
ತಿ.ನರಸೀಪುರ: ಚೌಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಪ್ರಭುಸ್ವಾಮಿ, ಉಪಾಧ್ಯಕ್ಷರಾಗಿ ಎಂ.ರಾಚಯ್ಯ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಪ್ರಭುಸ್ವಾಮಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಎಂ.ರಾಚಯ್ಯ ಇವರಿಬ್ಬರೇ ಉಮೇದುವಾರಿಕೆ ಸಲ್ಲಿಸಿದ್ದು ಬೇರೆ ಯಾರು ನಾಮಪತ್ರ ಸಲ್ಲಿಸದ ಕಾರಣ ಪ್ರಭುಸ್ವಾಮಿ ಅಧ್ಯಕ್ಷರಾಗಿ, ಎಂ.ರಾಚಯ್ಯ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದರೆ ಎಂದು ಚುನಾವಣಾಧಿಕಾರಿ ಸಿಡಿಒ ಹಸೀನಾ ಪೋಷಿಸಿದರು.
ಚುನಾವಣಾ ಸಭೆಯಲ್ಲಿ ಸಂಘದ ನಿರ್ದೇಶಕರಾದ ಮಹೇಶ, ಮಹದೇವಸ್ವಾಮಿ, ರೇವಣ್ಣ, ರಾಜಶೇಖರ ಮೂರ್ತಿ, ಮರಿಸ್ವಾಮಿ, ನಾಗಮ್ಮ, ಲಕ್ಷ್ಮಮ್ಮ, ರಾಜಪ್ಪ, ಶಾಂತರಾಜು ಹಾಗೂ ಕಾರ್ಯದರ್ಶಿ ಕೆಂಪುರಾಜು ಹಾಲು ಪರೀಕ್ಷಕ ಮಹದೇಶಸ್ವಾಮಿ, ಕಾಂಗ್ರೆಸ್ ಮುಖಂಡ ಗಿರೀಶ್, ಬಿಜೆಪಿ ಮುಖಂಡ ಸಿದ್ದರಾಜು, ರೈತ ಮುಖಂಡ ಸಿದ್ದರಾಜು, ಪ್ರಕಾಶ್, ಮಹದೇವಸ್ವಾಮಿ, ಪ್ರಕಾಶ್, ಉತ್ಪಾದಕರು ಸದಸ್ಯರು ಇದ್ದರು.
ನೂತನ ಅಧ್ಯಕ್ಷ ಪ್ರಭುಸ್ವಾಮಿ ಮಾತನಾಡಿ ಎಲ್ಲರ ಸಹಕಾರದೊಂದಿಗೆ ನಮ್ಮ ಸಂಘವನ್ನು ಆರ್ಥಿಕವಾಗಿ ಅಭಿವೃದ್ಧಿಪಡಿಸುತ್ತೇನೆ ಹಾಗೂ ಉತ್ಪಾದಕರು ಉತ್ತಮ ಹಾಲನ್ನು ಹಾಕಿ ಸಂಘದ ಬೆಳವಣಿಗೆ ಸಹಕರಿಸಬೇಕು ಮತ್ತು ಉತ್ಪಾದಕರಿಗೆ ಸಹಕಾರದಿಂದ ಸಿಗುವಂತೆಲ್ಲ ಸವಲತ್ತುಗಳನ್ನು ಅಧಿಕಾರಿಗಳ ಸಹಕಾರ ಪಡೆದು ಮನೆ ಬಾಗಿಲಿಗೆ ತಲ್ಪಿಸಲಾಗುವುದು ಎಂದರು.