ಬೆಂಗಳೂರು: ಕಾನ್ಫಿಡೆಂಟ್ ಗ್ರೂಪ್‌ನ (Confident Group) ಸಂಸ್ಥಾಪಕ, ಮಾಲೀಕ ಡಾ. ಸಿ.ಜೆ.ರಾಯ್ (CJ Roy) ಅವರು ನಿನ್ನೆ ಆತ್ಮಹತ್ಯೆ ಮಾಡಿಕೊಂಡು ಸಂಬಂಧದ ಪ್ರಕರಣದ ಒಂದೊಂದು ಅಂಶಗಳು ಹೊರಬೀಳುತ್ತಿವೆ.

ಘಟನಾ ಸ್ಥಳವನ್ನು ಕೂಲಂಕಶವಾಗಿ ಹಾಗೂ ಮರಣೋತ್ತರ ಪರೀಕ್ಷೆಯಲ್ಲಿ ಸ್ವತಃ ರಾಯ್ ಅವರೇ ಗುಂಡು ಹಾರಿಸಿಕೊಂಡಿದ್ದಾರೆ ಎಂಬುವುದು ದೃಢವಾಗಿದೆ. ತನಿಖೆಯ ಪ್ರಕಾರ, ಸಿ.ಜೆ.ರಾಯ್ ಅವರು ತಮ್ಮ ಬಲಗೈಯಿಂದ ಎದೆಗೆ ಗುಂಡು ಹಾರಿಸಿಕೊಂಡಿದ್ದಾರೆ. ಗುಂಡು ಎದೆಯ ಎಡಭಾಗದ ಮೂಲಕ ದೇಹವನ್ನು ಪ್ರವೇಶಿಸಿ, ಬೆನ್ನಿನ ಭಾಗದಲ್ಲಿ ಸಿಲುಕಿಕೊಂಡಿದೆ. ಒಂದು ಸುತ್ತು ಗುಂಡು ಹಾರಿಸಿಕೊಂಡು ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಗನ್ ಅನ್ನು ಎದೆಯ ಮೇಲಿಟ್ಟು ಅತ್ಯಂತ ಸಮೀಪದಿಂದ ಗುಂಡು ಹಾರಿಸಿಕೊಂಡಿರುವುದು ಪತ್ತೆಯಾಗಿದೆ. ಈ ಕಾರಣದಿಂದ ಎದೆಯ ಮೇಲ್ಭಾಗದ ಮಾಂಸಖಂಡಗಳು ಚದುರಿಲ್ಲ, ಬದಲಾಗಿ ಗುಂಡು ನೇರವಾಗಿ ದೇಹದೊಳಗೆ ಆಳವಾಗಿ ಇಳಿದಿದೆ. ಈ ವೇಳೆ ಎದೆ ಛಿದ್ರವಾಗಿ ಗುಂಡು ಬೆನ್ನಿನಲ್ಲಿ ಸಿಲುಕಿಕೊಂಡಿರುವುದಾಗಿ ತಿಳಿದು ಬಂದಿದೆ.
ಪಾಕೆಟ್ ಗನ್‌ನಿಂದ ಶೂಟ್ ಮಾಡಿಕೊಂಡಿದ್ದು, ಬುಲೆಟ್ ದೇಹದ ಒಳನುಗ್ಗಿದೆ. ಹೃದಯ ಹೊಕ್ಕು, ಶ್ವಾಸಕೋಶ, ರಕ್ತನಾಳಕ್ಕೆ ಹೋಗಿ ಕೊನೆಗೆ 11ನೇ ಪಕ್ಕೆಲುಬಿಗೆ ತಲುಪಿದೆ. ಕೊನೆಗೆ ಅಲ್ಲಿಯೇ ಟರ್ನ್ ಆಗಿ ಎದೆಯಲ್ಲಿ ಸಿಲುಕಿದೆ.
ಇನ್ನು ಮರಣೋತ್ತರ ಪರೀಕ್ಷೆಯಲ್ಲಿ ಬುಲೆಟ್‌ನ್ನು ಹೊರತೆಗೆದು, ಎಫ್‌ಎಸ್‌ಎಲ್‌ಗೆ ರವಾನಿಸಿದ್ದಾರೆ. ಬುಲೆಟ್‌ಗೆ ಯಾವುದೇ ಸ್ಕ್ರ‍್ಯಾಚ್ ಆಗದಂತೆ ಕಾರ್ಬನ್‌ನಲ್ಲಿ ಸುತ್ತಿ ರವಾನೆ ಮಾಡಲಾಗಿದೆ. ಆತ್ಮಹತ್ಯೆಗೆ ಬಳಸಿದ NP bore 0.25 ಪಿಸ್ತೂಲ್ ರಾಯ್ ಹೆಸರಿನಲ್ಲಿ ಪರವಾನಗಿ ಪಡೆಯಲಾಗಿತ್ತು ಎಂಬುದು ಖಚಿತವಾಗಿದೆ.
ಸದ್ಯ ಪಿಸ್ತೂಲ್ ಅನ್ನು ವಶಪಡಿಸಿಕೊಳ್ಳಲಾಗಿದ್ದು, ಹೆಚ್ಚಿನ ವಿಧಿವಿಜ್ಞಾನ ಪರೀಕ್ಷೆಗಾಗಿ (FSL) ಕಳುಹಿಸಲಾಗಿದೆ. ಒಟ್ಟಾರೆ ಸಾವಿರಾರು ಕೋಟಿ ರೂಪಾಯಿಯ ಉದ್ಯಮ ಸ್ಥಾಪಿಸಿ ಸಾವಿರಾರು ಜನರಿಗೆ ಕೆಲಸ ಕೊಟ್ಟಿದ ವ್ಯಕ್ತಿಯ ಅಂತ್ಯ ಈ ರೀತಿ ಆಗುತ್ತದೆ ಎಂದರೆ ನಮ್ಮ ಸರ್ಕಾರಗಳು, ಅಧಿಕಾರಿಗಳು ಇವರಿಗೆ ಎಷ್ಟು ಒತ್ತಡ ಹೇರಿರಬಹುದು ಎಂಬುದನ್ನು ನಿದರ್ಶಿಸುತ್ತಿದೆ.
Related










