NEWSನಮ್ಮಜಿಲ್ಲೆನಮ್ಮರಾಜ್ಯ

BMTC 1500 ನಿವೃತ್ತ ನೌಕರರ ಗ್ರಾಚ್ಯುಟಿ, EL ಹಣ 400 ಕೋಟಿ ರೂ.ಬಾಕಿ: 16-18 ತಿಂಗಳಿನಿಂದ ಕೇಂದ್ರ ಕಚೇರಿಗೆ ಅಲೆದಾಟ!!

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ನಿಗಮ ಕಳೆದ 2023ರ ಮಾರ್ಜ್ನಿಂದ ಈಚೆಗೆ ನಿವೃತ್ತರಾದ ನೌಕರರಿಗೆ ಈವರೆಗೂ ಅಂದಾಜು 400 ಕೋಟಿ ರೂ.ಗಳವರೆಗೆ ಗ್ರಾಚ್ಯುಟಿ ಮತ್ತು Encashment leave (EL) ರಜೆ ನಗದಿಕರಣ ಹಣ ಪಾವತಿಸದೆ ನಿವೃತ್ತ ನೌಕರರು ಕಳೆದ 16 ತಿಂಗಳಿನಿಂದಲೂ ನಿತ್ಯ ಕೇಂದ್ರ ಕಚೇರಿಗೆ ಅಲೆಯುತ್ತಿದ್ದಾರೆ.

2023ರ ಮಾರ್ಚ್ನಲ್ಲಿ ಮತ್ತು ಏಪ್ರಿಲ್ನಲ್ಲಿ ನಿವೃತ್ತರಾದ ನೌಕರರಿಗೆ ಗ್ರಾಚ್ಯುಟಿ ಹಣವನ್ನು ಕೊಟ್ಟಿದ್ದೆ ಆದರೆ, EL ಹಣವನ್ನು ಈವರೆಗೂ ಕೊಟ್ಟಿಲ್ಲ. ಇನ್ನು ಮೇ 2023ರಿಂದ ಈವರೆಗೂ ನಿವೃತ್ತರಾಗಿರುವ ಸಂಸ್ಥೆಯ 1500ಕ್ಕೂ ಹೆಚ್ಚು ನೌಕರರಿಗೆ ಗ್ರಾಚ್ಯುಟಿ ಮತ್ತು EL ಈ ಎರಡರ ಹಣವನ್ನು ಕೊಟ್ಟಿಲ್ಲ.

ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳನ್ನು ಕೇಳಿದರೆ ಇನ್ನು ಸರ್ಕಾರದಿಂದ ಯಾವುದೇ ಹಣ ಬಂದಿಲ್ಲ ಬಂದಮೇಲೆ ಕೊಡುತ್ತೇವೆ ಈಗ ಹೋಗಿ ಎಂದು ನಿವೃತ್ತ ನೌಕರರಿಗೆ ಹೇಳಿ ಕಳುಹಿಸುತ್ತಿದ್ದಾರೆ. ಇದರಿಂದ ಈ ಗ್ರಾಚ್ಯುಟಿ ಮತ್ತು EL ಹಣ ಯಾವಾಗ ಬರುತ್ತದೋ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲದಿರುವುದರಿಂದ ಕಚೇರಿ ಟೈಂನಲ್ಲಿ ನಿತ್ಯ ನೂರಾರು ಮಂದಿ ನಿವೃತ್ತ ನೌಕರರು ಅಲೆಯುತ್ತಿದ್ದಾರೆ.

ಆದರೂ ಅವರಿಗೆ ಯಾವಾಗ ಹಣ ಬರುತ್ತದೆ ಎಂಬ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲವಾಗಿದೆ. ಕಳೆದ 2023ರ ಮಾರ್ಚ್ನಿಂದ EL ತಲಾ 2.5 ಲಕ್ಷದಿಂದ 6ಲಕ್ಷ ರೂ.ಗಳವರೆಗೂ ಬರಬೇಕಿದೆ, ಇನ್ನು ಗ್ರಾಚ್ಯುಟಿ 18ರಿಂದ 20 ಲಕ್ಷ ರೂ.ಗಳ ವರೆಗೂ ಬರಬೇಕಿದೆ. ಅಂದರೆ ಅಂದಾಜು 400 ಕೋಟಿ ರೂಪಾಯಿಯನ್ನು ನಿವೃತ್ತರಿಗೆ ಸಕಾಲಕ್ಕೆ ಪಾವತಿಸದೆ ಸಂಸ್ಥೆ ಸುಮ್ಮನೆ ಅಲೆಸುತ್ತಿದೆ ಎಂದು ಇಳಿವಯಸ್ಸಿನ ನಿವೃತ್ತ ನೌಕರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇನ್ನು ನಮಗೆ 300 EL ಹಣ 6 ಲಕ್ಷ ರೂಪಾಯಿ ಬರಬೇಕು. ಜತೆಗೆ ಗ್ರಾಚ್ಯುಟಿ ಹಣ 19 ಲಕ್ಷ ರೂಪಾಯಿವರೆಗೂ ಬರಬೇಕು. ಅಂದರೆ ಈ ಗ್ರಾಚ್ಯುಟಿ ಮತ್ತು EL ಎರಡನ್ನು ಸೇರಿಸಿದರೆ ಒಟ್ಟು ನನಗೇ 25 ಲಕ್ಷ ರೂಪಾಯಿವರೆಗೆ ಬರಬೇಕಿದೆ ಎಂದು 16 ತಿಂಗಳ ಹಿಂದೆಯೇ ನಿವೃತ್ತರಾದ ಹೆಸರೇಳಲಿಚ್ಛಿಸದ ನೌಕರರೊಬ್ಬರು ವಿಜಯಪಥಕ್ಕೆ ತಿಳಿಸಿದ್ದಾರೆ.

ಕಳೆದ ವಾರ ಈ ಸಂಬಂಧ ನಿಗಮದ ಎಂಡಿ ರಾಮಚಂದ್ರನ್ಅವರನ್ನು ನಿವೃತ್ತ ನೌಕರರು ಭೇಟಿ ಮಾಡಿದಾಗ ಬರುವ ಡಿಸೆಂಬರ್ತಿಂಗಳಿಗೆ ಸರ್ಕಾರ ಹಣ ಬಿಡುಗಡೆ ಮಾಡಲಿದ್ದು ಆ ಹಣ ಬಂದ ಕೂಡಲೇ ನಿಮ್ಮ ಬ್ಯಾಂಕ್ಖಾತೆಗಳಿಗೆ ಜಮಾ ಮಾಡುತ್ತೇವೆ ಎಂದು ಹೇಳಿದ್ದಾರೆ.

ಇನ್ನು ಸರ್ಕಾರ ವಿದ್ಯಾರ್ಥಿಗಳಿಗೆ, ಕಟ್ಟಡ ಕಾರ್ಮಿಕರಿಗೆ, ಅಂಗವಿಕಲರಿಗೆ, ವೃದ್ಧರಿಗೆ ಹೀಗೆ ಹಲವಾರು ರೀತಿಯಲ್ಲಿ ಸಂಸ್ಥೆಯಿಂದ ಕೊಡುತ್ತಿರುವ ರಿಯಾಯಿತಿ ಪಾಸ್ಗಳ ಹಣವನ್ನು ಇನ್ನು ನಿಗಮಕ್ಕೆ ಬಿಡುಗಡೆ ಮಾಡದಿರುವುದರಿಂದ ನಿಗಮದಲ್ಲಿ ನಿವೃತ್ತರಾಗಿರುವ ಮತ್ತು ನಿವೃತ್ತರಾಗುತ್ತಿರುವ ನೌಕರರಿಗೆ ಸಕಾಲದಲ್ಲಿ ಅವರ ಗ್ರಾಚ್ಯುಟಿ ಮತ್ತು EL ಹಣವನ್ನು ಕೊಡಲಾಗುತ್ತಿಲ್ಲ ಎಂದು ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಒಟ್ಟಾರೆ ಸರ್ಕಾರ ಸಾರಿಗೆ ನಿಗಮಗಳ ನೌಕರರಿಗೆ 2020 ಜನವರಿ 1ರಿಂದ ಅನ್ವಯವಾಗುವಂತೆ ಶೇ.15ರಷ್ಟು ವೇತನ ಹೆಚ್ಚಳ ಮಾಡಿರುವ ಆ ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿಯನ್ನು ಕೊಟ್ಟಿಲ್ಲ. ಜತೆಗೆ 30-40ವರ್ಷಗಳು ನಿರಂತರವಾಗಿ ಸೇವೆ ಸಲ್ಲಿಸಿ ನಿವೃತ್ತರಾದ ನೌಕರರಿಗೂ 400 ಕೊಟಿ ರೂ. ಕೊಡದೆ ಬಾಕಿ ಉಳಿಸಿಕೊಂಡಿದೆ. ಇದರಿಂದ ನಿತ್ಯ ಸಾರಿಗೆ ನೌಕರರು ಆರ್ಥಿಕ ಸಮಸ್ಯೆ ಅನುಭವಿಸುವಂತಾಗಿದೆ.

ಅಲ್ಲದೆ ಮಕ್ಕಳ ಉನ್ನತ ವಿದ್ಯಾಭ್ಯಾಸ, ಮಧುವೆ ಸೇರಿದಂತೆ ಇತರೆ ವ್ಯವಹಾರಗಳಿಗೆ ಸಾಲ ಮಾಡಿಕೊಂಡಿದ್ದು, ಈ ಹಣ ಬಂದರೆ ಅನುಕೂಲವಾಗುತ್ತದೆ ಎಂದು ಅಂದುಕೊಂಡಿದ್ದ ನಿವೃತ್ತ ನೌಕರರಿಗೆ ಸಕಾಲಕ್ಕೆ ಹಣ ಸಿಗದಿರುವುದರಿಂದ ಪಡೆದ ಸಾಲಕ್ಕೆ 2ರಿಂದ 5% ವರೆಗೂ ಬಡ್ಡಿ ಕಟ್ಟುವಂತಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

Leave a Reply

error: Content is protected !!
LATEST
KSRTC-ನಮ್ಮ ಸರ್ಕಾರ ಸರಿ ಸಮಾನ ವೇತನ ಕೊಡುತ್ತದೆ ನೆಮ್ಮದಿಯಾಗಿರಿ: ಕಾಂಗ್ರೆಸ್‌ ಪ್ರಣಾಳಿಕೆ ಸಮಿತಿ ಉಪಾಧ್ಯಕ್ಷ ರಾಧಾಕೃ... KSRTC: ಅಗ್ರಿಮೆಂಟ್‌ ಎಂಬ ಸೆಟಲ್‌ಮೆಂಟ್‌ ಭೂತವನ್ನು ಬುಡಸಮೇತ ಕಿತ್ತೊಗೆಯಬೇಕು - ವಕೀಲ ನಟರಾಜ ಶರ್ಮಾ ವೇತನ ಸಂಬಂಧ 4ವರ್ಷಕ್ಕೊಮ್ಮೆ ಆಗುವ ಅಗ್ರಿಮೆಂಟ್‌ ಬೇಡ ಕೊಟ್ಟ ಭರವಸೆ ಈಡೇರಿಸಿ: ಸಾರಿಗೆ ಸಚಿವರಿಗೆ ಚಂದ್ರು ಒತ್ತಾಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ 247 ಹುದ್ದೆಗಳಿಗೆ ಅರ್ಜಿ ಆಹ್ವಾನ: 3 ವರ್ಷ ವಯಸ್ಸಿನ ಸಡಿಲಿಕೆ, ಡಿಗ್ರಿ ಅರ್ಹತೆ ಮೇಲುಸೇತುವೆ-ಕೆಳಸೇತುವೆಗಳ ನಿರ್ವಹಣೆ ಸರಿಯಾಗಿ ಮಾಡಿ: ತುಷಾರ್ ಗಿರಿನಾಥ್ ದೆಹಲಿ ನೂತನ ಮುಖ್ಯಮಂತ್ರಿಯಾಗಲಿದ್ದಾರೆ ಅತಿಶಿ: ಎಎಪಿ ನಾಯಕರ ಸಭೆಯಲ್ಲಿ ನಿರ್ಧಾರ BMTC 1500 ನಿವೃತ್ತ ನೌಕರರ ಗ್ರಾಚ್ಯುಟಿ, EL ಹಣ 400 ಕೋಟಿ ರೂ.ಬಾಕಿ: 16-18 ತಿಂಗಳಿನಿಂದ ಕೇಂದ್ರ ಕಚೇರಿಗೆ ಅಲೆದಾಟ!! ಸುಪ್ರೀಂ ಕೋರ್ಟ್ ಅಧಿಕೃತ  ಭಾಷೆ ಇಂಗ್ಲಿಷ್- ಹಿಂದಿಯಲ್ಲಿ ವಾದಕ್ಕೆ ಅನುಮತಿ ಇಲ್ಲ: ವಕೀಲರಿಗೆ ನೆನಪಿಸಿದ ಕೋರ್ಟ್‌ ಕೃಷಿ ಉತ್ಪನ್ನಗಳ ಬೆಂಬಲ ಬೆಲೆಗಿಂತ ಕಡಿಮೆ ದರಕ್ಕೆ ಖರೀದಿ ಮಾಡದಂತ ಕಟ್ಟುನಿಟ್ಟಿನ ಕಾನೂನು ಜಾರಿಗೆ ರೈತ ಮುಖಂಡರ ಆಗ್ರಹ KSRTC ಬಸ್‌ -ಕಾರು ನಡುವೆ ಅಪಘಾತ: ಅನಾರೋಗ್ಯದ ನಡುವೆ ಕಾರು ಚಲಾಯಿಸಿದ ಪತಿ ಮೃತ- ಪತ್ನಿ ಪ್ರಾಣಾಪಾಯದಿಂದ ಪಾರು