Please assign a menu to the primary menu location under menu

NEWSಸಂಸ್ಕೃತಿ

ಷಬ್‌-ಎ-ಬರಾತ್‌ : ಸಾಮೂಹಿಕ ಪ್ರಾರ್ಥನೆ, ಖಬರ್‌ಸ್ತಾನ್‌ಗಳಿಗೆ ಭೇಟಿ ನಿಷೇಧ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕೊರೊನಾ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಏಪ್ರಿಲ್‌ 9 ರಂದು ಮುಸ್ಲಿಂ ಸಮುದಾಯದ ಪವಿತ್ರ ರಾತ್ರಿ ಎಂದು ಆಚರಿಸಲಾಗುವ ಷಬ್‌-ಎ-ಬರಾತ್‌ ದಿನ ಸಾಮೂಹಿಕ ಪ್ರಾರ್ಥನೆ, ಖಬರ್‌ಸ್ತಾನ್‌ಗಳಿಗೆ ಭೇಟಿ ನೀಡುವುದನ್ನು ನಿಷೇಧಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಔಕಾಫ್‌ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಇಸ್ಲಾಹುದ್ದೀನ್‌ ಜೆ ಗದ್ಯಾಲ್‌ ತಿಳಿಸಿದ್ದಾರೆ.

ಇಸ್ಲಾಮಿಕ್‌ ಕ್ಯಾಲೆಂಡರ್‌ ಪ್ರಕಾರ ಷಬ್‌-ಎ ಬರಾತ್‌ ಅನ್ನು ಒಂದು ಪವಿತ್ರ ರಾತ್ರಿ ಎಂದು ಆಚರಿಸಲಾಗುತ್ತದೆ. ಜಗತ್ತಿನ ಎಲ್ಲ ಭಾಗದ ಮುಸ್ಲಿಮರು ಅತ್ಯಂತ ಸಂಭ್ರಮ, ಸಡಗರದಿಂದ ಆಚರಿಸುವ ಈ ಸಂದರ್ಭದಲ್ಲಿ ಇಡೀ ರಾತ್ರಿ ಮಸೀದಿಗಳಲ್ಲಿ ಸಾಮೂಹಿಕವಾಗಿ ಸೇರಿ ಪ್ರಾರ್ಥಿಸಲಾಗುತ್ತದೆ.

ಈ ವರ್ಷ  ಷಬ್‌ ಎ ಬರಾತ್‌ ಏಪ್ರಿಲ್‌ 9, 2020ರಂದು ಬಂದಿದೆ. ಆದರೆ ಕೋವಿಡ್‌ 19 ವ್ಯಾಪಕವಾಗಿ ವ್ಯಾಪಿಸುತ್ತಿರುವುದರಿಂದ ಕರ್ನಾಟಕ ಸರ್ಕಾರವು ನೀಡಿರುವ ವಿವಿಧ ಆದೇಶಗಳಾನುಸಾರ ಸಾಮೂಹಿಕ ಪ್ರಾರ್ಥನೆಗಳನ್ನು ಅಮಾನತುಮಾಡಲಾಗಿ ಎಂದು ತಿಳಿಸಿದ್ದಾರೆ.

ಕರ್ನಾಟಕದ ಇಮಾರತ್‌-ಎ-ಶರಿಯಾ ಈ ಕುರಿತು ಮುನ್ನೆಚ್ಚರಿಕೆ ಕ್ರಮಗಳನ್ನು ತಿಳಿಸಿದ್ದು, ಎಲ್ಲಾ ಮುಸಲ್ಮಾನರು ಷಬ್‌ ಎ ಬರತ್‌ ದಿನ ಇವುಗಳನ್ನು ಅನುಸರಿಸಲು ತಿಳಿಸಲಾಗಿದೆ.

ಸಾರ್ವಜನಿಕರಿಗೆ ಯಾವುದೇ ರೀತಿಯಲ್ಲೂ ಧಾರ್ಮಿಕ ಆಚರಣೆಗಳನ್ನು ಖಬರಸ್ತಾನ್‌/ದರ್ಗಾಗಳಿಗೆ ಅವಕಾಶ ಮಾಡಿಕೊಡಬಾರದು ಮತ್ತು ಖಬರಸ್ತಾನ್‌/ದರ್ಗಾಗಳ ಪ್ರವೇಶ ದ್ವಾರಗಳ ಮುಚ್ಚಿರಬೇಕು ಎಂದು ಸೂಚಿಸಿದ್ದಾರೆ.

ಖಬರಸ್ತಾನ/ದರ್ಗಾಗಳ ಆಡಳಿತ ಮಂಡಳಿಗಳು ಸಾರ್ವಜನಿಕ ಆರೋಗ್ಯದ ಹಿತಾಸಕ್ತಿಯ ಹಿನ್ನೆಲೆಯಲ್ಲಿ ಈ ಆದೇಶವನ್ನು ಜಾರಿಗೆ ತರಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ನಿರ್ದೇಶಿಸಲಾಗಿದೆ.

Leave a Reply

error: Content is protected !!
LATEST
KSRTC: ಪುರುಷ ನೌಕರರಿಗೂ ಶಿಶುಪಾಲನಾ ರಜೆ ಸೌಲಭ್ಯ- ಇಂದಿನಿಂದಲೇ ಜಾರಿ- ಎಂಡಿ ಆದೇಶ KSRTC: ಶೇ.15ರಷ್ಟು ಬಸ್‌ ಟಿಕೆಟ್‌ ದರ ಹೆಚ್ಚಳ- ಜ.5ರಿಂದ ಜಾರಿಗೆ ಸಚಿವ ಸಂಪುಟ ಸಭೆ ಅಸ್ತು ದಲೈವಾಲ ಜೀವಕ್ಕೆ ಅಪಾಯವಾದರೆ ದೇಶದಲ್ಲಿ ರೈತದಂಗೆ ಆಗಲಿದೆ: ಕುರುಬೂರು ಶಾಂತಕುಮಾರ್‌ ಎಚ್ಚರಿಕೆ KSRTCಗೆ ರಾಷ್ಟ್ರದ ಮಟ್ಟದ ಒಂಬತ್ತು ಪ್ರಶಸ್ತಿಗಳು- 3ರಾಜ್ಯಗಳಲ್ಲಿ ಪ್ರದಾನ KSRTC 4 ನಿಗಮಗಳ ನಷ್ಟ ಪರಿಹಾರಕ್ಕೆ ಬಸ್ ಪ್ರಯಾಣ ದರ ಹೆಚ್ಚಿಸುವುದು ಅನಿವಾರ್ಯ: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ KSRTC: ನೌಕರರ ನಗದು ರಹಿತ ವೈದ್ಯಕೀಯ ಚಿಕಿತ್ಸಾ ಯೋಜನೆಗೆ ಜ.6ರಂದು ಸಿಎಂ ಚಾಲನೆ ಪತ್ರಿಕೋದ್ಯಮ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆ ಮಾಡಿದ 32 ಪತ್ರಕರ್ತರಿಗೆ ಪ್ರಶಸ್ತಿ ಕ್ಯಾನ್ಸರ್ ಗೆದ್ದ ಶಿವಣ್ಣ: ಡಬಲ್‌ ಪವರ್‌ನೊಂದಿಗೆ ಬರುತ್ತೇನೆ ಅಂದ ನಟ  ಹೊಸ ವರ್ಷದ ಸಂಭ್ರಮದಲ್ಲಿದ್ದ ಪ್ರಿಯಕರನಿಗೆ ಇರಿದ ಪ್ರೇಯಸಿ -ಅಷ್ಟಕ್ಕೂ ಆಗಿದ್ದೇನು? ಸಿಡ್ನಿಯಲ್ಲಿ 2025ರ ನೂತನ ವರ್ಷ ಸ್ವಾಗತಿಸಿದ ಮಿಲಿಯನ್‌ಗಿಂತಲೂ ಹೆಚ್ಚು ಜನರು