NEWSನಮ್ಮರಾಜ್ಯ

ಕೊರೊನಾಗೂ ಚಿಕನ್ ಸೇವನೆಗು ಸಂಬಂಧವಿಲ್ಲ

ಮಾಂಸಹಾರಿಗಳಿಗೆ ಅನಗತ್ಯ ಭಯ ಬೇಡ ಎಂದ ಸಚಿವ ಸಿ.ಟಿ.ರವಿ

ವಿಜಯಪಥ ಸಮಗ್ರ ಸುದ್ದಿ

ಚಿಕ್ಕಮಗಳೂರು: ಮಾಂಸಹಾರಿಗಳು ಅನಗತ್ಯವಾಗಿ ಭಯ ಪಡದೇ ಚಿಕನ್ ಸೇವಿಸಬಹುದಾಗಿದೆ ಎಂದು ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯುವಸಬಲೀಕರಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ ರವಿ ತಿಳಿಸಿದರು.

ಇಂದು ನಗರದ ಕೆ.ಎಂ. ಮುಖ್ಯ ರಸ್ತೆಯಲ್ಲಿರುವ ಲೈಫ್‌ಲೈನ್ಸ್ ಟೆಂಡರ್ ಚಿಕನ್ ಸೆಂಟರ್‌ಗೆ ಭೇಟಿ ನೀಡಿ ಚಿಕನ್ ಖರೀದಿಸಿ ಮಾತನಾಡಿದರು.

ಕೊರೋನಾ ಸೋಂಕಿಗೂ ಚಿಕನ್‌ಗೂ ಯಾವುದೇ ಸಂಬಂಧವಿಲ್ಲ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮೀನು, ಮೊಟ್ಟೆ, ಮಾಂಸವನ್ನು ಸೇವಿಸಬಹುದಾಗಿದೆ ಎಂದು ಆಹಾರ ತಜ್ಞರು ದೃಢ ಪಡಿಸಿದ್ದಾರೆ ಎಂದರು.

ಕೊರೋನಾ ಸೋಂಕಿನ ಹಿನ್ನೆಲೆ ಚಿಕನ್ ಸೇವನೆ ಬಗ್ಗೆ ಮಾಂಸ ಪ್ರಿಯರಿಗೆ ಭಯವಿದ್ದು, ಚಿಕನ್ ದೇಹಕ್ಕೆ ಪ್ರೋಟಿನ್ ಅಂಶ ನೀಡುವುದರ ಜೊತೆಗೆ ದೇಹಕ್ಕೆ ಬೇಕಾಗಿರುವ ರೋಗನಿರೋಧಕ ಶಕ್ತಿ ಒದಗಿಸುತ್ತದೆ ಎಂದು ಆಹಾರ ತಜ್ಞರು ದೃಢ ಪಡಿಸಿರುವುದರಿಂದ ಮಾಂಸ ಸೇವನೆ ಮಾಡುವವರು ಯಾವುದೇ ಅಂಜಿಕೆ ಇಲ್ಲದೆ ಕೋಳಿ ಮಾಂಸ ಸೇವಿಸಬಹುದಾಗಿದೆ ಎಂದರು.

ಮಾಂಸ ಮಾರಾಟದ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಯ್ದು ಕೊಳ್ಳುವ ಮೂಲಕ ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದ ಅವರು ಆರೋಗ್ಯಕ್ಕೆ ಬೇಕಾದ ಪೌಷ್ಟಿಕ ಅಂಶಗಳನ್ನು ಒದಗಿಸುವ ಚಿಕನ್, ಮೊಟ್ಟೆ ಮೀನುಗಳನ್ನು ಭಯವಿಲ್ಲದೆ ಉಪಯೋಗಿಸಬಹುದಾಗಿದೆ ಎಂದರು.

ನಗರಸಭೆ ಮಾಜಿ ಸದಸ್ಯ ಟಿ. ರಾಜಶೇಖರ್, ಲೈಫ್‌ಲೈನ್ಸ್ ಫೀಡ್ಸ್‌ನ ವ್ಯವಸ್ಥಾಪಕ ಕಿಶೋರ್ ಕುಮಾರ್ ಹೆಗ್ಡೆ, ಮಧುಕರ್ ಪ್ರಭು, ಭಗವತಿ ಕೃಷ್ಣ, ಜನರಲ್ ಮ್ಯಾನೆಜರ್ ಮುರಾರಿ, ಶರತ್ ಕುಮಾರ್ ಸೇರಿದಂತೆ ಮತ್ತಿತರರು.

Leave a Reply

error: Content is protected !!
LATEST
ಮೈತ್ರಿ ತೆಕ್ಕೆಗೆ ಬನ್ನೂರು ಪುರಸಭೆ: ಜೆಡಿಎಸ್‌ಗೆ ಅಧ್ಯಕ್ಷ ಗದ್ದುಗೆ, ಬಿಜೆಪಿಗೆ ಉಪಾಧ್ಯಕ್ಷ ಗಾದಿ ರಾಜ್ಯದ ಆರು ಪ್ರತ್ಯೇಕ ಸ್ಥಳಗಳಲ್ಲಿ ಅಪಘಾತ: 13 ಮಂದಿ ಸಾವು, ಹಲವರಿಗೆ ಗಾಯ ಯಡಿಯೂರು ಕೆರೆ: ಗಣಪತಿ ವಿಸರ್ಜನಾ ಕಲ್ಯಾಣಿಗೆ ನೀರು ತುಂಬಿಸಿದ ಬಿಬಿಎಂಪಿ ತಂದೆ ನಿಧನರಾದ ದುಃಖದಲ್ಲಿರುವ ನೌಕರನಿಗೆ ರಜೆ ಕೊಡದೆ ಗೈರು ತೋರಿಸಿದ್ದು ಅಲ್ಲದೆ ಕಾರಣ ಕೇಳಿ ನೋಟಿಸ್‌ ಕೊಟ್ಟ ಅಧಿಕಾರಿ... KKRTC ಬಸ್‌-ಶಾಲಾ ಬಸ್‌ ಮುಖಾಮುಖಿ ಡಿಕ್ಕಿ: ಇಬ್ಬರು ಮೃತ- 25ಕ್ಕೂ ಹೆಚ್ಚು ಮಕ್ಕಳಿಗೆ ಗಾಯ KSRTC: 38 ತಿಂಗಳ ವೇತನ ಹೆಚ್ಚಳ ಹಿಂಬಾಕಿಗೆ ಆಗ್ರಹಿಸಿ BMS ಪ್ರತಿಭಟನೆ- ಸರ್ಕಾರದ ವಿರುದ್ಧ ಕಿಡಿ MSRTC: ನೌಕರರ ಮುಷ್ಕರಕ್ಕೆ ಮಣಿದು 6500 ರೂ. ವೇತನ ಹೆಚ್ಚಳಕ್ಕೆ ಒಪ್ಪಿದ ಸರ್ಕಾರ- ಧರಣಿ ವಾಪಸ್‌ MSRTC: ತೀವ್ರಗೊಂಡ ನೌಕರರ ಮುಷ್ಕರ- 11 ಸಂಘಟನೆಗಳ ಒಗ್ಗಟ್ಟು- ನಿಗಮಕ್ಕೆ ನಡುಕ ಚಾಮುಂಡಿಬೆಟ್ಟದಲ್ಲಿ ಧೂಮಪಾನ, ಮದ್ಯಪಾನ, ಗುಟ್ಕಾ ನಿಷೇಧ: ಸಿಎಂ ಘೋಷಣೆ ಪೋಡಿ ಮುಕ್ತ ಅಭಿಯಾನ, ಪೌತಿ ಖಾತೆ ಆಂದೋಲನಕ್ಕೆ ಕ್ರಮ: ಕಂದಾಯ ಸಚಿವ ಕೃಷ್ಣ ಬೈರೇಗೌಡ