ಸಾರಿಗೆ ನೌಕರರು ಅಪಘಾತಕ್ಕೀಡಾಗಿ ಚಿಕಿತ್ಸೆ ಪಡೆಯುತ್ತಿದ್ದರೆ ಕರ್ತವ್ಯದ ಮೇಲೆ ಹಾಜರಾತಿ ಎಂದು ಪರಿಗಣಿಸುವುದು ಕಡ್ಡಾಯ

- ನೌಕರಿಗೆ ಸಂಬಂಧಪಟ್ಟ ಸಂಪೂರ್ಣ ವಿವರವನ್ನೊಳಗೊಂಡ ಪೂರ್ಣ ಮಾಹಿತಿ ಇಲ್ಲಿದೆ
- ಇದು ಪ್ರತಿಯೊಬ್ಬ ಸಾರಿಗೆ ನೌಕರರು ತಿಳಿದುಕೊಳ್ಳಬೇಕಾದ ವಿಷಯ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ಸಂಸ್ಥೆಗಳು ನೌಕರರು ಕರ್ತವ್ಯ ನಿರತರಾಗಿದ್ದ ಸಮಯದಲ್ಲಿ ಅಪಘಾತಕ್ಕೀಡಾಗಿ ಉಂಟಾದ ಗಾಯಗಳಿಗೆ ಚಿಕಿತ್ಸೆ ಪಡೆವ ಅವಧಿಯನ್ನು ಕರ್ತವ್ಯದ ಮೇಲೆ ಹಾಜರಾತಿ ಎಂದು ಪರಿಗಣಿಸುವ ಕುರಿತು ಮಾರ್ಗಸೂಚಿಗಳನ್ನು ಸಾರಿಗೆ ನಿಗಮಗಳ ಎಲ್ಲ ವಿಭಾಗೀಯ ನಿಯಂತ್ರಣಾಧಿಕಾರಿಗಳು, ಕಾರ್ಯ ವ್ಯವಸ್ಥಾಪಕಕರಿಗೆ ನೀಡಲಾಗಿದೆ.

ಮಾರ್ಗಸೂಚಿಗಳ ಕುರಿತ ವಿವರ ಬದಲಾದ ವರ್ಷಗಳನ್ನು ಒಳಗೊಂಡಂತೆ ಈ ಕೆಳಗೆ ವಿವರವಾಗಿ ನೀಡಲಾಗಿದೆ.
1) ಕೈಗಾರಿಕಾ ಒಪ್ಪಂದ 18-03-1974. ಕೈಗಾರಿಕಾ ಒಪ್ಪಂದ 1978 ಖಂಡಿಕೆ 16
2) ಸುತ್ತೋಲೆ ಸಂ: 691 ದಿನಾಂಕ: 03-11-1987
3) ಸುತ್ತೋಲೆ ಸಂ: 651 ಪತ್ರ ಸಂ: ಕರಾರಸಾ/ಕೇಂಕ/ಆಡಳಿತ/ನಿಯಮ/130/- 2507/3745 86-878:04-06-1986
4) ಸುತ್ತೋಲೆ ಸಂ: 493 ಪತ್ರ ಸಂ: ಸಂ:ಕರಾರಸಾ/ಕೇಂ.ಕ/ಅಪಘಾತ / ಸಾಮಾನ್ಯ / 9824 ದಿನಾಂಕ:08-12-1987.
5) ಪತ್ರಸಂ:ಕರಾರಸಾಸಂ/ಕೇಂಕ/ಕಾರ್ಮಿಕ/ಕಿ.ಸ.-2/35/1954 ದಿ:04-04-1991
6) ಸುತ್ತೋಲೆ ಸಂ: 38 ಪತ್ರ ಸಂ: ಕರಾರಸಾಸಂಣ/ ಕೇಂಕ/ಕಾರ್ಮಿಕ/ ಕಿ.ಸ.-02/33/705 ದಿನಾಂಕ: 15-10-1996
7) ಕರಾರಸಾಸಂ/ಕೇಂಕ/ಆಡಳಿತ/ಸೇವಾ ಅಧಿನಿಯಮ/246/320/96-97 ದಿನಾಂಕ: 29-01-1997
ನೌಕರರು ಕರ್ತವ್ಯ ನಿರತ ಸಂದರ್ಭದಲ್ಲಿ ಅಪಘಾತದಲ್ಲಿ/ ಅಪಘಾತವಿಲ್ಲದೆ ಗಾಯಗೊಂಡು ಚಿಕಿತ್ಸೆ ಪಡೆಯುವ ಅವಧಿಯನ್ನು ಹಾಜರಾತಿ ಎಂದು ಪರಿಗಣಿಸಲು ಹಲವಾರು ಸುತ್ತೋಲೆಗಳನ್ನು ಹೊರಡಿಸಲಾಗಿದ್ದರು ವಿಭಾಗಗಳಿಂದ ಈ ಕುರಿತು ಸ್ಪಷ್ಟೀಕರಣ ಕೋರಲಾಗುತ್ತಿದೆ. ಆದುದರಿಂದ ಈ ಕೆಳಗಿನಂತೆ ಮಾರ್ಗಸೂಚಿಗಳನ್ನು ಸಿದ್ಧಪಡಿಸಿ ಸ್ಪಷ್ಟಿಕರಿಸಲಾಗಿದೆ.
ದಿನಾಂಕ: 18-03-1974 ರಂದು ಏರ್ಪಟ್ಟ ಕೈಗಾರಿಕಾ ಒಪ್ಪಂದದ ಕ್ಲಾಸ್ 24 ರಲ್ಲಿ The Period of absence of employee injured on account of accident while on duty will be treated as on duty during the period of medical treatment duly certified by an Authorised Medical Officer ಎಂದು ತಿಳಿಸಲಾಗಿದೆ.
ಅದರಂತೆ ಕರ್ತವ್ಯ ನಿರತರಾಗಿದ್ದ ಸಿಬ್ಬಂದಿಗಳು ಅಪಘಾತಕ್ಕೀಡಾಗಿ ಗಾಯಗಳಾಗಿದ್ದಲ್ಲಿ ಸಂಸ್ಥೆಯು ಗಾಯಗೊಂಡ ನೌಕರರಿಗೆ ಸಾಧ್ಯವಾದಷ್ಟು ಉತ್ತಮ ಚಿಕಿತ್ಸೆಗೆ ವ್ಯವಸ್ಥೆ ಮಾಡತಕ್ಕದ್ದು. ಸರ್ಕಾರಿ ಆಸ್ಪತ್ರೆಗಳಲ್ಲಿ ಸೂಕ್ತವಾದ ಚಿಕಿತ್ಸೆಗಳು ದೊರಕದಿದ್ದಲ್ಲಿ ಸಿಬ್ಬಂದಿಯನ್ನು ಉತ್ತಮ ಸೌಲಭ್ಯವುಳ್ಳ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆಗೆ ತಕ್ಕ ಏರ್ಪಾಡು ಮಾಡುವುದು. ಕಾರ್ಯ ನಿರ್ವಹಣಾ ಸಮಯದಲ್ಲಿ ಗಲಾಟೆಗಳಲ್ಲಿ ಶಾರೀರಿಕವಾಗಿ ಗಾಯಗೊಂಡ ಪ್ರಕರಣಗಳಲ್ಲಿಯೂ ಕೂಡಾ ನೌಕರರು ಈ ಸೌಲಭ್ಯ ಪಡೆಯಲು ಅರ್ಹರಿರುತ್ತಾರೆ.
ಮುಂದುವರಿದು ಅಂತಹ ಪ್ರಕರಣಗಳಲ್ಲಿ ಚಿಕಿತ್ಸೆಗಾಗಿ ಮುಂಗಡ ಹಣವನ್ನು ನೀಡಲು ವಿಭಾಗೀಯ ನಿಯಂತ್ರಣಾಧಿಕಾರಿ/ಕಾರ್ಯ ವ್ಯವಸ್ಥಾಪಕರಿಗೆ/ಸಂಬಂಧಿತ ಅಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ. ಈ ಕುರಿತು ವಿಭಾಗದ ಕಾರ್ಮಿಕ ಕಲ್ಯಾಣಾಧಿಕಾರಿಗಳು ಈ ರೀತಿ ಗಾಯಗೊಂಡ ಸಿಬ್ಬಂದಿಯನ್ನು ತಡಮಾಡದೇ ಸ್ಥಳೀಯ ಆಸ್ಪತ್ರೆಗಳಲ್ಲಾಗಲಿ ಅಥವಾ ಅವರ ವಾಸ ಸ್ಥಳಗಳಲ್ಲಾಗಲಿ ಅವರನ್ನು ಬೇಟಿ ಮಾಡಿ ಚಿಕಿತ್ಸೆಗೆ ವ್ಯವಸ್ಥೆ ಮಾಡುವುದು. (ಉಲ್ಲೇಖ: ಸುತ್ತೋಲೆ ಸಂ:651 ದಿನಾಂಕ: 04-06-1986).
ಅದರಂತೆ ಕಾರ್ಮಿಕರು ಕರ್ತವ್ಯದಲ್ಲಿ ನಿರತರಾಗಿದ್ದ ಸಮಯದಲ್ಲಿ ಅಪಘಾತಕ್ಕೀಡಾಗಿ ಅದರಲ್ಲೂ ಚಾಲನಾ ಸಿಬ್ಬಂದಿಗಳು ವಾಹನ ಚಲಾಯಿಸುತ್ತಿದ್ದ ಸಮಯದಲ್ಲಿ ಅಪಘಾತ ಸಂಭವಿಸಿದಲ್ಲಿ ಹಾಗೂ ಈ ಅಪಘಾತಕ್ಕೆ ಚಾಲಕರೆ ಪ್ರಥಮ ಹೊಣೆಗಾರರೆಂದು ಕಂಡು ಬಂದಲ್ಲಿ ಸಂಸ್ಥೆಯ ಶಿಸ್ತು ಕ್ರಮದ ಅಂಗವಾಗಿ ಅಮಾನತ್‌ಗೊಳಿಸಿ ವಿಚಾರಣೆ ನಡೆಸುವುದು ರೂಡಿಯಲಿರುವ ಅಂಶ. ಆದರೇ ನೌಕರರು ಈ ಅಪಘಾತದಿಂದಾಗಿ ಗಾಯಗೊಂಡು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ ಆ ಚಿಕಿತ್ಸಾ ಅವಧಿಯನ್ನು ಹಾಜರಾತಿ ಎಂದು ಪರಿಗಣಿಸಬೇಕು ಹಾಗೂ ಸಿಬ್ಬಂದಿಯು ಆಸ್ಪತ್ರೆಯಲ್ಲಿ ದಾಖಲಾಗಿ ಅಪಘಾತದ ಗಾಯಗಳಿಗೆ ಚಿಕಿತ್ಸೆ ಪಡೆಯುತ್ತಿದ್ದಲ್ಲಿ ಅಂತಹ ಸಂದರ್ಭದಲ್ಲಿ ಅವರನ್ನು ಸುತ್ತೋಲೆ ನಿಯಮಾನುಸಾರ ಅಮಾನತ್‌ಗೆ ಒಳಪಡಿಸದೆ ಅವರು ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಬಿಡುಗಡೆ ಆಗುವವರೆಗೂ ಕಾಯ್ದು ನಂತರ ಅಮಾನತು ಆದೇಶ ಜಾರಿಗೊಳಿಸಬೇಕು (ಸುತ್ತೋಲೆ-493 ದಿ: 08-12-1987)
ನೌಕರರು ಕಾರ್ಯ ನಿರತ ಸಮಯದಲ್ಲಿ ಅಪಘಾತಕ್ಕೊಳಗಾಗಿ ಚಿಕಿತ್ಸೆ ಪಡೆಯುವ ಅವಧಿಯನ್ನು ಮಾತ್ರ ಹಾಜರಾತಿ ಎಂದು ಪರಿಗಣಿಸುತ್ತಿದ್ದರೂ ಕೆಲವೊಂದು ನಿರ್ಧಿಷ್ಟ ಪ್ರಕರಣಗಳಲ್ಲಿ ಅಂದರೆ ಪೆಟ್ಟು ಬಿದ್ದು ಕೈ-ಕಾಲುಗಳಿಗೆ ಪ್ಲಾಸ್ಟರ್ ಹಾಕಿ ಯಾವುದೇ ಚಿಕಿತ್ಸೆ ಪಡೆಯದೇ ಹಾಗೇ ವಿಶ್ರಾಂತಿ ಪಡೆಯುವ ಅವಧಿಯನ್ನೂ ಸಹ ಹಾಜರಾತಿ ಎಂದು ಪರಿಗಣಿಸಬೇಕಾಗುತ್ತದೆ. ಅಲ್ಲದೇ ಸಾರ್ವಜನಿಕ ಗಲಾಟೆ, ದೊಂಬಿ. ಮುಷ್ಕರ,ದಂತಹ ಸಮಯದಲ್ಲಿ ಅಥವಾ ಕರ್ತವ್ಯ ನಿರತ ಸಮಯದಲ್ಲಿ ಜಗಳವಾಗಿ ಶಾರೀರಿಕವಾಗಿ ಗಾಯಗೊಂಡ ನಿರ್ಧಿಷ್ಟ ಪ್ರಕರಣಗಳಲ್ಲಿ ವೈದ್ಯಕೀಯ ಚಿಕಿತ್ಸಾ ಅವಧಿಯನ್ನು ಹಾಜರಾತಿ ಎಂದು ಪರಿಗಣಿಸಬೇಕಾಗುತ್ತದೆ ಮತ್ತು ಕೆಲವೊಮ್ಮೆ ನಿರ್ದಿಷ್ಟ ಪ್ರಕರಣಗಳಲ್ಲಿ ಪೆಟ್ಟು ಬಿದ್ದು ಕೈಕಾಲುಗಳಿಗೆ ಪ್ಲಾಸ್ಟರ್ ಹಾಕಿ ಯಾವುದೇ ಚಿಕಿತ್ಸೆಯನ್ನು ಪಡೆಯದೇ ಹಾಲಿ ವಿಶ್ರಾಂತಿ ಪಡೆಯುವ ಅವಧಿಯನ್ನು ಸಹ ವೈದ್ಯಕೀಯ ಪ್ರಮಾಣ ಪತ್ರದ ಆಧಾರದ ಮೇಲೆ ಹಾಜರಾತಿ ಎಂದು ಪರಿಗಣಿಸಬೇಕಾಗುತ್ತದೆ. ಆದರೇ ಈ ರೀತಿ ಪರಿಗಣಿಸುವ ಮುನ್ನ ಸಂಬಂಧಪಟ್ಟ ನೌಕರರಿಗೆ ಆಗಿರುವ ಗಾಯದ ಪ್ರಮಾಣವನ್ನು ಗಣನೆಗೆ ತೆಗೆದುಕೊಳ್ಳುವುದು ಸೂಕ್ತ (ಉಲ್ಲೇಖ: ಪತ್ರಸಂ: ಕರಾರಸಾಸಂ/ ಕೇಂಕ/ ಕಾರ್ಮಿಕ/ಕಿ.ಸ.-2/35/1954 ದಿ: 04-04-1991).
ಕರ್ತವ್ಯ ನಿರತರಾಗಿದ್ದ ನೌಕರರು ಅಪಘಾತಕ್ಕೊಳಗಾಗಿ ಚಿಕಿತ್ಸೆ ಪಡೆಯುವ ಅವಧಿಗೆ ಹಾಜರಾತಿ ಎಂದು ಪರಿಗಣಿಸುವಾಗ, ಚಿಕಿತ್ಸೆ ನೀಡಿದ ಅವಧಿಯು ಗಾಯಗಳ ಸ್ವರೂಪದ ಪ್ರಮಾಣಕ್ಕಿಂತ ಹೆಚ್ಚೆಂದು ಕಂಡುಬಂದಲ್ಲಿ ಅಂತಹ ಕಾರ್ಮಿಕರನ್ನು ವೈದ್ಯಕೀಯ ಮಂಡಳಿಯ ಮುಂದೆ ಹಾಜರುಪಡಿಸಿ ಸದರಿ ಮಂಡಳಿಯ ಅಭಿಪ್ರಾಯ ಪಡೆದು ಅದರಂತೆ ಕ್ರಮ ಜರುಗಿಸುವುದು ಹಾಗೂ ಅಪಘಾತಕ್ಕೆ ಒಳಗಾದ ಕಾರ್ಮಿಕನು ತನಗೆ ವಹಿಸಿದ ಕೆಲಸವನ್ನು ನಿರ್ವಹಿಸಲು ಅಸಮರ್ಥನೆಂದು ದೃಢೀಕರಿಸಿದ ಪ್ರಮಾಣ ಪತ್ರ ನೀಡಿದಲ್ಲಿ ಅಂತಹ ನೌಕರರ ಹುದ್ದೆ ಬದಲಾಯಿಸುವ ಬಗ್ಗೆ ಸುತ್ತೋಲೆ ನಿಯಮಾನುಸಾರ ಕ್ರಮ ಜರುಗಿಸಬೇಕು.
ಅಪಘಾತದಿಂದಾಗಿ ನೌಕರನು ಅಂಗಹೀನರಾದಲ್ಲಿ ಅಥವಾ ನಿಧನರಾದಲ್ಲಿ ಕಾರ್ಮಿಕರ ಪರಿಹಾರ ಕಾಯ್ದೆಯನ್ವಯ ಪರಿಹಾರ ಒದಗಿಸಬೇಕು. ಈ ಕುರಿತು ಸಮಯಕ್ಕೆ ಸರಿಯಾಗಿ ಪರಿಹಾರ ನೀಡದೇ ಹೋದಲ್ಲಿ ಪರಿಹಾರ ಮೊತ್ತಕ್ಕೆ ಬಡ್ಡಿಯನ್ನು ಸಹ ವಸೂಲಿ ಮಾಡಲು ಕಾಯ್ದೆಯಲ್ಲಿ ಅವಕಾಶವಿರುವುದು, ಆದುದರಿಂದ ಇಂತಹ ಪ್ರಕರಣಗಳನ್ನು ವಿಳಂಬಕ್ಕೆ ಅವಕಾಶ ನೀಡದೆ ಸಕಾಲದಲ್ಲಿ ಇತ್ಯರ್ಥಪಡಿಸುವುದು. (ಸುತ್ತೋಲೆ ಸಂ: 38 ದಿ:15-10-1996)
ಕರ್ತವ್ಯ ನಿರತ ಸಮಯದಲ್ಲಿ ಸಂಭವಿಸಿದ ಅಪಘಾತಗಳಿಂದಾಗಿ ಅಥವಾ ಸಾರ್ವಜನಿಕರಿಂದಾಗಿ ಹಲ್ಲೆಗೊಳಗಾಗಿ ಯಾವುದೇ ತರಹದ ಪೆಟ್ಟು ಅಥವಾ ಗಾಯಗಳಾದ ಪಕ್ಷದಲ್ಲಿ ಅವರಿಗೆ ಉತ್ತಮ ವೈದ್ಯಕೀಯ ಚಿಕಿತ್ಸೆ ಮಾಡಿಸಲು ಮತ್ತು ವೈದ್ಯಕೀಯ ಚಿಕಿತ್ಸೆಗೆ ತಗಲುವ ಸಂಪೂರ್ಣ ವೆಚ್ಚವನ್ನು ಭರಿಸಲು ಅವಕಾಶ ಕಲ್ಪಿಸಲಾಗಿದೆ ಹಾಗೂ ನೌಕರರು ಕರ್ತವ್ಯ ನಿರತರಾಗಿದ್ದಾಗ ಸಂಭವಿಸಿದ ಅಪಘಾತದಲ್ಲಿ ದೇಹದ ಅಂಗ, ಕೈ-ಕಾಲು ಕಳೆದುಕೊಂಡ ನೌಕರರು ಉತ್ತಮ ಗುಣಮಟ್ಟದ ಕೃತಕ ಕೈ-ಕಾಲು (ಆರ್ಟಿಫೀಶಿಯಲ್ ಲಿಂಬ) ಅಳವಡಿಸಲು ಅನುಕೂಲ ಮಾಡಿಕೊಡುವ ಉದ್ದೇಶದಿಂದ ಕೃತಕ ಕೈ-ಕಾಲನ್ನು ಖರೀದಿಸಲು ತಗಲುವ ವೆಚ್ಚವನ್ನು ನಿಗಮದಿಂದ ಭರಿಸಲು ತೀರ್ಮಾನಿಸಿ, ಈ ಸಂಬಂಧ ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಸೂಚನೆ ಮತ್ತು ನಿರ್ದೇಶನಗಳ ಆಧಾರದ ಮೇರೆಗೆ ಕೃತಕ ಕೈ-ಕಾಲು ಖರೀದಿಗೆ ತಗಲುವ ವೆಚ್ಚ ಭರಿಸಲು ಅವಕಾಶವಿದೆ ಹಾಗೂ ಒಂದು ಬಾರಿಗೆ ಮಾತ್ರ ಬದಲಾಯಿಸುವ ವೆಚ್ಚವನ್ನು ಶೇ.50ರಷ್ಟು ಭರಿಸಲು ಅವಕಾಶ ಕಲ್ಪಿಸಿದೆ.
ಕರ್ತವ್ಯ ನಿರತ ಅಪಘಾತದಿಂದಾಗಿ ಶಸ್ತ್ರ ಚಿಕಿತ್ಸೆ ಸಂದರ್ಭದಲ್ಲಿ ಹಾಕಿರುವ ಸ್ಟೀಲ್ ರಾಡ್, ಪ್ಲೇಟ್, ನೇಲ್ಸ್‌ಗಳನ್ನು ನಂತರದಲ್ಲಿ ಶಸ್ತ್ರ ಚಿಕಿತ್ಸೆ ಮುಖೇನ ತೆಗೆಯುವ ಪ್ರಕರಣಗಳಲ್ಲಿ ಶಸ್ತ್ರ ಚಿಕಿತ್ಸೆಗೆ ತಗಲುವ ವೆಚ್ಚವನ್ನು ಪೂರ್ಣಪ್ರಮಾಣದಲ್ಲಿ ಮಂಜೂರು ಮಾಡುವುದು ಹಾಗೂ ಇಂತಹ ಪ್ರಕರಣಗಳಲ್ಲಿ ಶಸ್ತ್ರ ಚಿಕಿತ್ಸೆಯ ಗಾಯ ಗುಣಮುಖ ಆಗುವವರೆಗೂ ವೈದ್ಯರ ಸಲಹೆಯ ಮೇರೆಗೆ ಚಿಕಿತ್ಸಾ ಅವಧಿಯನ್ನು ಹಾಜರಾತಿ ಎಂದು ಪರಿಗಣಿಸಬೇಕು. (ಸುತ್ತೋಲೆ ಸಂ: 89/17-18 ಪತ್ರ ಸಂ: ಕರಾರಸಾಸಂ/ಕೇಂಕ/ ಕಾರ್ಮಿಕ/ 305 ದಿನಾಂಕ: 05-09-2017)
ಸಂಸ್ಥೆಯ ಒಂದು ಮತ್ತು ಎರಡನೇ ದರ್ಜೆಯ ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದಾಗ ಅಪಘಾತಕ್ಕೀಡಾಗಿ ಗಾಯಗೊಂಡು ವೈದ್ಯಕೀಯ ಚಿಕಿತ್ಸೆಗೆ ಒಳಪಡಬೇಕಾದ ಸಂದರ್ಭಗಳಲ್ಲಿ ವೈದ್ಯಕೀಯ ಚಿಕಿತ್ಸಾ ಅವಧಿಯನ್ನು ಹಾಜರಿ ಎಂದು ಪರಿಗಣಿಸಲು ಮತ್ತು ಚಿಕಿತ್ಸೆಗಾಗಿ ಅವರು ಮಾಡುವ ವೆಚ್ಚವನ್ನು ಅಧಿಕೃತ ವೈದ್ಯಾಧಿಕಾರಿಗಳ ದೃಢೀಕರಣದ ಮೇರೆಗೆ ಮರುಪಾವತಿಸಲು ಅವಕಾಶವಿರುತ್ತದೆ. (ಸುತ್ತೋಲೆ ಸಂ: 691 ದಿ: 03-11-1987).
ಕರ್ತವ್ಯ ನಿರತ ಸಿಬ್ಬಂದಿಗಳು ಅಫಘಾತಕ್ಕೀಡಾಗಿ ಚಿಕಿತ್ಸೆ ಪಡೆದ ಅವಧಿಯನ್ನು ವೈದ್ಯರು ನೀಡುವ ದೃಡೀಕೃತ ಪ್ರಮಾಣ ಪತ್ರದ ಆಧಾರದ ಮೇಲೆ ಐ.ಒ.ಡಿ. ಎಂಬುದಾಗಿ ಪರಿಗಣಿಸುವ ಸೌಲಭ್ಯವನ್ನು ಸೇವಾ ತರಬೇತಿ/ ಪರೀಕ್ಷಾರ್ಥ ಸೇವೆಯ ಮೇಲಿರುವ ಸಿಬ್ಬಂದಿಗಳಿಗೂ ವಿಸ್ತರಿಸಲಾಗಿದೆ. (ಉಲ್ಲೇಖ: ಪತ್ರ ಸಂ:ಕರಾರಸಾಸಂ/ಕೇಂಕ/ಆಡಳಿತ /ಸೇವಾಧಿನಿಯಮ/246 /320/ 96-97 ದಿನಾಂಕ: 29-01-1997).
ನೌಕರರು ಅಫಘಾತಕ್ಕೀಡಾದ ಸಂದರ್ಭಗಳಲ್ಲಿ ಕರ್ತವ್ಯದ ಮೇಲೆ ಹಾಜರಾತಿ ಎಂದು ಪರಿಗಣಿಸಲು ಈ ಕೆಳಗಿನಂತೆ ದಾಖಲಾತಿಗಳನ್ನು ಪರಿಗಣಿಸುವುದು ಅವಶ್ಯಕವಾಗಿರುತ್ತದೆ.
1. ಅಪಘಾತದಲ್ಲಿ ಗಾಯಗೊಂಡ ನೌಕರರ/ಅವರ ಅವಲಂಬಿತರ ಅಖಿತ ಮನವಿ ಪ್ರತಿ
2. ಅಪಘಾತ ಸಂದರ್ಭದಲ್ಲಿ ಉಪಸ್ಥಿತರಿದ್ದ ಸಹ ನೌಕರರ ಅಖಿತ ವಿವರಣೆ ಪ್ರತಿ.
3. ಅಪಘಾತಕ್ಕೊಳಪಟ್ಟ ನೌಕರರನ್ನು ಕರ್ತವ್ಯಕ್ಕೆ ನಿಯೋಜಿಸಿದ ಕುರಿತು ಮೇಲ್ವಿಚಾರಕ ಸಿಬ್ಬಂದಿಗಳ ಅಖಿತ ವಿವರಣೆ ಹಾಗೂ ದಾಖಲೆ (ದಾರಿಪತ್ರ/ ಲಾಗ್ ಶೀಟ್) ಇತ್ಯಾದಿ.
4. ಘಟಕ ವ್ಯವಸ್ಥಾಪಕರು/ ಶಾಖಾ ಮುಖ್ಯಸ್ಥರ ಅಭಿಪ್ರಾಯದೊಂದಿಗೆ ಶಿಫಾರಸ್ಸು ಪತ್ರ.
5.ವೈದ್ಯಕೀಯ ಪ್ರಮಾಣ ಪತ್ರ (ನಿಗದಿತ ಚಿಕಿತ್ಸಾ ಅವಧಿ ಮತ್ತು ವಿಶ್ರಾಂತಿಯ ಬಗ್ಗೆ ಉಲ್ಲೇಖಿಸಿದ್ದು)
6.ಅಪಘಾತ ನಡೆದಿರುವ ಬಗ್ಗೆ ಪ್ರಥಮ ಮಾಹಿತಿ ವರದಿ (ಟಿ.ಆರ್.-18)
7. ಅಪಘಾತ ಸಂಭವಿಸಿದಾಗ ಮಾತ್ರ ಪೊಲೀಸ್ ಪ್ರಥಮ ಮಾಹಿತಿಯ ವರದಿಯ ಪ್ರತಿಯಲ್ಲಿ ಖಚಿತಪಡಿಸುವುದು. ಅಪಘಾತದಿಂದಾಗಿ ಗಾಯಾಳಾದವರ ಪಟ್ಟಿಯಲ್ಲಿ ನೌಕರರ ಹೆಸರು ದಾಖಲಾಗಿರುವುದನ್ನು ಖಚಿತಪಡಿಸುವುದು.
8. ಅಪಘಾತ ಸಂಭವಿಸಿದ್ದರ ಕುರಿತು ಅಗತ್ಯವೆನಿಸಿದಲ್ಲಿ ಮಾತ್ರ ವಿಭಾಗೀಯ ಸಂಚಾರ ಅಧಿಕಾರಿ/ ವಿಭಾಗೀಯ ತಾಂತ್ರಿಕ ಶಿಲ್ಪಿಗಳ ಅಭಿಪ್ರಾಯದೊಂದಿಗೆ ಸೂಕ್ತ ಶಿಫಾರಸು ಪಡೆಯುವುದು.
9. ಚಿಕಿತ್ಸೆಗಾಗಿ ವೈದ್ಯಕೀಯ ಮುಂಗಡ ಬೇಕಿದ್ದಲ್ಲಿ ಅಗತ್ಯ ವೈದ್ಯಕೀಯ ದಾಖಲೆಗಳನ್ನು ನೀಡುವುದು. ಮರುಪಾವತಿಗೆ ಬಿಲ್ಲು ಸಲ್ಲಿಸುವುದಿದ್ದಲ್ಲಿ ಚಿಕಿತ್ಸೆ ಪಡೆದ ವಿವರ/ವೈದ್ಯಕೀಯ ದಾಖಲೆಗಳು/ ಎಕ್ಸರೆ/ತಪಾಸಣಾ ವರದಿಯ ಪ್ರತಿ ಇತ್ಯಾದಿ ಪರಿಗಣಿಸುವುದು.
10. ಅಪಘಾತ/ಘಟನಾವಳಿಗಳ ಕುರಿತು ಸಂಶಯವಿದ್ದಲ್ಲಿ ಅಥವಾ ಘಟನೆಯ ಬಗ್ಗೆ ವಿವರಣೆಯ ಕೊರತೆ ಇದ್ದು. ಇನ್ನೂ ಹೆಚ್ಚಿನ ಮಾಹಿತಿ ಬೇಕೆನಿಸಿದಲ್ಲಿ ಅವಶ್ಯಕ ಮಾಹಿತಿ ಪಡೆಯಲು ವಿಭಾಗೀಯ ಭದ್ರತಾ ನಿರೀಕ್ಷಕರಿಂದ ತನಿಖಾ ವರಧಿ ಪಡೆದು ಕ್ರಮ ಜರುಗಿಸಬಹುದು.
ಕರ್ತವ್ಯ ನಿರತ ಸಿಬ್ಬಂದಿಗಳು ಅಪಘಾತಕ್ಕೀಡಾದ ಸಂದರ್ಭಗಳಲ್ಲಿ ಮಾರಣಾಂತಿಕ ಮತ್ತು ಮಾರಣಾಂತಿಕವಲ್ಲದ ಅಪಘಾತಗಳನ್ನು ಮಾಡಿದ ಚಾಲನಾ ಸಿಬ್ಬಂದಿಗಳಿಗೆ ಕಾನೂನು ಸಹಾಯ ಧನವನ್ನು ನೀಡಲಾಗುತ್ತಿದ್ದು, ಅದಕ್ಕಾಗಿ ಕೈಗಾರಿಕಾ ಒಪ್ಪಂದ 1978ರ ಖಂಡಿಕೆ 16 ರಲ್ಲಿನ ಈ ಕೆಳಕಂಡ ಅಂಶಗಳನ್ನು ಅವಗಾಹನಿಸಬೇಕಾಗುವುದು.
A) Advances, as under shall be paid to secure legal aid in the event of prosecution for any reason while on duty.
1) In case of fatal accident involving human lives Rs.150/- (ಪ್ರಸ್ತುತ ಮಾರಣಾಂತಿಕ ಪ್ರಕರಣಗಳಲ್ಲಿ ರೂ.5000/- ಮೊತ್ತ)
2) Accidents of minor nature and other cases (except accident claim cases, where the Corporation defends the Driver Rs.100/- (ಪ್ರಸ್ತುತ ಮಾರಣಾಂತಿಕವಲ್ಲದ ಪ್ರಕರಣಗಳಲ್ಲಿ ರೂ.2500/- ಮೊತ್ತ.
(B) The employees involved in accidents or prosecution for any other reason and who are required to attend the Court of Law will be issued with free passes, treating them as on duty. Necessary D.A. admissible under rules shall be paid.
C) The recovery of the advance will be depending upon the decision of the Court and will commence only after the employees is found guilty. In the event of acquittal by the Court. The advances shall not be recovered.
D) Free Passes will be issued to the employees who have been prosecuted due to accidents, or any other cases to attend the courts even after retirement, but they are not entitled to T.A. and D.A. This facility is not available to a retired employee in connection with appeal filed by him, against his conviction, in a court of law.
F) In the event of conviction of an employee for traffic offences, the fine imposed and paid by the employees shall be reimbursed to the employee by the Corporation, If the Management is connected that the employee was not directly at fault in cases, where the Management comes to the conclusion that the employee is partly responsible, The Management will reimburse 50% of the penalty. In other cases the entire penalty shall be borne by the employee.
ಮುಂದುವರಿದು ಅಪಘಾತ ಸಂದರ್ಭಗಳಲ್ಲಿ ಕರ್ತವ್ಯದಲ್ಲಿದ್ದ ಚಾಲನಾ ಸಿಬ್ಬಂದಿಗಳನ್ನು ಪೊಲೀಸ್ ಠಾಣೆಯಲ್ಲಿ ಆರೋಪಿ ಎಂದು ಪರಿಗಣಿಸಿ ಚಾರ್ಜ್‌ಶೀಟ್ ಮಾಡಿ, ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದಲ್ಲಿ ಚಾಲನಾ ಸಿಬ್ಬಂದಿಗಳಿಗೆ ಕಾನೂನು ಸಹಾಯ ಧನ ನೀಡಿ, ಪೊಲೀಸ್ ಠಾಣಿ/ ನ್ಯಾಯಾಲಯಗಳಲ್ಲಿ ಜಾಮೀನು ವ್ಯವಸ್ಥೆಯನ್ನು ಕೈಗಾರಿಕಾ ಒಪ್ಪಂದ 1978 ರ ಖಂಡಿಕೆ 15ರ ಉಪ ಖಂಡಿಕೆ (ಎಫ್) ನ ಅಂಶಗಳನ್ನು ಅವಗಾಹನಿಸಬೇಕು ಅದನ್ನು ಈ ಕೆಳಗಿನಂತೆ ಉಲ್ಲೇಖಿಸಲಾಗಿದೆ.
f) 1) In the event of an employee of the Corporation being arrested by the Police or summoned to a Court for offences alleged to have been committed by him in the course of his duties, the Unit Head or an Officer, duly authorized by him be permitted to stand bail, in his official capacity for the employee, if the bail offered in the official capacity is refused, bail may be offered in his personal capacity and the Corporation shall accept liability for payment of the bail amount, if such contingency arises.
2) If the cash security is insisted upon by the court, for release of an employee, the unit Head be authorized to remit an amount up to Rs.200/- or more.
3) The bail or cash security shall be withdrawn well in time, if the employee concerned is to be removed from service or desires to resign.
ಆದುದರಿಂದ ಕಾರ್ಮಿಕರು ಕರ್ತವ್ಯ ನಿರತರಾಗಿದ್ದಾಗ ಉಂಟಾದ ಅಪಘಾತಗಳಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುವ ಅವಧಿಯನ್ನು ಹಾಜರಾತಿ ಎಂದು ಪರಿಗಣಿಸಲು ವಿಭಾಗ ಮಟ್ಟದಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಈ ಮೂಲಕ ಮತ್ತೊಮ್ಮೆ ತಮ್ಮ ಅವಗಾಹನಗೆ ತರಲಾಗಿದ್ದು. ಈ ಮೇಲ್ಕಂಡ ಎಲ್ಲ ಅಂಶಗಳನ್ನು ಪರಿಗಣಿಸಿ, ಕ್ರಮ ತೆಗೆದು ಕೊಳ್ಳಲು ಕೋರಲಾಗಿದೆ ಎಂದು ಸಾರಿಗೆ ಜಂಟಿ ಮುಖ್ಯ ಕಾರ್ಮಿಕ ಮತ್ತು ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ. ಇದು 2020ರಲ್ಲಿ ಕಾರ್ಮಿಕ ಕಲ್ಯಾಣಾಧಿಕಾರಿಗಳು ನೀಡಿರುವ ಪ್ರತಿ.
Related









