ಬಳ್ಳಾರಿ: ಆಹಾರ ಕಿಟ್ ವಿತರಿಸುವ ವೇಳೆ ಜನ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ ಸಚಿವರ ಮುಂದೆಯೇ ಮುಗಿ ಬಿದ್ದ ಘಟನೆ ಬಳ್ಳಾರಿಯಲ್ಲಿ ಇಂದು ನಡೆದಿದೆ.
ಶನಿವಾರ ಆರೋಗ್ಯ ಸಚಿವ ಬಿ. ಶ್ರೀರಾಮುಲು ನೇತೃತ್ವದಲ್ಲಿ ಆಧಿಕಾರಿಗಳು ಆಹಾರ ಕಿಟ್ ವಿತರಿಸುತ್ತಿದ್ದರು. ಆ ಕಿಟ್‌ಗಳನ್ನು ಪಡೆಯಲು ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ನೂಕು ನುಗ್ಗಲಿನಿಂದಲೇ ಗುಂಪುಗುಂಪಾಗಿ ಬಂದು ಪಡೆಯುತ್ತಿದ್ದರು.
ಇಲ್ಲಿ ಜನರಿಗೆ ಅರಿವು ಮೂಡಿಸಬೇಕಾರ ಸಚಿವರೇ ಗುಂಪಾಗಿ ಬಂದು ಆಹಾರ ಕಿಟ್ ಸ್ವೀಕರಿಸುತ್ತಿದ್ದವರನ್ನು ನಿಯಂತ್ರಿಸುವ ಗೋಜಿಗೆ ಹೋಗಲಿಲ್ಲ. ದೇಶವೆ ಇಂದು ಕೊರೊನಾ ಭಯದಲ್ಲಿದೆ. ಆದರೆ ಸಚಿವರು ಈರೀತಿ ವಿತರಿಸಿದರೆ ಇತರರಿಗೆ ಯಾವ ರೀತಿಯ ಮೆಸೆಜನ್ನು ನೀಡುತ್ತಾರೆ ಎಂಬುವುದು ನಾಗರಿಕರ ಪ್ರಶ್ನೆಯಾಗಿದೆ.
ಇಂದುಆಹಾರ ಕಿಟ್ ವಿತರಿಸುತ್ತಿರುವುದು ಒಳ್ಳೆಯ ಕೆಲಸ ಮತ್ತು ಇಂದಿಗೆ ಅದು ಬಹಳ ಅಗತ್ಯವು ಕೂಡ ಆಗಿದೆ. ಆದರೆ ಅದಕ್ಕೆ ಮುಂಚಿತವಾಗಿ ಮುಂಜಾಗ್ರತೆ ವಹಿಸದೆ ಈ ರೀತಿ ಮಾಡುವುದರಿಂದ ವಿಶ್ವಮಾರಿಯನ್ನು ಇನ್ನಷ್ಟು ಹತ್ತಿರ ಕರೆದುಕೊಂಡಂತೆ ಆಗುವುದಿಲ್ಲವೇ ಎಂಬುದು ಒಂದು ಆತಂಕದ ವಿಷಯ.
ದಾವಣಗೆರೆಯಲ್ಲೂ ಗುಂಪಾಗಿ ಬಂದ ಜನರು
ಇನ್ನು ಸಚಿವ ಎಸ್.ಟಿ ಸೋಮಶೇಖರ್ ಮತ್ತು ಸಂಸದ ಸಿದ್ದೇಶ್ವರ್ ಅವರು ಕೂಡ ದಾವಣಗೆರೆಯಲ್ಲಿ ಇದೇ ರೀತಿ ನಡೆದು ಕೊಂಡಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ. ಒಮ್ಮೆಗೆ ಐದು ವ್ಯಕ್ತಿಗಳು ಮಾತ್ರ ಇರಬೇಕು. ಅದೂ 3ರಿಂದ 6ಅಡಿ ಅಂತರ ಕಾಯ್ದುಕೊಂಡು ಎಂಬ ಲಾಕ್‌ಡೌನ್ ನಿಯಮವನ್ನು ಹೇರಲಾಗಿದೆ. ಆದರೆ ಆ ನಿಯಮವನ್ನೇ ಜನಪ್ರತಿನಿಧಿಗಳು ಪಾಲಿಸದಿದ್ದರೆ ಹೇಗೆ?
ಇನ್ನಾದರೂ ರಾಜ್ಯದಲ್ಲಿ ಹಬ್ಬುತ್ತಿರುವ ವಿಶ್ವಮಾರಿ ಕೊರೊನಾವನ್ನು ಬುಡಸಮೇತ ಕಿತ್ತುಹಾಕಲು ಜನಪ್ರತಿನಿಧಿಗಳಿರಲಿ, ಸಾಮಾನ್ಯ ವ್ಯಕ್ತಿಗಳೇ ಇರಲಿ ಎಲ್ಲರೂ ಸಾಮಾಜಿ ಅಂತರ ಕಾಯ್ದುಕೊಳ್ಳುವುದು ಬಹಳ ಮುಖ್ಯವಾಗಿದೆ.