NEWSದೇಶ-ವಿದೇಶನಮ್ಮರಾಜ್ಯ

8ನೇ ವೇತನ ಆಯೋಗ: ಕೇಂದ್ರ ಸರ್ಕಾರಿ ನೌಕರರ ಮೂಲ ವೇತನ 34,500 ರೂ.ಗೆ ಏರಿಕೆ!

ವಿಜಯಪಥ ಸಮಗ್ರ ಸುದ್ದಿ

ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು 8ನೇ ವೇತನ ಆಯೋಗದಲ್ಲಿ (8th Pay Commission) ತಮ್ಮ ಬೇಸಿಕ್ ಸಂಬಳದ ಭಾರಿ ಏರಿಕೆಯ ನಿರೀಕ್ಷೆಯಲ್ಲಿದ್ದಾರೆ. 8ನೇ ವೇತನ ಆಯೋಗದಲ್ಲಿ ಮೂಲ ವೇತನ 34,500 ರೂಪಾಯಿಗೆ ಏರಿಕೆ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ.

ಕೇಂದ್ರ ಸರ್ಕಾರಿ ನೌಕರರ ಬೇಸಿಕ್ ಸಂಬಳವು 34500 ರೂಪಾಯಿಗೆ ಏರಿಕೆಯಾಗಲಿದೆ. ಜತೆಗೆ ಪಿಂಚಣಿದಾರರಿಗೂ ಏರಿಕೆ ಆಗಲಿದೆ. ಫಿಟ್​​ಮೆಂಟ್ (Fitment) ಅಂಶವನ್ನು ಪರಿಗಣಿಸಿ ಈಗಿನ ಸಂಬಳವನ್ನು 8ನೇ ವೇತನ ಆಯೋಗದಲ್ಲಿ ಎಷ್ಟು ಆಗಬಹುದೆಂದು ಅಂದಾಜು ಮಾಡಲಾಗುತ್ತಿದೆ.

7ನೇ ವೇತನ ಆಯೋಗದಲ್ಲಿ ಫಿಟಮೆಂಟ್ ಅಂಶವು 2.57 ರಷ್ಟು ಇತ್ತು. ಇದರ ಆಧಾರದಲ್ಲಿ 8ನೇ ವೇತನ ಆಯೋಗದಲ್ಲಿ ಫಿಟ್​​​ಮೆಂಟ್ ಅಂಶವು 1.8 ರಷ್ಟು ಆಗುವ ನಿರೀಕ್ಷೆ ಇದೆ. ಇದರಿಂದಾಗಿ ಬೇಸಿಕ್ ಸಂಬಳವು 18 ಸಾವಿರ ರೂಪಾಯಿಯಿಂದ 34500 ರೂಪಾಯಿಗೆ ಏರಿಕೆಯಾಗಲಿದೆ. ಕೆಲವೆಡೆ ಹೇಳಿರುವಂತೆ 51 ಸಾವಿರ ರೂಪಾಯಿಗೆ ಏರಿಕೆಯಾಗುವುದಿಲ್ಲ ಎಂದು ಹೇಳಲಾಗುತ್ತಿದೆ.

ಯಾವಾಗ ಜಾರಿ ಆಗಲಿದೆ..?: 8ನೇ ವೇತನ ಆಯೋಗದ ಏರಿಕೆಯು ತಕ್ಷಣವೇ ಆಗಲ್ಲ. 2025ರ ಜನವರಿಯಲ್ಲಿ 8ನೇ ವೇತನ ಆಯೋಗವನ್ನು ಘೋಷಿಸಲಾಗಿದೆ. ಹೊಸ ವೇತನ ಆಯೋಗದ ಟರ್ಮ್ ಆಫ್ ರೆಫೆರೆನ್ಸ್ ಇನ್ನೂ ಅಂತಿಮಗೊಂಡಿಲ್ಲ. ಹೀಗಾಗಿ ನೌಕರರಿಗೆ 2026ರ ಅಂತ್ಯ ಅಥವಾ 2027ರ ಪ್ರಾರಂಭವರೆಗೂ ಸಂಬಳ ಏರಿಕೆ, ಪರಿಷ್ಕರಣೆ ಆಗಲ್ಲ.

ದೇಶದಲ್ಲಿ ಹೆಚ್ಚಾಗುತ್ತಿರುವ ಹಣದುಬ್ಬರ, ಹೆಚ್ಚುತ್ತಿರುವ ಜೀವನ ವೆಚ್ಚವನ್ನು ಪರಿಗಣಿಸಿ ಕೇಂದ್ರ ಸರ್ಕಾರವು 10 ವರ್ಷಗಳಿಗೊಮ್ಮೆ ವೇತನ ಆಯೋಗಗಳ ಮೂಲಕ ಕೇಂದ್ರ ಸರ್ಕಾರಿ ನೌಕರರ ವೇತನವನ್ನು ಪರಿಷ್ಕರಣೆ ಮಾಡುತ್ತದೆ. 7ನೇ ವೇತನ ಆಯೋಗವು 2016 ರಿಂದ ದೇಶದಲ್ಲಿ ಜಾರಿಗೆ ಬಂದಿದೆ. ಹೀಗಾಗಿ 8ನೇ ವೇತನ ಆಯೋಗದ ಶಿಫಾರಸು 2026ರ ಅಂತ್ಯದಿಂದ ಜಾರಿಯಾಗುವ ನಿರೀಕ್ಷೆ ಇದೆ.

ವಿಜಯಪಥ - vijayapatha.in
Megha
the authorMegha

Leave a Reply

error: Content is protected !!