NEWSನಮ್ಮಜಿಲ್ಲೆನಮ್ಮರಾಜ್ಯ

KSRTC ನೌಕರರ ವೇತನ ಪರಿಷ್ಕರಣೆ ಐಡಿ 148/05ರ ತೀರ್ಪಿಗೆ WP 4640/2018ರಡಿ ಸ್ಟೇ ತಂದ 4 ಸಾರಿಗೆ ನಿಗಮಗಳು; ಇದೇ ಜೂ.9ರಲ್ಲಿ ಅಂತಿಮ ವಿಚಾರಣೆಗೆ ಬಂದಿದ್ದ ಪ್ರಕರಣ..!?

ವಿಜಯಪಥ ಸಮಗ್ರ ಸುದ್ದಿ
  • 29 ಜನವರಿ 2018ರಲ್ಲಿ ಕೇಸ್‌ ಫೈಲ್‌ ಆಗಿದೆ
  • ಒಂದು ಸ್ಟೇ ತೆರವುಗೊಳಿಸಲು 7ವರ್ಷ 6 ತಿಂಗಳು ಗತಿಸಿದರೂ ಸಾಧ್ಯವಾಗಿಲ್ಲ ಏಕೆ?
  • ನೌಕರರ ಹಿತ ಬಯಸುವ ಸಂಘಟನೆಗಳ ಮುಖಂಡರು ಇದರ ಬಗ್ಗೆ ಈವರೆಗೂ ಧ್ವನಿ ಎತ್ತದಿರುವುದು ಕೂಡ ಅಚ್ಚರಿಯೇ ಸರಿ 

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರ ವೇತನ ಪರಿಷ್ಕರಣೆ ಸಂಬಂಧದ ಐಡಿ 148/2005ರ ತೀರ್ಪಿನ ವಿರುದ್ಧ ಸಾರಿಗೆ ಸಂಸ್ಥೆಯ 4ನಿಗಮಗಳು ಹೈ ಕೋರ್ಟ್‌ನಲ್ಲಿ (WP 4640/2018) ಅಪಿಲ್‌ಹೋಗಿ ಕೆಳ ಹಂತದ ನ್ಯಾಯಾಲಯ ನೀಡಿದ ಈ ಐಡಿ 148/2005ರ ತೀರ್ಪಿಗೆ ತಡೆಯಾಜ್ಞೆ ತಂದಿವೆ.

ಕೆಳ ಹಂತದ ನ್ಯಾಯಾಲಯ ನೀಡಿದ ಐಡಿ 148/2005ರ ತೀರ್ಪಿಗೆ 2018 ಜನವರಿ 29ರಂದು ತಡೆಯಾಜ್ಞೆ ತಂದ ಬಳಿಕ ಸಂಬಂಧಪಟ್ಟ ಪ್ರತಿವಾದಿ ಎಐಟಿಯುಸಿ ಸಂಘಟನೆಗೆ ಉಚ್ಚನ್ಯಾಯಾಲಯ ನೋಟಿಸ್‌ ಜಾರಿ ಮಾಡಿತ್ತು. ಆ ಬಳಿಕ ವಕಾಲತ್ತು ಹಾಕಿದ ಎಐಟಿಯುಸಿ ಸಂಘಟನೆ ಪ್ರಕರಣ ಕೋರ್ಟ್‌ಹಾಲ್‌ಗೆ ಬಂದಾಗಲೆಲ್ಲ 2 ವಾರಗಳ ಕಾಲ ಸಮಯಾವಕಾಶಕೊಡಿ ಎಂದು ಮನವಿ ಮಾಡಿಕೊಂಡೆ ಬಂದಿದೆ.

ಇನ್ನು ಕಳೆದ 2018 ಜವರಿ 29ರಿಂದ 2025 ಜೂನ್‌ 9ರವರೆಗೆ ಹೈ ಕೋರ್ಟ್‌ನ ಯಾವ ನ್ಯಾಯಮೂರ್ತಿಗಳ ಬಳಿ ಪ್ರಕರಣ ಬಂದಿದೆ. ಆ ವೇಳೆ ಪ್ರತಿವಾದಿ ವಕೀಲರು ಸಮಯ ಕೇಳಿದ್ದರ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.

2018 ಜನವರಿ 29ರಂದು WP 4640/2018 ಪ್ರಕರಣವನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳು ಹೈ ಕೋರ್ಟ್‌ನಲ್ಲಿ ಹೂಡಿದ್ದು, ಬಳಿಕ 2018 ಮಾರ್ಚ್‌ 13ರಂದು ಪ್ರತಿವಾದಿ ಎಐಟಿಯುಸಿ ಸಂಘಟನೆಗೆ ನೋಟಿಸ್‌ ಜಾರಿ ಮಾಡಲಾಯಿತು. ಆ ಬಳಿಕ ಕೋವಿಡ್‌ ಇದ್ದಿದ್ದರಿಂದಲೋ ಏನೋ ಗೊತ್ತಿಲ್ಲ 2019 ಮತ್ತು 2020 ಹಾಗೂ 2021ರಲ್ಲಿ ಪ್ರಕರಣ ಕೋರ್ಟ್‌ಹಾಲ್‌ಗೆ ಬಂದಿಲ್ಲ.

ಇನ್ನು 2022ರ ಮಾರ್ಚ್‌ 9ರಂದು ನ್ಯಾಯಮೂರ್ತಿ ಕೆ.ಎಸ್‌.ಮುದಗಲ್‌ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ಪ್ರಕರಣ ಬಂದಿದೆ. ಈ ವೇಳೆ ಎಐಟಿಯುಸಿ ಸಂಘಟನೆ ಪರ ವಕೀಲರು 2 ವಾರಗಳ ಕಾಲ ಕಾಲಾವಕಾಶ ಕೋರಿದ್ದಾರೆ. ಹೀಗಾಗಿ ಪ್ರಕರಣವನ್ನು 2022ರ ಮೇ 31ಕ್ಕೆ ಮುಂದೂಡಲಾಗಿತ್ತು.

ಈ 2022 ಮೇ 31ರಂದು ಈ ಪ್ರಕರಣ ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ಬಂದಿದೆ. ಈ ವೇಳೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ಪ್ರತಿವಾದಿಯ ಪರ (ಎಐಟಿಯುಸಿ ಸಂಘಟನೆ) ವಕೀಲರು ಮತ್ತೆ 2 ವಾರಗಳ ಕಾಲ ಕಾಲಾವಕಾಶ ಕೋರಿಕೆ ಮೇರೆಗೆ 2022 ನವೆಂಬರ್‌ 11ಕ್ಕೆ ಮುಂದೂಡಲಾಯಿತು.

ಈ ಪ್ರಕರಣ ಮತ್ತೆ 2022 ನವೆಂಬರ್‌ 11ರಂದು ನ್ಯಾಯಮೂರ್ತಿ ಸಿ.ಎಂ. ಪೊಣಚ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ಬಂದಿದೆ. ಅಂದು ಪ್ರತಿವಾದಿಯ ಪರವಾಗಿ ವಕೀಲರಾಗಿ ಕೆ.ಬಿ. ನಾರಾಯಣಸ್ವಾಮಿ ಅವರ ಹೆಸರನ್ನು ಎಸ್.ವಿ.ಆರ್. ಜತೆಗೆ ತೋರಿಸಲು ನೋಂದಣಿ ಮಾಡಲಾಯಿತು. ಬಳಿಕ ವಿಚಾರಣೆ ನ್ಯಾಯಾಲಯದ ದಾಖಲೆಗಳ ಒದಗಿಸುವ ಅಗತ್ಯವಿದೆ ಎಂದು ಮತ್ತೆ ಸಮಯ ಕೇಳಿದ್ದಾರೆ. ಆಗ 30.11.2022ಕ್ಕೆ ಪ್ರಕರಣವನ್ನು ಮುಂದೂಡಲಾಯಿತು.

ಇನ್ನು 30.11.2022ರಂದು ಇದೇ ನ್ಯಾಯಮೂರ್ತಿ ಸಿ.ಎಂ. ಪೊಣಚ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿತ್ತು. ಈ ವೇಳೆಯೂ ಮತ್ತೆ ಪ್ರತಿವಾದಿಯ ಪರ (ಎಐಟಿಯುಸಿ ಸಂಘಟನೆ) ವಕೀಲರು 3 ವಾರಗಳ ಕಾಲ ಕಾಲಾವಕಾಶ ಕೋರಿದ್ದರ ಮೇರೆಗೆ 12 ಜನವರಿ 2023ಕ್ಕೆ ಪ್ರಕರಣವನ್ನು ಮುಂದೂಡಲಾಯಿತು.

12.01.2023ರಂದು ಈ ಪ್ರಕರಣ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ಬಂದಿತ್ತು. ಪ್ರಕರಣವನ್ನು ಅಂತಿಮ ವಿಚಾರಣೆ ಮಾಡುವುದಕ್ಕೆ ನ್ಯಾಯಪೀಠ ನಿರ್ದೇಶನನೀಡಿ 4.10.2023ಕ್ಕೆ ಮುಂದೂಡಿತು.

ಇನ್ನು 4.10.2023ರಂದು ಪ್ರಕರಣ ಮತ್ತೆ ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ಬಂದಿದೆ. ಈ ವೇಳೆ ಅರ್ಜಿದಾರರ ಪರ ವಕೀಲರು ಮತ್ತು ಪ್ರತಿವಾದಿಯ ಪರ ವಕೀಲರು ಖುದ್ದು ಹಾಜರಾಗಿದ್ದರು. ನಂತರ ದಸರಾ ರಜೆ ಬಳಿಕ ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ಮತ್ತೆ ಪ್ರಕರಣವನ್ನು ಮುಂದೂಡಲಾಯಿತು. ಅದು ಕೂಡ ಬರೋಬರಿ ಸುಮಾರು ಎರಡು ವರ್ಷಗಳ ಕಾಲ ಮುಂದಕ್ಕೆ ಹಾಕಲಾಯಿತು. ಅಂದರೆ 09.06.2025ರ ವರೆಗೆ ಮುಂದೂಡಲಾಯಿತು.

ಈ ಪ್ರಕರಣ 4.10.2023ರ ಬಳಿಕ ಅಂದರೆ ಇದೇ 9ನೇ ಜೂನ್‌ 2025ರಂದು ಹೈಕೋರ್ಟ್‌ ನ್ಯಾಯಮೂರ್ತಿಗಳಾದ ಅನಂತ್‌ ರಾಮನಾಥ್‌ ಹೆಗ್ಡೆ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿದೆ. ಆದರೆ ಈಗ ಮತ್ತೆ ಈ ಪ್ರಕರಣ ಮುಂದೂಡಲಾಗಿದೆ. ಇದಕ್ಕೆ ಕಾರಣ ಏನು ಎಂಬುದನ್ನು ನೌಕರರಿಗೆ ಸಂಬಂಧಪಟ್ಟ ಪ್ರತಿವಾದಿ ಎಐಟಿಯುಸಿ ಸಂಘಟನೆ ತಿಳಿಸಬೇಕಿತ್ತು. ಆದರೆ ಆ ಕೆಲಸವನ್ನು ಮಾಡಿಲ್ಲ. ಇದು ಏಕೆ ಎಂಬ ಪ್ರಶ್ನೆ ಈಗ ಉಳಿದಿದೆ.

ಹೌದು! ಇಲ್ಲಿ ಈಗ ನೌಕರರು ಕೇಳುತ್ತಿರುವ ಪ್ರಶ್ನೆ ಎಂದರೆ ಈ ಪ್ರಕರಣ ಸಂಬಂಧ ಕಳೆದ ಏಳೂವರೆ ವರ್ಷಗಳಿಂದಲೂ ವಿಚಾರಣೆ ಬಂದು ಹೋಗುತ್ತಿದೆ. ಆದರೂ ಕೂಡ ನಮ್ಮ ಪರವಾಗಿ ವಕಾಲತ್ತು ವಹಿಸಿರುವ ಎಐಟಿಯುಸಿ ಸಂಘಟನೆ ಮುಖಂಡರು ಈ ಬಗ್ಗೆ ನಮಗೆ ಏಕೆ ಮಾಹಿತಿ ನೀಡುತ್ತಿಲ್ಲ. ಈಗ ಅಂದರೆ ಇದೇ ಜೂನ್‌ 9ರಂದು ಅಂತಿಮ ವಿಚಾರಣೆಗೆ ಪ್ರಕರಣ ಬಂದಿದ್ದು ಅದು ಏನಾಯಿತು ಎಂಬ ಬಗ್ಗೆ ನಮಗೆ ಮಾಹಿತಿನೆ ಇಲ್ಲ. ಹೀಗೆ ಮಾಡಿದರೆ ಹೇಗೆ ಎಂದು ಕೇಳುತ್ತಿದ್ದಾರೆ.

ಅಲ್ಲದೆ ಐಡಿ 148/2005ರ ಕೆಳ ಹಂತದ ಕೋರ್ಟ್‌ ಆದೇಶದಂತೆ ಪ್ರತಿ ನಾಲ್ಕು ವರ್ಷಕ್ಕೊಮ್ಮೆ ಶೇ.20ರಷ್ಟು ವೇತನ ಹೆಚ್ಚಳ ಮಾಡಿದರೆ ಸಾರಿಗೆ ನೌಕರರು ಸರ್ಕಾರಿ ನೌಕರರಿಗಿಂತಲೂ ಹೆಚ್ಚಿನ ವೇತನ ಪಡೆಯಲಿದ್ದಾರೆ ಎಂದು ಈ ಸಂಘಟನೆಗಳ ಮುಖಂಡರು ಹೇಳುತ್ತಿದ್ದಾರೆ. ಈ ಐಡಿ 148/2005ರಡಿ ಕೆಳ ಹಂತದ ನ್ಯಾಯಾಲಯ ನೀಡಿದ ತೀರ್ಪಿಗೆ ಸಾರಿಗೆಯ 4 ಸಂಸ್ಥೆಗಳು ಹೈ ಕೋರ್ಟ್‌ನಲ್ಲಿ (WP 4640/2018) 2018ರಲ್ಲೇ ತಡೆಯಾಜ್ಞೆ ತಂದಿವೆ.

ಇದರಲ್ಲಿ ಪ್ರತಿಯಾದಿಯಾಗಿರುವ ಎಐಟಿಯುಸಿ 2018ರಿಂದ ಈವರೆಗೂ ಈ ತಡೆಯಾಜ್ಞೆ ತೆರವುಗೊಳಿಸುವಲ್ಲಿ ಏಕೆ ವಿಫಲವಾಗಿದೆ? ಈ ಒಂದು ಪ್ರಕರಣವನ್ನು ಏಳೂವರೆ ವರ್ಷಗಳ ವರೆಗೆ ನಡೆಸಿಕೊಂಡು ಬಂದಿದ್ದಿರಲ್ಲ ಏಕೆ? ಹೋಗಲಿ ಈಗ 9 ಜೂನ್‌ 25ರಂದು ಪ್ರಕರಣ ವಿಚಾರಣೆ ನಡೆದಿರುವ ಬಗ್ಗೆ ನೌಕರರಿಗೆ ತಿಳಿಸಿದ್ದೀರಾ? ಇಲ್ಲ ಆದರೆ ಪ್ರತಿವಾದಿ ವಕೀಲರು 2ವಾರ 2 ವಾರ ಕಾಲಾವಕಾಶ ಕೊಡಿ ಎಂದು ಕೇಳಿಕೊಂಡು ಮುಂದೂಡಿದ್ದಾರೆ ಏಕೆ? ಹೀಗೆ ಮಾಡಿದ್ದರೆ ನೌಕರರಿಗೆ ನ್ಯಾಯ ಸಿಗುವುದು ಯಾವಾಗ?

ಇನ್ನು ತಾವು ಮಧ್ಯಕಾಲೀನ ಅರ್ಜಿಯನ್ನು ಸಲ್ಲಿಸಿದ್ದೇ ಆದರೆ, ಅತೀ ಶೀಘ್ರದಲ್ಲೇ ಪ್ರಕರಣ ಬಹುತೇಕ ಇತ್ಯಾರ್ಥವಾಗಬಹುದೇನೋ ಉದಾ: ಯಾವುದೇ ಒಂದು ಪ್ರಕರಣ ವಿಚಾರಣೆಗೆ ಬಂದವೇಳೆ ನ್ಯಾಯಾಲಯಕ್ಕೆ ಒಂದು ನಿಗದಿತ ಸಮಯದಲ್ಲಿ ಐಎ ಹಾಕಿದ್ದರೆ ವೇಗವಾಗಿ ವಿಚಾರಣೆಗೆ ಬರುತ್ತದೆ. ಆದರೆ ಇಷ್ಟು ವರ್ಷಗಳ ಕಾಲ ವಿಳಂಬವಾಗಲು ಕಾರಣ ವೇನು ಎಂದು ನೌಕರರು ಪ್ರಶ್ನಿಸುತ್ತಿದ್ದಾರೆ.

ಅಲ್ಲದೆ ತಾವು 1.10ಲಕ್ಷ ನೌಕರರ ವೇತನ ಸಂಬಂಧ ಕೋರ್ಟ್‌ನಲ್ಲಿ ವಿಚಾರಣೆಗೆ ಪ್ರಕರಣ ಬಂದರೂ ನೌಕರರಿಗೆ ಗೊತ್ತಾಗದಂತೆ ನೋಡಿಕೊಳ್ಳುತ್ತಿರುವುದರ ಹಿಂದಿನ ತಾತ್ಪರ್ಯವಾದರೂ ಏನಿದೆ. ಈಗಲಾದರೂ ನೌಕರರಿಗೆ ತಿಳಿಸಿ ಜೂನ್‌ 9ರಂದು ಕೋರ್ಟ್‌ನಲ್ಲಿ ಏನು ನಡೆದಿದೆ ಎಂಬ ಬಗ್ಗೆ ಮಾಹಿತಿ ಕೊಡಿ ಅದನ್ನು ಬಿಟ್ಟು ಈ ರೀತಿ ಮರೆ ಮಾಚಿಕೊಂಡು ಹೋಗುವುದರಿಂದ ಯಾರಿಗೆ ಲಾಭವಾಗುತ್ತದೆ ಎಂದು ನೌಕರರು ಪ್ರಶ್ನಿಸಿದ್ದಾರೆ.

Megha
the authorMegha

Leave a Reply

error: Content is protected !!