NEWSನಮ್ಮಜಿಲ್ಲೆನಮ್ಮರಾಜ್ಯ

KSRTC: ನೌಕರರಿಗೆ ಅತೀ ಜರೂರು ಸಂದರ್ಭ ಹೊರತು ಮ್ಯಾನ್ಯುಯಲ್ ರಜೆ ಅರ್ಜಿಗಳ ಶಿಫಾರಸು ಮಾಡುವಂತಿಲ್ಲ

ವಿಜಯಪಥ ಸಮಗ್ರ ಸುದ್ದಿ

ಮಂಡ್ಯ: ಮ್ಯಾನ್ಯುಯಲ್ ರಜೆ ಅರ್ಜಿಗಳನ್ನು ಶಿಫಾರಸು ಮಾಡಿ ಕಳುಹಿಸದಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮಂಡ್ಯ ವಿಭಾಗದ ಅಧಿಕಾರಿಗಳು ಘಟಕ ವ್ಯವಸ್ಥಾಪಕರು ಸೇರಿ ಇತರರಿಗೆ ಆದೇಶ ಮಾಡಿದ್ದಾರೆ.

ನಿಗಮದಲ್ಲಿ ಎಚ್.ಆರ್.ಎಂ.ಎಸ್ ತಂತ್ರಾಂಶವನ್ನು ಅನುಷ್ಠಾನಗೊಳಿಸಿದ್ದು, ಈ ಸಂಬಂಧ ರಜೆ ಮಂಜೂರಾತಿಗೆ ಸಂಬಂಧಿಸಿದಂತೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಈಗಾಗಲೇ ತಿಳಿಸಲಾಗಿದೆ. ಆದರೂ ಸಹ ಈ ಕ್ರಮಗಳನ್ನು ಅನುಸರಿಸದೆ ಅಥವಾ ಪಾಲಿಸದೆ ಅಲ್ಪಾವಧಿ ಅವಧಿಗೆ ರಜೆ ಕೋರುವ ಸಿಬ್ಬಂದಿಗಳಿಗೆ ರಜಾ ಅರ್ಜಿಗಳನ್ನು ಶಿಫಾರಸು ಮಾಡಲಾಗುತ್ತಿದೆ.

ಈ ಮೂಲಕ ಸುತ್ತೋಲೆಯಲ್ಲಿನ ನಿರ್ದೇಶನಗಳು ಹಾಗೂ ರಜಾ ನಿಯಮಾವಳಿಗಳನ್ವಯ ರಜಾ ಮಂಜೂರಾತಿಗೆ ಸಂಬಂಧಿಸಿದಂತೆ ಕ್ರಮ ವಹಿಸದಿರುವುದು ಕಂಡು ಬಂದಿದೆ. ಹಾಗೂ ಏಪ್ರಿಲ್-2025ರ ಮಾಹೆಯಲ್ಲೂ ಸಹ ಸಿಬ್ಬಂದಿಗಳಿಗೆ ಮ್ಯಾನ್ಯುಯಲ್ ರಜೆಗಳನ್ನು ಮಂಜೂರು ಮಾಡುವಂತೆ ಕೋರಿ ರಜಾ ಅರ್ಜಿಗಳನ್ನು ಶಿಫಾರಸು ಮಾಡಿದ್ದು, ಕೊನೆಯ ಬಾರಿಗೆ ಒಂದು ಅವಕಾಶ ನೀಡಿ, ಮ್ಯಾನ್ಯುಯಲ್ ರಜೆಗಳನ್ನು ಮಂಜೂರು ಮಾಡಲಾಗಿತ್ತು.

ಮುಂದುವರಿದಂತೆ, ವಿಭಾಗೀಯ ತಾಂತ್ರಿಕ ಶಿಲ್ಪಿ, ವಿಭಾಗೀಯ ಸಂಚಾರ ಅಧಿಕಾರಿ, ಘಟಕ ವ್ಯವಸ್ಥಾಪಕರಿಗೆ ನೀಡಿರುವ ಅಧಿಕಾರ ವ್ಯಾಪ್ತಿಯಲ್ಲಿ ರಜಾ ಮಂಜೂರಾತಿ ಸಂಬಂಧ ಉಲ್ಲೇಖಿತ ನಿರ್ದೇಶನದಂತೆ ಕ್ರಮ ವಹಿಸಬೇಕು. ಇನ್ನು ಮುಂದೆ ಯಾವುದೇ ಕಾರಣಕ್ಕೂ ಮ್ಯಾನ್ಯುಯಲ್ ರಜೆ ಅರ್ಜಿಗಳನ್ನು ಶಿಪಾರಸು ಮಾಡಿ, ಮಂಜೂರಾತಿಗಾಗಿ ವಿಭಾಗೀಯ ಕಚೇರಿಗೆ ಸಲ್ಲಿಸದಂತೆ ಹಾಗೂ ಈ ತಂತ್ರಾಂಶದ ಅನುಷ್ಠಾನ ಸಂಬಂಧ ಈ ಕೆಳಕಂಡ ನಿರ್ದೇಶನಗಳನ್ನು ತಪ್ಪದೇ ಪಾಲಿಸಬೇಕು ಎಂದು ತಿಳಿಸಿದ್ದಾರೆ.

ಘಟಕ ವ್ಯವಸ್ಥಾಪಕರಿಗೆ 7 ದಿನಗಳವರೆಗೆ ರಜೆಗಳನ್ನು ತಂತ್ರಾಂಶದಲ್ಲಿ ನಮೂದಿಸಿ ಮಂಜೂರು ಮಾಡುವ ಅವಕಾಶ ಕಲ್ಪಸಲಾಗಿದೆ. ಈ ಅವಕಾಶವನ್ನು ಕಲ್ಪಿಸಲಾಗಿರುವುದರಿಂದ ಯಾವುದೇ ಮ್ಯಾನ್ಯುಯಲ್ ರಜೆಗಳನ್ನು ಮಂಜೂರು ಮಾಡಲು ಅವಕಾಶವಿರುವುದಿಲ್ಲ ಎಂದು ಮತ್ತೊಮ್ಮೆ ತಿಳಿಸಲಾಗಿದೆ.

ಪ್ರಸ್ತುತ ಘಟಕ ವ್ಯವಸ್ಥಾಪಕರಿಗೆ ಹಿಂದಿನ 10 ದಿನಗಳವರೆಗೆ ಮಾತ್ರ EL & CML ರಜೆಗಳನ್ನು ಘಟಕ ವ್ಯವಸ್ಥಾಪಕರ Logiri ID ನಲ್ಲಿ Apply Leave ಮೂಲಕ Apply ಮಾಡಲು ಅವಕಾಶವನ್ನು ಕಲ್ಪಸಿರುವುದರಿಂದ, ಇನ್ನು ಮುಂದೆ ಅನಿವಾರ್ಯ ಅಥವಾ ತುರ್ತು ಸಂದರ್ಭಗಳಲ್ಲಿ ಕರ್ತವ್ಯಕ್ಕೆ ಹಾಜರಾಗಲು ಸಾಧ್ಯವಾಗದೇ ಖುದ್ದಾಗಿ / ದೂರವಾಣಿ ಮೂಲಕ ಮಾಹಿತಿ ನೀಡಿದ್ದಲ್ಲಿ, ರಜೆ ನೀಡುವಂತೆ ಕೋರುವ ಸಿಬ್ಬಂದಿಗಳಲ್ಲಿ, ಉತ್ತಮ ಹಾಜರಾತಿ ಹಾಗೂ ರಜೆಗೆ ಸೂಕ್ತ ಕಾರಣ ಇರುವಂತಹ / ದಾಖಲಾತಿ ಸಲ್ಲಿಸುವಂತಹ ಅರ್ಹ ಸಿಬ್ಬಂದಿಗಳಿಗೆ ಮಾತ್ರ ಘಟಕ ವ್ಯವಸ್ಥಾಪಕರು. ತಮ್ಮ Login ID ನಲ್ಲಿ Apply Leave ಮೂಲಕ ಆಯಾ ದಿನವೇ ಅಥವಾ 2 ದಿನಗಳ ಒಳಗೆ EL & Apply ಮಾಡಲು ಕ್ರಮ ವಹಿಸಬೇಕು ಎಂದು ಸೂಚನೆ ನೀಡಿದ್ದಾರೆ.

Megha
the authorMegha

Leave a Reply

error: Content is protected !!