NEWSನಮ್ಮಜಿಲ್ಲೆನಮ್ಮರಾಜ್ಯ

NWKRTC-ಹೆಮ್ಮೆಯ ಸಿಬ್ಬಂದಿಗಳಿಗೆ ಚಾಲನಾ ಸಿಬ್ಬಂದಿಗಳ ದಿನಾಚರಣೆಯ ಶುಭಾಶಯಗಳು: ಡಿಟಿಒ ಅಶೋಕ ಆ‌ರ್.ಪಾಟೀಲ

ವಿಜಯಪಥ ಸಮಗ್ರ ಸುದ್ದಿ

ಹಾವೇರಿ: ಹೆಮ್ಮೆಯ ಚಾಲನಾ ಸಿಬ್ಬಂದಿಗಳಿಗೆ ಚಾಲನಾ ಸಿಬ್ಬಂದಿಗಳ ದಿನಾಚರಣೆಯ ಹಾರ್ದಿಕ ಶುಭಾಶಯಗಳನ್ನು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಹಾವೇರಿ ವಿಭಾಗದ ವಿಭಾಗಿಯ ಸಂಚಾರ ಅಧಿಕಾರಿ ಹಾಗೂ KSRTC ನಿಗಮಗಳ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಅಶೋಕ ಆ‌ರ್.ಪಾಟೀಲ ತಿಳಿಸಿದ್ದಾರೆ.

ಇಂದು ಜ.24ರಂದು ಹಾವೇರಿ ಘಟಕಕ್ಕೆ ಭೇಟಿ ನೀಡಿದ ಅವರು, ಚಾಲನಾ ಸಿಬ್ಬಂದಿಗಳ ಸುರಕ್ಷಿತ ಚಾಲನೆ ಮತ್ತು ನಿರ್ವಹಣೆಗೆ ತುಂಬು ಹೃದಯದ ಧನ್ಯವಾದಗಳು. “ನನ್ನ ಹೆಮ್ಮೆ, ನನ್ನ ಚಾಲನಾ ಸಿಬ್ಬಂದಿಗಳು” ಎಂದು ಶ್ಲಾಘಿಸಿದರು.

ಇನ್ನು ಘಟಕದಲ್ಲಿ ಆಯೋಜಿಸಿದ್ದ ಚಾಲನಾ ಸಿಬ್ಬಂದಿಗಳ ದಿನಾಚರಣೆಯ ಕಾರ್ಯಕ್ರಮದಲ್ಲಿ ಕೇಕ್ ಕತ್ತರಿಸಿ, ಚಾಲನಾ ಸಿಬ್ಬಂದಿಗಳಿಗೆ ಹೂಗುಚ್ಛ ನೀಡುವ ಜತೆಗೆ ಸಿಹಿ ಹಂಚುವುದರ ಮೂಲಕ ಶುಭಾಶಯ ಕೋರಿದರು.

ಇದೇ ವೇಳೆ ಸುರಕ್ಷಿತ ಚಾಲನೆ, ಅಪಘಾತ ರಹಿತ ಚಾಲನೆ ನಮ್ಮ ಗುರಿಯಾಗಲೆಂದು ಪ್ರತಿಯೊಬ್ಬ ಚಾಲಕರು ಮನಸ್ಸಿನಲ್ಲಿ ಇಟ್ಟುಕೊಂಡು ಚಾಲನೆ ಮಾಡಬೇಕು ಎಂದು ಕಿವಿ ಮಾತು ಹೇಳಿದರು.

ಇನ್ನು ಪ್ರಯಾಣಿಕರೊಂದಿಗೆ ಸೌಜನ್ಯತೆಯಿಂದ ವರ್ತನೆ ಮಾಡುವುದು ನಮ್ಮ ಕರ್ತವ್ಯವಾಗಿದೆ. ನಮಗೂ ಒತ್ತಡವಿರುತ್ತದೆ ಆದರೆ ಅದನ್ನು ಪ್ರಯಾಣಿಕರಿಗೆ ತೋರಿಸಿಕೊಳ್ಳದೆ ಅವರೊಂದಿಗೆ ನಗುಮುಖದಲ್ಲೇ ಮಾತನಾಡಿಕೊಂಡು ಅವರು ತಲುಪಬೇಕಾದ ಸ್ಥಳಕ್ಕೆ ಸುರಕ್ಷಿತವಾಗಿ ತಲುಪಿಸುವ ಕಾಯಕದಲ್ಲಿ ತೊಡಗಿರುವ ನೀವು ನಿಜವಾದ ನಾಡಿನ ಹಾಗೂ ಹೆಮ್ಮೆಯ ಸೈನಿಕರು ಎಂದರು.

ನಮ್ಮ ಬಸ್‌ ಚಾಲನೆ ಮಾಡುವುದು ಒಂದು ಕಲೆಯಾಗಿದ್ದು, ಅದನ್ನು ನುರಿತ ಅನುಭವದ ಜತೆಗೆ ತಾಳ್ಮೆಯಿಂದ ಮಾಡಿದರೆ ಪ್ರತಿ ಚಾಲಕರೂ ಇಂಧನ ಉಳಿತಾಯ ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ. ಈ ಬಗ್ಗೆ ಎಲ್ಲರೂ ತಿಳಿದುಕೊಂಡು ಕರ್ತವ್ಯ ನಿರತರಾಗೋಣ ಎಂದು ನಿರ್ದೇಶನ ನೀಡಿದರು.

ಘಟಕದ ಚಾಲನಾ ಸಿಬ್ಬಂದಿಗಳು ಹಾಗೂ ಅಧಿಕಾರಿಗಳು ಇದ್ದರು.

Megha
the authorMegha

Leave a Reply

error: Content is protected !!