NEWSದೇಶ-ವಿದೇಶನಮ್ಮರಾಜ್ಯ

ದುಬೈ – ಸಾಗರದಾಚೆ ಒಕ್ಕಲಿಗ ಹೆಂಗಳೆಯರಿಗೆ ವೇದಿಕೆಯಾದ ಮುಶ್ರಿಫ್ ಪಾರ್ಕ್‌: ಒಕ್ಕಲಿಗರ ಸಂಘ UAE

ವಿಜಯಪಥ ಸಮಗ್ರ ಸುದ್ದಿ

ದುಬೈ: ಸಾಗರದಾಚೆಯ ದುಬೈನ ಮುಶ್ರಿಫ್ ಪಾರ್ಕ್‌ನಲ್ಲಿ ಭಾನುವಾರ ಮಹಿಳಾ ದಿನಾಚರಣೆಯನ್ನು ಒಕ್ಕಲಿಗರ ಸಂಘ ಯುಎಇ ವತಿಯಿಂದ ಅದ್ದೂರಿಯಾಗಿ ಆಚರಣೆ ಮಾಡಲಾಯಿತು.

ಈ ವೇಳೆ ಸಂಘದ ಪದಾಧಿಕಾರಿಗಳು ಮುಶ್ರಿಫ್ ಪಾರ್ಕ್‌ನಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಭಾಗವಹಿಸಿದ್ದ ಪ್ರರಿಯೊಬ್ಬರಿಗೂ ಉಚಿತ ಆಹಾರ ಪೂರೈಸುವ ಜತೆಗೆ ದಿನವಿಡಿ ಮನರಂಜನೆ ಕಾರ್ಯಕ್ರಮ ಏರ್ಪಡಿಸುವ ಮೂಲಕ ಸೇರಿದ್ದ ಸಮುದಾಯದ ನಾರಿಯರನ್ನು ಉಲ್ಲಾಸದಿಂದ ಇರಿಸಿದ್ದರು.

ಇನ್ನು ನಮ್ಮ ಸಮುದಾಯದಲ್ಲಿನ ಮಹಿಳೆಯರನ್ನು ನಾವು ಗೌರವಿಸುವಂತೆ ಸಬಲೀಕರಣ, ಸ್ಫೂರ್ತಿ ಮತ್ತು ಆಚರಣೆಯ ದಿನಕ್ಕಾಗಿ ನಮ್ಮೊಂದಿಗೆ ಸೇರಿಕೊಳ್ಳಿ ಎಂಬ ಒಂದು ರೀತಿ ಘೋಷವಾಕ್ಯದೊಂದಿಗೆ ಒಕ್ಕಲಿಗರ ಸಂಘ ಯುಎಇ ಈ ಸಮಾರಂಭ ಆಯೋಜನೆ ಮಾಡಿದ್ದು ಸಾಗರದಾಚೆ ಸಾಧನೆ ಮಾಡುತ್ತಿರುವ ಸಮುದಾಯದ ಮಂದಿ ಒಂದೆಡೆ ಸೇರಿ ಕುಶಲೋಪರಿ ಹಂಚಿಕೊಂಡು ಸಂಭ್ರಮಿಸುವುದಕ್ಕೆ ವೇದಿಕೆಯಾಯಿತು.

ಒಂದೆಡೆ ಸೇರಿದ ಹೆಂಗಳೆಯರು ಸೀರೆಯುಟ್ಟು ಭಾರತೀಯ ಸಂಸ್ಕೃತಿಯನ್ನು ಬಿಂಬಿಸಿದ್ದು ದುಬೈ ಮಂದಿಯ ಮನಸೂರೆಗೊಂಡಿತು. ಇದೇ ವೇಳೆ ವಿವಿಧ ಕ್ಷೇತ್ರಗಳ ನಿಪುಣ ಮಹಿಳೆಯರ ನೇತೃತ್ವದಲ್ಲಿ ಮಾತುಕತೆ ಮತ್ತು ಚರ್ಚೆಗಳಲ್ಲಿ ತೊಡಗಿಸಿಕೊಂದ್ದು ಇನ್ನಷ್ಟು ಮೆರಗು ನೀಡಿತು.

ಇನ್ನು ಆಟೋಟಗಳು, ಸಂಗೀತ, ನೃತ್ಯ ಪ್ರದರ್ಶನ ಸೇರಿದಂತೆ ಎಲ್ಲ ವಯಸ್ಸಿನವರಿಗೆ ಮೋಜಿನ ಚಟುವಟಿಕೆಗಳ ರಸದೌತಣವನ್ನೇ ಉಣಬಡಿಸುವ ಜತೆಗೆ, ಅಚ್ಚರಿ ಎಂಬಂತೆ ರುಚಿಕರವಾದ ಆಹಾರ (ಉಚಿತ) ಸಮಾನ ಮನಸ್ಕ ವ್ಯಕ್ತಿಗಳೊಂದಿಗೆ ಸಂಪರ್ಕ ಸಾಧಿಸಲು ನೆಟ್‌ವರ್ಕಿಂಗ್ ಅವಕಾಶಗಳನ್ನು ದಿನವಿಡೀ ಕಲ್ಪಿಸಿಕೊಡಲಾಗಿತ್ತು.

ಈ ಎಲ್ಲ ಕಾರ್ಯಕ್ರಮಗಳಲ್ಲೂ ಭಾಗವಹಿಸಿ ಕುಣಿದು ಕುಪ್ಪಳಿಸುವ ಜತೆಗೆ ಮಾತುಕತೆ ಮತ್ತು ಚರ್ಚೆಗಳಲ್ಲಿ ಆನಂದಿಸಿದಕ್ಕಾಗಿ ವಿಶೇಷ ಆಶ್ಚರ್ಯಗಳು ಮತ್ತು ಕೊಡುಗೆಗಳನ್ನು ಸ್ವೀಕರಿಸುವ ಮೂಲಕ ಇನ್ನಷ್ಟು ಸಂಭ್ರಮಿಸಿದ್ದರು.

ಈ ಸಂಭ್ರಮಲ್ಲಿ ತಮ್ಮನ್ನು ತಾವು ಅರ್ಪಿಸಿಕೊಳ್ಳಲು ಒಕ್ಕಲಿಗರ ಸಂಘ ಯುಎಇ ಅನುವು ಮಾಡಿಕೊಟ್ಟಿದ್ದು, ಸ್ಮರಣೀಯ. ‘ಮಹಿಳಾ ದಿನಾಚರಣೆಯನ್ನು’ ಆನಂದಿಸಲು ಕುಟುಂಬ ಮತ್ತು ಸ್ನೇಹಿತರನ್ನು ಕರೆದಂತ ಎಲ್ಲರಿಗೂ ಮುಶ್ರಿಫ್ ಪಾರ್ಕ್‌ನಲ್ಲಿನ ವೇದಿಕೆ ಸ್ವಾಗತಿಸಿದ್ದು ವಿಶೇಷ ಅಚ್ಚರಿಯೇ ಸರಿ.

ಇಂಥ ಸುಮಧುರು ಸಮಯಕ್ಕೆ ವೇದಿಕೆ ಕಲ್ಪಿಸಿಕೊಟ್ಟ ಒಕ್ಕಲಿಗರ ಸಂಘ ಯುಎಇಯ ಎಲ್ಲ ಪದಾಧಿಕಾರಿಗಳು ಯಾವುದೇ ಲೋಪ ಬಾರದಂತೆ ನೋಡಿಕೊಂಡಿದ್ದು ಸಂಘದ ಗೌರವವನ್ನು ಇನ್ನಷ್ಟು ಹೆಚ್ಚಿಸಿತ್ತು.

Leave a Reply

error: Content is protected !!
LATEST
ಸೆ.12ರಂದು 5 ಭಾಷೆಗಳಲ್ಲಿ ಬೆಳ್ಳಿತೆರೆ ಮೇಲೆ ARM- ಚಿತ್ರದ ಟ್ರೈಲರ್‌ಗೆ ಭಾರೀ ಮೆಚ್ಚುಗೆ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಬೇಕೇಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ ಮೈಸೂರು: ಕಲುಷಿತ ನೀರು ಸೇವಿಸಿ 12ಮಂದಿಗೆ ವಾಂತಿ, ‌ಭೇದಿ, ಓರ್ವ ಮೃತ ಬಾಲಿವುಡ್‌ ನಟಿ ಮಲೈಕಾ ಅರೋರಾ ತಂದೆ ಆತ್ಯಹತ್ಯೆ KSRTC ನೌಕರರ ಕಿತ್ತು ತಿನ್ನುವ ಭ್ರಷ್ಟರು: ಹೋಟೆಲ್‌ಗೆ ತಿನ್ನಲು ಹೋಗಿ ನೌಕರನಿಗೆ ಫೋನ್‌ ಪೇ ಮಾಡಲು ಹೇಳಿದ ಎಟಿಐ ಗಂಗಾಧ... KSRTC ಮಂಡ್ಯ: ಓವರ್‌ಟೇಕ್‌ ನೆಪದಲ್ಲಿ ತಾನೇ ಬಸ್‌ಗೆ ಬೈಕ್‌ ಡಿಕ್ಕಿ ಹೊಡೆಸಿ ಅಪಘಾತದ ಹೈಡ್ರಾಮ ಮಾಡಿದ ಬೈಕ್‌ ಸವಾರ ಯೋಗ... KSRTC: ಆ‌ರ್‌ಟಿಒ ಚಾಲನಾ ಪರವಾನಗಿ ಅಮಾನತುಗೊಳಿಸಿದ ಚಾಲಕರಿಗೆ ಡ್ಯೂಟಿ ಕೊಟ್ಟರೆ ಕ್ರಮ- ಡಿಸಿ ಸೂಚನೆ ಆರೋಗ್ಯ ಶಿಬಿರ ಸಾಮಾಜಿಕ ಜವಾಬ್ದಾರಿ: ನ್ಯಾಯ ಸಮಿತಿ ಅಧ್ಯಕ್ಷ ಸಚಿನ್ ಶಿರವಾಳ ಚಾರ್ಜ್‌ಶೀಟ್ ಗೌಪ್ಯ ದಾಖಲಾತಿ ಏನಲ್ಲ: ಗೃಹ ಸಚಿವ ಪರಮೇಶ್ವರ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಕೊಡುವುದರಲ್ಲಿ ಎಳ್ಳಷ್ಟೂ ಅನುಮಾನವಿಲ್ಲ : ಬಿವೈವಿ