Please assign a menu to the primary menu location under menu

NEWSನಮ್ಮಜಿಲ್ಲೆ

ಬೆಂಗಳೂರಿನ ಮಳೆ ಅನಾಹುತ ಪ್ರದೇಶಗಳಿಗೆ ಮೇಯರ್‌ ಭೇಟಿ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ನಗರದಲ್ಲಿ ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಶಾಂತಲಾ ನಗರ ವಾರ್ಡ್-111 ವ್ಯಾಪ್ತಿಯ ಹೆಯ್ಸ್ ರಸ್ತೆ(Hayes Road)ಯಲ್ಲಿ ಸಂಭವಿಸಿರುವ ಅನಾಹುತ ಪ್ರದೇಶಕ್ಕೆ ಇಂದು  ಮಹಾಪೌರ ಗೌತಮ್‌ ಕುಮಾರ್‌  ಭೇಟಿ ನೀಡಿದರು.

ನಗರದಲ್ಲಿ ಧಾರಾಕಾರ ಸುರಿದ ಮಳೆಯಿಂದಾಗಿ ಪೂರ್ವ ವಲಯದ ಶಾಂತಲಾ ನಗರ ವಾರ್ಡ್-111 ವ್ಯಾಪ್ತಿಯ ಹೇಯ್ಸ್ ರಸ್ತೆ(Hayes Road)ಯಲ್ಲಿ ಕಟ್ಟಡ ನಿರ್ಮಾಣಕ್ಕೆ ತೆಗೆದಿದ್ದ ಗುಂಡಿ(ಬೇಸ್ಮೆಂಟ್)ಯಲ್ಲಿ ಮಳೆ ನೀರು ತುಂಬಿರುವ ಪರಿಣಾಮ ರಸ್ತೆ ಕುಸಿದಿರುವ ಸ್ಥಳಕ್ಕೆ ಭೇಟಿ ನೀಡಿ, ತಪಾಸಣೆ ನಡೆಸಿ ಕೂಡಲೆ ಸಮಸ್ಯೆ ಬಗೆಹರಿಸುವಂತೆ  ಜಂಟಿ ಆಯುಕ್ತರಿಗೆ ಮೇಯರ್‌ ಸೂಚನೆ ನೀಡಿದರು.

ಮುಂಜಾನೆ ಜೋರು ಮಳೆ ಬಿದ್ದ ಪರಿಣಾಮ ಕಟ್ಟಡ ನಿರ್ಮಿಸಲು ತೆಗೆದಿದ್ದ ಗುಂಡಿಯಲ್ಲಿ ಮಳೆ ನೀರು ತುಂಬಿದ ಪರಿಣಾಮ ರಸ್ತೆ ಬದಿಯ ಮಣ್ಣು ಕುಸಿದು, ಎರಡು ಇಟಾಚಿ ಕೂಡ ಅದರಲ್ಲಿ ಬಿದ್ದಿದೆ. ಈ ಸಂಬಂಧ ಕೂಡಲೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಸ್ಥಳದ ಸುತ್ತಮುತ್ತಲಿನ ಮನೆಗಳಿಗೆ ನೋಟೀಸ್ ನೋಡಿ, ಮಳೆ ಎಚ್ಚಾದರೆ ಸ್ಥಳಿಯರನ್ನು ಬೇರೆಡೆ ಕಳುಯಿಸುವ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕಟ್ಟಡ ನಿರ್ಮಾಣಕ್ಕಾಗಿ ರಸ್ತೆ ಬದಿಯವರೆಗೆ ಹಗೆದಿರುವ ಪರಿಣಾಮ ನೀರು ತುಂಬಿ ಕುಸಿದಿದೆ. ಈ ಸಂಬಂಧ ಕಟ್ಟಡ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ಬೆಸ್ಕಾಂ ಹಾಗೂ ಜಲಮಂಡಳಿ ಅಧಿಕಾರಿಗಳ ಜೊತೆ ಚರ್ಚಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಇರುವ ಸಮಸ್ಯೆ ಬಗೆಹರಿಸಬೇಕು. ಸೈಟ್ ಸುತ್ತಲು ಬ್ಯಾರಿಕೇಡ್ ಹಾಕಿ, ರಾತ್ರಿ ವೇಳೆ ವಿದ್ಯುತ್ ದೀಪ ಅಳವಡಿಸಬೇಕು. ಸುತ್ತಮುತ್ತಲಿನ ಜನಕ್ಕೆ ಜಾಗೃತಿ ಮೂಡಿಸಲು ಸೂಚನೆ ನೀಡಿದರು.

ಕೋರಮಂಗಲ ವ್ಯಾಪ್ತಿಯ ನೀರು ನುಗ್ಗಿರುವ ಪ್ರದೇಶಗಳಿಗೆ ಭೇಟಿ
ಬಿಬಿಎಂಪಿ ವ್ಯಾಪ್ತಿಯಲ್ಲಿ ಇಂದು ಮುಂಜಾನೆ ಧಾರಾಕಾರ ಸುರಿದ ಮಳೆಯಿಂದ ಕೋರಮಂಗಲದ ಕೆಲವೆಡೆ ಪ್ರದೇಶಗಳು ಜಲಾವೃತವಾಗಿದ್ದು, ಇಂದು ಕೋರಮಂಲ 5 ಮತ್ತು 6ನೇ ಬ್ಲಾಕ್‌ಗೆ ಸಂಸದರಾದ ತೇಜಸ್ವಿ ಸೂರ್ಯ, ಪಿ.ಸಿ.ಮೋಹನ್, ಶಾಸಕ ರಾಮಲಿಂಗಾರೆಡ್ಡಿ, ಪಾಲಿಕೆ ಸದಸ್ಯ ಚಂದ್ರಪ್ಪ ರೆಡ್ಡಿ, ಆಯುಕ್ತ ಬಿ.ಎಚ್.ಅನಿಲ್ ಕುಮಾರ್, ಜಲಮಂಡಳಿ ಅಧ್ಯಕ್ಷ ತುಷಾರ್ ಗಿರಿನಾಥ್, ರಾಜಕಾಲುವೆ ವಿಭಾಗದ ಮುಖ್ಯ ಅಭಿಯಂತರ ಪ್ರಹ್ಲಾದ್ ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

ತಪಾಸಣೆ ಬಳಿಕ ಸಭೆ ನಡೆಸಿ, ಮಳೆಗಾಲದಲ್ಲಿ ಕೋರಮಂಗಲ, ಎಚ್.ಎಸ್.ಆರ್ ಲೇಔಟ್ ಪ್ರದೇಶಗಳಲ್ಲಿ ಮಳೆ ನೀರು ನಿಲ್ಲದಂತೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಹಾಗೂ ನಿಗದಿತ ಸಮಯದಲ್ಲಿ ಸಮಸ್ಯೆ ಬಗೆಹರಿಸುವ ಬಗ್ಗೆ ಚರ್ಚಿಸಲಾಯಿತು ಎಂದು ಮೇಯರ್‌ ತಿಳಿಸಿದರು.

ಎಂಟು ಮರಗಳು ಧರೆಗೆ
ನಗರದಲ್ಲಿ ಸುರಿದ ಮಳೆಯಿಂದ 8 ಮರಗಳು ಧರೆಗುರುಳಿದ್ದು, ಜೀವನ್ ಭೀಮಾ ನಗರದಲ್ಲಿ ಕಾರಿನ ಮೇಲೆ ಮರ ಬಿದ್ದು ಕಾರು ಜಖಂಗೊಂಡಿದೆ. ಅಲ್ಲದೆ ಪ್ಯಾಲೆಸ್ ರಸ್ತೆಯ ಮೇಖ್ರಿ ವೃತ್ತ, ಹೈಗ್ರೌಂಡ್, ಶ್ರೀರಾಮ ಮಂದಿರದ ಸಿಟಿ ಏರಿಯಾ(ಚನ್ನಮ್ಮನಕೆರೆ ಅಚ್ಚುಕಟ್ಟು ಪ್ರದೇಶ), ಬಸವೇಶ್ವರ ನಗರದ ಎಸ್.ಬಿ.ಐ ಕಾಲೋನಿ, ವೈಯ್ಯಾಲಿ ಕಾವಲ್, ಬಾಗಲೂರು ಲೇಔಟ್, ಕೋರಮಂಗಲ 6ನೇ ಬ್ಲಾಕ್ ನಲ್ಲಿ ತಲಾ ಒಂದು ಮರ ಧರೆಗುರುಳಿವೆ. ಪಾಲಿಕೆ ಅರಣ್ಯ ವಿಭಾಗದ ತಂಡವು ಸ್ಥಳಕ್ಕೆ ತೆರಳಿ ಬಿದ್ದಿರುವ ಮರಗಳನ್ನು ತೆರವುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

ಮುಂದುವರಿದು, ಎಚ್.ಎಸ್.ಆರ್ ಲೇಔಟ್ ಹಾಗೂ ಎಚ್.ಎಸ್.ಆರ್ ಸೆಕ್ಟರ್ 11 ಮತ್ತು 15ರ ರಸ್ತೆ ಮೇಲೆ ನಿಂತಿದ್ದ ನೀರನ್ನು ಹೈ ಪ್ರೆ಼ರ್ ಪಂಪ್ ಬಳಸಿ ಮಳೆ ನೀರನ್ನು ಹೊರ ಹಾಕಲಾಗಿದೆ. ಸ್ಥಳಕ್ಕೆ ವಲಯ ವಿಶೇಷ ಆಯುಕ್ತ ಅನುಪ್‌ ಕುಮಾರ್, ಜಂಟಿ ಆಯುಕ್ತ ರಾಮಕೃಷ್ಣ ಹಾಗೂ ಇತರೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ತಪಾಸಣೆ ನಡೆಸಿದ್ದಾರೆ. ಅಲ್ಲದೆ, ಬೊಮ್ಮನಹಳ್ಳಿಯ ಬಿ.ಕೆ.ಎಲ್ ಕಾಲೋನಿ, ವಿಶ್ವ ಪ್ರಿಯ ಲೇಔಟ್‌ನ ಜಯಶ್ರೀ ಲೇಔಟ್, ಬಗಲಗುಂಟೆ, ಬನಶಂಕರಿ ಮೊದಲನೇ ಹಂತದ ಶ್ರೀನಿವಾಸನಗರ, ಕೋಣನಕುಂಟೆ ಕ್ರಾಸ್, ಮುರಗೇಶ್ ಪಾಳ್ಯ ಪ್ರದೇಶಗಳಲ್ಲಿ ನೀರು ನುಗ್ಗಿದ್ದು, ಪಂಪ್ ಗಳ ಮೂಲಕ ನೀರನ್ನು ಹೊರ ಹಾಕಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಉಪಮಹಾಪೌರ ರಾಮಮೋಹನ ರಾಜು, ಪಾಲಿಕೆ ಸದಸ್ಯ ಎಂ.ಬಿ.ದ್ವಾರಕಾನಾಥ್(ದಾಲು), ಪೂರ್ವ ವಲಯ ಜಂಟಿ ಆಯುಕ್ತೆ ಪಲ್ಲವಿ ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

error: Content is protected !!
LATEST
KSRTC: ಪುರುಷ ನೌಕರರಿಗೂ ಶಿಶುಪಾಲನಾ ರಜೆ ಸೌಲಭ್ಯ- ಇಂದಿನಿಂದಲೇ ಜಾರಿ- ಎಂಡಿ ಆದೇಶ KSRTC: ಶೇ.15ರಷ್ಟು ಬಸ್‌ ಟಿಕೆಟ್‌ ದರ ಹೆಚ್ಚಳ- ಜ.5ರಿಂದ ಜಾರಿಗೆ ಸಚಿವ ಸಂಪುಟ ಸಭೆ ಅಸ್ತು ದಲೈವಾಲ ಜೀವಕ್ಕೆ ಅಪಾಯವಾದರೆ ದೇಶದಲ್ಲಿ ರೈತದಂಗೆ ಆಗಲಿದೆ: ಕುರುಬೂರು ಶಾಂತಕುಮಾರ್‌ ಎಚ್ಚರಿಕೆ KSRTCಗೆ ರಾಷ್ಟ್ರದ ಮಟ್ಟದ ಒಂಬತ್ತು ಪ್ರಶಸ್ತಿಗಳು- 3ರಾಜ್ಯಗಳಲ್ಲಿ ಪ್ರದಾನ KSRTC 4 ನಿಗಮಗಳ ನಷ್ಟ ಪರಿಹಾರಕ್ಕೆ ಬಸ್ ಪ್ರಯಾಣ ದರ ಹೆಚ್ಚಿಸುವುದು ಅನಿವಾರ್ಯ: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ KSRTC: ನೌಕರರ ನಗದು ರಹಿತ ವೈದ್ಯಕೀಯ ಚಿಕಿತ್ಸಾ ಯೋಜನೆಗೆ ಜ.6ರಂದು ಸಿಎಂ ಚಾಲನೆ ಪತ್ರಿಕೋದ್ಯಮ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆ ಮಾಡಿದ 32 ಪತ್ರಕರ್ತರಿಗೆ ಪ್ರಶಸ್ತಿ ಕ್ಯಾನ್ಸರ್ ಗೆದ್ದ ಶಿವಣ್ಣ: ಡಬಲ್‌ ಪವರ್‌ನೊಂದಿಗೆ ಬರುತ್ತೇನೆ ಅಂದ ನಟ  ಹೊಸ ವರ್ಷದ ಸಂಭ್ರಮದಲ್ಲಿದ್ದ ಪ್ರಿಯಕರನಿಗೆ ಇರಿದ ಪ್ರೇಯಸಿ -ಅಷ್ಟಕ್ಕೂ ಆಗಿದ್ದೇನು? ಸಿಡ್ನಿಯಲ್ಲಿ 2025ರ ನೂತನ ವರ್ಷ ಸ್ವಾಗತಿಸಿದ ಮಿಲಿಯನ್‌ಗಿಂತಲೂ ಹೆಚ್ಚು ಜನರು