KKRTC: ನೋಡಿ ಎಂಡಿ ಅವರೇ ನಿಮ್ಮ ಸಂಸ್ಥೆಯಲ್ಲಿ ಚಾಲನಾ ಸಿಬ್ಬಂದಿಗಳು ಮೇ 1ರಂದು ರಜೆ ತೆಗೆದುಕೊಂಡರೆ ಆಬ್ಸೆಂಟ್ ಹಾಕುವ ನಿಯಮ ಯಾವಾಗ ಜಾರಿಗೆ ಬಂತು?
ನೌಕರರು ತಮ್ಮ ಹಕ್ಕಿನ ರಜೆ ತೆಗೆದುಕೊಳ್ಳುವುದಕ್ಕೂ ಆಗುತ್ತಿಲ್ಲ ಎಂದರೆ ನಿಗಮದಲ್ಲಿ ಯಾವರೀತಿಯ ಅಂಧದರ್ಬಾರು ಮಾಡುತ್ತಿದ್ದಾರೆ ಅಧಿಕಾರಿಗಳು ಅಂತ ತಿಳಿಯುತ್ತಿದೆ. ಕಿತ್ತು ತಿನ್ನುವ ಇಂಥವರ ಮಧ್ಯೆ ಕೆಲಸ ಮಾಡುವುದಕ್ಕೆ ಸಾಧ್ಯವಿದೆಯೇ, ಕೂಡಲೇ ನೌಕರರ ಹಕ್ಕನ್ನು ಕಸಿದುಕೊಳ್ಳುವುದಕ್ಕೆ ಮುಂದಾಗಿರುವ ಈ ಅಧಿಕಾರಿಗಳ ಅಮಾನತು ಮಾಡಿ, ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು.

ಕೊಪ್ಪಳ: ಮೇ 1ರಂದು ಸರ್ಕಾರಿ ರಜೆ ಇದ್ದು ಈ ರಜೆಯನ್ನು ನೌಕರರು ತೆಗೆದುಕೊಳ್ಳುವುದಕ್ಕೆ ಯಾರ ದೊಣ್ಣೆನಾಯಕನ ಅಪ್ಪಣೆಯನ್ನು ತೆಗೆದುಕೊಳ್ಳಬೇಕಿಲ್ಲ. ಆದರೆ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕೊಪ್ಪಳ ವಿಭಾಗದ ಕೊಪ್ಪಳ ಘಟಕದಲ್ಲಿ 72 ಮಂದಿ ತಮ್ಮ ಹಕ್ಕಿನ ರಜೆಯನ್ನು ತೆಗೆದುಕೊಂಡಿರುವುದಕ್ಕೆ ಅವರಿಗೆ ಅಂದಿನ ದಿನ ಡ್ಯೂಟಿಕೆಗೆ ಬಂದಿಲ್ಲ ಎಂದು ಹೇಳಿ ಗೈರುಹಾಜರಿ ಹಾಕಿದ್ದಾರೆ.

ಅಂದರೆ, ಸಾರಿಗೆ ನಿಗಮಗಳಲ್ಲಿ ಅಧಿಕಾರಿಗಳ ದರ್ಪ ಎಷ್ಟಿದೆ ಎಂಬುದಕ್ಕೆ ಇದಕ್ಕಿಂತ ಬಲವಾದ ಸಾಕ್ಷಿ ಬೇಕೇ? ಇಂಥ ಅಧಿಕಾರಿಗಳ ನಡುವೆ ಚಾಲನಾ ಸಿಬ್ಬಂದಿ ಡ್ಯೂಟಿ ಮಾಡುವುದಾದರೂ ಹೇಗೆ ಸಾಧ್ಯ?
ಮೇ 1ರಂದು ಕಾರ್ಮಿಕ ದಿನಾಚರಣೆ ನಿಮಿತ್ತ ಸರ್ಕಾರ ರಜೆ ಇದೆ. ಈ ದಿನ ಸಾರಿಗೆ ನೌಕರರು ಡ್ಯೂಟಿಗೆ ಹೋದರೆ ಡಬಲ್ ಪೇಮೆಂಟ್ ಕೊಡಬೇಕು ಒಂದು ವೇಳೆ ಡ್ಯೂಟಿಗೆ ಹೋಗದೆ ರಜೆ ತೆಗೆದುಕೊಂಡದರೆ ಆ ರಜೆಯನ್ನು ಯಾವುದೇ ಆಕ್ಷೇಪಣೆ ಇಲ್ಲದೆ ಅಂಗೀಕರಿಸಬೇಕು. ಆದರೆ ಕೊಪ್ಪಳ ಘಟಕದ ನೀಚ ಅಧಿಕಾರಿಗಳು 72 ಮಂದಿ ನೌಕರರು ರಜೆ ತೆಗೆದುಕೊಂಡಿರುವುದಕ್ಕೆ ನೀವು ಡ್ಯೂಟಿಗೆ ಬಂದಿಲ್ಲ ಎಂದು ಹೇಳಿ ಗೈರುಹಾಜರಿ ತೋರಿಸಿದ್ದಾರೆ.
ಇನ್ನು ಇದನ್ನು ಕೇಳುವುದಕ್ಕೆ ನೌಕರರು ಹೋದರೆ ಡ್ಯೂಟಿ ಮಾಡಿಲ್ಲ ಅದಕ್ಕೆ ನಾವು ನಿಮಗೆ ಆಬ್ಸೆಂಟ್ ಹಾಕಿದ್ದೇವೆ ಹೋಗು ಎಂದು ದರ್ಪ ತೋರಿಸುತ್ತಿದ್ದಾರೆ. ಇನ್ನು ಈ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಎಲ್ಲಿ ಹೋಗಿದ್ದಾನೋ ಗೊತ್ತಿಲ್ಲ. ಫೋನ್ ಮಾಡಿದರೆ ಫೋನ್ ಪಿಕ್ ಮಾಡುತ್ತಿಲ್ಲ.
ಈ ಬಗ್ಗೆ ವಿಜಯಪಥ ವರದಿಗಾರರು ಘಟಕ ವ್ಯವಸ್ಥಾಪಕ ರಮೇಶ್ ಚಿನಗಿ ಅವರನ್ನು ಫೊನ್ ಮೂಲಕ ಸಂಪರ್ಕಿಸಿದಾಗ ಅವರು ಹೇಳುವುದು ನಮ್ಮ ಘಟಕದಲ್ಲಿ ಸುಮಾರು 400 ಮಂದಿ ಚಾಲನಾ ಸಿಬ್ಬಂದಿಗಳಿದ್ದಾರೆ ಅವರಲ್ಲಿ ಸುಮಾರು 30 ಮಂದಿ ದೀರ್ಘಕಾಲದ ಆಬ್ಸೆಂಟ್ ಇದ್ದಾರೆ ಉಳಿದವರಿಗೆ ಡ್ಯೂಟಿ ಮಾಡುವುದಕ್ಕೆ ಹೇಳಿದ್ದೋ ಅವರಲ್ಲಿ ಸುಮಾರು 42 ಮಂದಿ ಮೇ 1ರಂದು ಡ್ಯೂಟಿಗೆ ಬಂದಿಲ್ಲ ಹಾಗಾಗಿ ನಮ್ಮ ಕೆಳಹಂತದ ಅಧಿಕಾರಿಗಳು ಗೈರು ಹಾಜರಿ ತೋರಿಸಿದ್ದಾರೆ.
ಈ ಬಗ್ಗೆ ನಾಳೆ ನಮ್ಮ ವಿಭಾಗೀಯ ನಿಯಂತ್ರಣಾಧಿಕಾರಿ ಕಚೇರಿಗೆ ಬರುತ್ತಾರೆ ಆ ಅವರು ಏನು ತೀರ್ಮಾನ ತೆಗೆದುಕೊಳ್ಳುತ್ತಾರೋ ಅದರ ಮೇಲೆ ನಾವು ಅವಲಂಬಿತವಾಗಿದ್ದೇವೆ ಎಂದು ತಿಳಿಸಿದ್ದಾರೆ.
ಹೀಗೆ ಸಾರಿಗೆ ನಿಗಮಗಳಲ್ಲಿ ನೌಕರರು ಅವರ ಹಕ್ಕಿನ ರಜೆ ಪಡೆಯುವುದಕ್ಕೂ ಇಂಥವರು ಬಿಡುವುದಿಲ್ಲ ಎಂದರೆ ಅಧಿಕಾರಿಗಳ ದರ್ಪ ಯಾವ ಹಂತವನ್ನು ತಲುಪಿದೆ ಎಂಬುದನ್ನು ನೀವೆ ನೋಡಿ. ಇನ್ನು ಈ ಬಗ್ಗೆ ನಿಗಮದ ಎಂಡಿ ಅವರು ಕೂಡಲೇ ಕ್ರಮತೆಗೆದುಕೊಂಡು ನೌಕರರಿಗೆ ಗೈರು ಹಾಜರಿ ಮಾಡಿರುವ ಸಿಬ್ಬಂದಿಯನ್ನು ಕೂಡಲೇ ಅಮಾನತು ಮಾಡಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ನೌಕರರ ಮುಖಂಡರು ಒತ್ತಾಯಿಸಿದ್ದಾರೆ.
ಕೊಪ್ಪಳ ಘಟಕದ ಮೇಧಾವಿ ಅಧಿಕಾರಿಗಳೆ ಇದು ನಿಮಗೆ ತಿಳಿದಿದೆಯೇ?: ಕರ್ನಾಟಕ ಸರ್ಕಾರವು ಪ್ರತಿ ವರ್ಷದಂತೆ ಮೇ 1 (ಕಾರ್ಮಿಕ ದಿನಾಚರಣೆ) ದಿನವನ್ನು ಸಾರ್ವತ್ರಿಕ ರಜೆ (Public Holiday) ಎಂದು ಘೋಷಿಸುತ್ತದೆ. ಈ ಕುರಿತು ನೀವು ತಿಳಿದುಕೊಳ್ಳಬೇಕಾದ ಪ್ರಮುಖ ಅಂಶಗಳು ಇಲ್ಲಿವೆ:
1. ಸರ್ಕಾರದ ಅಧಿಕೃತ ಆದೇಶ: ಕರ್ನಾಟಕ ಸರ್ಕಾರವು ಪ್ರತಿ ವರ್ಷದ ಕೊನೆಯಲ್ಲಿ ಮುಂದಿನ ವರ್ಷದ ರಜೆಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ. ಈ ಆದೇಶವು ನೆಗೋಷಿಯಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್, 1881 (Negotiable Instruments Act, 1881) ಅಡಿಯಲ್ಲಿ ಹೊರಬರುತ್ತದೆ.
ಮೇ 1 ರಂದು ಈ ಕಾಯ್ದೆಯಡಿ ‘ಸಾರ್ವತ್ರಿಕ ರಜೆ’ ಎಂದು ಘೋಷಿಸಿರುವುದರಿಂದ, ಅಂದು ಸರ್ಕಾರಿ ಕಚೇರಿಗಳಿಗೆ ಅಧಿಕೃತವಾಗಿ ರಜೆ ಇರುತ್ತದೆ. ಸರ್ಕಾರದ ಅಧಿಸೂಚನೆಯಲ್ಲಿ ಸ್ಪಷ್ಟವಾಗಿ “ಸಾರ್ವತ್ರಿಕ ರಜೆ ದಿನಗಳಂದು ಸರ್ಕಾರಿ ಕಚೇರಿಗಳು ಮುಚ್ಚಲ್ಪಟ್ಟಿರುತ್ತವೆ” ಎಂದು ಉಲ್ಲೇಖಿಸಲಾಗಿರುತ್ತದೆ.
2. ಗೈರು ಹಾಜರಿ ಎಂದು ಪರಿಗಣಿಸಬಹುದೇ?: ಒಂದು ದಿನವನ್ನು ಸರ್ಕಾರವೇ ‘ಸಾರ್ವತ್ರಿಕ ರಜೆ’ ಎಂದು ಘೋಷಿಸಿದ ಮೇಲೆ, ಅಂದು ನೌಕರರು ಕರ್ತವ್ಯಕ್ಕೆ ಬರದಿದ್ದರೆ ಅವರನ್ನು ‘ಗೈರು ಹಾಜರಿ’ (Absent) ಎಂದು ಪರಿಗಣಿಸಲು ಬರುವುದಿಲ್ಲ.
ವಿನಾಯಿತಿ: ಒಂದು ವೇಳೆ ತುರ್ತು ಸೇವೆಗಳ ಇಲಾಖೆಯಾಗಿದ್ದರೆ (ಉದಾಹರಣೆಗೆ: ಪೊಲೀಸ್, ಆರೋಗ್ಯ, ಅಗ್ನಿಶಾಮಕ ಅಥವಾ ಚುನಾವಣಾ ಕರ್ತವ್ಯ), ಮೇಲಧಿಕಾರಿಗಳು ವಿಶೇಷ ಆದೇಶದ ಮೂಲಕ ಕರ್ತವ್ಯಕ್ಕೆ ಹಾಜರಾಗಲು ಸೂಚಿಸಬಹುದು. ಅಂತಹ ವಿಶೇಷ ಸಂದರ್ಭಗಳಲ್ಲಿ ಮಾತ್ರ ಹಾಜರಾತಿ ಕಡ್ಡಾಯವಾಗುತ್ತದೆ.
ಸಾಮಾನ್ಯ ಆಡಳಿತಾತ್ಮಕ ಕಚೇರಿಗಳಲ್ಲಿ ಕೆಲಸ ಮಾಡುವ ನೌಕರರಿಗೆ ರಜೆ ಇರುವುದು ಅವರ ಹಕ್ಕು.
3. ಆರ್ಡರ್ ಪ್ರತಿ ಎಲ್ಲಿ ಸಿಗುತ್ತದೆ?: ಪ್ರತಿ ವರ್ಷವೂ ಕರ್ನಾಟಕ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (DPAR) ಈ ಆದೇಶವನ್ನು ಹೊರಡಿಸುತ್ತದೆ.
ಸೂಚನೆ: ನೀವು 2024 ಅಥವಾ 2025ರ ರಜೆ ಪಟ್ಟಿಯ ಅಧಿಸೂಚನೆಯನ್ನು (Notification regarding General Holidays) ಕರ್ನಾಟಕ ಸರ್ಕಾರದ ಅಧಿಕೃತ ವೆಬ್‌ಸೈಟ್‌ನಲ್ಲಿ ಪರಿಶೀಲಿಸಬಹುದು. ಅದರಲ್ಲಿ ಮೇ 1ನೇ ತಾರೀಖು ಸಾರ್ವತ್ರಿಕ ರಜೆ ಪಟ್ಟಿಯಲ್ಲಿ ಇರುತ್ತದೆ.
ಇದು ರಜೆ ನಿಯಮಗಳ ಉಲ್ಲಂಘನೆ: ಮೇ 1 ಸಾರ್ವತ್ರಿಕ ರಜೆಯಾಗಿರುವುದರಿಂದ, ಅಂದು ಕರ್ತವ್ಯಕ್ಕೆ ಹಾಜರಾಗದ ನೌಕರರನ್ನು ಕಾನೂನಾತ್ಮಕವಾಗಿ ಗೈರು ಹಾಜರಿ ಎಂದು ಗುರುತಿಸಲು ಸಾಧ್ಯವಿಲ್ಲ. ಒಂದು ವೇಳೆ ಯಾರಾದರೂ ಹಾಗೆ ಮಾಡುತ್ತಿದ್ದರೆ, ಅದು ಸರ್ಕಾರದ ರಜೆ ನಿಯಮಗಳ ಉಲ್ಲಂಘನೆಯಾಗುತ್ತದೆ.
Related









