Please assign a menu to the primary menu location under menu

NEWSದೇಶ-ವಿದೇಶ

ನೂರರ ಗಡಿ ದಾಟಿದ ಕೊರೊನಾ ಸೋಂಕಿತರ ಸಾವು

ಅಮೆರಿಕಾದಲ್ಲಿ ರುದ್ರನರ್ತನ l ಭಾರತದಲ್ಲೂ ಚಾಚಿದ ಕಬಂಧಬಾಹು

ವಿಜಯಪಥ ಸಮಗ್ರ ಸುದ್ದಿ

ನ್ಯೂಡೆಲ್ಲಿ: ದೇಶದಲ್ಲಿ ಕೊರೊನಾ ವೈರಸ್‌ನಿಂದ ಮೃತಪಟ್ಟವರ ಸಂಖ್ಯೆ 100ರ ಗಡಿ ದಾಟಿದೆ.

ಒಟ್ಟು 4068 ಜನರಲ್ಲಿ ಸೋಂಕು ದೃಢಪಟ್ಟಿದ್ದು, 292 ಮಂದಿ ಗುಣಮುಖರಾಗಿದ್ದಾರೆ.  ಇನ್ನು 109 ಮಂದಿ ಅಸುನೀಗಿದ್ದಾರೆ. ಜತೆಗೆ ವಿಶ್ವಾದ್ಯಂತ ಕೊರೊನಾಕ್ಕೆ ಬಲಿಯಾದವರ ಸಂಖ್ಯೆ ದಿನದಿಂದ ದಿನಕ್ಕೆ ಸಾವಿರಾರು ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ಈವರೆಗೆ 70 ಸಾವಿರ ತಲುಪಿದೆ.

ಪ್ರಪಂಚಾದ್ಯಂತ ಸೋಂಕಿತರ ಸಖ್ಯೆ 1.25ಲಕ್ಷ ದಾಟಿದೆ. ಹಾಗೆಯೇ ಉತ್ತರ ಪ್ರದೇಶದಲ್ಲಿ ಏ.3ರಂದು ಮೃತಪಟ್ಟಿದ್ದ ವ್ಯಕ್ತಿಯಲ್ಲಿ ಕೊರೊನಾ ಸೋಂಕು ಇದ್ದದ್ದು ದೃಢಪಟ್ಟಿದೆ. ಈ ಮೂಲಕ ಉತ್ತರ ಪ್ರದೇಶದಲ್ಲಿ ವೈರಸ್‌ಗೆ ತುತ್ತಾದವರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ.

ರಾಜಸ್ತಾನದಲ್ಲಿ ಮತ್ತೆ 8 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಈವರೆಗೆ 275ಮಂದಿಯಲ್ಲಿ ಸೋಂಕು ಇರುವುದು ಖಚಿತವಾಗಿದೆ. ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಲ್ಲಿ 52 ವರ್ಷದ ವ್ಯಕ್ತಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಅಲ್ಲಿ ಸಾವಿಗೀಡಾದವರ ಸಂಖ್ಯೆ 14ಕ್ಕೇರಿಕೆಯಾಗಿದೆ.

ಅಮೇರಿಕದಲ್ಲಿ ಇನ್ನಷ್ಟು ಹೆಚ್ಚಾಯಿತು ಕೊರೊನಾ ದರ್ಬಾರ್‌

ಅಮೆರಿಕಾದಲ್ಲಿ ಒಟ್ಟು ಇರುವ ಜನಸಂಖ್ಯೆ 33 ಕೋಟಿ ಆದರೆ, ಈವರೆಗೆ ಅಲ್ಲಿ ಕೊರೊನಾಕ್ಕೆ ಬಲಿಯಾದವರ ಸಂಖ್ಯೆ 7 ಸಾವಿರ ಗಡಿದಾಟಿದ್ದು, ಕೊರೊನಾ ಮಹಾಮಾರಿ ತನ್ನ ಬಾಹುವನ್ನು ಚಾಚಿಕೊಂಡು ಕೂತಿದೆ. ಇದರಿಂದ ಅಮೆರಿಕ ಸರ್ಕಾರ ತತ್ತರಗೊಂಡಿದ್ದು, ಸೋಂಕಿ ನಿಯಂತ್ರಣಕ್ಕೆ ಹರಸಾಹಸ ಪಡುತ್ತಿದೆ.

ಕಳೆದ 24 ತಾಸಿನಲ್ಲಿ ಅಮೆರಿಕಾದಲ್ಲಿ ಸತ್ತವರ ಸಂಕ್ಯೆ 14೦೦ಕ್ಕೂ ಹೆಚ್ಚಿದೆ. ಇದರಿಂದ ಜನರಲ್ಲಿ ಆತಂಕ ಇಮ್ಮಡಿಗೊಂಡಿದ್ದು ಭಯದ ವಾತಾವರಣದಲ್ಲೇ ದಿನದೂಡುತ್ತಿದ್ದಾರೆ. ಇದು ಹೀಗೆಯೇ ಮುಂದುವರಿದರೆ ಇನ್ನು ಎಷ್ಟು ಮಂದಿ ಬಿಲಿಯಾಗುವರೋ ಎಂಬ ಆತಂಕ ಅಲ್ಲಿನ ಸರ್ಕಾರವನ್ನು ಬೆಂಬಿಡದೆ ಕಾಡುತ್ತಿದೆ.

ಭಾರತದಲ್ಲೂ ಅಟ್ಟಹಾಸ

ಇನ್ನು ಭಾರತದಲ್ಲೂ ಕೊರೊನಾ ಸೋಂಕಿತ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವುದು ಜನರಲ್ಲಿ ಇನ್ನಷ್ಟು ಭಯವನ್ನು ಮೂಡಿಸುತ್ತಿದೆ. ಜತೆಗೆ ಕರ್ನಾಟಕದಲ್ಲೂ ತನ್ನ ಕಬಂಧ ಬಾಹುವನ್ನು ಚಾಚಿರುವ ಈ ಮಹಾಮಾರಿ ಮೈಸೂರಿನಲ್ಲಿ 28 ಜನರಲ್ಲಿ ಅಡಗಿ ಕುಳಿತಿದೆ. ಜತೆಗೆ ರಾಜ್ಯದಲ್ಲಿ ಈವರೆಗೆ ಕೊರೊನಾಗೆ ನಾಲ್ವರು ಬಲಿಯಾಗಿದ್ದು 140ಕ್ಕೂ ಹೆಚ್ಚು ಜನರಿಗೆ ಸೋಂಕು ಇರುವುದು ದೃಢಪಟ್ಟಿದೆ.

Leave a Reply

error: Content is protected !!
LATEST
KSRTC: ಪುರುಷ ನೌಕರರಿಗೂ ಶಿಶುಪಾಲನಾ ರಜೆ ಸೌಲಭ್ಯ- ಇಂದಿನಿಂದಲೇ ಜಾರಿ- ಎಂಡಿ ಆದೇಶ KSRTC: ಶೇ.15ರಷ್ಟು ಬಸ್‌ ಟಿಕೆಟ್‌ ದರ ಹೆಚ್ಚಳ- ಜ.5ರಿಂದ ಜಾರಿಗೆ ಸಚಿವ ಸಂಪುಟ ಸಭೆ ಅಸ್ತು ದಲೈವಾಲ ಜೀವಕ್ಕೆ ಅಪಾಯವಾದರೆ ದೇಶದಲ್ಲಿ ರೈತದಂಗೆ ಆಗಲಿದೆ: ಕುರುಬೂರು ಶಾಂತಕುಮಾರ್‌ ಎಚ್ಚರಿಕೆ KSRTCಗೆ ರಾಷ್ಟ್ರದ ಮಟ್ಟದ ಒಂಬತ್ತು ಪ್ರಶಸ್ತಿಗಳು- 3ರಾಜ್ಯಗಳಲ್ಲಿ ಪ್ರದಾನ KSRTC 4 ನಿಗಮಗಳ ನಷ್ಟ ಪರಿಹಾರಕ್ಕೆ ಬಸ್ ಪ್ರಯಾಣ ದರ ಹೆಚ್ಚಿಸುವುದು ಅನಿವಾರ್ಯ: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ KSRTC: ನೌಕರರ ನಗದು ರಹಿತ ವೈದ್ಯಕೀಯ ಚಿಕಿತ್ಸಾ ಯೋಜನೆಗೆ ಜ.6ರಂದು ಸಿಎಂ ಚಾಲನೆ ಪತ್ರಿಕೋದ್ಯಮ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆ ಮಾಡಿದ 32 ಪತ್ರಕರ್ತರಿಗೆ ಪ್ರಶಸ್ತಿ ಕ್ಯಾನ್ಸರ್ ಗೆದ್ದ ಶಿವಣ್ಣ: ಡಬಲ್‌ ಪವರ್‌ನೊಂದಿಗೆ ಬರುತ್ತೇನೆ ಅಂದ ನಟ  ಹೊಸ ವರ್ಷದ ಸಂಭ್ರಮದಲ್ಲಿದ್ದ ಪ್ರಿಯಕರನಿಗೆ ಇರಿದ ಪ್ರೇಯಸಿ -ಅಷ್ಟಕ್ಕೂ ಆಗಿದ್ದೇನು? ಸಿಡ್ನಿಯಲ್ಲಿ 2025ರ ನೂತನ ವರ್ಷ ಸ್ವಾಗತಿಸಿದ ಮಿಲಿಯನ್‌ಗಿಂತಲೂ ಹೆಚ್ಚು ಜನರು