ಕೆ.ಆರ್.ಪೇಟೆ: ತಾಲೂಕಿನಲ್ಲಿ ಅಪಾಯ ಮಟ್ಟ ಮೀರಿ ಉಕ್ಕಿ ಹರಿಯುತ್ತಿರುವ ಹೇಮಾವತಿ ನದಿಗೆ ಇಳಿಯದಂತೆ ರೈತ ಬಾಂಧವರಿಗೆ ಎಕ್ಸಿಕ್ಯೂಟಿವ್ ಇಂಜಿನಿಯರ್ ಆನಂದ್ ಮನವಿ ಮಾಡಿದ್ದಾರೆ.
ಗೊರೂರು ಜಲಾಶಯವು ಭರ್ತಿ ಯಗುತ್ತಿರುವ ಹಿನ್ನೆಲೆಯಲ್ಲಿ ಹೇಮಾವತಿ ನದಿಗೆ 25ಸಾವಿರ ಕ್ಯೂಸೆಕ್ಸ್ ನೀರನ್ನು ನದಿಗೆ ಹರಿಯಬಿಡಲಾಗುತ್ತಿದ್ದು ಹೇಮಾವತಿ ನದಿಯು ಅಪಾಯ ಮಟ್ಟ ಮೀರಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ನದಿಯ ತಗ್ಗು ಪಾತ್ರದ ಜನರು ಎಚ್ಚರ ವಾಗಿರಬೇಕು ಎಂದು ಹೇಮಾವತಿ ಜಾಲಾಶಯ ಯೋಜನೆಯ ನಂಬರ್ 3ರ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಆನಂದ್ ಮನವಿ ಮಾಡಿದರು.
ಗದ್ದೆ ಹೊಸೂರು, ಚಿಕ್ಕ ಮಂದಗೆರೆ, ಶ್ರವಣೂರು, ಬಂಡಿಹೊಳೆ ಸೇರಿದಂತೆ ವಿವಿಧ ಗ್ರಾಮಗಳಿಗೆ ನೀರು ನುಗ್ಗಿದ್ದು, ನದಿಯು ಅಪಾಯ ಮಟ್ಟವನ್ನು ಮೀರಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ನದಿ ಪಾತ್ರದ ಜನರು ಎಚ್ಚರವಾಗಿರುವ ಜೊತೆಗೆ ನದಿಗೆ ಬಟ್ಟೆ ಒಗೆಯಲು, ದನಕರುಗಳಿಗೆ ನೀರು ಕುಡಿಸಲು ನದಿಗೆ ಇಳಿಯಬಾರದು ಎಂದು ಸೂಚನೆ ನೀಡಿದ್ದಾರೆ.
ಇನ್ನು ಗೊರೂರು ಜಲಾಶಯಕ್ಕೆ ಒಳ ಹರಿವು ಹೆಚ್ಚಾಗುತ್ತಿದ್ದು ನದಿಗೆ ಹರಿಯ ಬಿಡುವ ನೀರಿನ ಪ್ರಮಾಣ ಇನ್ನೂ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ರೈತ ಬಾಂಧವರು ಎಚ್ಚರವಾಗಿರಬೇಕು. ನದಿಯ ಪಾತ್ರದ ತಗ್ಗುಗಳಲ್ಲಿ ವಾಸವಾಗಿರುವ ಜನರು ಸುರಕ್ಷಿತ ಪ್ರದೇಶಕ್ಕೆ ತೆರಳಬೇಕು. ನದಿಗೆ ಇಳಿಯುವುದು, ದನಕರುಗಳನ್ನು ತೊಳೆಯಲು ನದಿಗೆ ಹೋಗುವುದು ಸೇರಿದಂತೆ ನದಿಯ ಪಾತ್ರದತ್ತ ತೆರಳ ಬಾರದು ಎಂದು ತಿಳಿಸಿ, ಎಚ್ಚರಿಕೆ ಸೂಚನಾ ಫಲಕಗಳನ್ನು ಹಾಕಿಸಿದ್ದಾರೆ.
ಹೇಮಾವತಿ ನದಿ ಪಾತ್ರದ ಹೇಮಗಿರಿ ಆಣೆಕಟ್ಟೆ ಹಾಗೂ ಮಂದಗೆರೆ ಅಣೆಕಟ್ಟೆಗೆ ಸರ್ಕಲ್ ಇನ್ಸ್ಪೆಕ್ಟರ್ ರೇವತಿ, ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಸತೀಶ್, ಪಿಡಿಒ ದಯಾಶಂಕರ್, ಎಇಇ ವಿಶ್ವನಾಥ್, ಸಹಾಯಕ ಎಂಜಿನಿಯರ್ ಗಳಾದ ನಾಯಕ್, ರಾಘವೇಂದ್ರ ಹಾಗೂ ಸಹಾಯಕ ಕಿರಿಯ ಇಂಜಿನಿಯರ್ ಗಳು ಹಾಗೂ ನೀರಾವರಿ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಡಾ.ಕೆ.ಆರ್.ನೀಲಕಂಠ, ಕೃಷ್ಣರಾಜಪೇಟೆ