NEWSನಮ್ಮರಾಜ್ಯ

ಕೆಲ ಗ್ರಾಪಂಗಳಲ್ಲಿ ಇ-ಸ್ವತ್ತು ಪಡೆಯಲು ತಿಣುಕಾಟ: ಇನ್ನೂ ಅಪ್‌ಟೇಡ್‌ ಆಗಿಯೇ ಇಲ್ಲ ಸಾಫ್ಟ್‌ವೇರ್ ಅನ್ನುತ್ತಿರುವ ಸಿಬ್ಬಂದಿ!

ವಿಜಯಪಥ ಸಮಗ್ರ ಸುದ್ದಿ

ಕಡಬಗೆರೆ: ಕರ್ನಾಟಕ ಸರ್ಕಾರ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ 19-01-2026ರಂದು ಸೈಬ‌ರ್ ಸೆಂಟರ್‌ನಲ್ಲಿ ಇ-ಸ್ವತ್ತು ತಂತ್ರಾಂಶದ ಮೂಲಕ ಪರಿವರ್ತಿತ/ ಪರಿವರ್ತನೆಯಿಲ್ಲದ ಅಥವಾ ಕೃಷಿ ಭೂಮಿಯಲ್ಲಿನ ನಿವೇಶನಗಳು ವರ್ಗೀಕರಣದಡಿ ಸಲ್ಲಿಸಲಾದ ಅರ್ಜಿಯನ್ನು ಸ್ವೀಕರಿಸಲಾಗಿದೆ.

ಜತೆಗೆ 01-03-2004 ರಿಂದ 11-01-2026 ರವರೆಗೆ ಕ್ರಯಗಳು ಹಾಗೂ ಋಣಭಾರಗಳ ಪ್ರಮಾಣಪತ್ರವನ್ನು ಸಹ ಪಡೆಯಲಾಗಿದೆ. ಆದರೆ, ಬೆಂಗಳೂರು ಉತ್ತರ ತಾಲೂಕಿನಲ್ಲಿರುವ ಕಡಬಗೆರೆ ಗ್ರಾಮ ಪಂಚಾಯಿತಿಯಲ್ಲಿ ಈ ಯಾವುದು ಕೂಡ ಇನ್ನು ಜಾರಿಗೆ ಬಂದಿಲ್ಲ. ಅಂದರೆ ಗಣಕಯಂತ್ರವನ್ನು ಈವರೆಗೂ ಅಪ್‌ಡೇಟ್‌ ಮಾಡಿಲ್ಲ ಎಂದು ಕಚೇರಿಯ ಸಿಬ್ಬಂದಿ ಹೇಳುತ್ತಿದ್ದಾರೆ.

ಆದರೆ, ಈ ಬಗ್ಗೆ ಉತ್ತರ ಕೊಡಬೇಕಾದ ಗ್ರಾಪಂ ಕಾರ್ಯದರ್ಶಿಯಾಗಲಿ ಇಲ್ಲ ಪಿಡಿಒ ಆಗಲಿ ಇಂದು ಕಚೇರಿಗೆ ಹೋದಾಗ ಇರಲಿಲ್ಲ. ಇದರಿಂದ ಗ್ರಾಪಂ ವ್ಯಾಪ್ತಿಯ ನಿವಾಸಿಗಳು ಈ ಸಂಬಂಧ ಅರ್ಜಿ ಹಾಕುವುದು ಸೇರಿದಂತೆ ಇತರೆ ಕಾರ್ಯಗಳಿಗೆ ಹೋದರೆ ಈ ಅಧಿಕಾರಿಗಳು ಸಿಗುತ್ತಿಲ್ಲ ಎಂದು ಎನ್.ಶ್ರೀನಿವಾಸ ಎಂಬುವರು ಆರೋಪ ಮಾಡಿದ್ದಾರೆ.

ಹೌದು! ಕಡಬಗೆರೆ ಗ್ರಾಮ ಪಂಚಾಯಿತಿ ಕಚೇರಿಗೆ ಹೋಗಿ ಇ-ಸ್ವತ್ತಿಗೆ ಸಲ್ಲಿಸಲಾಗುವ ಅರ್ಜಿಯ ಪ್ರತಿ ಹಾಗೂ ದಾಖಲೆಗಳನ್ನು ನೀಡಲು ಹೋದಾಗ ಅಲ್ಲಿ ಪಿಡಿಒ ಹಾಗೂ ಕಾರ್ಯದರ್ಶಿಗಳಾಗಲ್ಲಿ ಇರಲಿಲ್ಲ.

ಅಲ್ಲಿದ್ದ ಸಿಬ್ಬಂದಿಗಳನ್ನು ವಿಚಾರಿಸಿದಾಗ ಈ ಬಗ್ಗೆ ನಮ್ಮ ಕಚೇರಿಯ ಗಣಕ ಯಂತ್ರಗಳಲ್ಲಿ (ಕಂಪ್ಯೂಟರ್‌) ಇ-ಸ್ವತ್ತು ಅರ್ಜಿಗಳ ವಿಲೇವಾರಿ ಬಗ್ಗೆ ಯಾವುದೇ ರೀತಿಯ ಸಾಫ್ಟ್‌ವೇರ್ ಅಪ್‌ಡೇಟಾಗಿಲ್ಲ ಎಂದು ತಿಳಿಸಿದರು.

ಆದರೆ, ಖಾಸಗಿ ಸೈಬರ್/ ಕಂಪ್ಯೂಟರ್ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಇನ್ನು ಈ ಕಚೇರಿಗಳ ಗಣಕ ಯಂತ್ರಗಳಲ್ಲಿ ಸಾಫ್ಟ್‌ವೇರ್ ಅಪ್‌ಡೇಟ್ ಆಗಿಲ್ಲವೆಂದರೆ ಇದು ಖಾಸಗಿ ಸೈಬರ್/ ಕಂಪ್ಯೂಟರ್ ಕೇಂದ್ರಗಳವರಿಗೆ ಹಣ ಮಾಡುವ ದಂದೆಯೇ ಎಂದು ಪ್ರಶ್ನಿಸಿದ್ದಾರೆ.

ಅಲ್ಲದೆ ಸಂಬಂಧಪಟ್ಟವರು ಇದಕ್ಕೆ ಉತ್ತರಿಸಬೇಕು ಎಂದು ಕೇಳಿರುವ ಅವರು ಬಹುತೇಕ ರಾಜ್ಯದ ಎಲ್ಲ ಗ್ರಾಪಂಗಳಲ್ಲೂ ಈ ಸಮಸ್ಯೆ ಇದೆ ಎಂದು ಹೇಳಿದ್ದಾರೆ. ಈ ಎಲ್ಲರದ  ಜತೆಗೆ ಬೆಂಗಳೂರು ನಗರದ ಸುತ್ತ ಮುತ್ತ ಕಂದಾಯ ಭೂಮಿಯಲ್ಲಿ ನಿವೇಶನಕೊಂಡಿರುವ ನಾಗರಿಕರು ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಸಹ  ಹೇಳಿದ್ದಾರೆ.

Megha
the authorMegha

Leave a Reply

error: Content is protected !!