NEWSನಮ್ಮಜಿಲ್ಲೆಬೆಂಗಳೂರು

BMTC: ಹಣ ದೋಚಲು ಅತೀ ಬುದ್ಧಿವಂತ ನಿರ್ವಾಹಕರ ಕೈ ಚಳಕ ಬಲು ಜೋರೈತಿ..!

ವಿಜಯಪಥ ಸಮಗ್ರ ಸುದ್ದಿ
  • ಸಂಸ್ಥೆ ಸ್ಕ್ಯಾನರ್‌ ಕಿತ್ತು ತಮ್ಮ ಯುಪಿಐ ಸ್ಕ್ಯಾನರ್ ನೀಡಿ ಸಂಸ್ಥೆಯ ಹಣ ಕೊಳ್ಳೆಹೊಡಿದ್ಯಾರ

ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ಬಸ್‌ಗಳಲ್ಲಿ ‘ಶಕ್ತಿ’ ಇದು ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ. ಈ ಯೋಜನೆಯ ಲಾಭವನ್ನು ರಾಜ್ಯದ ಕೋಟ್ಯಂತರ ಹೆಣ್ಣು ಮಕ್ಕಳು ಪಡೆಯುತ್ತಿದ್ದರೆ, ಇತ್ತ ಬಿಎಂಟಿಸಿಯ ಕೆಲ ಕಿಲಾಡಿ ನಿರ್ವಾಹಕರು (Conductor) ಮಾತ್ರ ಅನ್ನ ತಿಂದ ಮನೆಗೆ ಕನ್ನ ಹಾಕುವ ಕೆಲಸ ಮಾಡುತ್ತಿದ್ದಾರೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ ಸೇರಬೇಕಿದ್ದ, ಲಕ್ಷ ಲಕ್ಷ ಹಣವನ್ನು ತಮ್ಮ ಜೇಬಿಗೆ ಗುಟ್ಟಾಗಿ ಯಾರಿಗೂ ತಿಳಿಯದಂತೆ ಇಳಿಸಿಕೊಳ್ಳಲು ಮುಂದಾಗುತ್ತಿದ್ದಾರೆ. ಹೌದು! ಬಿಎಂಟಿಸಿ ಬಸ್​ಗಳಲ್ಲಿ ಪ್ರಯಾಣಿಕರಿಗೆ ಸಹಾಯವಾಗಲಿ ಎಂದು ನಿಗಮ ಯುಪಿಐ ಸ್ಕ್ಯಾನರ್‌ಗಳನ್ನು ಹಾಕಿದೆ. ಆದರೆ, ಕೆಲ ಅತಿ ಬುದ್ಧಿವಂತ ನಿರ್ವಾಹಕರು ಬಸ್​ನಲ್ಲಿರುವ ಯುಪಿಐ ಸ್ಕ್ಯಾನರ್​ಗಳನ್ನು ಕಿತ್ತು ಪಕ್ಕಕ್ಕಿಟ್ಟುಕೊಂಡು ತಮ್ಮ ವೈಯಕ್ತಿಕ ಯುಪಿಐ ಸ್ಕ್ಯಾನರ್​ಗಳನ್ನು ಪ್ರಯಾಣಿಕರಿಗೆ ತೋರಿಸುವ ಮೂಲಕ ತಮ್ಮ ಬ್ಯಾಂಕ್ ಅಕೌಂಟ್​ಗೆ ಲಕ್ಷಾಂತರ ರೂ. ಹಾಕಿಸಿಕೊಳ್ಳುತ್ತಿದ್ದಾರೆ.

ಇನ್ನು ಪ್ರಮುಖವಾಗಿ ಕನ್ನಡ ಭಾಷೆ ಬಾರದ ಅನ್ಯ ರಾಜ್ಯದ ಪ್ರಯಾಣಿಕರಿಗೆ ತಮ್ಮ ಮೊಬೈಲ್ ಯುಪಿಐ ಸ್ಕ್ಯಾನರ್ ನೀಡಿ ಹಣ ಹಾಕಿಸಿಕೊಳ್ಳುತ್ತಿದ್ದಾರ ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಮಾಹಿತಿ ಪಡೆದ ತನಿಖಾ ಸಿಬ್ಬಂದಿ ತನಿಖೆ ಮಾಡಿದಾಗ ಕೆಲ ಅತಿ ಬುದ್ಧಿವಂತೆ ಕಂಡಕ್ಟರ್​ಗಳ ಕಳ್ಳಾಟ ಬಯಲಾಗಿದೆಯಂತೆ.

ಈ ಕಳ್ಳಾಟವಾಡುತ್ತಿರುವ ಪ್ರತಿಯೊಬ್ಬ ನಿರ್ವಾಹಕರ ಬ್ಯಾಂಕ್‌ ಅಕೌಂಟ್​ನಲ್ಲಿ ಸರಿಸುಮಾರು 50 ಸಾವಿರಕ್ಕೂ ಹೆಚ್ಚು ಹಣ ಪ್ರಯಾಣಿಕರಿಂದ ಹಾಕಿಸಿಕೊಂಡಿರುವುದು ಈ ತನಿಖೆಯಿಂದ ಬಯಲಾಗಿದೆ ಎಂದು ತಿಳಿದು ಬಂದಿದೆ.

ಇನ್ನು ಈ ಶಕ್ತಿ ಯೋಜನೆಯ ಉಚಿತ ಟಿಕೆಟ್ ಮೇಲೆ ಕನ್ನಡದಲ್ಲಿ ಉಚಿತ ಟಿಕೆಟ್ ಎಂದು ಮುದ್ರಿಸಲಾಗಿದೆ. ಇಂಗ್ಲಿಷ್​ನಲ್ಲಿ ಉಚಿತ ಟಿಕೆಟ್ ಎಂದು ಮುದ್ರಿಸಿಲ್ಲ. ಇದನ್ನು ಬಂಡವಾಳ ಮಾಡಿಕೊಂಡು ಕನ್ನಡ ಬಾರದ ನಾರ್ತ್, ಸೌತ್ ಇಂಡಿಯನ್ಸ್​ಗೆ ಶಕ್ತಿ ಯೋಜನೆಯ ಉಚಿತ ಟಿಕೆಟ್ ನೀಡುತ್ತಿದ್ದಾರೆ ಈ ಅತಿಬುದ್ಧಿವಂತರು.

ಈ ಕಂಡಕ್ಟರ್​ಗಳು ಡಿಪೋದಿಂದ ಬಸ್​ಗಳು ಹೊರಗೆ ಬರ್ತಿದ್ದಂತೆ, ಬಸ್​ನಲ್ಲಿರುವ ನಿಗಮದ ಯುಪಿಐ ಸ್ಕ್ಯಾನರ್​ಗಳನ್ನು ಕಿತ್ತು ಇಟ್ಟುಕೊಳ್ಳುತ್ತಾರಂತೆ. ಪ್ರಯಾಣಿಕರು ಯುಪಿಐ ಮೂಲಕ ಪೇಮೆಂಟ್ ಮಾಡಿ ಟಿಕೆಟ್ ಖರೀದಿ ಮಾಡಬೇಕು ಎಂದು ಕಂಡಕ್ಟರ್​ಗಳ ಬಳಿ ಕೇಳಿದಾಗ, ತಮ್ಮ ಮೊಬೈಲ್​ನಲ್ಲಿರುವ ಸ್ವಂತ ಖಾತೆಯ ಸ್ಕ್ಯಾನರ್​ಗಳನ್ನು ನೀಡಿ ಪ್ರಯಾಣಿಕರಿಂದ ತಮ್ಮ ಅಕೌಂಟ್​ಗೆ ಹಣ ಹಾಕಿಸಿಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆ ಬಿಎಂಟಿಸಿಯ ಸೆಕ್ಯೂರಿಟಿ ಅಧಿಕಾರಿಗಳು ತಪಾಸಣೆ ಮಾಡಿದಾಗ ಹತ್ತಕ್ಕೂ ಹೆಚ್ಚು ನಿರ್ವಾಹಕರು ಸಿಕ್ಕಿಬಿದ್ದಿದ್ದಾರೆ.

ಇನ್ನು ಹೀಗೆ ಸಿಕ್ಕಿಬಿದ್ದಿರುವ ಕಂಡಕ್ಟರ್‌ಗಳ​ ಬಗ್ಗೆ ಈಗಾಗಲೇ ಬಿಎಂಟಿಸಿ ಸೆಕ್ಯೂರಿಟಿ ಅಧಿಕಾರಿಗಳು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಕುಮಾರ್​ ಅವ​ಗೆ ವರದಿ ಸಲ್ಲಿಸಿದ್ದಾರೆ.

ಇನ್ನು ಈ ಬಗ್ಗೆ ಪ್ರಯಾಣಿಕರಿಂದ ಮಿಶ್ರಪ್ರತಿಕ್ರಿಯೆ ಬಂದಿದ್ದು, ಇಂತಹವರನ್ನು ಮೊದಲು ಕೆಲಸದಿಂದ ಕಿತ್ತು ಮನೆಗೆ ಕಳಿಸಬೇಕು ಎಂದು ಕೆಲವರು ಹೇಳಿದ್ದರೆ ಇನ್ನೂ ಕೆಲವರು ಸರ್ಕಾರ ನೌಕರರಿಗೆ ಕಾನೂನಾತ್ಮಕವಾಗಿ ಕೊಡಬೇಕಿರುವುದನ್ನು ಕೊಟ್ಟರೆ ಅವರೇಕೆ ಈರೀತಿ ಹೆಸಿಗೆ ತಿನ್ನುವ ಕೆಸಲಮಾಡುತ್ತಾರೆ ಹೇಳಿ? ಇದು ಸರ್ಕಾರದ ತಪ್ಪು ಮೊದಲು ನೌಕರರಿಗೆ ಕೊಡಬೇಕಿರುವುದು ಕೊಡುವತ್ತ ಗಮನಹರಿಸಿ ನೀಡಿದರೆ ಈ ರೀತಿ ಕೆಲಸಕ್ಕೆ ಯಾರೂ ಕೈಹಾಕುವುದಿಲ್ಲ ಎಂಬ ವಾದ ಪ್ರತಿವಾದಗಳು ನಡೆಯುತ್ತಿವೆ.

ಅದೇನೆ ಇರಲಿ ಶಕ್ತಿ ಯೋಜನೆಯ ಟಿಕೆಟ್​ಗಳನ್ನು ಅನ್ಯರಾಜ್ಯದಿಂದ ಬಂದವರಿಗೆ ನೀಡುತ್ತಿರುವುದು, ನಿಗಮದ ಸ್ಕ್ಯಾನರ್​ಗಳನ್ನು ಕಿತ್ತು ತಮ್ಮ ಸ್ವಂತ ಯುಪಿಐ ಸ್ಕ್ಯಾನರ್​ಗಳನ್ನು ನೀಡಿ ಹಣ ಹಾಕಿಸಿಕೊಳ್ಳುತ್ತಿರುವ ಕಂಡಕ್ಟರ್​ಗಳ ವಿರುದ್ಧ ನಿಗಮದ ಎಂಡಿ ಕಠಿಣ ಕ್ರಮ ಕೈಗೊಳ್ಳದಿದ್ದರೆ, ಇವರಿಂದ ಮತ್ತಷ್ಟು ಕಂಡಕ್ಟರ್​​ಗಳು ಈ ದಾರಿ ಹಿಡಿಯುತ್ತಾರೆ. ಈ ರೀತಿ ಆಗಬಾರದು.

Megha
the authorMegha

Leave a Reply

error: Content is protected !!