Breaking NewsNEWSನಮ್ಮರಾಜ್ಯ

ಅ.15ರಿಂದ ಐದು ದಿನಗಳವರೆಗೆ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ 3ಕಡೆ ಸಾರಿಗೆ ನೌಕರರ ಉಪವಾಸ ಸತ್ಯಾಗ್ರಹ: ಜಂಟಿ ಕ್ರಿಯಾ ಸಮಿತಿ

ವಿಜಯಪಥ - vijayapatha.in
ವಿಜಯಪಥ ಸಮಗ್ರ ಸುದ್ದಿ

2020ರ ಜನವರಿ 1ರಿಂದ ಅನ್ವಯವಾಗುವಂತೆ ಜಾರಿಯಾಗಿರುವ ಶೇ.15ರಷ್ಟು ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿ ಬಿಡುಗಡೆ ಹಾಗೂ 20245ರ ಜನವರಿ 1ರಿಂದ ಆಗಬೇಕಿರುವ ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ  ಈಡೇರಿಕೆಗೆ ಆಗ್ರಹಿಸಿ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರು ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ನೇತೃತ್ವದಲ್ಲಿ ಅ.15 ರಿಂದ ಐದು ದಿನಗಳ ಕಾಲ ಉಪವಾಸ ಸತ್ಯಾಗ್ರಹಕ್ಕೆ ಕರೆ ನೀಡಿದ್ದಾರೆ.

ಬೆಂಗಳೂರು: ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿದಂತೆ ರಾಜ್ಯ ಸರ್ಕಾರಿ ಸಾರಿಗೆಯ ನಾಲ್ಕೂ ನಿಗಮಗಳ ನೌಕರರು ಈ ಮೂಲಕ ಮತ್ತೆ ಮುಷ್ಕರಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇದೇ ಅಕ್ಟೋಬರ್ 15 ರಿಂದ 19 ರವರೆಗೆ ಉಪವಾಸ ಸತ್ಯಾಗ್ರಹಕ್ಕೆ ಮಾಡಲು ಮುಂದಾಗಿದ್ದಾರೆ.

ಅ. 15ರಿಂದ 19ರವರೆಗೆ ಬೆಂಗಳೂರು, ಹುಬ್ಬಳ್ಳಿ ಹಾಗೂ ಕಲಬುರಗಿ ಈ ಮೂರು ನಗರಗಳಲ್ಲೂ ಐದು ದಿನಗಳ ಕಾಲ ನೌಕರರು ಉಪವಾಸ ಸತ್ಯಾಗ್ರಹ ಮಾಡಲಿದ್ದಾರೆ ಎಂದು ಜಂಟಿ ಕ್ರಿಯಾ ಸಮಿತಿಯ ಪದಾಧಿಕಾರಿಗಳು ತಿಳಿಸಿದ್ದಾರೆ.

ಇನ್ನು ಕಳೆದ 2020 ಜನವರಿ 1ರಿಂದ ಜಾರಿಗೆ ಬಂರುವಂತೆ 2023 ಮಾರ್ಚ್‌ನಲ್ಲಿ ಅಂದಿನ ಬಿಜೆಪಿ ಸರ್ಕಾರ ಶೇ.15ರಷ್ಟು ವೇತನ ಹೆಚ್ಳ ಮಾಡಿ ಆದೇಶ ಹೊರಡಿಸಿತ್ತು. ಆ 38 ತಿಂಗಳ ಹಿಂಬಾಕಿ ಬಿಡುಗಡೆ ಮಾಡುವಂತೆ ಹಾಗೂ 2024ರ ಜನವರಿ 1ರಿಂದ ಮತ್ತೆ ಆಗಬೇಕಿರುವ ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ನಿರಂತರವಾಗಿ ಸರ್ಕಾರಕ್ಕೆ ಒತ್ತಡ ಹೇರುತ್ತಿದ್ದಾರೆ.

ಆದರೆ, ಇಂದಿನ ಕಾಂಗ್ರೆಸ್‌ ನೇತೃತ್ವದ ರಾಜ್ಯ ಸರ್ಕಾರ ಸಾರಿಗೆ ನೌಕರರ ಸಂಘಟನೆಗಳ ಆಗ್ರಹಕ್ಕೆ ಕಿಂಚಿತ್ತು ಬೆಲೆಕೊಡದೆ ಉದ್ಧಟತನದಿಂದ ನಡೆದುಕೊಳ್ಳುತ್ತಿದೆ. ಹೀಗಾಗಿ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಅ.15 ರಿಂದ ಐದು ದಿನಗಳ ಕಾಲ ಉಪವಾಸ ಸತ್ಯಾಗ್ರಹಕ್ಕೆ ಕರೆ ನೀಡಿದೆ.

ಈ ನಡುವೆ ಈ ಹಿಂದೆಯೂ ಜಂಟಿ ಕ್ರಿಯಾ ಸಮಿತಿ ಎರಡು ಬಾರಿ ಮುಷ್ಕರಕ್ಕೆ ಕರೆ ನೀಡಿತ್ತು. ಆದರೆ, ಒಂದು ಬಾರಿ ಸಿಎಂ ಹಾಗೂ ಸಾರಿಗೆ ಸಚಿವರ ಭರವಸೆ ಮೇರೆಗೆ ಮುಂದೂಡಿತ್ತು, ಮತ್ತೊಂದು ಬಾರಿ ಮುಷ್ಕರಕ್ಕೆ ಮುಂದಾಗಿ ಒಂದುದಿನ ಮುಷ್ಕರವನ್ನು ಮಾಡಿತ್ತು. ಆದರೆ ಹೈ ಕೋರ್ಟ್‌ ನಿರ್ದೇಶನವನ್ನು ಪಾಲನೆ ಮಾಡದಿದ್ದಕ್ಕೆ ಛೀಮಾರಿ ಹಾಕಿಸಿಕೊಂಡಿತ್ತು.

Advertisement

ಹೀಗಾಗಿ ಈ ಬಾರಿ ಅದಾವುದಕ್ಕೂ ಆಸ್ಪದಕೊಡದಂತೆ ವ್ಯವಸ್ಥಿತವಾಗಿ ಮುಷ್ಕರದ ಬದಲಿಗೆ ಐದು ದಿನಗಳ ಕಾಲ ಉಪವಾಸ ಸತ್ಯಾಗ್ರಹ ಮಾಡಲು ಮುಂದಾಗಿದ್ದು, ಈ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡಲು ಹೊರಟಿದೆ. ಈ ಉಪವಾಸ ಸತ್ಯಾಗ್ರಹದಿಂದ ಯಾವುದೇ ನೌಕರರಿಗೂ ಸರ್ಕಾರವಾಗಲಿ ಅಥವಾ ಅಧಿಕಾರಿಗಳಾಗಲಿ ತೊಂದರೆ ಕೊಡಲು ಸಾಧ್ಯವಿಲ್ಲ. ಕಾರಣ ಇದು ಉಪವಾಸ ಸತ್ಯಾಗ್ರಹವಾಗಿದ್ದು, ಬಸ್‌ ನಿಲ್ಲಿಸಿ ಮುಷ್ಕರ ಮಾಡುತ್ತಿಲ್ಲ.

ಇನ್ನು ಈ ರೀತಿಯ ಉಪವಾಸ ಸತ್ಯಾಗ್ರಹ ಮಾಡುವುದಕ್ಕೆ ಸಾರಿಗೆ ನಿಗಮಗಳ ಅಧಿಕಾರಿಗಳು ಕೂಡ ಬೆಂಬಲ ನೀಡಲಿದ್ದಾರೆ. ಈ ರೀತಿಯ ಹೋರಾಟಕ್ಕೆ ಸರ್ಕಾರ ಮಣಿಯದಿದ್ದರೆ ಕೊನೆಯ ಅಸ್ತ್ರವಾಗಿ ಮುಷ್ಕರಕ್ಕೆ ಕರೆ ನೀಡುವುದಕ್ಕೂ ಸಂಘಟನೆಗಳಿಗೆ ಶಕ್ತಿ ಬರಲಿದೆ.

Megha
the authorMegha

Leave a Reply

error: Content is protected !!