ ಮುಂಬಡ್ತಿ ಪಡೆದು ಸಂಚಾರ ನಿಯಂತ್ರಕಿಯಾಗಿದ್ದಾಳೆ. ಇನ್ನು ವಿಶೇಷ ಎಂದರೆ ಸತತ 5 ವರ್ಷಗಳಿಂದ ಕಡೂರು ಘಟಕದಲ್ಲೇ ಸಂಚಾರ ನಿಯಂತ್ರಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾಳೆ.

ಅದು ಹೋಗಲಿ ಬಿಡಿ. ಆದರೆ, ಈಕೆ ಇತ್ತೀಚಗೆ ಕೆಲ ವರ್ಷಗಳಿಂದ ಚಾಲಕ, ನಿರ್ವಾಹಕ ಸಿಬ್ಬಂದಿಗಳಿಗೆ ಮಾನಸಿಕವಾಗಿ ತುಂಬಾ ಕಿರುಕುಳ ನೀಡುತ್ತಿದ್ದು, ಹಲವಾರು ನೌಕರರು ಬೇಸತ್ತು ಹೋಗಿದ್ದಾರೆ. ಈ ಹಿಂದೆ ಒಬ್ಬ ನೌಕರ ಆತ್ಮಹತ್ಯೆಗೆ ಯತ್ನಿಸಿದ್ದರು. ಅದಕ್ಕೆ ಇದೇ ಸಂಚಾರ ನಿಯಂತ್ರಕಿ ಮಂಜುಳ ಪರೋಕ್ಷ ಕಾರಣವಾಗಿದ್ದಾಳೆ.

ನೌಕರರಿಗೆ ವಿನಾ ಕಾರಣ ಕರ್ತವ್ಯ ನಿರ್ವಹಿಸಲು ಗೊಂದಲವನ್ನು ಉಂಟುಮಾಡಿ ಸರಿಯಾಗಿ ಕರ್ತವ್ಯನಿರ್ವಹಿಸಲು ಬಿಡದೇ ತಮ್ಮದೇ ಶೈಲಿಯಲ್ಲಿ ಹಿರಿಯ ಚಾಲನಾ ಸಿಬ್ಬಂದಿಗಳಿಗೆ ಏಕವಚನದಲ್ಲಿ ಮಾತನಾಡುತ್ತಾಳೆ. ಇದರಿಂದ ಕರ್ತವ್ಯ ನಿರ್ವಹಿಸಲು ಘಟಕಕ್ಕೆ ಬಂದ ನೌಕರರು ಕೂಡ ಕರ್ತವ್ಯ ನಿರ್ವಹಿಸಲು ಮನಸ್ಸು ಬಾರದೇ ತುಂಬಾ ಗೈರು ಹಾಜರಾಗುತ್ತಿದ್ದಾರೆ.

ಇನ್ನು ಈಕೆ ಒಬ್ಬ ಮುಂಬಡ್ತಿ ಪಡೆದ ಸಂಚಾರ ನಿಯಂತ್ರಕಿಯಾಗಿದ್ದು, ಸುಮಾರು ವರ್ಷಗಳಿಂದ ಒಂದೇ ಸ್ಥಳದಲ್ಲಿಯೇ ಬೇರು ಬಿಟ್ಟಿದ್ದಾಳೆ. ಇದರಿಂದ ಚಾಲನಾ ಸಿಬ್ಬಂದಿಗಳ ಜತೆ ದಬ್ಬಾಳಿಕೆ ಹಾಗೂ ದೌರ್ಜನ್ಯದಿಂದ ವರ್ತಿಸುತ್ತಿದ್ದಾಳೆ. ಇದರಿಂದ ಚಾಲನಾ ಸಿಬ್ಬಂದಿಗಳು ತುಂಬಾ ಮನನೊಂದಿದ್ದು, ಮುಂದಿನ ದಿನಗಳಲ್ಲಿ ಇಂತಹ ಅಹಿತಕರ ಘಟನೆಗಳಿಗೆ ಅಸ್ಪದ ಕೊಡದೇ ಮುಂಜಾಗ್ರತೆಯಾಗಿ ಈ ಸಂಚಾರ ನಿಯಂತ್ರಕಿಯನ್ನು ವರ್ಗಾವಣೆ ಮಾಡಬೇಕು ಎಂದು 70ಕ್ಕೂ ಹೆಚ್ಚು ನೌಕರರು ಎಂಡಿ ಸೇರಿದಂತೆ ಮೇಲಧಿಕಾರಿಗಳಿಗೆ ಲಿಖಿತ ದೂರು ನೀಡಿದ್ದಾರೆ.

ಈ ದೂರುಗಳನ್ನು ನೀಡಿ ತಿಂಗಳುಗಳೆ ಕಳೆದರೂ ಕೂಡ ಈಕೆಯ ವಿರುದ್ಧ ಈವರೆಗೂ ಯಾವುದೇ ಕ್ರಮವಾಗಿಲ್ಲ ಎಂದು ನೌಕರರು ಭಾರಿ ನೋವಿನಿಂದ ವಿಜಯಪಥ ವರದಿಗಾರರೊಂದಿಗೆ ತಮ್ಮ ಸಮಸ್ಯೆಯನ್ನು ವಿವರಿಸಿದ್ದಾರೆ.

ಅಲ್ಲದೆ ಈಕೆ ಸಂಸ್ಥೆಯ ನಿಯಮದ ಪ್ರಕಾರ ಇರುವ ತಿಂಗಳಿಗೆ ಎರಡು ರಜೆ ಪಡೆಯುವ ಸೌಲಭ್ಯದಿಂದಲೂ ನೌಕರರನ್ನು ವಂಚಿಸುತ್ತಿದ್ದಾಳೆ. ಹೀಗಾಗಿ ನಾವು ಈ ಪತ್ರವನ್ನು ಓದಿ ಸಹಿ ಮಾಡಿ ಕಳುಹಿಸಿರುತ್ತೇವೆ ಮತ್ತು ನೌಕರರು ನೆಮ್ಮದಿಯಾಗಿ ಕರ್ತವ್ಯ ನಿರ್ವಹಿಸಿಕೊಂಡು ಹೋಗಲು ಅನುವುಮಾಡಿಕೊಡಬೇಕಾಗಿ ವಿನಂತಿಸಿಕೊಳ್ಳುತ್ತೇವೆ ಎಂದು ಕೆಎಸ್‌ಆರ್‌ಟಿಸಿ ಎಂಡಿ ಅಕ್ರಮ್‌ ಪಾಷ ಅವರಿಗೆ ನೊಂದ ನೌಕರರು ಲಿಖಿತ ದೂರು ನೀಡಿದ್ದಾರೆ.

ಇನ್ನು ಘಟಕದಲ್ಲಿ ನೌಕರರು ಮಾನಸಿಕವಾಗಿ ನೆಮ್ಮದಿ ಕಳೆದುಕೊಳ್ಳುವಂತಹ ಸ್ಥಿತಿಗೆ ದೂಡುತ್ತಿರುವ ಈಕೆಯ ವಿರುದ್ಧ ಕೂಡಲೇ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುವ ಜತೆಗೆ ಅಮಾನತು ಮಾಡಬೇಕು. ವಿಚಾರಣೆ ನಡೆಸಿ ಸಂಸ್ಥೆಯ ನಿಯಮದ ಪ್ರಕಾರ ವಜಾ ಮಾಡಬೇಕು ಎಂದು ನೊಂದ 70ಕ್ಕೂ ಹೆಚ್ಚು ನೌಕರರು ಎಂಡಿ ಅವರಲ್ಲಿ ಮನವಿ ಮಾಡಿದ್ದಾರೆ.

Megha
the authorMegha

Leave a Reply

error: Content is protected !!
Latest news
KSRTC: ಪಲ್ಲಕ್ಕಿಯಲ್ಲಿ ಆಕಸ್ಮಿಕ ಬೆಂಕಿ- ಧಗಧಗಿಸಿದ ಬಸ್‌- ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರಿ ಅನಾಹುತ KSRTC ಕಡೂರು: ಘಟಕದಲ್ಲೊಬ್ಬಳು ಟಾರ್ಚರ್‌ ಟಿಸಿ- ನೌಕರರಿಗೆ ಮಾನಸಿಕ ಕಿರುಕುಳ- ರಜೆ ಬದಲು ಗೈರು ತೋರಿಸುವ ನಟ ಭಯಂಕರಿ! EPS ಪಿಂಚಣಿದಾರರ 100ನೇ ಮಾಸಿಕ, ಶತದಿನೋತ್ಸವದಲ್ಲಿ ಮುಸ್ಸಂಜೆಯ ತರುಣರ ಸಂಭ್ರಮ KSRTC: ಫ್ರೀಡಂ ಪಾರ್ಕ್‌ನಲ್ಲಿ ಸರಿ ಸಮಾನ ವೇತನ, 38 ತಿಂಗಳ ಹಿಂಬಾಕಿಗೆ ಆಗ್ರಹಿಸಿ ಸಾರಿಗೆ ನೌಕರರ ಪ್ರತಿಭಟನೆ- ಸರ್ಕಾರ... ಗೆದ್ದ3ವರ್ಷದ ಬಳಿಕ ಶಾಸಕರಾದ ಜೀವರಾಜ್: ಅಧಿಕಾರಿಗಳ ಎಡವಟ್ಟಿಗೆ ಸೋತರು 3ವರ್ಷ ಶಾಸಕರಾಗಿದ್ದ ರಾಜೇಗೌಡ KSRTC: ಇಂದು ಸರಿ ಸಮಾನ ವೇತನ, 38 ತಿಂಗಳ ಹಿಂಬಾಕಿ ಕೊಡಲು ಆಗ್ರಹಿಸಿ ಸಾರಿಗೆ ನೌಕರರ ಧರಣಿ ಸತ್ಯಾಗ್ರಹ KSRTC: ನಾಳೆ ಸರಿ ಸಮಾನ ವೇತನ, 38 ತಿಂಗಳ ಹಿಂಬಾಕಿ ಕೊಡದ ಸರ್ಕಾರದ ವಿರುದ್ಧ ಸಾರಿಗೆ ನೌಕರರ ಧರಣಿ ಸತ್ಯಾಗ್ರಹ KKRTC: ನೋಡಿ ಎಂಡಿ ಅವರೇ ನಿಮ್ಮ ಸಂಸ್ಥೆಯಲ್ಲಿ ಚಾಲನಾ ಸಿಬ್ಬಂದಿಗಳು ಮೇ 1ರಂದು ರಜೆ ತೆಗೆದುಕೊಂಡರೆ ಆಬ್ಸೆಂಟ್‌ ಹಾಕುವ ... ಪ್ರಾಮಾಣಿಕತೆ ಮೆರೆದ KSRTC ಸಿಬ್ಬಂದಿ - ಆಭರಣ ಅಡವಿಟ್ಟು ತಂದಿದ್ದ ಹಣ ಕಳೆದು ಕೊಂಡ ಪ್ರಯಾಣಿಕನಿಗೆ ಮರಳಿ ಕೊಟ್ಟ ನೌಕರರ... KSRTC: ಚಾಲನಾ ಸಿಬ್ಬಂದಿ ವಿರುದ್ಧ ಮೆಮೊ ನೀಡುವುದಕಷ್ಟೇ ತಮ್ಮ ಕಾರ್ಯ ವ್ಯಾಪ್ತಿಯ ಸೀಮಿತಗೊಳಿಸಿಕೊಂಡ ತನಿಖಾಧಿಕಾರಿಗಳು?...