NEWSನಮ್ಮರಾಜ್ಯ

ಸತತ ಮೂರು ದಿನಗಳ ರಜೆ ಹಿನ್ನೆಲೆ- ರಾಜ್ಯದ ಹಲವೆಡೆ ಬಿಎಂಟಿಸಿ ಬಸ್‌ಗಳ ಸಂಚಾರ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ನಾಳೆಯಿಂದ ಅಂದರೆ ಜ.24ರ ಶನಿವಾರದಿಂದ ಸತತ ಮೂರು ದಿನಗಳ ರಜೆ ಇರುವ ಹಿನ್ನೆಲೆಯಿಂದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (BMTC) ಬಸ್‌ಗಳು ರಾಜ್ಯದ ವಿವಿಧ ಮಾರ್ಗಗಳಲ್ಲಿ ಸಂಚಾರ ಮಾಡಲಿವೆ.

ಬಿಎಂಟಿಸಿಯಿಂದ ಹೆಚ್ಚುವರಿ ಬಸ್‌ಗಳ ನಿಯೋಜನೆಯನ್ನು ಇಂದಿನಿಂದಲೇ ಮಾಡಲಾಗಿದ್ದು, ಇಂದು 260ಕ್ಕೂ ಹೆಚ್ಚು ಬಸ್‌ಗಳು ಬೆಂಗಳೂರಿನಿಂದ ರಾಜ್ಯದ ವಿವಿಧೆಡೆ ಸಂಚಾರ ನಡಸುತ್ತಿದೆ.

ಹೌದು! ಜ.24 ನಾಲ್ಕನೇ ಶನಿವಾರ, ಜ.25 ಭಾನುವಾರ ಹಾಗೂ ಜ.26ರಂದು ಗಣರಾಜ್ಯೋತ್ಸವ ಇದೆ. ಈ ಸಾಲುಸಾಲು ರಜೆ ಇರುವ ಹಿನ್ನೆಲೆ ಬೆಂಗಳೂರು ನಗರದಿಂದ ಇತರೆ ಜಿಲ್ಲಾ ಕೇಂದ್ರಗಳು ಹಾಗೂ ಊರುಗಳಿಗೆ ಹೋಗುವ ಪ್ರಯಾಣಿಕರಿಗೆ ತೊಂದರೆ ಆಗದಂತೆ ಕೆಎಸ್‌ಆರ್‌ಟಿಸಿ ಬಸ್‌ಗಳ ಜತೆ ಬಿಎಂಟಿಸಿ ಬಸ್‌ಗಳು ಕೂಡ ಓಡಾಟ ನಡೆಸಲಿವೆ.

ರಾಜ್ಯದ ಹಲವು ಜಿಲ್ಲೆಗಳಿಗೆ ಬಿಎಂಟಿಸಿ ಬಸ್‌ಗಳು ಸಂಚರಿಸಲಿದ್ದು, ಈ ಮೊದಲೇ ಹೇಳಿದಂತೆ ಇಂದು 260ಕ್ಕೂ ಹೆಚ್ಚು ಬಿಎಂಟಿಸಿ ಬಸ್‌ಗಳು ಓಡಾಡುತ್ತಿವೆ. ಇನ್ನು ನಾಳೆ ಅಂದರೆ ಶನಿವಾರ 500ಕ್ಕೂ ಹೆಚ್ಚು ಬಿಎಂಟಿಸಿ ಬಸ್‌ಗಳ ಸಂಚಾರ ಇರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Megha
the authorMegha

Leave a Reply

error: Content is protected !!