NEWSಕೃಷಿನಮ್ಮರಾಜ್ಯ

ಕರ್ನಾಟಕ ಗ್ರಾಮೀಣ ಬ್ಯಾಂಕ್‌ ಕೇಂದ್ರ ಕಚೇರಿ ಮುಂದೆ ರೈತರ ಪ್ರತಿಭಟನೆ

ವಿಜಯಪಥ ಸಮಗ್ರ ಸುದ್ದಿ

ಬಳ್ಳಾರಿ: ಕರ್ನಾಟಕ ಗ್ರಾಮೀಣ ಬ್ಯಾಂಕಿನ ಶಾಖೆಗಳಲ್ಲಿ ಒಟಿಎಸ್ ಪದ್ಧತಿಯಲ್ಲಿ ಸಾಲ ತಿರುವಳಿ ಮಾಡಲು ಮೀನಾಮೇಷ ಏಣಿಸುತ್ತಾ ರೈತರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಹಲವು ಜಿಲ್ಲೆಗಳ ರೈತರು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬುರ್ ಶಾಂತಕುಮಾರ್ ನೇತೃತ್ವದಲ್ಲಿ ಬಳ್ಳಾರಿಯ ಕೇಂದ್ರ ಕಚೇರಿಯಲ್ಲಿ ಪ್ರತಿಭಟನೆ ನಡೆಸಿ ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿದರು.

ಗುರುವಾರ ನಗದಲ್ಲಿರುವ ಗ್ರಾಮೀಣ ಬ್ಯಾಂಕಿನ ಕೇಂದ್ರ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ರೈತರು, ರೈತರಿಗೆ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಒಟಿಎಸ್ ಪದ್ಧತಿಯಲ್ಲಿ ಸಾಲ ತಿರುವಳಿ ಮಾಡಿ ಹೊಸ ಸಾಲ ವಿತರಣೆ ಮಾಡುತ್ತಿದ್ದಾರೆ. ಆದರೆ ಈ ಬ್ಯಾಂಕಿನಲ್ಲಿ ಮಾತ್ರ ವಿರುದ್ಧವಾದ ನಡೆಯಿದೆ ಎಂದು ಕಿಡಿಕಾರಿದರು.

ಈ ವೇಳೆ ಪ್ರತಿಭಟನಕಾರರ ಬಳಿ ಬಂದ ಬ್ಯಾಂಕ್‌ನ ಜನರಲ್ ಮ್ಯಾನೇಜರ್ ಸತ್ಯಪ್ರಸಾದ್ ಚಳವಳಿಗಾರರ ಜತೆ ಸಭಾಂಗಣದಲ್ಲಿ ಸಭೆ ನಡೆಸಿ ಚರ್ಚಿಸಿದರು.

ನಮ್ಮ ಗ್ರಾಮೀಣ ಬ್ಯಾಂಕಿನಲ್ಲಿ ಪ್ರಸಕ್ತ ವರ್ಷ 61,000 ರೈತರಿಗೆ ಸಾಲ ಒಟಿಎಸ್‌ನಲ್ಲಿ ತೀರುವಳಿ ಮಾಡಿದ್ದೇವೆ ಈಗ ಒಟಿಎಸ್‌ನಲ್ಲಿ ತೀರುವಳಿ ಮಾಡುವ ರೈತರಿಗೆ ಅಸಲು ಹಣದಲ್ಲಿಯೂ ರಿಯಾಯಿತಿ ನೀಡಿ ಕೃಷಿ ಸಾಲ ತೀರುವಳಿ ಮಾಡಿ ರೈತರಿಗೆ ಹೊಸ ಸಾಲ ತೀರುವಳಿ ಮಾಡಿದ ಹಣಕ್ಕಿಂತ ಹೆಚ್ಚಾಗಿ ಶೇ.25ರಷ್ಟು ಸಾಲ ವಿತರಿಸಲಾಗುವುದು ಎಂದು ತಿಳಿಸಿದರು.

ಸರ್ಕಾರಿ ಯೋಜನೆಗಳ ಹಣ ಸಾಲಕ್ಕೆ ಜಮಾ ಮಾಡಿಕೊಳ್ಳುವುದು ಕಾನೂನು ಬಾಹಿರ ಈ ಬಗ್ಗೆ ಸಾಲಕ್ಕೆ ಜಮಾ ಮಾಡಿಕೊಳ್ಳದಂತೆ ಈಗಲೇ ಸೂಚನೆ ನೀಡಲಾಗುವುದು. ವಸುಲಾತಿಗೆ ಜಾಮೀನುದಾರರ ಮೂಲಕ ಕಿರುಕುಳ ನೀಡುತ್ತಿರುವುದು ಹಾಗೂ ನ್ಯಾಯಾಲಯದಲ್ಲಿ ದಾವೆ ಕೂಡುವುದು ಬೇಡ ಎಂದು ತಾವು ಹೇಳುತ್ತಿದ್ದೀರಿ ಅಂತಹ ರೈತರು ಸಹಿ ಪಡೆದು ಸಾಲ ನವಿಕರಿಸಲಾಗುವುದು ಎಂದರು.

ಇನ್ನು ಹೊಸ ಟ್ರ್ಯಾಕ್ಟರ್ ಕೊಡುತ್ತೇವೆ ಎಂದು ಬ್ಯಾಂಕಿನವರು ಹಳೆ ಟ್ರ್ಯಾಕ್ಟರ್ ತೆಗೆದುಕೊಂಡು ಸಹಿ ಪಡೆದು ಸಾಲ ವಿತರಿಸಿಲ್ಲ, ಇದರ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಬಳ್ಳಾರಿಗೆ ಬಂದಿರುವ ರೈತರು ಲಿಖಿತ ರೂಪದಲ್ಲಿ ದೂರು ಸಲ್ಲಿಸಿದರೆ ಅವರ ಸಮಸ್ಯೆಯನ್ನು ಒಂದು ತಿಂಗಳಲ್ಲಿ ಪರಿಹರಿಸಲಾಗುವುದು ಎಂದು ಭರವಸೆ ನೀಡಿದರು.

ಅಲ್ಲದೆ ಇಂತಹ ಹಲವು ಸಮಸ್ಯೆಗಳ ಬಗ್ಗೆ ಚರ್ಚಿಸಲು ಮುಂದಿನ ತಿಂಗಳು 15ರ ನಂತರ ಮೈಸೂರಿನಲ್ಲಿ ವಲಯ ಮಟ್ಟದ ಸಭೆ ಆಯೋಜಿಸಿ ರೈತರ ಆಹ್ವಾನಿಸಿ ಸಮಸ್ಯೆಗಳನ್ನು ಆಲಿಸಿ ಸ್ಥಳದಲ್ಲಿಯೇ ಬಗೆಹರಿಸಲಾಗುವುದು ಎಂದು ತಿಳಿಸಿದರು.

ಪ್ರತಿಭಟನೆಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ರಾಜ್ಯ ಮಹಿಳಾ ಸಂಚಾಲಕಿ ಜಿ.ವಿ. ಲಕ್ಷ್ಮೀದೇವಿ, ಕಮಲಮ್ಮ, ಬರಡನಪುರ ನಾಗರಾಜ್, ಬೈರಾರೆಡ್ಡಿ, ರವಿಚಂದ್ರ, ಪಿ.ಸೋಮಶೇಖರ್, ನಂಜುಂಡಸ್ವಾಮಿ, ನಾಗೇಶ್ ಕುಮಾರ್, ಮಾದೇವಪ್ಪ ಮುಂತಾದ ನೂರಾರು ರೈತರು ಇದ್ದರು.

Megha
the authorMegha

Leave a Reply

error: Content is protected !!